Asianet Suvarna News Asianet Suvarna News

Bird Superstitions: ತಲೆ ಮೇಲೆ ಹಕ್ಕಿ ಪೀ ಮಾಡಿದ್ರೆ ಶುಭನಾ ಅಶುಭನಾ?

ಪಕ್ಷಿಗಳ ಬಗ್ಗೆ ಸಾಕಷ್ಟು ನಂಬಿಕೆ, ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಈ ರೀತಿಯ ನಂಬಿಕೆಗಳು ನಮ್ಮ ನಡುವೆ ಮಾತ್ರವಲ್ಲ, ಜಗತ್ತಿನಾದ್ಯಂತ ಸಾಕಷ್ಟಿವೆ. ಈ ರೆಕ್ಕೆಪುಕ್ಕದ ಜೀವಿಗಳು ದೇವರ ಸಂದೇಶವಾಹಕರು ಎಂಬ ನಂಬಿಕೆ ಬಹುತೇಕರದ್ದು. 

Bird Superstitions from around the world skr
Author
Bangalore, First Published Feb 23, 2022, 4:29 PM IST

ಮೂಢನಂಬಿಕೆಗಳು ಕೇವಲ ಭಾರತೀಯರ ಸರಕಲ್ಲ, ಅವು ಮನುಷ್ಯ ಇರುವಲ್ಲೆಲ್ಲ ಹುಟ್ಟಿಕೊಳ್ಳುತ್ತವೆ, ಬೆಳೆಯುತ್ತವೆ, ಕೆಲವು ಪ್ರಚಾರ ಪಡೆಯುತ್ತವೆ. ಪಕ್ಷಿಗಳ(Birds) ಕುರಿತಾದ ಹಲವಾರು ನಂಬಿಕೆ, ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಆದರೆ, ಇದು ಕೂಡಾ ಕೇವಲ ನಮಗೆ ಸೀಮಿತವಲ್ಲ, ವಿದೇಶಿಗರು, ಅದರಲ್ಲೂ ಪಾಶ್ಚಾತ್ಯರು ಈ ರೆಕ್ಕೆಪುಕ್ಕದ ಜೀವಿಗಳನ್ನು ದೇವರ ಸಂದೇಶವಾಹಕರು(messengers from the gods) ಎಂದು ನಂಬುತ್ತಾರೆ. 

ಹೀಗೆ ಪಕ್ಷಿಗಳ ಕುರಿತಾಗಿ ಹಬ್ಬಿರುವ ಕೆಲ ಮೂಢನಂಬಿಕೆಗಳು ಜಾಗತಿಕವಾಗಿದ್ದರೆ, ಮತ್ತೆ ಕೆಲವು ಆಯಾ ಪ್ರದೇಶಕ್ಕೆ ಸೀಮಿತವಾಗಿವೆ. ಅವೆಲ್ಲವನ್ನೂ ಗುಡ್ಡೆ ಹಾಕಿ ನೋಡಿದರೆ ಹಕ್ಕಿಗಳು ಅದೃಷ್ಟ ತರುತ್ತವೆ ಅಥವಾ ದುರದೃಷ್ಟ(bad luck) ತರುತ್ತವೆ ಎಂಬ ಬಗ್ಗೆ ಒಂದೇ ನಿಲುವಂತೂ ಸಿಗುವುದಿಲ್ಲ! ಜಗತ್ತಿನಾದ್ಯಂತ ಹಬ್ಬಿರುವ ಕೆಲ ಪಕ್ಷಿ ಮೂಢನಂಬಿಕೆಗಳ ಬಗ್ಗೆ ನೋಡೋಣ.

ಕಾಗೆ ಎಂದರೆ ದುರದೃಷ್ಟ ಸೂಚಕ
ಕಾಗೆ(crow)ಗಳೇನು ಎಲ್ಲಿ ಬೇಕಾದರೂ ಇರುತ್ತವೆ. ಅವಕ್ಕೆ ಮನುಷ್ಯರಂತೆ ನನ್ನ ಜಾಗ, ನಿನ್ನ ಜಾಗ ಎಂಬ ಚೌಕಟ್ಟುಗಳಿಲ್ಲ. ಆದರೂ ಕೂಡಾ ಕಾಗೆಗಳು ಎಲ್ಲಿ ಕಾಣುತ್ತವೆ ಎಂಬುದನ್ನು ಹಲವಾರು ರೂಪಕಗಳಾಗಿ, ಸೂಚಕಗಳಾಗಿ ನೋಡುತ್ತೇವೆ. ಕಾಗೆಗಳನ್ನು ನಾವು ಅಶುಭ ಸೂಚಕವೆಂದು ಓಡಿಸುತ್ತೇವೆ. ಪಿಂಡ ಇಟ್ಟಾಗ ಅವನ್ನೇ ಗೋಗರೆದು ಊಟಕ್ಕೆ ಕರೆಯುತ್ತೇವೆ! ಕಾಗೆಯು ಶನಿಯ ವಾಹನ ಎಂಬ ನಂಬಿಕೆ ಇರುವುದರಿಂದ ಅವು ಮುಟ್ಟಿ ಹೋದರೆ ಶನಿ ಕಾಟ ಶುರುವಾಗುವುದು ಎಂಬ ನಂಬಿಕೆ ನಮ್ಮದು. ಪಾಶ್ಚಾತ್ಯರಲ್ಲೂ ಕಾಗೆಯನ್ನು ದುರದೃಷ್ಟ ಸೂಚಕ ಎಂದೇ ನೋಡಲಾಗುತ್ತದೆ. ಆದರೆ, ರಸ್ತೆಯಲ್ಲಿ ಸತ್ತು ಬಿದ್ದ ಕಾಗೆ ನೋಡಿದರೆ, ಅದೃಷ್ಟ ಬರುತ್ತದೆ ಎಂಬುದು ಅವರ ನಂಬಿಕೆ!
ಗ್ರೀಕರ ನಂಬಿಕೆಯಂತೆ, ವಿವಾಹ(marriage)ದ ಆರತಕ್ಷತೆ ಸ್ಥಳಕ್ಕೆ ಕಾಗೆ ಬಂದರೆ ಆ ಜೋಡಿ ವಿಚ್ಚೇದನವಾಗುವುದು ಖಂಡಿತಾ. ಇನ್ನು ಕೆಲ ವಿವಾಹಗಳಲ್ಲಿ ಎರಡು ಕಾಗೆಗಳನ್ನು ಒಟ್ಟಿಗೇ ಹಾರಿ ಬಿಡಲಾಗುತ್ತದೆ. ಅವು ಒಟ್ಟಿಗೇ ಹಾರಿದರೆ ದಂಪತಿ ಚೆನ್ನಾಗಿರುತ್ತಾರೆಂದೂ, ಎರಡೂ ಬೇರೆ ಬೇರೆ ದಿಕ್ಕಿನಲ್ಲಿ ಹಾರಿದರೆ ದಂಪತಿಯ ವಿಚ್ಚೇದನ(divorce) ಗ್ಯಾರಂಟಿ ಎಂದೂ ನಂಬುತ್ತಾರೆ. 

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ಹಕ್ಕಿ ಪಿಕ್ಕೆ(bird pee)
ನಾವು ದಾರಿಯಲ್ಲಿ ಹೋಗುವಾಗ ತಲೆ ಮೇಲೆ ಹಕ್ಕಿಯೊಂದು ಪೀ ಮಾಡಿದರೆ, ಅಸಹ್ಯವೇನೋ ಆಗುತ್ತದೆ. ಆದರೆ ಸಮಾಧಾನ ತರುವ ಸಂಗತಿಯೆಂದರೆ, ಅದು ಅದೃಷ್ಟದ ಸೂಚಕವೆಂಬ ನಂಬಿಕೆ! ಈ ನಂಬಿಕೆ ಜಗತ್ತಿನ ಹಲವೆಡೆ ಹಬ್ಬಿದೆ. 

ನವಿಲಿನ ಗರಿಗಳು(Peacock Feathers)
ಮನೆಗೆ ನವಿಲಿನ ಗರಿಗಳನ್ನು ತರುವುದರಿಂದ ಅದೃಷ್ಟ ನಮ್ಮದಾಗುತ್ತದೆ, ಮನೆಯನ್ನು ಅಪಾಯದಿಂದ ಕಾಪಾಡಲು ಗರಿಯಲ್ಲಿರುವ ಹೆಚ್ಚಿನ ಕಣ್ಣುಗಳು ಸಹಾಯಕವಾಗಿವೆ ಎಂಬ ನಂಬಿಕೆ ಭಾರತೀಯರು, ಜಪಾನಿಗರು ಹಾಗೂ ಚೀನೀಯರಲ್ಲಿದೆ. ಆದರೆ, ಪಾಶ್ಚಾತ್ಯಕರ ಪ್ರಕಾರ, ನವಿಲಿನ ಗರಿ ಮನೆಗೆ ತಂದರೆ ದುರದೃಷ್ಟ ಅಟಕಾಯಿಸಿಕೊಳ್ಳುತ್ತದೆ. ಹೀಗೆ ಮಾಡಿದರೆ ಅವಿವಾಹಿತೆಯು ವಯಸ್ಸಾದ ಸೇವಕಿಯಾಗಿ ಬಿಡುತ್ತಾಳೆ ಎಂದು ನಂಬುತ್ತಾರೆ! 
ಅಷ್ಟೇ ಅಲ್ಲ, ಅಲ್ಲಿನ ನಟ ನಟಿಯರು, ಸೆಲೆಬ್ರಿಟಿಗಳು ನವಿಲು ಗರಿಯನ್ನು ಪ್ರಾಪರ್ಟಿಯಾಗಿ ವೇದಿಕೆ ಮೇಲೆ ತರಲು ಕೂಡಾ ಬಿಡುವುದಿಲ್ಲ. ಅದರಿಂದ ಚಿತ್ರ ತೋಪೆದ್ದು ಹೋಗುತ್ತದೆ ಎಂಬ ನಂಬಿಕೆ ಇದೆ. 

Auspicious Muhurat: ದಿನ ಅಶುಭವಾದರೂ ಶುಭ ಫಲವನ್ನೇ ನೀಡುತ್ತೆ ಈ ಮುಹೂರ್ತ!

ಮೈಮೇಲೆ ಹಕ್ಕಿ ಹಾರಿದರೆ
ನಾವು ಟೆರೇಸಿನಲ್ಲಿ ಮಲಗಿದಾಗ ಸಾಮಾನ್ಯವಾಗಿ ಹಿರಿಯರು, 'ಎದ್ದೇಳು, ಮೇ ಮೇಲೆ ಹಕ್ಕಿ ಹಾರಬಾರದು, ಅದು ಅಶುಭದ ಸೂಚನೆ' ಎನ್ನುವುದನ್ನು ಕೇಳಿರುತ್ತೇವೆ. ಈ ನಂಬಿಕೆ ವಿದೇಶದಲ್ಲೂ ಇದೆ. ಮನೆಯೊಳಗೆ ಹಕ್ಕಿಯೊಂದ ಬಂದರೆ, ಅದೇನೋ ಪ್ರಮುಖ ಸುದ್ದಿ ತಂದಿದೆ ಎಂದು ನಂಬಲಾಗುತ್ತದೆ. ಪಕ್ಷಿಯ ಬಣ್ಣ ಬಿಳಿ(white)ಯಾಗಿದ್ದರೆ, ಉತ್ತಮ ವಾರ್ತೆ ತಂದಿದೆ ಎಂದೂ, ಬಣ್ಣ ಕಪ್ಪಾ(black)ಗಿದ್ದರೆ, ಸಾವಿನ ವಾರ್ತೆ ತಂದಿದೆ ಎಂದೂ ನಂಬುತ್ತಾರೆ. 
ಅಲ್ಲದೆ, ಹಕ್ಕಿಯು ಬಂದು ಮನೆಯ ಕಿಟಕಿಗೆ ಬಡಿದರೆ, ಮನೆ ಸದಸ್ಯರ ಸಾವಿನ ಸೂಚನೆ ನೀಡುತ್ತಿದೆ ಎಂದು ಭಾವಿಸುತ್ತಾರೆ. 
 

Follow Us:
Download App:
  • android
  • ios