ಇಂದಿನಿಂದ ಸತ್ಯಸಾಯಿ ಗ್ರಾಮದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ
- ಇಂದಿನಿಂದ ಸತ್ಯಸಾಯಿ ಗ್ರಾಮದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ
- ದುರ್ಗಾ ಪೂಜೆ ಮತ್ತು ಮಹಾರುದ್ರ ಯಾಗಕ್ಕೆ ಸತ್ಯಸಾಯಿ ಯಾಗಶಾಲೆ, ಪ್ರೇಮಾಮೃತ ಭವನ ಸಜ್ಜು
ಚಿಕ್ಕಬಳ್ಳಾಪುರ (ಸೆ.26) : ನಗರದ ಹೊರ ವಲಯದಲ್ಲಿರುವ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಸೆ.25 ರಿಂದ ಅಕ್ಟೋಬರ್ 26 ರ ವರೆಗೂ Üಶರನ್ನವರಾತ್ರಿ ದಸರಾ ಮಹೋತ್ಸವ ಪ್ರಯುಕ್ತ 9 ದಿನಗಳ ಕಾಲ ದುರ್ಗಾ ಪೂಜೆ ಮತ್ತು ಮಹಾರುದ್ರ ಯಾಗ ನಡೆಯಲಿದೆ. ಶ್ರೀ ಸತ್ಯಸಾಯಿ ಆರಾಧನಾ ಟ್ರಸ್ಟ… ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಧಾರ್ಮಿಕ ವಿಧಿ ವಿಧಾನಗಳು ಶ್ರೀ ಸತ್ಯ ಸಾಯಿ ಹೃದಯ ಮಂದಿರದ ಮುಂದಿರುವ ಯಾಗ ಶಾಲೆ ಮತ್ತು ಸಭಾಮಂಟಪದಲ್ಲಿ ನೆರವೇರಿಸಲಿವೆ. ಸತತ 10 ಹತ್ತು ದಿನಗಳ ಕಾಲ ನಡೆಯಲಿದೆ.
Navratri 2022: ಇಂದಿನಿಂದ ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ: ಕೊಲ್ಲೂರು, ಶೃಂಗೇರಿಗಳಲ್ಲಿ ಶರನ್ನವರಾತ್ರಿ
ಪ್ರತಿ ದಿನ ಬೆಳಗ್ಗೆ 6.00 ಗಂಟೆಯಿಂದ ಆರಂಭವಾಗಿ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಲಿವೆ. ಅಪರಾಹ್ನದ ವಿಧಿ ವಿಧಾನಗಳು ನಾಲ್ಕು ಗಂಟೆಗೆ ಕೊನೆಗೊಳ್ಳಲಿವೆ. ಎಲ್ಲಾ ಸಭಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಂಧ್ಯಾ ವಿಶೇಷಗಳು ಸಂಜೆ 6 ಗಂಟೆಗೆ ಸರಿಯಾಗಿ ಶ್ರೀಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ನೆರವೇರಿ ಸಂಪನ್ನಗೊಳ್ಳಲಿವೆ. ಸೆ.26 ರಿಂದ ಅ.5ರವರೆಗೆ ಶ್ರೀಸತ್ಯಸಾಯಿ ಹೃದಯ ಮಂದಿರ ಮತ್ತು ಯಜ್ಞ ಶಾಲೆಯಲ್ಲಿ ದುರ್ಗಾಮಾತೆಯು ಪರಿವಾರ ಸಮೇತವಾಗಿ ಆರಾಧನೆಗೊಳ್ಳುತ್ತಾಳೆ. ಮಾತೆಯ ಒಂಬತ್ತು ಅವತಾರಗಳು ಒಂಬತ್ತು ದಿನಗಳಲ್ಲಿ ದಿನಕ್ಕೊಬ್ಬರಂತೆ ವಿದ್ಯುಕ್ತವಾಗಿ ಪೂಜಿಸಲ್ಪಡುತ್ತವೆ.
ದುರ್ಗೆಯ 9 ಅವತಾರಗಳಾದ ಶೈಲ ಪುತ್ರಿ, ಬ್ರಹ್ಮಕಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ದಿದಾತ್ರಿ ಎಂಬುದಾಗಿ ದಿನಕ್ಕೊಬ್ಬರಂತೆ ಆರಾಧನೆ ನಡೆಯಲಿದೆ. ಪೂಜೆಗೆ ಬೇಕಾದ ಉತ್ಸವ ಮೂರ್ತಿಗಳು ಪಶ್ಚಿಮ ಬಂಗಾಳದ ಉತ್ತರ ಕಲ್ಕತ್ತಾದ ಸನಿಹದಲ್ಲಿರುವ ಕುಂಬಾರ ಬಡಾವಣೆಯ ಕುಮರ್ತುಲಿಯಿಂದ ವಿಶೇಷವಾಗಿ ತರಿಸಲಾಗಿದೆ.
ಬಂಗಾಳದ ದುರ್ಗಾರಾಧಕರೇ ಸ್ವಯಂ ಆಗಮಿಸಿ ಮಾತೆಯರನ್ನು ನವವಿಧ ಭಕ್ತಿಗಳಿಂದ ಆರ್ಚಿಸಿ ಜಗತ್ಕಲ್ಯಾಣವನ್ನು ಕೋರಿ ಪ್ರಾರ್ಥಿಸಲಿದ್ದಾರೆ. ಇದಕ್ಕೆಂದೇ ಸಾಂಪ್ರದಾಯಿಕ ಚರ್ಮ ವಾದ್ಯ ಢಕ್ಕೆಯನ್ನು ನುಡಿಸುವ ಢಾಕಿಗಳು ವಾದನ ಮತ್ತು ನರ್ತನದೊಂದಿಗೆ ಭಕ್ತಿಯ ನೈವೇದ್ಯವನ್ನು ಸಮರ್ಪಿಸಲಿದ್ದಾರೆ. ನವರಾತ್ರಿ ಹೋಮ, ದುರ್ಗಾ ಪೂಜೆ ಮತ್ತು ಮಹಾರುದ್ರ ಯಾಗದ ನಿಮಿತ್ತ ಪ್ರತಿದಿನವೂ ವಿಶೇಷ ಹೋಮ ಹವನಾದಿಗಳು ನಡೆಯಲಿವೆ. ಅಕ್ಟೋಬರ್ 2ನೇ ರಿಂದ 5ನೇ ತಾರೀಖಿನವರೆಗೆ ಮಹಾರುದ್ರ ಯಾಗವು ನೆರವೇರಲಿದೆ.
Navratri 2022: ಹಬ್ಬದ ಸಮಯದಲ್ಲಿ ಈ ಕೆಲಸ ಮಾಡಿದರೆ ಬಡತನ ಎದುರಾಗಬಹುದು, ಎಚ್ಚರ!
ಸಾಂಸ್ಕೃತಿಕ ನೃತ್ಯ, ರೂಪಕಗಳು
ನಾಡ ಹಬ್ಬದ ಪ್ರಯುಕ್ತ ಪ್ರತಿದಿನ ಸಾಯಂಕಾಲ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಸಾಂಸ್ಕೃತಿಕ ಸಂಧ್ಯಾ ಸಮಾರಂಭ ನೆರವೇರಲಿದೆ. ಇದರಲ್ಲಿ ಕೂರ್ಮಾವತಾರಂ, ಶ್ರೀರಾಮ ಪಟ್ಟಾಭಿಷೇಕಂ ಸಾಂಸ್ಕೃತಿಕ ನೃತ್ಯ ರೂಪಕಗಳು ಕಲಾ ಕ್ಷೇತ್ರ ಪ್ರತಿಷ್ಠಾನದ ವತಿಯಿಂದ ಪ್ರದರ್ಶನಗೊಳ್ಳಲಿವೆ. ಶ್ರೀಮತಿ ತನುಶ್ರೀ ಮತ್ತು ಬಳಗ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರೆ ಕಲಾಧರ ಯಕ್ಷ ರಂಗವು ಯಕ್ಷಗಾನ ಕಾರ್ಯಕ್ರಮವನ್ನು ಪ್ರದರ್ಶಿಸಲಿದೆ. ಕೊಳಲು ವಾದನ, ಸಾಯಿ ಸಿಂಪೋನಿ ಬಳಗದ ರಸಮಂಜರಿ ಕಾರ್ಯಕ್ರಮ, ಕರ್ನಾಟಕ ಸಂಗೀತ ಕಚೇರಿ, ವೀಣಾ ವಾದನ, ಭಕ್ತಿ ಗಾನ ಮೇಳಗಳು ಮೇಳೈಸಲಿವೆ.