Asianet Suvarna News Asianet Suvarna News

ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ ಎರಡನೇ ದಿನ ಸ್ವರೂಪ ಗಜಾರೂಢಾ ಬ್ರಹ್ಮಚಾರಿಣೀ ರೂಪ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಎರಡನೇ ದಿನ   ಅನ್ನಪೂರ್ಣೇಶ್ವರಿಯು ದುರ್ಗಾದೇವಿಯ ಎರಡನೇ ಸ್ವರೂಪ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಕಂಗೊಳಿಸಿದಳು.

second day Navratri celebration in horanadu annapoorneshwari temple gow
Author
First Published Sep 27, 2022, 9:28 PM IST

ಚಿಕ್ಕಮಗಳೂರು (ಸೆ.27): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಎರಡನೇ ದಿನ ಇಂದು ಅನ್ನಪೂರ್ಣೇಶ್ವರಿಯು ದುರ್ಗಾದೇವಿಯ ಎರಡನೇ ಸ್ವರೂಪ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಕಂಗೊಳಿಸಿದಳು. ಬೆಳಿಗ್ಗೆಯಿಂದಲೇ ನವರಾತ್ರಿಯ ಪೂಜಾ ವಿಧಿ ವಿದಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ನಂತರ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ನಡೆಯಿತು. ಹೋಮದ ಪೂರ್ಣಹುತಿಯನ್ನು ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು. ವಿವಿಧ ಪುಷ್ಪ ಆಭರಣಗಳ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ಅನ್ನಪೂರ್ಣೇಶ್ವರಿಯನ್ನು ನೋಡಿ ಭಕ್ತರು ಕಣ್ತುಂಬಿಸಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಪ್ರಿಯ ಜೋಷಿ ಸಂಗಡಿಗರಿಂದ ಭಕ್ತಿಗೀತೆ, ಸಂಜೆ ಭವತಿ ನೃತ್ಯ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ ನಡೆಯಿತು. ನಾಳೆ ನವರಾತ್ರಿ ಮೂರನೇ ದಿನ ಸಿಂಹರೂಢಾ ಚಂದ್ರಘಂಟಾ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಪುರುಷ ಸೂಕ್ತ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಭಾ ದಿವಾಕರ್ ತಂಡ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ.

Navratri 2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳೋದು ತುಂಬಾ ಅಶುಭ

ನವರಾತ್ರಿ ಮಹೋತ್ಸವಕ್ಕೆ ಚಾಲನೆ: 
ಮೂಡಿಗೆರೆ: ಸೋಮವಾರ ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ಜಗಜ್ಜನನೀ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು. ಬೆಳಗ್ಗೆ 6.30ರ ಸಮಯಕ್ಕೆ ಸರಿಯಾಗಿ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ಬೆಳಗ್ಗೆ 8.30ಕ್ಕೆ ಶ್ರೀ ಪಂಚದುರ್ಗಾ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ದೇವಸ್ಥಾನದ ದರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.

Navratri 2022 Bhog: ತಾಯಿ ದುರ್ಗೆಯ 9 ರೂಪಗಳಿಗೆ 9 ವಿಧದ ನೈವೇಧ್ಯ ಅರ್ಪಿಸಿ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಪಿ.ಶಶಿಧರ ಬೆಂಗಳೂರು ಇವರಿಂದ ಭಕ್ತಿ ಗೀತೆ, ಸಂಜೆ ಕೇಶವ ಪ್ರಸಾದ್‌ ಬೆಂಗಳೂರು ಇವರಿಂದ ಸ್ಯಾಕ್ಸೋಫೋನ್‌ ವಾದನ ನಡೆಯಿತು. ಸೆ.27ರಂದು ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ ಪೂಜೆ, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೇ ಮೂಲಮಂತ್ರ ಹೋಮ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಪ್ರಿಯಾ ಜೋಷಿ ಮತ್ತು ತಂಡ ಬೆಂಗಳೂರು ಇವರಿಂದ ಭಕ್ತಿ ಸಂಗೀತ, ಸಂಜೆ ಭವತಿ ನೃತ್ಯ ತಂಡ ಬೆಂಗಳೂರು ಇವರಿಂದ ಭರತ ನಾಟ್ಯ ನಡೆಯಲಿದೆ.

Follow Us:
Download App:
  • android
  • ios