Asianet Suvarna News Asianet Suvarna News

shortest day of Year: ಡಿ.22 ಈ ವರ್ಷದ ಅತಿ ಪುಟ್ಟ ದಿನ, ಇದಕ್ಕೇನು ಕಾರಣ?

ಈ ವರ್ಷದ ಅತಿ ಕಡಿಮೆ ದಿನವನ್ನು ಹೊಂದಿದ ದಿನ ಈ ಡಿಸೆಂಬರ್‌ನಲ್ಲಿಯೇ ಬರಲಿದೆ. ಈ ದಿನ ಅರ್ಧ ಜಗತ್ತು ಅತಿ ಕಡಿಮೆ ಹಗಲು ಮತ್ತು ಅತಿ ಧೀರ್ಘ ರಾತ್ರಿಗೆ ಸಾಕ್ಷಿಯಾಗಲಿದೆ. ಅಂತೆಯೇ ಮತ್ತರ್ಧ ಜಗತ್ತಿನಲ್ಲಿ ಇದಕ್ಕೆ ತದ್ವಿರುದ್ಧ ರಾತ್ರಿ ಹಗಲು ಇರುತ್ತದೆ. ಈ ದಿನದ ವೈಶಿಷ್ಠ್ಯಗಳ ಬಗ್ಗೆ ತಿಳಿಯೋಣ. 

shortest day of Year on December 22 know its speciality skr
Author
First Published Dec 19, 2022, 5:03 PM IST

ಪ್ರತಿ ವರ್ಷ ಎರಡು ಅಯನ ಸಂಕ್ರಾಂತಿಗಳಿವೆ: ಒಂದು ಡಿಸೆಂಬರ್‌ನಲ್ಲಿ ಮತ್ತು ಒಂದು ಜೂನ್‌ನಲ್ಲಿ. ಡಿಸೆಂಬರ್ ಅಯನ ಸಂಕ್ರಾಂತಿಯು ಸಮಭಾಜಕದ ಉತ್ತರಕ್ಕೆ ಕಡಿಮೆ ದಿನ ಮತ್ತು ದಕ್ಷಿಣದಲ್ಲಿ ದೀರ್ಘವಾದ ದಿನವನ್ನು ಸೂಚಿಸುತ್ತದೆ. ಅಂದರೆ, ಭಾರತೀಯರಿಗೆ ಇದು ವರ್ಷದ ಅತಿ ಚಿಕ್ಕ ದಿನವಾಗಲಿದೆ. 

ಭಾರತೀಯರ ಪ್ರಕಾರ, ಡಿಸೆಂಬರ್ 22 ಭೂಮಿಯ ಮೇಲಿನ ಅತ್ಯಂತ ಕಡಿಮೆ ದಿನ ಮತ್ತು ದೀರ್ಘ ರಾತ್ರಿಯಾಗಿದೆ. ಡಿಸೆಂಬರ್ 22ರಿಂದ ಚಳಿಗಾಲ ಪ್ರಾರಂಭವಾಗಲಿದೆ. ಡಿಸೆಂಬರ್ 22ರಂದು ಗ್ವಾಲಿಯರ್‌ನಲ್ಲಿ ಸೂರ್ಯನು ಕೇವಲ 10 ಗಂಟೆ 22 ನಿಮಿಷಗಳ ಕಾಲ ಇರುತ್ತಾನೆ ಮತ್ತು ರಾತ್ರಿ ಸುಧೀರ್ಘವಾಗಿ 13 ಗಂಟೆ 38 ನಿಮಿಷಗಳು ಇರುತ್ತಾನೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡಿಸೆಂಬರ್ 21 ಅಥವಾ 22 ಕಡಿಮೆ ದಿನವಾಗಿದೆ. ದಿನ ಎಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯ. ಈ ದಿನ ಸೂರ್ಯನು ತನ್ನ ನಿಗದಿತ ಸಮಯಕ್ಕಿಂತ ಕಡಿಮೆ ಕಾಲ ಇರುತ್ತಾನೆ ಮತ್ತು ಶೀಘ್ರದಲ್ಲೇ ಸೂರ್ಯ ಮುಳುಗುತ್ತಾನೆ. ಇದು ಹಗಲನ್ನು ಕಡಿಮೆ ಮಾಡಿ ರಾತ್ರಿಯನ್ನು ಹೆಚ್ಚು ಮಾಡುತ್ತದೆ. ಅಂದರೆ, ಸೂರ್ಯನು ತನ್ನ ಕಿರಣಗಳಿಂದ ಭೂಮಿಯ ಮೇಲೆ ಕೇವಲ 10 ಗಂಟೆಯ ಕಾಲ ಮಾತ್ರ ಬೆಳಕನ್ನು ಹರಡುತ್ತಾನೆ. 

Mercury Rise 2023: ಬುಧನುದಯದಿಂದ ಈ ರಾಶಿಗಳಿಗೆ ಧನ, ವಿಜಯ

ಕಾರಣವೇನು?
ಪ್ರತಿ ವರ್ಷ ಈ ದಿನದಲ್ಲಿ ಬದಲಾವಣೆ ಆಗುತ್ತಿರುವುದೇ ದೊಡ್ಡ ವಿಷಯ. ಕಳೆದ ವರ್ಷ, ಡಿಸೆಂಬರ್ 21 ಕಡಿಮೆ ದಿನವಾಗಿತ್ತು. ಭೂಮಿಯ ಮೇಲಿನ ಅತ್ಯಂತ ಕಡಿಮೆ ದಿನವನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಅಯನ ಸಂಕ್ರಾಂತಿಯು ಸೊಲ್ಸ್ಟಿಯಮ್ ನಿಂದ ಪಡೆದ ಲ್ಯಾಟಿನ್ ಪದವಾಗಿದೆ. ಲ್ಯಾಟಿನ್ ಪದ ಸೋಲ್ ಎಂದರೆ ಸೂರ್ಯ ಎಂದರ್ಥ. ಆದರೆ ಸೆಸ್ಟೈರ್ ಎಂದರೆ ಸ್ಥಿರವಾಗಿ ನಿಲ್ಲುವುದು. ಈ ಎರಡು ಪದಗಳನ್ನು ಸಂಯೋಜಿಸಿ ಅಯನ ಸಂಕ್ರಾಂತಿ ಎಂಬ ಪದವನ್ನು ರೂಪಿಸಲಾಗಿದೆ. ಡಿಸೆಂಬರ್ 22ರಂದು, ಭೂಮಿಯು ಓರೆಯಾದ ಅಕ್ಷದ ಮೇಲೆ ತಿರುಗುತ್ತದೆ. ಈ ಕಾರಣದಿಂದಾಗಿ, ಡಿಸೆಂಬರ್ 22 ವರ್ಷದ ಅತ್ಯಂತ ಕಡಿಮೆ ದಿನ ಮತ್ತು ದೀರ್ಘ ರಾತ್ರಿಯಾಗಿದೆ.

22 ಡಿಸೆಂಬರ್ ದಿನದಂದು ಸೂರ್ಯನು ಕರ್ಕಾಟಕ ಸಂಕ್ರಾಂತಿಯಿಂದ ಮಕರ ರಾಶಿಗೆ ಹತ್ತಿರ ಬರುತ್ತಾನೆ. ಈ ದಿನದಿಂದ ಚಳಿ ಮತ್ತಷ್ಟು ಹೆಚ್ಚುತ್ತದೆ ಮತ್ತು ಹಿಮಪಾತವು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಚಳಿಗಾಲದ ಅಯನ ಸಂಕ್ರಾಂತಿಯ ಸಾಂಸ್ಕೃತಿಕ ಮಹತ್ವ
ಕ್ರಿಶ್ಚಿಯನ್ನರ ಪ್ರಮುಖ ಹಬ್ಬವಾದ ಕ್ರಿಸ್ಮಸ್ ದಿನವನ್ನು ಚಳಿಗಾಲದ ಅಯನ ಸಂಕ್ರಾಂತಿಯ ನಂತರ ತಕ್ಷಣವೇ ಆಚರಿಸಲಾಗುತ್ತದೆ. ಚಳಿಗಾಲದಲ್ಲಿ ಬರುವ ಚಳಿಗಾಲದ ಅಯನ ಸಂಕ್ರಾಂತಿಯು ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆಯ ಅಯನ ಸಂಕ್ರಾಂತಿಯೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಆಸ್ಟ್ರೇಲಿಯನ್ನರು ಇದನ್ನು ಡರ್ವೆಂಟ್ ನದಿಯಲ್ಲಿ ಸ್ನಾನ ಮಾಡುವ ಮೂಲಕ ಆಚರಿಸುತ್ತಾರೆ.

Garuda Purana: ಸಾಯುವ ಮುನ್ನ ಈ ಆರು ರೀತಿಯಲ್ಲಿ ಸೂಚನೆಗಳು ಸಿಗುತ್ತವೆ!

ಚಳಿಗಾಲದ ಅಯನ ಸಂಕ್ರಾಂತಿಯು ಈ ದಿನವಾಗಿದೆ..
22ವಡಿಸೆಂಬರ್ ಅನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ. ವಿಜ್ಞಾನದ ಭಾಷೆಯಲ್ಲಿ ಇದನ್ನು ದಕ್ಷಿಣಾಯನ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಉತ್ತರ ಧ್ರುವದಲ್ಲಿ ರಾತ್ರಿಯಾಗಿದ್ದರೆ, ದಕ್ಷಿಣ ಧ್ರುವದಲ್ಲಿ ಸೂರ್ಯನು ಬೆಳಗುತ್ತಲೇ ಇರುತ್ತಾನೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios