Shani Jayanti 2023: ಶನಿಗೂ ಸೂರ್ಯನಿಗೂ ಮುನಿಸೇಕೆ? ಶನಿಯ ಜನ್ಮವೃತ್ತಾಂತ ಬಲ್ಲಿರಾ?

ಶನಿದೇವನ ಜನ್ಮ ವೃತ್ತಾಂತದಲ್ಲಿ, ಅವನ ಜವಾಬ್ದಾರಿಗಳು, ಕರ್ತವ್ಯಗಳ ಬಗ್ಗೆ ಅವನ ನಿಷ್ಠೆ ಮತ್ತು ಜನರಿಂದ ಅವನ ನಿರೀಕ್ಷೆಗಳನ್ನು ಸೂಚಿಸಲಾಗುತ್ತದೆ. ಇದಲ್ಲದೇ ಶನಿದೇವನ ವ್ಯಕ್ತಿತ್ವದ ಬೆಳವಣಿಗೆಯ ಝಲಕ್ ಇದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಶನಿದೇವನ ಜನ್ಮ ವೃತ್ತಾಂತವನ್ನು ಓದಬೇಕು.

Shani Jayanti 2023 read the story of the birth of Shani Dev skr

ಪ್ರತಿ ವರ್ಷ ಉತ್ತರ ಭಾರತದಲ್ಲಿ ಜ್ಯೇಷ್ಠ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ, ಆದರೆ ದಕ್ಷಿಣ ಭಾರತದಲ್ಲಿ ವೈಶಾಖ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಅಮಾವಾಸ್ಯೆ ಮೇ 19ರಂದು ಬರುತ್ತದೆ. ಶನಿ ಜಯಂತಿಯ ವ್ಯತ್ಯಾಸದ ಹಿಂದಿನ ಕಾರಣವೆಂದರೆ ಎರಡೂ ಪ್ರದೇಶಗಳಲ್ಲಿ ವಿಭಿನ್ನ ಕ್ಯಾಲೆಂಡರ್‌ಗಳ ಆಚರಣೆ. ಆದರೆ, ಇದರ ಹೊರತಾಗಿಯೂ ಶನಿದೇವನ ಜನ್ಮ ವೃತ್ತಾಂತ ಓದಲು ದಿನದ ಹಂಗಿಲ್ಲ.

ಶನಿದೇವನ ಜನ್ಮ ವೃತ್ತಾಂತವನ್ನು ನಾವೇಕೆ ಓದಬೇಕು?
ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ದೇವನು ಕರ್ಮವನ್ನು ಕೊಡುವವನು ಮತ್ತು ತೀರ್ಪುಗಾರ. ಅವನು ತನ್ನ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಅಪರಿಚಿತರು ಮತ್ತು ಭಕ್ತರ ನಡುವೆ ವ್ಯತ್ಯಾಸವನ್ನು ಸಹ ಮಾಡುವುದಿಲ್ಲ. ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿಗೆ ಅವನು ಖಂಡಿತವಾಗಿಯೂ ಒಳ್ಳೆಯ ಫಲಿತಾಂಶವನ್ನು ನೀಡುತ್ತಾನೆ ಮತ್ತು ಕೆಟ್ಟ ಕೆಲಸ ಮಾಡುವ ವ್ಯಕ್ತಿಗೆ ಖಂಡಿತವಾಗಿಯೂ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ. ಒಬ್ಬ ವ್ಯಕ್ತಿಯು ಶನಿದೇವನ ಆರಾಧನೆಯ ರೂಪದಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದರೆ, ಅದಕ್ಕೆ ಶನಿದೇವನೂ ಉತ್ತಮ ಫಲಿತಾಂಶವನ್ನು ನೀಡುತ್ತಾನೆ. ಪ್ರತಿಯೊಬ್ಬರ ಜೀವನದಲ್ಲೂ ಆತನ ಪಾತ್ರ ಮಹತ್ತರವಾದುದು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶನಿದೇವನ ಜನ್ಮ ವೃತ್ತಾಂತವನ್ನು ಓದಬೇಕು.

ಶನಿ ದೇವನ ಜನ್ಮ ಕಥೆ 
ಶನಿದೇವನ ಜನ್ಮ ಕಥೆಯ ವಿಭಿನ್ನ ವಿವರಣೆಯು ಧಾರ್ಮಿಕ ಗ್ರಂಥಗಳಲ್ಲಿ ಕಂಡುಬರುತ್ತದೆ. ಕೆಲವು ಗ್ರಂಥಗಳಲ್ಲಿ, ಶನಿದೇವನ ಜನನವು ಜ್ಯೇಷ್ಠ ಮಾಸದ ಅಮವಾಸ್ಯೆಯಂದು ಎಂದು ನಂಬಲಾಗಿದೆ, ಆದರೆ ಕೆಲವು ಗ್ರಂಥಗಳಲ್ಲಿ, ಶನಿದೇವನ ಜನನವು ಭಾದ್ರಪದ ಶನಿ ಅಮಾವಾಸ್ಯೆಯ ದಿನದಂದು ನಂಬಲಾಗಿದೆ. ಅದೇ ಸಮಯದಲ್ಲಿ, ಕ್ಯಾಲೆಂಡರ್‌ನಲ್ಲಿನ ವ್ಯತ್ಯಾಸದಿಂದಾಗಿ, ದಕ್ಷಿಣ ಭಾರತದಲ್ಲಿ ಇದನ್ನು ವೈಶಾಖ ಅಮವಾಸ್ಯೆಯ ದಿನದಂದು ಮಾತ್ರ ಆಚರಿಸಲಾಗುತ್ತದೆ.

Gajkesari Yog: ಮೇಷ ಸೇರಿ 3 ರಾಶಿಗಳಿಗೆ ಲಾಭ ತರಲಿರುವ ಗುರು-ಚಂದ್ರ ಯುತಿ

ದಂತಕಥೆಯ ಪ್ರಕಾರ, ಶನಿ ದೇವನು ಕಶ್ಯಪ ಋಷಿಯ ರಕ್ಷಕತ್ವದ ಯಾಗದಿಂದ ಜನಿಸಿದನು. ಆದರೆ ಸ್ಕಂದಪುರಾಣದಲ್ಲಿ ಶನಿ ದೇವನ ತಂದೆ ಸೂರ್ಯ ಮತ್ತು ತಾಯಿ ಛಾಯಾ. ಶನಿದೇವನ ತಾಯಿಯ ಹೆಸರನ್ನು ಸನ್ವರ್ಣ ಎಂದೂ ಕರೆಯುತ್ತಾರೆ. ಈ ಕುರಿತ ಪೂರ್ತಿ ಕಥೆ ತಿಳಿಯೋಣ.

ಶನಿ ದೇವನ ಜನನದ ಕಥೆಯ ಪ್ರಕಾರ, ರಾಜ ದಕ್ಷನ ಮಗಳು ಸಂಜನಾ (ಕೆಲವು ಸ್ಥಳಗಳಲ್ಲಿ ದೇವಶಿಲ್ಪಿ ವಿಶ್ವಕರ್ಮ ಅವಳ ತಂದೆ ಎಂದು ಹೇಳಲಾಗುತ್ತದೆ) ಸೂರ್ಯ ದೇವನನ್ನು ವಿವಾಹವಾದಳು. ಸಂಜನಾ ಸೂರ್ಯದೇವನ ಪ್ರಕಾಶತೆಯಿಂದ ತೊಂದರೆಗೀಡಾದಳು. ಅವನ ಬಿಸಿಗೆ ಆಕೆ ಕೊಂಚ ಬಣ್ಣ ಕಳೆದುಕೊಂಡು ಸಂಧ್ಯಾ ಎಂದು ಮರುನಾಮಕರಣಗೊಂಡಳು. ಇದರಿಂದಾಗಿ ಅವಳು ಸೂರ್ಯ ದೇವರ ಬೆಂಕಿಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಿದ್ದಳು. ಈ ಮಧ್ಯೆ, ಸಂಧ್ಯಾ ವೈವಸ್ವತ್ ಮನು, ಯಮರಾಜ ಮತ್ತು ಯಮುನಾ ಎಂಬ ಮೂರು ಮಕ್ಕಳಿಗೆ ಜನ್ಮ ನೀಡಿದಳು.

ಒಂದು ದಿನ ಸಂಧ್ಯಾ ತಪಸ್ಸು ಮಾಡುವ ಮೂಲಕ ಸೂರ್ಯದೇವನ ಪ್ರಕಾಶತೆಯಿಂದ ತಪ್ಪಿಸಿಕೊಳ್ಳುವ ಮಾರ್ಗ ಕಂಡುಕೊಂಡಳು. ಆದರೆ ಮಕ್ಕಳನ್ನು ಬೆಳೆಸುವಲ್ಲಿ ಯಾವುದೇ ತೊಂದರೆಯಾಗಬಾದು ಮತ್ತು ಸೂರ್ಯದೇವನಿಗೆ ಅವಳ ನಿರ್ಧಾರದ ಸುಳಿವು ಸಿಗಬಾರದು ಎಂಬ ಸಲುವಾಗಿ, ಸಂಧ್ಯಾ ತನ್ನದೇ ಆದ ನೆರಳನ್ನು ರಚಿಸಿ ಅದಕ್ಕೆ ಜೀವ ಕೊಟ್ಟಳು.  ಆಕೆಗೆ ಸನ್ವರ್ಣ ಎಂದು ಹೆಸರಿಡಲಾಯಿತು. ಇದು ಅವಳ ನೆರಳಾದ್ದರಿಂದ ಛಾಯಾ ಎಂದೂ ಕರೆಯಲಾಯಿತು. ಸಂಧ್ಯಾ ಛಾಯಾಗೆ ಮಕ್ಕಳ ಮತ್ತು ಸೂರ್ಯದೇವನ ಜವಾಬ್ದಾರಿಯನ್ನು ಕೊಟ್ಟು ಬೇರೆಡೆ ಹೋದಳು ಮತ್ತು ಈ ರಹಸ್ಯವನ್ನು ಬೇರೆಯವರಿಗೆ ತಿಳಿಸಬಾರದು ಎಂದು ಸೂಚನೆ ನೀಡಿದಳು.

ಏತನ್ಮಧ್ಯೆ, ಛಾಯಾ ಮತ್ತು ಸೂರ್ಯರಿಂದ ಸವರ್ಣಿ ಮನು, ಶನಿ ದೇವ ಮತ್ತು ಭದ್ರ (ತಪತಿ) ಎಂಬ ಮೂರು ಮಕ್ಕಳು ಹುಟ್ಟಿದರು.  ಶನಿಯು ಛಾಯಾಳ ಗರ್ಭದಲ್ಲಿದ್ದಾಗ ಛಾಯಾ ಶಿವನನ್ನು ಕುರಿತು ತೀವ್ರ ತಪಸ್ಸು ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ. ತಪಸ್ಸಿನಲ್ಲಿದ್ದಿದ್ದರಿಂದ ಹಸಿವು-ಬಾಯಾರಿಕೆ, ಬಿಸಿಲು-ಉಷ್ಣತೆಗಳಿಂದಾಗಿ ಅದರ ಪರಿಣಾಮ ಛಾಯಾಳ ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿನ ಮೇಲೆ ಅಂದರೆ ಶನಿದೇವನ ಮೇಲೂ ಬಿದ್ದಿತ್ತು. ಇದರಿಂದಾಗಿ ಶನಿದೇವ ಹುಟ್ಟಿದಾಗ ಅವನ ಬಣ್ಣ ಕಪ್ಪಾಗಿತ್ತು. ಈ ಬಣ್ಣವನ್ನು ನೋಡಿದ ಸೂರ್ಯದೇವನಿಗೆ ಇವನು ತನ್ನ ಮಗನಾಗಲಾರ ಎಂದು ಅನಿಸಿತು. ಅವನು ಛಾಯಾಳನ್ನು ಅನುಮಾನಿಸಿದ.

Chanakya Niti: ಲೈಂಗಿಕ ಬಯಕೆ ಈಡೇರದ ಮಹಿಳೆ ಬೇಗ ಮುದುಕಿಯಾಗ್ತಾಳಂತೆ!

ತಾಯಿಯ ತಪಸ್ಸಿನ ಶಕ್ತಿಯು ಶನಿಗೂ ಬಂದಿತ್ತು. ಆತ ತಾಯಿಗಾದ ಅವಮಾನವನ್ನು ಕಂಡು ಕೋಪಗೊಂಡು ತಂದೆ ಸೂರ್ಯದೇವನನ್ನು ನೋಡಿದನು. ಆಗ ಸೂರ್ಯದೇವನು ಕಪ್ಪು ಬಣ್ಣಕ್ಕೆ ತಿರುಗಿದನು ಮತ್ತು ಅವನಿಗೆ ಕುಷ್ಠ ರೋಗವು ಬಂದಿತು. ಅವನ ಸ್ಥಿತಿಯನ್ನು ಕಂಡು ಭಯಗೊಂಡ ಸೂರ್ಯದೇವನು ಶಿವನ ಆಶ್ರಯವನ್ನು ತಲುಪಿದನು. ಆಗ ಶಿವನು ಸೂರ್ಯದೇವನಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡಿದನು. ಸೂರ್ಯದೇವ ತನ್ನ ಕಾರ್ಯಗಳ ಬಗ್ಗೆ ಪಶ್ಚಾತ್ತಾಪಪಟ್ಟನು, ಕ್ಷಮೆ ಯಾಚಿಸಿದನು ಮತ್ತು ತನ್ನ ಮೂಲ ಸ್ವರೂಪವನ್ನು ಮರಳಿ ಪಡೆದನು. ಆದರೆ ಈ ಘಟನೆಯಿಂದಾಗಿ ತಂದೆ-ಮಗನ ಸಂಬಂಧ ಶಾಶ್ವತವಾಗಿ ಹದಗೆಟ್ಟಿತು. 

Latest Videos
Follow Us:
Download App:
  • android
  • ios