Asianet Suvarna News Asianet Suvarna News

ಶನಿವಾರ ಬೆಳಿಗ್ಗೆ ಇವು ಕಣ್ಣಿಗೆ ಬಿದ್ರೆ ನಿಮ್ಮ ಅದೃಷ್ಟ ಬದಲಾದಂತೆ!

ಹಿಂದೂ ಧರ್ಮದಲ್ಲಿ ಶನಿವಾರಕ್ಕೆ ಮಹತ್ವದ ಸ್ಥಾನವಿದೆ. ಶನಿವಾರದಂದು ಶನಿಯ ಕೃಪೆಗೆ ಪಾತ್ರರಾಗಲು ಭಕ್ತರು ದೇವಸ್ಥಾನಗಳಿಗೆ ಹೋಗ್ತಾರೆ. ಶನಿವಾರ ಬೆಳಿಗ್ಗೆ ಕೆಲ ವಸ್ತುಗಳು ನಿಮ್ಮ ಕಣ್ಣಿಗೆ ಬಿತ್ತು ಎಂದಾದ್ರೆ ನಿಮ್ಮ ಮೇಲೆ ಶನಿ ಕರುಣೆ ತೋರಿದ್ದಾನೆ ಎಂದರ್ಥ.
 

Seeing These Things On Saturday Is Auspicious and would bring luck you
Author
Bangalore, First Published Jul 20, 2022, 12:55 PM IST | Last Updated Jul 20, 2022, 12:55 PM IST

ಶನಿ ಅಂದ್ರೆ ಎಲ್ಲರಿಗೂ ಒಂದು ಭಯವಿದೆ. ಶನಿಯನ್ನು ನ್ಯಾಯ ದೇವ ಎಂದು ಕರೆಯಲಾಗುತ್ತದೆ. ಸತ್ಯಕ್ಕೆ ಹೆಚ್ಚು ಮಹತ್ವ ನೀಡುವ ಶನಿ ಯಾವಾಗ್ಲೂ ನ್ಯಾಯದ ಪರವಾಗಿರ್ತಾನೆ. ಶನಿಯನ್ನು ಮೆಚ್ಚಿಸಲು ಭಕ್ತರು ಸಾಕಷ್ಟು ಪ್ರಯತ್ನ ಮಾಡ್ತಾರೆ. ಶನಿ ಕೃಪೆಗೆ ಪಾತ್ರರಾದ್ರೆ ಎಲ್ಲ ಸುಖ – ಸಂತೋಷ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಾರದ ಒಂದೊಂದು ದಿನಕ್ಕೆ ಒಂದೊಂದು ಮಹತ್ವವಿದೆ. ಹಾಗೆ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶನಿವಾರವನ್ನು ಶನಿ ದೇವರಿಗೆ ಅರ್ಪಣೆ ಮಾಡಲಾಗಿದೆ. ಶನಿ ದೇವಸ್ಥಾನಕ್ಕೆ ಹೋಗುವ ಭಕ್ತರು, ಭಕ್ತಿಯಿಂದ ಪೂಜೆ ಮಾಡ್ತಾರೆ.  ಶನಿವಾರದಂದು ವಿಶೇಷ ಪೂಎ, ಅರ್ಚನೆಗಳು ನಡೆಯುತ್ತವೆ. ಸಾಡೆ ಸಾಥ್ ಶನಿ ಸೇರಿದಂತೆ ಜಾತಕದಲ್ಲಿ ಶನಿ ದೋಷವಿರುವವರು ಶನಿವಾರದಂದು ಹೆಚ್ಚಿನ ಆರಾಧನೆ ಮಾಡ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಸ್ತುಗಳು ಹಾಗೂ ಶುಭ ಸಂಕೇತಗಳ ಬಗ್ಗೆಯೂ ಹೇಳಲಾಗಿದೆ. ಕೆಲ ವಸ್ತುಗಳು ಶನಿವಾರ ನಮ್ಮ ಕಣ್ಣಿಗೆ ಬಿದ್ರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶನಿದೇವನ ಅನುಗ್ರಹವು ನಿಮ್ಮ ಮೇಲೆ ಬೀಳಲಿದೆ ಮತ್ತು ನಿಮ್ಮ ದುಃಖ ದೂರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶನಿವಾರ ಮುಂಜಾನೆ ನಿಮ್ಮ ಕಣ್ಣಿಗೆ ಯಾವ ವಸ್ತು ಬಿದ್ರೆ ಶುಭವೆಂದು ನಾವು ಹೇಳ್ತೇವೆ.

ಶನಿವಾರ (Saturday) ಬೆಳಿಗ್ಗೆ ಯಾರು ಕಂಡ್ರೆ ಮಂಗಳ?:

ಸ್ವಚ್ಛ ಮಾಡುವ ವ್ಯಕ್ತಿ : ಶನಿವಾರದಂದು ಮನೆ (House) ಯ ಹತ್ತಿರ ಕಸ ಗುಡಿಸುವವರನ್ನು ನೋಡುವುದು ಶುಭ (Good Luck ) ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಕಣ್ಣಿಗೆ ಸ್ವಚ್ಛತಾ ಕೆಲಸಗಾರರು ಕಂಡರೆ ಅಥವಾ ಮನೆಗೆ ಬಂದರೆ ಅವಶ್ಯವಾಗಿ ಅವರಿಗೆ ಸ್ವಲ್ಪ ಹಣವನ್ನು ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚುತ್ತದೆ ಮತ್ತು ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ.

ಭಿಕ್ಷುಕ (Beggar) ಕಣ್ಣಿಗೆ ಬಿದ್ರೆ ಶುಭ : ಸಾಮಾನ್ಯವಾಗಿ ನಾವು ಭಿಕ್ಷುಕರನ್ನು ನೋಡಿದ್ರೆ ಮುಖ ತಿರುಗಿಸಿಕೊಂಡು ಹೋಗ್ತೇವೆ. ಅವರಿಗೆ ಯಾವುದೇ ದಾನ ಮಾಡುವುದಿಲ್ಲ. ಶನಿವಾರ ಬೆಳಿಗ್ಗೆ ನಿಮ್ಮ ಮನೆಗೆ ಬಡವರು ಅಥವಾ ಭಿಕ್ಷುಕರು ಬಂದರೆ ಅಥವಾ ಅವರು ನಿಮ್ಮ ಕಣ್ಣಿಗೆ ಬಿದ್ರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ಭಿಕ್ಷುಕನಿಗೆ ನೀವು ಸಹಾಯ ಮಾಡಿದ್ರೆ ಶನಿ ಕೃಪೆಗೆ ನೀವು ಪಾತ್ರರಾಗ್ತೀರಿ.  ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆ. ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತವೆ. ಒಂದು ವೇಳೆ ಶನಿವಾರ ಮನೆಗೆ ಬಂದ ಭಿಕ್ಷುಕನನ್ನು ಬರಿಗೈನಲ್ಲಿ ಕಳುಹಿಸಿದ್ರೆ ಶನಿಯ ಕೋಪಕ್ಕೆ ನೀವು ಗುರಿಯಾಗ್ತೀರಿ. 

ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು, ಯಾಕೆ ತಿಳಿದಿದೆಯೇ?

ಕಪ್ಪು ಕಾಗೆ (Black Crow) : ಶನಿವಾರದಂದು ಮನೆಯ ಮುಂದೆ ಕಪ್ಪು ಕಾಗೆ ನೀರು ಕುಡಿಯುವುದನ್ನು ಕಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶನಿವಾರ ನಿಮ್ಮ ಮನೆ ಮಾಡಿ ಮೇಲೆ ಕಪ್ಪು ಕಾಗೆ ಬಂದು ಕುಳಿತ್ರೂ ಅದು ಶುಭ ಸಂಕೇತ ಎನ್ನಲಾಗುತ್ತದೆ.

ಕಪ್ಪು ನಾಯಿ : ಶನಿವಾರ ಕಪ್ಪು ಬಣ್ಣಕ್ಕೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕಪ್ಪು ನಾಯಿ ನಿಮಗೆ ಕಾಣಿಸಿದ್ರೂ  ಮಂಗಳಕರವೆಂದು ಪರಿಗಣಿಸಲಾಗಿದೆ. ನಾಯಿಗಳಿಗೆ ಆಹಾರ ನೀಡುವವರಿಗೆ ಶನಿ ತೃಪ್ತನಾಗ್ತಾನೆ. ಶನಿವಾರದಂದು ಶನಿ ದೇವಸ್ಥಾನದ ಹೊರಗೆ  ಕಪ್ಪು ನಾಯಿ ಕಾಣಿಸಿಕೊಂಡರೆ ಅದಕ್ಕೆ ಆಹಾರ ನೀಡಬೇಕು. ಇದರಿಂದ ಶನಿ ಮಾತ್ರವಲ್ಲದೆ ರಾಹು ಮತ್ತು ಕೇತುಗಳಿಗೂ ಸಂತೋಷವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಮನೆಯಿಂದ ಹೊರಟಾಗ ಈ ಕೆಲಸ ಮಾಡಿದ್ರೆ ಅದೃಷ್ಟ ಜೊತೆಗಿರೋದ್ರಲ್ಲಿ ಡೌಟೇ ಇಲ್ಲ!

ಕಪ್ಪು ಹಸು : ಶನಿವಾರದಂದು ಕಪ್ಪು ಹಸುವಿನ ದರ್ಶನ ಸಿಕ್ಕರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಕೆಲಸಕ್ಕೆ ಹೋಗುವಾಗ ಕಪ್ಪು ಹಸು ಕಾಣಿಸಿಕೊಂಡ್ರೆ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದರ್ಥ.  
 

Latest Videos
Follow Us:
Download App:
  • android
  • ios