Asianet Suvarna News Asianet Suvarna News

Shani Jayanti 2023: ಶನಿ ದೇವಸ್ಥಾನಕ್ಕೆ ಹೋಗುವ ಜನರು ಈ ತಪ್ಪನ್ನು ಹೆಚ್ಚಾಗಿ ಮಾಡುತ್ತಾರೆ..!

ಶನಿ ಜಯಂತಿಯನ್ನು ಮೇ 19ರಂದು ಆಚರಿಸಲಾಗುತ್ತದೆ ಮತ್ತು ಈ ದಿನ ನೀವು ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಶನಿ ದೇವನನ್ನು ಮೆಚ್ಚಿಸಬಹುದು. ಸಾಮಾನ್ಯವಾಗಿ ಶನಿ ದೇವಾಲಯದಲ್ಲಿ ಭಕ್ತರು ಮಾಡುವ ಈ ತಪ್ಪನ್ನು ಈ ಬಾರಿ ಮಾಡಬೇಡಿ.

Shani Jayanti 2023 people do this 1 mistake when in Shani temple skr
Author
First Published May 13, 2023, 12:11 PM IST

ಶನಿಯು ಜೇಷ್ಠ ಅಮಾವಾಸ್ಯೆಯಂದು ಜನಿಸಿದನು. ಈ ಬಾರಿ ಶನಿ ಜಯಂತಿಯನ್ನು ಮೇ 19ರಂದು ಆಚರಿಸಲಾಗುತ್ತದೆ. ಈ ದಿನ ನೀವು ಶನಿ ದೇವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಜನರಿಗೆ ದಾನ ಮಾಡಲು, ಬಡವರಿಗೆ ಸಹಾಯ ಮಾಡಲು ಮತ್ತು ಒಳ್ಳೆಯ ಕೆಲಸ, ಚಿಂತನೆಯಲ್ಲಿ ತೊಡಗಬೇಕು. ಇದರೊಂದಿಗೆ ಶನಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆಗಳನ್ನು ಸಲ್ಲಿಸುವುದು ಉತ್ತಮ.  ಆದರೆ ಜನರು ಸಾಮಾನ್ಯವಾಗಿ ಶನಿ ದೇವಸ್ಥಾನಕ್ಕೆ ಹೋದಾಗ ಒಂದು ತಪ್ಪು ಮಾಡುತ್ತಾರೆ. ಈ ತಪ್ಪು ಏನು? ನೀವೂ ಮಾಡುತ್ತೀರಾ? ಈ ತಪ್ಪಿನಿಂದಾಗಿ ಮತ್ತಷ್ಟು  ಸಮಸ್ಯೆ ಎದುರಿಸುತ್ತಿದ್ದೀರಾ? ಈ ಬಗ್ಗೆ ವಿವರ ತಿಳಿಯಿರಿ..

ಏನು ತಪ್ಪು?
ಹೆಚ್ಚಿನ ಜನರು ಶನಿ ದೇವಸ್ಥಾನಕ್ಕೆ ಹೋದಾಗ ಒಂದು ತಪ್ಪು ಮಾಡುತ್ತಾರೆ. ಅದೆಂದರೆ ನೇರವಾಗಿ ಶನಿದೇವನ ಮುಂದೆ ನಿಂತು ಪೂಜಿಸುವುದು, ಪ್ರಾರ್ಥಿಸುವುದು. ವಾಸ್ತವವಾಗಿ, ನೀವು ನೇರವಾಗಿ ಶನಿದೇವನ ಮುಂದೆ ನಿಂತಾಗ, ಅವನ ದುಷ್ಟ ದೃಷ್ಟಿ ನಿಮ್ಮ ಮೇಲೆ ಬೀಳಬಹುದು. ಶನಿಯ ದೃಷ್ಟಿ ನೇರವಾಗಿ ಬಿದ್ದರೆ ತೊಂದರೆ ತಪ್ಪಿದ್ದಲ್ಲ. ಹೌದು, ಧಾರ್ಮಿಕ ಪುರಾಣಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವನು ಯಾರ ಮೇಲೆ ತನ್ನ ದೃಷ್ಟಿ ಹಾಯಿಸುತ್ತಾನೋ ಅವನು ಹಾನಿಗೊಳಗಾಗುತ್ತಾನೆ. ಅವನ ದೃಷ್ಟಿಯಿಂದ ದೂರವಿರಲು, ಜನರು ಅವನ ವಿಗ್ರಹವನ್ನು ಮನೆಯಲ್ಲಿ ಇಡುವುದಿಲ್ಲ ಅಥವಾ ಪೂಜೆ ಮಾಡುವಾಗ ಅವನತ್ತ ನೋಡುವುದಿಲ್ಲ. ಪ್ರಾರ್ಥನೆ ಸಲ್ಲಿಸುವಾಗ ಶನಿದೇವನ ಮುಂದೆ ನೇರವಾಗಿ ನಿಲ್ಲುವುದನ್ನು ಸಹ ತಪ್ಪಿಸಬೇಕಾಗುತ್ತದೆ.

Shani Jayanti 2023: ಶನಿ ಕೋಪದಿಂದ ಮುಕ್ತರಾಗೋಕೆ ಇಲ್ಲಿದೆ ನೋಡಿ ಸುದಿನ

ಶನಿಯ ದೃಷ್ಟಿಯೇಕೆ ಕೆಟ್ಟದ್ದು?
ಒಮ್ಮೆ ಶನಿದೇವನು ಭಕ್ತಿಯಲ್ಲಿ ಮುಳುಗಿದ್ದನು. ಆಗ ಅವನ ಹೆಂಡತಿ ಧ್ವಜಿನಿಯು ಮಗುವನ್ನು ಹೊಂದುವ ಆಸೆಯಿಂದ ಅವನ ಬಳಿಗೆ ಬಂದಳು. ಆದರೆ ಶನಿ ದೇವನು ಅವಳ ಕಡೆಗೆ ನೋಡಲಿಲ್ಲ. ಬದಲಿಗೆ ಧ್ಯಾನದಲ್ಲಿ ಮುಳುಗಿದ್ದನು. ಈ ವಿಚಾರದಲ್ಲಿ ಆತನ ಪತ್ನಿ ತೀವ್ರ ಕೋಪಗೊಂಡು ಶನಿದೇವನಿಗೆ- ಅನುರಾಗದಿಂದ ಬಂದ ನಿನ್ನ ಹೆಂಡತಿಯನ್ನು ನೋಡಲಾಗದ ನಿನ್ನ ದೃಷ್ಟಿ ವಕ್ರವಾಗಲಿ, ಯಾರ ಮೇಲೆ ದೃಷ್ಟಿ ಬೀಳುತ್ತದೋ ಅವರಿಗೆ ಕೆಟ್ಟದಾಗಲಿ ಎಂದು ಶಪಿಸುತ್ತಾಳೆ. ಅಂದಿನಿಂದ ಶನಿಯ ದೃಷ್ಟಿ ಯಾರ ಮೇಲೆ ಬಿದ್ದರೂ ಅದು ಅಶುಭವಾಗುತ್ತದೆ. ಗಣೇಶನ ಕತ್ತು ಕೊಯ್ದು ಗಜಾನನನಾಗಲು ಶನಿದೇವನ ದೃಷ್ಟಿಯೇ ಕಾರಣ ಎಂದು ಹೇಳಲಾಗುತ್ತದೆ.

ಶನಿ ದೇವನ ಮುಂದೆ ನಿಂತು ಪೂಜೆ ಮಾಡಬೇಡಿ..
ಶನಿ ದೇವನ ಮುಂದೆ ನೇರವಾಗಿ ನಿಂತು ಪೂಜಿಸುವುದನ್ನು ತಪ್ಪಿಸಿ. ನೀವು ದೇವಸ್ಥಾನಕ್ಕೆ ಹೋದಾಗಲೆಲ್ಲಾ ಯಾವುದೋ ಮೂಲೆಯಲ್ಲಿ ನಿಂತುಕೊಂಡು ಅಲ್ಲಿಂದ ಶನಿದೇವನನ್ನು ಪೂಜಿಸಿ. ಇದರೊಂದಿಗೆ ನೀವು ಅವನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಕೆಟ್ಟ ಕೆಲಸಗಳು ಫಲ ನೀಡಲಾರಂಭಿಸಬಹುದು. ಹಾಗಾಗಿ ಶನಿದೇವರ ದೇವಸ್ಥಾನಕ್ಕೆ ಹೋದಾಗ ಈ ತಪ್ಪನ್ನು ತಪ್ಪಿಸಿ.

Adipurush ಯಾರು? ಆದಿಪುರುಷ ಎಂದರೆ ಅರ್ಥವೇನು?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios