ಮುಸ್ಲಿಂ ಮಹಿಳೆ ಸೇರಿ 15 ಗರ್ಭಿಣಿಯರಿಗೆ ದುರ್ಗಾ ದೇವಿ ಸನ್ನಿಧಿಯಲ್ಲಿ ಸೀಮಂತ ಕಾರ್ಯ!

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮುಸ್ಲಿಂ ಮಹಿಳೆಯರೂ ಸೇರಿ 15 ಜನರಿಗೆ ಸಾಮೂಹಿಕ ಸೀಮಂತ ಕಾರ್ಯ ನಡೆಸಿ ಕೋಮು ಸೌಹಾರ್ದತೆ ಮೆರೆಯಲಾಗಿದೆ. 

Seemanta for Muslim women in Gadag skr

ಗದಗ : ತಾಲೂಕಿನ ಲಕ್ಕುಂಡಿ ಗ್ರಾಮದ ದುರ್ಗಾ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಮುಸ್ಲಿಂ ಮಹಿಳೆ ಸೇರಿ 15 ಗರ್ಭಿಣಿಯರಿಗೆ  ಸಾಮೂಹಿಕ ಸೀಮಂತ ಕಾರ್ಯ ಮಾಡ್ಲಾಯ್ತು.

ಧರ್ಮಗಳ ಮಧ್ಯೆ ಸಾಮರಸ್ಯ ಹದಗೆಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತಂದೆ ತಾಯಿ ಸ್ಥಾನದಲ್ಲಿ ನಿಂತು ದೇವಸ್ಥಾನ ಸಮಿತಿ, ಮುಸ್ಲಿಂ ಮಹಿಳೆಗೆ ಸೀಮಂತ ಮಾಡಿರೋದು ಬ್ರಾತೃತ್ವಕ್ಕೆ ಹೊಸ ಭಾಷ್ಯ ಬರೆದಂತಾಗಿದೆ. 

ಶರನ್ನವರಾತ್ರಿ ಅಂಗವಾಗಿ ಲಕ್ಕುಂಡಿ  ದುರ್ಗಾದೇವಿ ದೇವಸ್ಥಾನ ಕಮಿಟಿಯಿಂದ ಪ್ರತಿ ವರ್ಷ ಸೀಮಂತ ಕಾರ್ಯ ನಡೆಯುತ್ತೆ.. ಗ್ರಾಮದ ಅಂಗನವಾಡಿಯಿಂದ ಗರ್ಭಿಣಿಯರ ಮಾಹಿತಿ ಪಡೆದು, ಸಾಮೂಹಿಕ ಸೀರೆ ಕಾರ್ಯ ಮಾಡಲಾಗುತ್ತೆ.. ಜಾತಿ, ಮತ, ಪಥ, ಧರ್ಮ ಎನ್ನದೆ ಎಲ್ಲ ಧರ್ಮದ ಜನರಿಗೆ ಪದ್ಧತಿ ಪ್ರಕಾರ ಕಾರ್ಯ ಮಾಡಲಾಗುತ್ತೆ‌‌.. ಈ ಬಾರಿ ಗ್ರಾಮದ ಫರಿದಾ ಬೇಗಂ ನಮಾಜಿ ಅನ್ನೋ ಮಹಿಳೆಯನ್ನ ದೇವಸ್ಥಾನದ ಕರೆಸೆ ಸೀರೆ ಕಾರ್ಯ ಮಾಡಲಾಗಿದೆ.. ಹರ್ಲಾಪುರ ಗ್ರಾಮದ ಫರಿದಾ ಬೇಗಂ ಎರಡು ವರ್ಷದ ಹಿಂದೆ ಗ್ರಾಮದ ಮೈನುದ್ದೀನ್ ಎಂಬಾತನನ್ನ ಮದ್ವೆಯಾಗಿದ್ರು.. ಗರ್ಭಿಣಿ ಫರಿದಾಗೆ ಸದ್ಯ ದೇವಸ್ಥಾನ ಕಮಿಟಿ ಸೀಮಂತ ಕಾರ್ಯ ಮಾಡಿದೆ..

ಉಚ್ಚಿಲ ದಸರಾ ವಿಶೇಷ: ಏಕಕಾಲದಲ್ಲಿ ನೂರು ವೀಣೆಗಳ‌ ಝೇಂಕಾರ

ಗ್ರಾಮದ 15 ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಉಡಿ ತುಂಬಿ ಹರಿಸಿ ಹಾರೈಸಿದ್ರು.. ಸಂಪ್ರದಾಯದಂತೆ ಸೀರೆ, ಬಳೆ, ಕುಂಕುಮ ಅರಿಶಿಣ ನೀಡಿ ಸಾಮೂಹಿಕವಾಗಿ ಸೀಮಂತ ನೆರವೇರಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಹೋಳಿಗೆ ಊಟ ಬಡಿಸಲಾಯಿತು...

ಅಮ್ಮನ ಸೇವಾ ಸಮಿತಿಯಲ್ಲೂ ಇದ್ದಾರೆ ಮುಸ್ಲಿಂ ಸದಸ್ಯ..!
ಲಕ್ಕುಂಡಿ ದುರ್ಗಾ ದೇವಿ ಸೇವಾ ಸಮಿತಿಯಲ್ಲಿ ಮುಸ್ಲಿಂ ಸದಸ್ಯರಿದ್ದಾರೆ.. ಗ್ರಾಮದ ನಜೀರ್ ಸಾಹೇಬ್ ಕಿರಟಗೇರಿ ದೇವಸ್ಥಾನ ಸೇವಾ ಸಮಿತಿ ಸಂಚಾಲಕರಾಗಿ ಕಳೆದ 6 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.. ನವರಾತ್ರಿ ನಿಮಿತ್ತ ಪ್ರತಿ ವರ್ಷದಂತೆ ಪುರಾಣ ನಡೆಯುತ್ತೆ.. ಅನ್ನ ಸಂತರ್ಪಣೆ ಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ವೆ.. ಧಾರ್ಮಿಕ ಕಾರ್ಯದಲ್ಲಿ ನಜೀರ್ ಸಾಹೇಬರು ಮುಂಚೂಣಿಯಲ್ಲಿ ನಿಂತ ಕೆಲಸ ಮಾಡ್ತಾರೆ..  

ಈ ಮನೆಯಲ್ಲಿ ಐವತ್ತು ವರ್ಷಗಳಿಂದ ನಡೆಯುತ್ತಿದೆ ದಸರಾ ಗೊಂಬೆಗಳ ಮೆರವಣಿಗೆ!

ಸರ್ವಧರ್ಮಿಯರು ಸೇರಿ ನಡೆಸ್ತಿರೋ ದೇವಿ ಉತ್ಸವಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.. ಅಲ್ದೆ, ಸದ್ದಿಲ್ಲದೇ ಭಾವೈಕ್ಯತೆಯ ಕಾರ್ಯದಲ್ಲಿ ನಿರತವಾಗಿದೆ..

Latest Videos
Follow Us:
Download App:
  • android
  • ios