Asianet Suvarna News Asianet Suvarna News

Chanakya Niti: ಲೈಂಗಿಕ ಬಯಕೆ ಈಡೇರದ ಮಹಿಳೆ ಬೇಗ ಮುದುಕಿಯಾಗ್ತಾಳಂತೆ!

ಜನರು ಹೇಗೆ ಬೇಗನೆ ವೃದ್ಧರಾಗುತ್ತಾರೆ ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಚಾಣಕ್ಯ ಒಂದು ಪದ್ಯದ ಮೂಲಕ ಹೇಳಿದ್ದಾರೆ. 

Chanakya Niti How to slow down ageing skr
Author
First Published May 15, 2023, 2:48 PM IST

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳ ಮೂಲಕ ಮನುಷ್ಯನಿಗೆ ಬಹಳ ಮುಖ್ಯವಾದ ಮತ್ತು ಬಲವಾದ ಸಂದೇಶಗಳನ್ನು ನೀಡಿದ್ದಾರೆ. ಅವು ಕೇವಲ ಅವರ ಕಾಲಕ್ಕಲ್ಲದೇ ಈಗಲೂ ತರ್ಕಬದ್ಧವಾಗಿವೆ. 

ಆಚಾರ್ಯ ಚಾಣಕ್ಯನ ನೀತಿಗಳು ಮತ್ತು ಆಲೋಚನೆಗಳು ಸ್ವಲ್ಪ ಕಠಿಣವೆಂದು ನೀವು ಕಂಡುಕೊಂಡರೂ, ಈ ಕಠೋರತೆಯು ಜೀವನದ ಸತ್ಯವಾಗಿದೆ. ಈ ಮಾತುಗಳು ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿಯೂ ನಿಮಗೆ ಸಹಾಯ ಮಾಡುತ್ತವೆ. ಯಾವುದೇ ಸಮಸ್ಯೆಗೆ ಚಾಣಕ್ಯನ ನೀತಿಶಾಸ್ತ್ರದಲ್ಲಿ ನೀವು ಉತ್ತರ ಕಂಡುಕೊಳ್ಳಬಹುದು. ಚಾಣಕ್ಯ ಹೇಳಿದ ಮಾತುಗಳನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಲಭವೂ, ಸುಂದರವೂ ಆಗುತ್ತದೆ.

ನೀತಿ ಶಾಸ್ತ್ರದ ನಾಲ್ಕನೇ ಅಧ್ಯಾಯದ 17ನೇ ಶ್ಲೋಕದಲ್ಲಿ, ಆಚಾರ್ಯ ಚಾಣಕ್ಯರು ಮಹಿಳೆಯರು, ಪುರುಷರು ಮತ್ತು ಕುದುರೆಗಳ ವೃದ್ಧಾಪ್ಯದ ಬಗ್ಗೆ ಮಾತನಾಡಿದ್ದಾರೆ. ಜನರು ಹೇಗೆ ಬೇಗನೆ ವೃದ್ಧರಾಗುತ್ತಾರೆ ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಚಾಣಕ್ಯ ಒಂದು ಪದ್ಯದ ಮೂಲಕ ವಿವರಿಸಿದ್ದಾರೆ.

अधवा जरा मनुष्याणां वाजिनां बन्धनं जरा।
अमैथुनं जरा स्त्रीणां वस्त्राणामातपो जरा।।

ಪ್ರಯಾಣಿಕನ ವಯಸ್ಸು
ಚಾಣಕ್ಯ ನೀತಿಯ ನಾಲ್ಕನೇ ಅಧ್ಯಾಯದ ಹದಿನೇಳನೇ ಶ್ಲೋಕದಲ್ಲಿ ಯಾವಾಗಲೂ ಪ್ರಯಾಣ ಮಾಡುವ ಜನರ ದಿನಚರಿ ನಿಯಮಿತವಲ್ಲದ ಕಾರಣ ಅಕಾಲ ವೃದ್ಧಾಪ್ಯಕ್ಕೆ ಬಲಿಯಾಗುತ್ತಾರೆ ಎಂದು ಬರೆಯಲಾಗಿದೆ. ಪ್ರಯಾಣದ ಆಯಾಸ ಮತ್ತು ಅನೈರ್ಮಲ್ಯದ ಆಹಾರ ಪದ್ಧತಿಯು ವ್ಯಕ್ತಿಯ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರರ್ಥ ಪ್ರಯಾಣ ಮಾಡಬಾರದೆಂದಲ್ಲ. ದಿನಚರಿಯು ನಿಯಮಿತವಾಗಿರಬೇಕು. ಶಿಸ್ತುಬದ್ಧವಾಗಿರಬೇಕು. ಪ್ರಯಾಣದಲ್ಲೂ ಉತ್ತಮ ಆಹಾರದ ಕಡೆ ಗಮನ ಹರಿಸಬೇಕು. ಹಾಗೂ ಸಮಯಕ್ಕೆ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು. ಆಹಾರ, ವಿಶ್ರಾಂತಿಯ ಬಗ್ಗೆ ಗಮನ ಹರಿಸಿದರೆ ಖಂಡಿತಾ ವಯಸ್ಸಲ್ಲಿ ಚಿಕ್ಕವರಂತೆ ಕಾಣಬಹುದು.

ಕುದುರೆಯ ಆಯಸ್ಸು
ಕುದುರೆಯು ಸ್ವತಂತ್ರವಾಗಿ ತಿರುಗಾಡುವ ಪ್ರಾಣಿಯಾಗಿದೆ. ಕುದುರೆಗೆ ವಯಸ್ಸಾಗುವುದಿಲ್ಲ ಎಂಬ ಮಾತೂ ಇದೆ. ಆದರೆ ಒಬ್ಬ ಮನುಷ್ಯನು ಕುದುರೆಯನ್ನು ಪಳಗಿಸಿದರೆ ಮತ್ತು ಅದನ್ನು ಯಾವಾಗಲೂ ಕಟ್ಟಿ ಹಾಕಿದರೆ, ಅದಕ್ಕೆ ಶೀಘ್ರದಲ್ಲೇ ವಯಸ್ಸಾಗುತ್ತದೆ. ಏಕೆಂದರೆ ಮನುಷ್ಯನ ಆ ನಡೆ ಕುದುರೆಯ ಭೌತಿಕ ಸ್ವಭಾವಕ್ಕೆ ವಿರುದ್ಧವಾಗಿದೆ. ಇದರರ್ಥ, ಸ್ವತಂತ್ರ ಕಳೆದುಕೊಂಡ ವ್ಯಕ್ತಿಗೆ ಬೇಗನೆ ವಯಸ್ಸಾಗುತ್ತದೆ. ಮತ್ಯಾರದೋ ತಾಳಕ್ಕೆ ಕುಣಿಯುತ್ತಾ, ಅವರ ಕೈ ಕೆಳಗೆ ಇರುವ ವ್ಯಕ್ತಿ ಬೇಗ ವೃದ್ಧಾಪ್ಯ ಅನುಭವಿಸುತ್ತಾನೆ. ಅದೇ ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರುವ ವ್ಯಕ್ತಿ ಹೆಚ್ಚು ಕಾಲ ಯುವಕನಂತೆ ಕಾಣಬಲ್ಲ. ಇದಕ್ಕೆ ಆತನ ಮನಸ್ಸಿನಲ್ಲಿರುವ ಸಂತೋಷ ಕಾರಣವಾಗಿರುತ್ತದೆ. 

Rahu-Ketu Transit: ಕೆಟ್ಟ ಗ್ರಹಗಳು ಈ 5 ರಾಶಿಗಳಿಗೆ ಕೊಟ್ಟ ವರ ನೋಡಿ..

ಮಹಿಳೆಯರ ವೃದ್ಧಾಪ್ಯ
ಆಚಾರ್ಯರು ತಮ್ಮ ನೀತಿಯಲ್ಲಿ ಮಹಿಳೆಯರ ಬಗ್ಗೆ ವಿವರಿಸಿರುವುದು ಸ್ವಲ್ಪ ವಿಚಿತ್ರವಾದರೂ ಸತ್ಯ. ಚಾಣಕ್ಯ ಶಾಸ್ತ್ರದ ಪ್ರಕಾರ, ಗಂಡನು ತನ್ನ ಹೆಂಡತಿಗೆ ದೈಹಿಕ ಸಂತೋಷವನ್ನು ನೀಡದಿದ್ದರೆ, ಅವಳು ಅತೃಪ್ತಳಾಗುತ್ತಾಳೆ ಮತ್ತು ಅವಳಿಗೆ ಶೀಘ್ರದಲ್ಲೇ ವಯಸ್ಸಾಗುತ್ತದೆ. ಮಹಿಳೆಯು ತನ್ನ ದೈಹಿಕ ಬಯಕೆಗಳನ್ನು ಬಾಯಿ ಬಿಟ್ಟು ಹೇಳಲು ಸಂಕೋಚ ಪಡುತ್ತಾಳಾದರೂ, ಅವಳನ್ನು ಅರ್ಥ ಮಾಡಿಕೊಂಡು ನಡೆವ ಪತಿ ಇರಬೇಕು. ಆಗ ಖಂಡಿತಾ ಆಕೆ ಚಿರಯೌವನೆಯಂತೆ ಸಂತೋಷದಿಂದ ಕಂಗೊಳಿಸುತ್ತಾಳೆ. ತೃಪ್ತಿ ಇರುವ ಮಹಿಳೆಯು ಸದಾ ಸಣ್ಣ ವಯಸ್ಸಿನವಳಾಗಿಯೇ ಕಾಣುತ್ತಾಳೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios