Vivah Mhuhurat 2023: ಏಪ್ರಿಲ್‌ನಲ್ಲಿ ವಿವಾಹಕ್ಕೆ ಒಂದೂ ಮುಹೂರ್ತವಿಲ್ಲ! ಈ ವರ್ಷ ಮುಹೂರ್ತ ಕಡಿಮೆ

2023ರಲ್ಲಿ ಮದುವೆಯ ಮುಹೂರ್ತವನ್ನು ಬಹಳ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 2023ರಲ್ಲಿ ಒಂದೇ ಒಂದು ಮದುವೆಯ ಮಂಗಳಕರ ಸಮಯವಿಲ್ಲ. ಹಾಗಿದ್ದರೆ, 2023ರಲ್ಲಿ ಮದುವೆಗೆ ಶುಭ ಸಮಯ ಯಾವಾಗ, ಅದರ ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದೆ.

Shaadi Muhurat 2023 wedding dates from March to December skr

ಇದುವರೆಗೂ ಹುಡುಗ ಸಿಕ್ಕಿಲ್ಲ, ಹುಡುಗಿ ಸಿಕ್ಕಿಲ್ಲ ಅಥವಾ ಮನೆಯಲ್ಲಿ ಒಪ್ಪಿಲ್ಲ ಎಂದು ಒದ್ದಾಡಿದ್ದಾಯಿತು. ಈಗ ಅವೆಲ್ಲ ಸಮಸ್ಯೆ ಮುಗಿದಿದೆ. ಇಬ್ಬರೂ ಇಷ್ಟಪಟ್ಟಿದ್ದಾರೆ. ಮನೆಯವರೂ ಒಪ್ಪಿದ್ದಾರೆ. ಈಗಾಗಲೇ ತಡವಾಗಿದೆ, ಬೇಗ ವಿವಾಹ ಮಾಡೋಣ ಎಂದರೆ ಮುಹೂರ್ತ ಸಿಗಬೇಕಲ್ಲವೇ? ಪ್ರತಿ ವರ್ಷ ಏಪ್ರಿಲ್, ಮೇ ಎಂದರೆ ಮದುವೆಯ ತಿಂಗಳು. ಇಡೀ ತಿಂಗಳಲ್ಲಿ ಮದುವೆಗಳು ಸಾಲು ಸಾಲಾಗಿ ಇರುತ್ತವೆ. ಆದರೆ, ಈ ವರ್ಷ ಏಪ್ರಿಲ್‌ನಲ್ಲಿ ಮದುವೆಗೆ ಒಂದೇ ಒಂದೂ ಮುಹೂರ್ತವಿಲ್ಲ!

ಹೌದು, ವಿವಾಹ ಬಹಳ ದೊಡ್ಡ ಮಂಗಳ ಕಾರ್ಯ. ಎರಡು ಕುಟುಂಬಗಳ ಸಮ್ಮಿಲನ. ಎರಡು ಮನಸ್ಸುಗಳು ಒಂದಾಗಿ, ಜೀವನಪರ್ಯಂತ ಒಟ್ಟಾಗಿರಲು ಬಯಸಿ ಮುಂದುವರಿಯುವ ಸಮಯ. ಈ ಸಂದರ್ಭಕ್ಕೆ ಶುಭ ಮುಹೂರ್ತ ನೋಡಲೇಬೇಕು. ಬಂಧು ಬಳಗ ಆಪ್ತರೆಲ್ಲರೂ ಬಂದು ಹರಸಲೇಬೇಕು. ಈ ವರ್ಷದಲ್ಲಿ ಮದುವೆಗೆ ಯಾವಾಗೆಲ್ಲ ಮುಹೂರ್ತವಿದೆ ಎಂದು ನಾವು ಹೇಳುತ್ತೇವೆ. ಇದರ ಆಧಾರದ ಮೇಲೆ ನೀವು ನಿಮ್ಮ ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯಕ್ಕೆ ಸಜ್ಜಾಗಬಹುದು. 

Mangal Gochar 2023: 3 ರಾಶಿಗಳಿಗೆ 'ಮಂಗಳ' ತರುವ ಸಂಚಾರ

ಕಳೆದ ತಿಂಗಳು ಜನವರಿಯಲ್ಲಿ ಮಕರ ಸಂಕ್ರಾಂತಿ ಬಂದಾಗಿನಿಂದ ಮದುವೆಯ ಸೀಸನ್ ಶುರುವಾಗಿದೆ. ಜನವರಿಯಲ್ಲಿ ಮದುವೆಗೆ ಮಂಗಳಕರವಾದ 8 ದಿನಗಳು ಇದ್ದವು. ಫೆಬ್ರವರಿ ಬಹುತೇಕ ಮುಗಿದಿದೆ, ಆದರೆ ಮಾರ್ಚ್‌ನಲ್ಲಿ ಹೋಲಾಷ್ಟಕದಿಂದಾಗಿ 15 ದಿನ ಮದುವೆಯ ಶುಭ ಮುಹೂರ್ತವಿಲ್ಲ. ಇದಾವೆಗೆ ಎಷ್ದ ಬಳಿಕ, ಬೇಸಿಗೆ ರಜೆ ಬರುವ ಏಪ್ರಿಲ್‌ನಲ್ಲೂ ಈ ಬಾರಿ ಒಂದೂ ಮುಹೂರ್ತವಿಲ್ಲ. ಸಾಲದೆಂಬಂತೆ 
ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮದುವೆ ಕಾರ್ಯವನ್ನು ನಿಷೇಧಿಸಲಾಗಿದೆ. ಏಕೆಂದರೆ ಇದು ಮಹಾವಿಷ್ಣು ಯೋಗನಿದ್ರೆಗೆ ಜಾರುವ ಚಾತುರ್ಮಾಸದ ಸಮಯ. ಮಳೆಗಾಲ ಕೂಡಾ. ಹೀಗಾಗಿ ಈ ನಾಲ್ಕು ತಿಂಗಳು ಎಲ್ಲಾ ಮಂಗಳಕರ ಮತ್ತು ಶುಭ ಕಾರ್ಯಗಳು ನಿಲ್ಲುತ್ತವೆ. ಅರೆ, ಈ ವರ್ಷ ಮದುವೆಗೆ ಎಷ್ಟು ಕಡಿಮೆ ಮುಹೂರ್ತಗಳಲ್ಲವೇ?

ಚಿಂತೆ ಬೇಡ, ಮೇ ತಿಂಗಳಿನಲ್ಲಿ ಮದುವೆ ಸೀಸನ್ ಆರಂಭವಾಗಲಿದೆ. ಜೂನ್ ಬಿಟ್ಟರೆ ದೀಪಾವಳಿಯ ನಂತರದ ದೇವುತನಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಯೋಗ ನಿದ್ರಾವನ್ನು ತ್ಯಾಗ ಮಾಡುತ್ತಾನೆ. ಇದರ ನಂತರ ಮತ್ತೆ ಮದುವೆಯ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ದಿನ, ತುಳಸಿ-ಶಾಲಿಗ್ರಾಮ ವಿವಾಹದ ನಂತರ, ಮದುವೆಯ ದಿನಾಂಕಗಳು ಶುರುವಾಗುತ್ತವೆ. ಈಗ ಈ ವರ್ಷದ ವಿವಾಹ ಮುಹೂರ್ತ ದಿನಾಂಕಗಳನ್ನು ಪರಿಶೀಲಿಸೋಣ. 

March Festival Calendar 2023: ಯುಗಾದಿ, ಹೋಳಿ, ರಾಮನವಮಿ.. ಹಬ್ಬಗಳ ರಸದೌತಣ ಬಡಿಸುವ ಮಾರ್ಚ್

ಮಾರ್ಚ್ 2023 ವಿವಾಹ ಮುಹೂರ್ತ: 1ನೇ, 5ನೇ, 6ನೇ, 9ನೇ, 11ನೇ ಮತ್ತು 13ನೇ ಮಾರ್ಚ್ ಮದುವೆಗೆ ಮಂಗಳಕರವಾಗಿದೆ. ಅಂದರೆ ಮಾರ್ಚ್‌ನಲ್ಲಿ 6 ದಿನಗಳು ಲಭ್ಯವಿವೆ. ಇದನ್ನು ಹೊರತುಪಡಿಸಿ
ಏಪ್ರಿಲ್ 2023 ಮದುವೆ ಮುಹೂರ್ತ: ಏಪ್ರಿಲ್‌ನಲ್ಲಿ ಯಾವುದೇ ಶುಭ ಸಮಯವಿಲ್ಲ.
ಮೇ 2023 ವಿವಾಹ ಮುಹೂರ್ತ: 6, 8, 9, 10, 11, 15, 16, 20, 21, 22, 27, 29 ಮತ್ತು 30 ಮೇ ಮದುವೆಗೆ ಶುಭ.
ಜೂನ್ 2023 ಮದುವೆಯ ಶುಭ ಸಮಯ: ಜೂನ್ 1, 3, 5, 6, 7, 11, 12, 23, 24, 26 ಮತ್ತು 27 ಮದುವೆಗೆ ಮಂಗಳಕರವಾಗಿದೆ.
ನವೆಂಬರ್ 2023 ಮದುವೆ ಸಮಯ: 23, 24, 27, 28 ಮತ್ತು 29 ನವೆಂಬರ್ ಮದುವೆಗೆ ಮಂಗಳಕರ ಸಮಯ.
ಡಿಸೆಂಬರ್ 2023 ಮದುವೆ ಸಮಯ: 5, 6, 7, 8, 9, 11 ಮತ್ತು 15 ಡಿಸೆಂಬರ್ ಮದುವೆಗೆ ಮಂಗಳಕರ ಸಮಯ.

Latest Videos
Follow Us:
Download App:
  • android
  • ios