ಇಲ್ಲಿವೆ ಶನಿ ಸಾಡೇಸಾತಿಗೆ ಪರಿಣಾಮಕಾರಿ ಪರಿಹಾರ..

ಸಾಡೇಸಾತಿ ಎಂಬ ಪದ ಕೇಳಿದರೆ ಸಾಕು ಜನ ಬೆಚ್ಚುತ್ತಾರೆ. ಅದರಲ್ಲೂ ಆ ಸಮಯವನ್ನು ಅನುಭವಿಸಿ ತಿಳಿದವರು ಸಾಡೇಸಾತಿಯ ಕಷ್ಟನಷ್ಟಗಳು ಎಷ್ಟಿರುತ್ತವೆ ಎಂಬ ನೆನಪಿನಿಂದಲೇ ನಡುಗುತ್ತಾರೆ. ಇಷ್ಟಕ್ಕೂ ಈ ಸಾಡೇಸಾತಿ ಎಂದರೇನು? ಈ ಅವಧಿಯ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳವ ಬಗೆ ಎಂಥ?

Shani Sade Sati its effects and  Remedies skr

ಸಾಡೇಸಾತಿ, ಶನಿ ಮುಂತಾದ ಪದಗಳೇ ಸಾಕು ಜನರನ್ನು ಬೆಚ್ಚಿಸಲು. ಶನಿ ಸಾಡೇಸಾತಿ ಎಂಬುದು ಯಾರನ್ನೂ ಬಿಡುವುದಿಲ್ಲ. ಶನಿಗೆ ಜನರ ಮೇಲೆ ಯಾವ ಬೇಧವೂ ಇಲ್ಲ. ಸಾಮಾನ್ಯವಾಗಿ ವ್ಯಕ್ತಿಯೊಬ್ಬನು ಜೀವಿತಾವಧಿಯಲ್ಲಿ ಎರಡು ಬಾರಿ ಸಾಡೇಸಾತಿ  ಅನುಭವಿಸಬಹುದು. ಈ ಸಮಯದಲ್ಲಿ ಸಾಕಷ್ಟು ವಿನಾಶ, ನುಜ್ಜುಗುಜ್ಜಾಗಿಸುವ ಅವನತಿಯನ್ನು ವ್ಯಕ್ತಿ ನೋಡಬಹುದು. ಇಷ್ಟಕ್ಕೂ ಈ ಸಾಡೇಸಾತಿ ಎಂದರೇನು? ಈ ಅವಧಿಯ ಕೆಟ್ಟ ಪರಿಣಾಮಗಳೇನು? ಅವುಗಳಿಂದ ತಪ್ಪಿಸಿಕೊಳ್ಳವ ಬಗೆ ಎಂಥ?

ಶನಿ ಸಾಡೇಸಾತಿ ಎಂದರೇನು?
ಶನಿಯು ಕ್ರಿಯೆಗಳ ಅಧಿಪತಿಯಾಗಿದ್ದು, ಶನಿ ಸಾಡೇ ಸಾತಿ ಸಮಯದಲ್ಲಿ, ನಮ್ಮ ಹಿಂದಿನ ಕರ್ಮ ಕ್ರಿಯೆಗಳ ಪರಿಣಾಮಗಳು ಹೆಚ್ಚು ಗೋಚರಿಸುತ್ತವೆ. ಸಾಡೇಸಾತಿ ಅವಧಿಯು ಶನಿಯು ಮೂರು ರಾಶಿಚಕ್ರ ಚಿಹ್ನೆಗಳ ಮೇಲೆ ಸಾಗುವ ಮತ್ತು ದಾಟುವ 7.5 ವರ್ಷಗಳ ಅವಧಿಯಾಗಿದೆ. ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಸಂಚರಿಸುತ್ತಾನೆ. ಇದು ಅದರ ಹಿಂದಿನ ಮತ್ತು ನಂತರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಶನಿಯು 2.5 ವರ್ಷಗಳ ಕಾಲ ಧನು ರಾಶಿಯಲ್ಲಿದ್ದರೆ, ಅದರ ಹಿಂದಿನ ಚಿಹ್ನೆಯಾದ ವೃಶ್ಚಿಕ ರಾಶಿಯು ಸಾಡೇಸಾತಿಯ ಮೂರನೇ ಹಂತವನ್ನು ಹಾದುಹೋಗುತ್ತದೆ ಮತ್ತು ಧನು ಎರಡನೇ ಹಂತವನ್ನು ಹಾದು ಹೋಗುತ್ತದೆ ಹಾಗೂ ಮಕರ ಮೊದಲ ಹಂತದ ಮೂಲಕ ಹಾದು ಹೋಗುತ್ತದೆ. ಶನಿಯು ಜನ್ಮಸ್ಥಳವಾದ ಚಂದ್ರನಿಂದ 12ನೇ ಮನೆಯನ್ನು ತಲುಪಿದಾಗ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ ಮತ್ತು ಅದು ಮೂಲ ಚಂದ್ರನಿಂದ 2ನೇ ಮನೆಯಿಂದ ನಿರ್ಗಮಿಸುವಾಗ ಮುಕ್ತಾಯಗೊಳ್ಳುತ್ತದೆ. 

ಇವರಿಗೆ ಅವರು ಪ್ರೇಮಿ, ಅವರಿಗೆ ಇವರಲ್ಲ! ಒನ್ ಸೈಡೆಡ್ ಲವ್‌ ಈ ರಾಶಿಯವರಲ್ಲಿ ಹೆಚ್ಚು

ಸಾಡೇಸಾತಿಯ ಪರಿಣಾಮಗಳು
ಶನಿಯನ್ನು ಕರ್ಮದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ನಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ. ಆದರೆ ಅದು 2 ನೇ, 7 ನೇ ಮತ್ತು 10 ನೇ ಮನೆಯಲ್ಲಿದ್ದಾಗ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಇದು ನಿಮ್ಮ ಮನೆ, ಮಕ್ಕಳು, ಸಂಪತ್ತು, ವೈವಾಹಿಕ ಜೀವನ ಮತ್ತು ಇತರ ಅಂಶಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಶನಿಯ ಆಶೀರ್ವಾದ ಹೊಂದಿರುವ ಜನರು ಯಂತ್ರೋಪಕರಣಗಳು, ಸಾರಿಗೆ ಮತ್ತು ಮೂಲಸೌಕರ್ಯ ಉದ್ಯಮಕ್ಕೆ ಸಂಬಂಧಿಸಿದ ವ್ಯವಹಾರದ ವಿಷಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಶನಿಯ ಸ್ಥಾನವು ಕೇತು ಮತ್ತು ರಾಹುಗಳೊಂದಿಗೆ ಘರ್ಷಣೆಯಾದಾಗ ಕಡಿಮೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆದರೆ ಮತ್ತೊಂದೆಡೆ, ಶುಕ್ರವು ಅದರ ಪ್ರಭಾವದ ಅಡಿಗೆ ಬಂದರೆ, ಅದು ತುಂಬಾ ಅನುಕೂಲಕರ ಪರಿಣಾಮಗಳನ್ನು ಬೀರುತ್ತದೆ. 
ಶನಿಯು 4, 5 ಮತ್ತು 8 ನೇ ಮನೆಗಳಲ್ಲಿ ನೆಲೆಗೊಂಡಿರುವ ಜನರು ಖಂಡಿತವಾಗಿಯೂ ತಮ್ಮ ಜೀವನದಲ್ಲಿ ಭಾರೀ ಹಿನ್ನಡೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಆರ್ಥಿಕ ಹೊಡೆತಗಳು ಮೇಲಿಂದ ಮೇಲೆ ಬೀಳುತ್ತವೆ. ಸಂಬಂಧಗಳು ಹದಗೆಡಲಾರಂಭಿಸುತ್ತವೆ.  ಕುಟುಂಬ ಸದಸ್ಯರೊಂದಿಗೆ ಸಮಸ್ಯೆಗಳು ಹೆಚ್ಚುತ್ತವೆ. ವೃತ್ತಿಯಲ್ಲಿ ವಿಪರೀತ ಕಿರಿಕಿರಿ ಎದುರಿಸಬಹುದು, ಅಥವಾ ವೃತ್ತಿಯನ್ನೇ ಕಳೆದುಕೊಳ್ಳಬಹುದು. ವ್ಯಾಪಾರವು ನಷ್ಟದ ಹಾದಿ ಪಡೆಯುತ್ತದೆ. ಅಪಘಾತಗಳಾಗಬಹುದು. ಚೇತರಿಸಿಕೊಳ್ಳಲು ಕಷ್ಟವಾಗುವಂಥ ಪರಿಣಾಮಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ. ದೈಹಿಕ ಆರೋಗ್ಯವೂ ಕಂಗೆಡಿಸಬಹುದು, ಶತ್ರುಗಳ ಸಂಖ್ಯೆ ಹೆಚ್ಚುತ್ತದೆ. ಸಮಯ ಕೆಟ್ರೆ ದೋಸೆ ಕೂಡಾ ಕೈ ಕಚ್ಚಿತ್ತು ಎಂಬಂಥ ಸ್ಥಿತಿಗೆ ವ್ಯಕ್ತಿ ತಲುಪುತ್ತಾನೆ. 

Shani Vakri 2023: ಮತ್ತೆ 5 ತಿಂಗಳು ವಕ್ರಿಯಾಗಲಿದ್ದಾನೆ ಶನಿ, ಯಾವ ರಾಶಿಯ ಮೇಲೇನು ಪರಿಣಾಮ?

ಸಾಡೇಸಾತಿಗೆ ಪರಿಹಾರಗಳು

  • ಸಾಡೇಸಾತಿಯ ಸಮಯದಲ್ಲಿ ಪ್ರತಿದಿನ ‘ಓಂ ಹನುಮತೇ ನಮಃ’ ಎಂದು ಪಠಿಸುವುದು ನಿಮಗೆ ಸಹಾಯ ಮಾಡುತ್ತದೆ.
  • ಮಂಗಳವಾರ ಮತ್ತು ಶನಿವಾರದಂದು ಅಶ್ವತ್ಥ ಮರವನ್ನು ಪೂಜಿಸುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಶನಿವಾರದಂದು ದಾನ ಮಾಡುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಭಿಕ್ಷುಕರು ಮತ್ತು ನಿರ್ಗತಿಕರಿಗೆ ಆಹಾರ ನೀಡುವುದರಿಂದ ಸಾಡೇಸಾತಿಯ ದುಷ್ಟ ಪರಿಣಾಮ ಕಡಿಮೆಯಾಗುತ್ತದೆ.
  • ಮದ್ಯಪಾನವನ್ನು ತ್ಯಜಿಸುವುದು ಸಾಡೇಸಾತಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.
  • ನಿಮ್ಮ ಕಚೇರಿ ಮತ್ತು ಮನೆಯಲ್ಲಿ ಹವನ ನಡೆಸುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಶನಿಬೀಜ ಮಂತ್ರವನ್ನು ಪಠಿಸುವುದರಿಂದ ಸಾಡೇಸಾತಿಯ ಪರಿಣಾಮ ಕಡಿಮೆಯಾಗುತ್ತದೆ.
  • ಪ್ರತಿದಿನ ಶಿವನನ್ನು ಪೂಜಿಸುವ ಅಭ್ಯಾಸ ಇರಿಸಿಕೊಳ್ಳಿ.
Latest Videos
Follow Us:
Download App:
  • android
  • ios