Asianet Suvarna News Asianet Suvarna News

Swapna Shastra: ಪತಿ ಎರಡನೇ ಮದುವೆಯಾದ ಕನಸು ನಿಮಗೂ ಬೀಳುತ್ತಾ?

ಅನೇಕ ಬಾರಿ ನಾವೂ ಆಲೋಚನೆ ಮಾಡದ ಸಂಗತಿ ಕನಸಿನಲ್ಲಿ ಕಂಡಿರುತ್ತದೆ. ಇದು ನಮ್ಮಲ್ಲಿಯೇ ಅನೇಕ ಪ್ರಶ್ನೆ ಹುಟ್ಟು ಹಾಕುತ್ತದೆ. ಪತಿಗೆ ಎರಡನೇ ಮದುವೆಯಾದ ಕನಸು ಕೂಡ ಅನೇಕ ಅರ್ಥವನ್ನು ಹೊಂದಿದೆ. ಪತ್ನಿಯ ಮನಸ್ಥಿತಿಯನ್ನು ಇದು ತೋರಿಸುತ್ತದೆ. 
 

Seeing Second Marriage Of Husband In Dream
Author
First Published Dec 9, 2022, 3:54 PM IST

ರಾತ್ರಿ ಮಲಗಿದಾಗ ನಾವು ನೀವೆಲ್ಲ ಕನಸು ಕಾಣ್ತೆವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಚಿತ್ರವಿಚಿತ್ರ ಸ್ವಪ್ನ ಬೀಳುತ್ತದೆ. ಅನೇಕ ಬಾರಿ ಸ್ವಪ್ನಗಳು ನೆನಪಿನಲ್ಲಿ ಇರೋದಿಲ್ಲ. ಮತ್ತೆ ಕೆಲವು ಬಾರಿ ನಾವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಕನಸುಗಳು ಬೀಳುತ್ತದೆ. ಕೆಲ ಕನಸು ಭಯ ಹುಟ್ಟಿಸಿದ್ರೆ ಮತ್ತೆ ಕೆಲ ಕನಸು ಖುಷಿ ನೀಡುತ್ತದೆ. ಕೆಲವೊಂದು ಕನಸು ಅಪೂರ್ಣವಾಗಿರುವ ಕಾರಣ ಬೆಳಿಗ್ಗೆ ಎದ್ದಾಗ್ಲೂ ಅದ್ರ ಗುಂಗಿನಲ್ಲಿ ನಾವಿರುತ್ತೇವೆ. ಕನಸಿನ ಬಗ್ಗೆ ಶಾಸ್ತ್ರಗಳಲ್ಲಿ ಅನೇಕ ಸಂಗತಿಯನ್ನು ಹೇಳಲಾಗಿದೆ. ಕನಸು ನಮ್ಮ ಭವಿಷ್ಯದ ಜೊತೆ ನಂಟು ಹೊಂದಿದೆ. ಅನೇಕ ಕನಸುಗಳು ನಮ್ಮ ಭೂತಕಾಲಕ್ಕೆ ಸಂಬಂಧಿಸಿದ್ದವಾದ್ರೆ ಮತ್ತು ಕೆಲವು ಕನಸುಗಳು ಭವಿಷ್ಯಕ್ಕೆ ಸಂಬಂಧಿಸಿರುತ್ತವೆ.

ಕೆಲ ಮಹಿಳೆ (Woman) ಯರಿಗೆ ಪತಿ ಎರಡನೇ ಮದುವೆಯಾದ ಕನಸು (Dream)  ಬೀಳುತ್ತದೆ. ರಾತ್ರಿ ಕಂಡ ಕನಸು ಬೆಳಿಗ್ಗೆ ಕೂಡ ಕಿರಿಕಿರಿ ನೀಡುವುದಿದೆ. ಇದ್ಯಾಕೆ ಇಂಥ ಕನಸು ಬಿತ್ತು ಎಂದು ಕೆಲ ಮಹಿಳೆಯರು ಆತಂಕಕ್ಕೆ ಒಳಗಾಗ್ತಾರೆ. ನಾವಿಂದು ಪತಿ (Husband) ಗೆ ಎರಡನೇ ಮದುವೆಯಾದ ಕನಸು ಬಿದ್ರೆ ಏನು ಸಂಕೇತ ಎಂಬುದನ್ನು ನಿಮಗೆ ಹೇಳ್ತೆವೆ.  ಕನಸಿನಲ್ಲಿ ಪತಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದು ಕೆಲವು ಮಿಶ್ರ ಸಂಕೇತಗಳನ್ನು ನೀಡುತ್ತದೆ. ಈ ಕನಸು ಕೆಲವು ಕಾರಣಗಳಿಂದ  ಅಸುರಕ್ಷಿತ ಭಾವನೆಯನ್ನು ಉಂಟು ಮಾಡುತ್ತದೆ. ಪತಿಯ ಕೆಲವು ವಿಷಯಗಳನ್ನು ನೀವು ಇಷ್ಟಪಡದಿದ್ದರೆ, ನೀವು ಅವುಗಳನ್ನು ಬದಲಾಯಿಸಲು ಬಯಸಿದ್ದರೆ ನಿಮಗೆ ಇಂಥ ಕನಸು ಬೀಳುವ ಸಾಧ್ಯತೆಯಿರುತ್ತದೆ.   

Zodiac Signs: ಕನಸುಗಳನ್ನ ನನಸಾಗಿಸಿಕೊಳ್ಳೋ ಛಲದ ರಾಶಿಯವರಿವರು..

ಸ್ವಪ್ನದಲ್ಲಿ (Dream) ಪತಿಗೆ ಮದುವೆಯಾದಂತೆ ಕಂಡ್ರೆ ಏನು ಅರ್ಥ : ನಿಮ್ಮ ಪತಿಗೆ ನಿಮ್ಮ ಜೊತೆಯಲ್ಲಿಯೇ ಮದುವೆಯಾಗ್ತಿದ್ದಂತೆ ಕಂಡರೆ, ನೀವು ವಧುವಿನಂತೆ ಕಾಣಿಸಿಕೊಂಡರೆ ಇದು ಶುಭ ಸಂಕೇತವೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಭವಿಷ್ಯದ ಬಗ್ಗೆ ಒಳ್ಳೆಯ ಸಂಕೇತ ನೀಡುತ್ತದೆ. ನಿಮ್ಮ ದೊಡ್ಡ ಬಯಕೆಯೊಂದು ಶೀಘ್ರದಲ್ಲಿಯೇ ಈಡೇರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.  ಅನೇಕ ಬಾರಿ ಅಂತಹ ಕನಸು ಕಾಣಿಸಿಕೊಳ್ಳುತ್ತದೆ ಏಕೆಂದರೆ ನಿಮ್ಮ ಮದುವೆಯ ಸಮಯದಲ್ಲಿ ನೀವು ಆ ಸಮಯದಲ್ಲಿ ಮಾಡಲು ಬಯಸಿದ ಕೆಲವು ಆಸೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಯಾವುದೇ ಕನಸು ನಿಮಗೆ ಯಾವುದೇ ಕೆಟ್ಟ ಚಿಹ್ನೆಯನ್ನು ನೀಡುವುದಿಲ್ಲ. ನಿಮ್ಮ ಮದುವೆಯಲ್ಲಿ ನೀವು ಕೆಲ ಕೆಲಸವನ್ನು ಮಾಡಿರುವುದಿಲ್ಲ. ಆ ಅಪೂರ್ಣವಾಗಿರುವ ಕೆಲಸ ನಿಮ್ಮ ಮನಸ್ಸಿನ ಮೂಲೆಯಲ್ಲಿರುತ್ತದೆ. ಅದು ನಿಮಗೆ ಕನಸಿನ ರೂಪದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ.  

ಎರಡನೇ ಮದುವೆಯಾದ ಪತಿ: ನಿಮ್ಮ ಪತಿ ಎರಡನೇ ಮದುವೆಯಾದ ಕನಸು ಬಿದ್ರೆ ಒಳ್ಳೆಯದಲ್ಲ. ಈ ಕನಸು ನಿಮ್ಮ ವೈವಾಹಿಕ ಜೀವನಕ್ಕೆ ಕೆಲವು ನಕಾರಾತ್ಮಕ ಸೂಚನೆಗಳನ್ನು ನೀಡುತ್ತದೆ. ಸಂಬಂಧದಿಂದ ದೂರ ಹೋಗಲು ನೀವು ಬಯಸಿದ್ದರೆ ಕೂಡ ನಿಮಗೆ ಇಂಥ ಕನಸು ಬೀಳುತ್ತದೆ. ಇಂಥ ಕನಸು ನಿಮ್ಮ ಮನಸ್ಸಿನ ಅಭದ್ರತೆಯನ್ನು ಸಹ ತೋರಿಸುತ್ತದೆ. ಇದು ನಿಮ್ಮ ಮಾನಸಿಕ ಒತ್ತಡದ ಸಂಕೇತವೂ ಆಗಿರುತ್ತದೆ. ಇಂಥ ಕನಸು ನಮ್ಮ ಕುಟುಂಬದಲ್ಲಿ ಸಮಸ್ಯೆ ತರಬಹುದು. ಕನಸಿನಂತೆ ನಿಮ್ಮ ಸಂಬಂಧವನ್ನು ಮುರಿಯಲು ಪ್ರಯತ್ನಿಸಬೇಡಿ.  ಸಂಬಂಧದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿ.  

ಕೆಟ್ಟ ಕನಸುಗಳ ಬಾಧೆಗೆ ಗುಡ್‌ಬೈ ಹೇಳಲು Astro Remedies

ನಿಮ್ಮ ಅನುಮಾನಾಸ್ಪದ ಸ್ವಭಾವಕ್ಕೆ ಕನ್ನಡಿ : ಯಾವುದೇ ಕಾರಣವಿಲ್ಲದೆ ನೀವು ಗಂಡನ ಎರಡನೇ ಮದುವೆಯ ಬಗ್ಗೆ ಅನೇಕ ಬಾರಿ ಕನಸು ಕಾಣುತ್ತಿದ್ದರೆ, ನೀವು ಗಂಡನ ಮೇಲೆ ಅನುಮಾನ ಪಡ್ತಿದ್ದೀರಿ ಎಂಬ ಸೂಚನೆಯಾಗಿದೆ. ನೀವು ವಿನಃ ಆತನ ಮೇಲೆ ಅನುಮಾನಪಡ್ತಿದ್ದರೆ ಅದು ಕನಸಿನ ರೂಪದಲ್ಲಿ ನಿಮ್ಮನ್ನು ಕಾಡುತ್ತದೆ.  ಗಂಡನ ಬಿಡುವಿಲ್ಲದ ಜೀವನಶೈಲಿ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬರಲು ಕಾರಣವಾಗಿರಬಹುದು. ಅವನು ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ನೀವು ಆತನನ್ನು ಅನುಮಾನಿಸುತ್ತಿರಬಹುದು. ಇದು ನಿಮ್ಮ ಆಲೋಚನೆಯ ಫಲಿತಾಂಶವಾಗಿದೆ. ಹಾಗಾಗಿ ನಿಮ್ಮ ಸಂಬಂಧ (Relationship) ಗಳನ್ನು ಸುಧಾರಿಸಲು ಪ್ರಯತ್ನಿಸಿ. ಅನುಮಾನದ ಪ್ರವೃತ್ತಿಯನ್ನು ಕಡಿಮೆ ಮಾಡಲು ಯತ್ನಿಸಿ. 

Follow Us:
Download App:
  • android
  • ios