Asianet Suvarna News Asianet Suvarna News

Swapna Shastra : ಕನಸಿನಲ್ಲಿ ಈ ಪ್ರಾಣಿಗಳು ಕಂಡ್ರೆ ಜೀವನದಲ್ಲಾಗಲಿದೆ ಹಣದ ಹೊಳೆ

ಎಲ್ಲರೂ ಕನಸು ಕಾಣ್ತಾರೆ. ಕನಸಿನಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ಪ್ರಾಣಿ, ಪಕ್ಷಿ, ದೇವತೆ ಹೀಗೆ ಅನೇಕ ಸಂಗತಿಗಳು ಕಾಣಿಸುತ್ತವೆ. ನಮ್ಮ ಕನಸಿಗೂ ಹಾಗೂ ನಮ್ಮ ಜೀವನಕ್ಕೂ ನಂಟಿದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಬಗ್ಗೆ ಅನೇಕ ಸಂಗತಿಯನ್ನು ಹೇಳಲಾಗಿದೆ. 
 

Seeing these animals in dream is considered as very auspicious
Author
Bangalore, First Published Feb 24, 2022, 3:26 PM IST | Last Updated Feb 24, 2022, 3:26 PM IST

ಜ್ಯೋತಿಷ್ಯ ಶಾಸ್ತ್ರ (Astrology)ದಲ್ಲಿ ಪ್ರತಿಯೊಂದು ವಿಷ್ಯಕ್ಕೂ ಮಹತ್ವದ ಸ್ಥಾನವಿದೆ. ದೇಹ (Body)ದ ಅಂಗದ ಆಕಾರದಿಂದ ಹಿಡಿದು ರಾತ್ರಿ (Night) ಕನಸಿ (Dream)ನಲ್ಲಿ ಕಾಣುವ ವಿಷ್ಯವನ್ನು ಭವಿಷ್ಯಕ್ಕೆ ತುಲನೆ ಮಾಡಿ ನೋಡಲಾಗುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಸಾಮಾನ್ಯವಾಗಿ ಎಲ್ಲರೂ ಕನಸು ಕಾಣುತ್ತಾರೆ. ಕೆಲವರಿಗೆ ಕನಸು ನೆನಪಿರುತ್ತದೆ. ಮತ್ತೆ ಕೆಲವರಿಗೆ ಮರೆತು ಹೋಗುತ್ತದೆ. ಕೆಟ್ಟ ಕನಸು, ಒಳ್ಳೆಯ ಕನಸು ಹೀಗೆ ಬೇರೆ ಬೇರೆ ಕನಸುಗಳನ್ನು ನಾವು ಕಾಣ್ತೇವೆ. ಕನಸಿನಲ್ಲಿ ಕಲ್ಪನೆ ಮಾಡಿಕೊಳ್ಳದ ವಿಷ್ಯ, ದೇವಸ್ಥಾನ, ಸಮುದ್ರ, ಪ್ರಾಣಿ, ಪಕ್ಷಿಗಳನ್ನು ನಾವು ನೋಡ್ತೇವೆ.

ಕನಸಿನಲ್ಲಿ ಕಾಣುವ ವಿಷ್ಯಗಳು ನಮ್ಮ ಜೀವನದೊಂದಿಗೆ ಸಂಬಂಧ ಹೊಂದಿರುತ್ತವೆ. ಕನಸಿನಲ್ಲಿ ಕಾಣುವ ಪ್ರಾಣಿಗಳು ಮುಂದೇನಾಗುತ್ತದೆ ಎಂಬ ಮುನ್ಸೂಚನೆಯನ್ನು ನೀಡುತ್ತವೆ. ಕನಸಿನಲ್ಲಿ ಕೆಲ ಪ್ರಾಣಿಗಳು ಕಾಣಿಸುವುದು ಸೌಭಾಗ್ಯವಾದ್ರೆ ಮತ್ತೆ ಕೆಲ ಪ್ರಾಣಿಗಳು ಕಾಣುವುದು ದುರಾದೃಷ್ಟವೆಂದು ಸಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ಪ್ರಾಣಿ ಕಂಡರೆ ಧನಲಾಭ ಹಾಗೂ ಯಾವ ಪ್ರಾಣಿ ಕಂಡರೆ ಧನ ಹಾನಿ ಎಂಬುದನ್ನೂ ಹೇಳಲಾಗಿದೆ. ಇಂದು ಕನಸಿನಲ್ಲಿ ಯಾವ ಪ್ರಾಣಿ ಕಂಡರೆ ಯಾವ ಸೂಚನೆ ಎಂಬುದನ್ನು ನಾವು ವಿವರವಾಗಿ ಹೇಳ್ತೇವೆ.

ಕನಸಿನಲ್ಲಿ ಯಾವ ಪ್ರಾಣಿ ಕಂಡ್ರೆ ಏನು ಅರ್ಥ? 

  • ರಾತ್ರಿ ಮಲಗಿದ್ದಾಗ ಸ್ವಪ್ನದಲ್ಲಿ ಮೀನು ಕಂಡರೆ ಖುಷಿಪಡಿ. ಯಾಕೆಂದ್ರೆ ನಿಮ್ಮ ಮನೆಯಲ್ಲಿ ಶೀಘ್ರವೇ ಮಂಗಳ ಕಾರ್ಯ ನಡೆಯಲಿದೆ ಎಂಬ ಸೂಚನೆಯನ್ನು ಇದು ನೀಡುತ್ತದೆ.
  • ನೀರಿನಲ್ಲಿ ಕಪ್ಪೆ ಇರುವಂತಹ ಕನಸು ಕಂಡರೆ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು ಎಂದರ್ಥ.
  • ಕನಸಿನಲ್ಲಿ ಕಪ್ಪೆಯ ಶಬ್ದ ಕೇಳಿಸಿದರೆ ಜೀವನದಲ್ಲಿ ಹೊಸ ತಿರುವು ಸಿಗಲಿದೆ ಎಂಬ ಸೂಚನೆಯಾಗಿದೆ. ಕನಸಿನಲ್ಲಿ ನೀವು  ಕಪ್ಪೆಯನ್ನು ಕೈನಲ್ಲಿ ಹಿಡಿದಿಟ್ಟುಕೊಂಡಂತೆ ಕಾಣಿಸಿದ್ರೆ ಅದು ಒಳ್ಳೆಯ ಸಂಕೇತವಾಗಿದೆ. 
  • ಸ್ವಪ್ನದಲ್ಲಿ ಗೂಬೆ ಕಾಣಿಸಿಕೊಂಡ್ರೆ ಶುಭವಲ್ಲ. ಮುಂದಿನ ಜೀವನದಲ್ಲಿ ದುಃಖ ಮತ್ತು ಹಣದ ಸಮಸ್ಯೆ ನಿಮಗೆ ಎದುರಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. 
  • ಕನಸಿನಲ್ಲಿ ಕರಡಿ ಕಾಣಿಸಿಕೊಂಡರೆ ನೀವು ಹೆದರಬೇಕಾಗಿಲ್ಲ. ಖುಷಿಪಡಿ. ಯಾಕೆಂದ್ರೆ ಕನಸಿನಲ್ಲಿ ಕರಡಿ ಕಾಣಿಸಿಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
  • ಹಳದಿ ಬೆಕ್ಕು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಶೀಘ್ರದಲ್ಲೇ ಅಹಿತಕರ ಸುದ್ದಿ ಕೇಳುವಿರಿ ಎಂಬ ಸೂಚನೆಯಾಗಿದೆ. ಬಿಳಿ ಬೆಕ್ಕ ಕನಸಿನಲ್ಲಿ ಕಂಡರೆ  ಹಣದ ನಷ್ಟದ ಸಂಕೇತವಾಗಿದೆ. 
  • ಬೆಕ್ಕುಗಳು ಜಗಳವಾಡುವುದು ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಸಂಕೇತವಲ್ಲ. ಬೆಕ್ಕಿನ ಜಗಳ ನೋಡಿದವರು ಸ್ನೇಹಿತರ ಜೊತೆ ಜಗಳವಾಡುತ್ತಾರೆ ಎಂಬ ಸೂಚನೆಯಾಗಿದೆ.  
  • ರಾತ್ರಿ ನಿದ್ರೆ ಕಸಿದುಕೊಳ್ಳುವ ಕೆಲಸವನ್ನು ಬೆಡ್ ಬಗ್ ಗಳು ಮಾಡ್ತವೆ. ಈ ಬೆಡ್ ಬಗ್ ಗಳು ಕನಸಿನಲ್ಲಿ ಕಂಡರೆ ಯಶಸ್ಸನ್ನು ಪಡೆಯಲು ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂಬ ಸೂಚನೆಯಾಗಿದೆ. 
  • ಅಲಂಕರಿಸಿರುವ ಕುದುರೆ ನಿಮ್ಮ ಕನಸಿನಲ್ಲಿ ಕಾಣಿಸಿದ್ರೆ ಕೆಲಸದಲ್ಲಿ ನಷ್ಟ ಉಂಟಾಗುತ್ತದೆ ಎಂಬ ಸಂಕೇತವಾಗಿದೆ. ಹಾಗಾಗಿ ಇಂಥ ಕನಸು ಕಾಣಿಸಿದಲ್ಲಿ ಎಚ್ಚರಿಕೆಯಿಂದಿರಿ.
  • ಬಾವಲಿ ನೇತಾಡುವುದನ್ನು ನೋಡುವುದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.  

Bird Superstitions: ತಲೆ ಮೇಲೆ ಹಕ್ಕಿ ಪೀ ಮಾಡಿದ್ರೆ ಶುಭನಾ ಅಶುಭನಾ?

  • ಕನಸಿನಲ್ಲಿ ಹೆಚ್ಚು ಇರುವೆಗಳು ಕಾಣಿಸಿಕೊಳ್ಳುವುದು ಶುಭವಲ್ಲ. ತೊಂದರೆಗಳು ನಿಮ್ಮನ್ನು ಸುತ್ತುವರಿಯುತ್ತವೆ ಎಂಬ ಸಂಕೇತವಾಗಿದೆ. 
  • ಕನಸಿನಲ್ಲಿ ಹದ್ದು ಕಾಣಿಸಿಕೊಂಡರೆ ಅಪನಿಂದನೆ ಮತ್ತು ಶತ್ರುಗಳ ನಷ್ಟದ ಸಂಕೇತವಾಗಿದೆ.   
  • ನಿಮ್ಮ ಕನಸಿನಲ್ಲಿ ಇಲಿಯನ್ನು ಕೊಂದಂತೆ ಕಂಡರೆ ಆರ್ಥಿಕ ನಷ್ಟದ ಸೂಚನೆಯಾಗಿದೆ. ಶೀಘ್ರವೇ ನೀವು ಹಣವನ್ನು ಕಳೆದುಕೊಳ್ಳುತ್ತೀರಿ ಎಂಬುದನ್ನು ಇದು ಸೂಚಿಸುತ್ತದೆ.  
  • ಕನಸಿನಲ್ಲಿ ಹಲ್ಲಿಯನ್ನು ನೋಡುವುದು ಶತ್ರುಗಳಿಂದ ತೊಂದರೆಯಾಗುತ್ತದೆ ಎಂಬ ಸಂಕೇತವಾಗಿದೆ. 
  • ಮಿಂಚುಹುಳ ಕನಸಿನಲ್ಲಿ ಕಾಣಿಸಿಕೊಂಡರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮಗೆ ಕೆಟ್ಟ ಸಮಯವೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.  
  • ಮಿಡತೆ ಹಿಂಡುಗಳನ್ನು ನೋಡುವುದು ಕೂಡ ಒಳ್ಳೆಯದಲ್ಲ. ವ್ಯವಹಾರದಲ್ಲಿ ನಷ್ಟವಾಗುತ್ತದೆ ಎಂಬ ಸಂಕೇತವಾಗಿದೆ. 

LIFE LESSONS: ಮಹಾದೇವನ ಜೀವನದಿಂದ ನಾವು ಕಲಿಯಲೇಬೇಕಾದ ಕನಿಷ್ಠ ವಿಷಯಗಳಿವು..

  • ಕನಸಿನಲ್ಲಿ ಜೀಬ್ರಾ ಕಾಣಿಸಿಕೊಂಡರೆ ಸಂತೋಷದ ದಿನಗಳು ಪ್ರಾರಂಭವಾಗಲಿದೆ ಎಂದರ್ಥ.
  • ಕನಸಿನಲ್ಲಿ ಸಿಂಹ ಕಾಣಿಸಿಕೊಂಡ್ರೆ ಶೀಘ್ರದಲ್ಲೇ ಕೆಲವು ಕೆಲಸ ಯಶಸ್ವಿಯಾಗಲಿದೆ ಎಂಬ ಸಂಕೇತವಾಗಿದೆ.
  • ಕನಸಿನಲ್ಲಿ ಆನೆಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಕೃಪೆ ನಿಮಗೆ ಸಿಗಲಿದೆ. 
  • ಕನಸಿನಲ್ಲಿ ಹಸುವನ್ನು ನೋಡುವುದು ಕೂಡ ಮಂಗಳಕರವೆಂದು ಹೇಳಲಾಗಿದೆ.
Latest Videos
Follow Us:
Download App:
  • android
  • ios