Maha Shivratri 2022: ಮಹಾದೇವನ ಜೀವನದಿಂದ ನಾವು ಕಲಿಯಲೇಬೇಕಾದ ಕನಿಷ್ಠ ವಿಷಯಗಳಿವು..

ಶಿವನ ಜೀವನದಿಂದ ನಾವು ಕಲಿಯಬೇಕಾದ ಹಲವು ಸರಳವಾದ, ಆದರೆ ಪರಿಣಾಮಕಾರಿಯಾದ ಪಾಠಗಳಿವೆ. ಅವೇನು ನೋಡೋಣ. 

Life Lessons We All Should Learn From Lord Shiva skr

ಹಿಂದೂಗಳ ಮುಕ್ಕೋಟಿ ದೇವರ ನಡುವೆ ಮಹಾದೇವನಾಗಿ ಗುರುತಿಸಿಕೊಂಡವನು ಶಿವ. ಶಿವ ಎಂದರ ಶಕ್ತಿ, ಶಿವ ಎಂದರೆ ಕರುಣೆ, ಶಿವ ಎಂದರೆ ನೆಮ್ಮದಿ. ಆತ ಕೆಟ್ಟದನ್ನು ನಾಶ ಮಾಡಿ ಒಳಿತನ್ನು ಸಂಸ್ಥಾಪಿಸುವವ. ತ್ರಿಮೂರ್ತಿ(Trinity)ಗಳಲ್ಲಿ ಒಬ್ಬನಾದ ಶಿವನೆಂದರೆ ಹುಟ್ಟೂ ಇಲ್ಲದವನು, ಸಾವೂ ಇಲ್ಲದವನು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಆತ ಅಜ- ಎಂದರೆ ಹುಟ್ಟೇ ಇಲ್ಲದವನು. ಶಿವನ ಹುಟ್ಟಿನ ಬಗ್ಗೆ ಹಲವಾರು ಗೊಂದಲಗಳಿವೆ. ಆದರೆ, ಆತ ಸರ್ವಶಕ್ತ ಎಂಬ ಬಗ್ಗೆ ಮಾತ್ರ ಯಾರಿಗೂ ಅನುಮಾನವಿಲ್ಲ. 

ಶಿವ ದೇವರ ದೇವ. ಆತ ಸಾಮಾನ್ಯವಾಗಿ ಶಾಂತಚಿತ್ತವಾಗಿರುತ್ತಾನೆ. ತನ್ನ ಭಕ್ತರ ಭಕ್ತಿಗೆ ಬಲು ಬೇಗ ಕರಗುತ್ತಾನೆ. ಅವರು ಕೇಳಿದ್ದನ್ನು ಕರುಣಿಸುತ್ತಾನೆ. ಆದರೆ, ಶಿವನಿಗೆ ಇದಕ್ಕೆ ತದ್ವಿರುದ್ಧವಾದ ರೂಪವೂ ಇದೆ. ಕೋಪ ಬಂದರೆ ಆತ ಸಿಡಿದುರಿವ ಅಗ್ನಿ. ಎಲ್ಲವನ್ನೂ ಸುಟ್ಟುಬಿಡುವವ. ಆತ ಕೋಪದಲ್ಲಿ ಮೂರನೇ ಕಣ್ಣು ತೆರೆದರೆ ಪ್ರಳವಾಗುವುದು ಪಕ್ಕಾ. 

ಶಿವನು ಜಗತ್ತನ್ನು ರಕ್ಷಿಸುವ ಸಲುವಾಗಿ ಸಮುದ್ರದಿಂದ ವಿಷ ಕುಡಿದು ನೀಲಿ ಬಣ್ಣ ಪಡೆದ. ಅವನ ದೇಹದಂತೆಯೇ ಆತನ ವ್ಯಕ್ತಿತ್ವಕ್ಕೂ ಹಲವಾರು ವರ್ಣಗಳಿವೆ. ಶಿವನಿಂದ ನಾವೆಲ್ಲ ಕಲಿಯಬೇಕಾದ ಒಂದಿಷ್ಟು ಜೀವನ ಪಾಠಗಳಿವೆ. ಅವೇನು ನೋಡೋಣ. 

Janaki Jayanti 2022: ಅವಿವಾಹಿತೆಯರು ಇಂದು ಸೀತೆಯನ್ನು ಆರಾಧಿಸಿದರೆ ಉತ್ತಮ ಪತಿ ಪ್ರಾಪ್ತಿ!

1. ಜೀವನದಲ್ಲಿ ಏನೇ ಆಗಲಿ, ಕೆಟ್ಟದ್ದನ್ನು ಸಹಿಸಕೂಡದು. ಕೆಟ್ಟದ್ದ(evil)ನ್ನು ಸರ್ವನಾಶ ಮಾಡುವ ಶಿವನನ್ನು ನೋಡಿ, ನಾವು ಕೂಡಾ ಕೆಟ್ಟದ್ದನ್ನು ಸಹಿಸುವುದಿಲ್ಲ ಎಂಬ ಪಾಠ ಕಲಿಯಬೇಕು. ಆ ಕೆಟ್ಟದ್ದು ನಮ್ಮಲ್ಲಿಯೇ ಇದ್ದರೂ ಮೊದಲು ಅದರ ನಾಶ ಮಾಡಬೇಕು. 
2. ತುಂಬು ಜೀವನ ನಡೆಸಲು ಸ್ವನಿಯಂತ್ರಣ(Self-control)ಕ್ಕಿಂತ ಉತ್ತಮ ದಾರಿಯಿಲ್ಲ. ಯಾವುದೇ ಅತಿಯಾದರೂ ಅದು ಕೆಟ್ಟದ್ದು ಎಂಬುದು ತಿಳಿದಿರಬೇಕು. ನಮ್ಮ ಮೇಲಿನ ನಿಯಂತ್ರಣ 3. ಕಳೆದುಕೊಳ್ಳುವುದಕ್ಕಿಂತ ಕೆಟ್ಟದ್ದನ್ನು ನಮಗೆ ನಾವು ಮಾಡಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಶಸ್ಸು, ನೆಮ್ಮದಿ ಬೇಕೆಂದರೆ ನಮ್ಮ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತವಿರಬೇಕು. 
ಭೌತಿಕ ವಸ್ತುಗಳಿಂದ ಸಿಗುವ ಸಂತೋಷ(Materialistic happiness) ತಾತ್ಕಾಲಿಕವಾದುದು. ಅದು ಕೈಗೆ ಸಿಗುತ್ತಲೇ ಆ ಸಂತೋಷ ಹೋಗಿಬಿಡುತ್ತದೆ. ಮತ್ತೆ ಹೊಸ ವಸ್ತುವಿನ ಮೇಲೆ ಆಸೆ ಹುಟ್ಟುತ್ತದೆ. ಆದರೆ, ಸದಾ ಸಂತೋಷದಿಂದಿರಬೇಕು ಎಂದರೆ ವಸ್ತುಸುಖ ಅರಸದೆ ಆಧ್ಯಾತ್ಮಿಕವಾಗಿ ಸಂತೋಷ ಕಂಡುಕೊಳ್ಳಬೇಕು. ಎಲ್ಲ ಸಂದರ್ಭಗಳಲ್ಲೂ ನೀರಿನಂತೆ ಶೇಖರಿಸಿದ ಪಾತ್ರೆಯ ಆಕಾರಕ್ಕೆ ಹೊಂದಿಕೊಳ್ಳುವ ಗುಣ ರೂಢಿಸಿಕೊಳ್ಳಬೇಕು. 

Mahashivratri : ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..

4. ಸದಾ ಶಾಂತ(calm)ವಾಗಿರುವುದು ಮುಖ್ಯ. ಶಿವ ಗಂಟೆಗಳ, ದಿನಗಳ ಕಾಲ ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹಾಗಾಗಿ ಸದಾ ಶಾಂತವಾಗಿರುತ್ತಿದ್ದ. ನಾವು ಕೂಡಾ ಪ್ರತಿ ದಿನ ಸಾಧ್ಯವಾದಷ್ಟು ಸಮಯಕ್ಕೆ ಧ್ಯಾನ ಮಾಡಿ ಶಾಂತಚಿತ್ತರಾಗಿ ಇರುವುದನ್ನು ರೂಢಿಸಿಕೊಳ್ಳಬೇಕು. 
5. ಆಸೆಗಳು ನಮ್ಮ ನಾಶಕ್ಕೆ ಕಾರಣವಾಗುತ್ತವೆ. ಆಸೆಗಳು ನಿಧಾನವಾಗಿ ದುರಾಸೆಯಾಗಿ ಬದಲಾಗಿ, ನಾಶ ಮಾಡುತ್ತವೆ. ನಮ್ಮ ಅಗತ್ಯಗಳಿಗಿಂತ ಹೆಚ್ಚಿನ ಆಸೆ ಬೇಡ. ಏನಿದೆಯೋ ಅದರಲ್ಲೇ ಸಂತೋಷವಾಗಿರುವುದನ್ನು ಕಲಿಯಬೇಕು. ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಹಾಕಬೇಕು. 
6. ಕುಟುಂಬ(family)ವನ್ನು ಗೌರವಿಸಿ. ಶಿವನು ಪತ್ನಿ ಎಂದರೆ ತನ್ನ ಅರ್ಧ ಬಾಗವೆಂದೇ ಕಾಣುತ್ತಿದ್ದವನು. ಪಾರ್ವತಿಯನ್ನು ಸಮನಾಗಿ ಕಾಣುತ್ತಿದ್ದ ಆತ ಮಕ್ಕಳನ್ನು ಕೂಡಾ ಗೌರವದಿಂದ ನಡೆಸಿಕೊಳ್ಳುತ್ತಿದ್ದ. ನಾವೂ ಹೀಗೆಯೇ ಕುಟುಂಬಕ್ಕೆ ಬೆಲೆ ಕೊಟ್ಟರೆ, ಅತ್ಯಂತ ಸುಖೀ ಜೀವನ ನಮ್ಮದಾಗುತ್ತದೆ. 
7. ಅಹಂಕಾರದಿಂದ ಮೊದಲು ಕಳಚಿಕೊಳ್ಳಬೇಕು. ನಾನು ಎಂಬ ಸ್ವಾರ್ಥವು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಅಹಂಕಾರವು ಹೆಚ್ಚಿನ ಸಾಧನೆಗೆ ಅಡ್ಡಿಯಾಗುತ್ತದೆ. ಎಲ್ಲ ಗೊತ್ತು ಎಂದುಕೊಂಡವನು ಹೊಸತನ್ನು ಕಲಿಯಲು ಸಾಧ್ಯವಿಲ್ಲ. ಅಹಂಕಾರ ಹಾಗೂ ಸ್ವಾರ್ಥದಿಂದ ಕಳಚಿಕೊಂಡರೆ ಬದುಕು ಸೊಗಸಾಗಿರುತ್ತದೆ. 
8. ಎಲ್ಲವೂ ತಾತ್ಕಾಲಿಕ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ನಮ್ಮಂತೆಯೇ ಕಾಲವೂ ಬದಲಾಗುತ್ತದೆ. ನಮ್ಮ ಆಯ್ಕೆಗಳು, ಆಸೆಗಳು ಎಲ್ಲವೂ ಬದಲಾಗುತ್ತವೆ. ಹಾಗಾಗಿ, ಈ ಭ್ರಮಾತ್ಮಕ ಜಗತ್ತಿನ ಮೇಲೆ ಅತಿಯಾದ ಮೋಹ ಬೆಳೆಸಿಕೊಳ್ಳುವುದಕ್ಕಿಂತ ನಮ್ಮಲ್ಲಿ ಏನಿದೆಯೋ ಅದರಲ್ಲಿ ಖುಷಿಯಾಗಿ, ಆಯಾ ಕ್ಷಣವನ್ನು ಅನುಭವಿಸುವುದನ್ನು ಕಲಿಯಬೇಕು. 

Latest Videos
Follow Us:
Download App:
  • android
  • ios