Asianet Suvarna News Asianet Suvarna News

Chitradurga ಪಟ ಪಟ ಹಾರೋ ಗಾಳಿಪಟ ಹಬ್ಬ ಆಚರಣೆ, ಕುಣಿದು ಕುಪ್ಪಳಿಸಿದ ಮಕ್ಕಳು

ಆಗಸದಲ್ಲಿ ಹಾರಾಡ್ತಾ ಭಾನಂಗಳದಲ್ಲಿ ತೇಲಾಡಿದ ಕಲರ್ ಫುಲ್ ಗಾಳಿ ಪಟಗಳು. ಪಟಗಳೊಂದಿಗೆ ತಾವೇ ಹಾರಾಡಿದಷ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು, ಪೋಷಕರು ಹಾಗು ಶಿಕ್ಷಕರು. ಇದು ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಚಂದ್ರವಳ್ಳಿ‌.

School Students Celebrates kite Festival In Chitradurga rbj
Author
Bengaluru, First Published Jul 31, 2022, 7:11 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್


ಚಿತ್ರದುರ್ಗ, (ಜುಲೈ.31): ಸಮವಸ್ತ್ರ ಹಾಗು ಧರ್ಮದಂಗಲ್ ಅನ್ನೋ ಸಂಘರ್ಷಗಳಿಂದ ವಿದ್ಯಾರ್ಥಿಗಳ ಮನಸಲ್ಲೂ ಒಡಕು ಮೂಡಿದೆ. ಹೀಗಾಗಿ ಕೋಟೆನಾಡಿನ ಖಾಸಗಿ ಶಾಲೆಯೊಂದು ಎಲ್ಲರನ್ನು ಒಗ್ಗೂಡಿಸಿ ಹಬ್ಬವನ್ನು ಆಚರಿಸುವ ಮೂಲಕ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿ, ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಛಲ ತುಂಬಿದ್ರು. ಅಷ್ಟಕ್ಕೂ ಆ ಹಬ್ಬ ಯಾವುದು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ....,

ಪ್ರತಿವರ್ಷವೂ ಆಶಾಡ ಮಾಸಕ್ಕೆ ಗುಡ್ ಬಾಯ್ ಹೇಳಿ, ಶ್ರಾವಣ ಮಾಸವನ್ನು ಸ್ವಾಗತಿಸುವ ಪ್ರತೀಕವಾಗಿ  ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿಗಳು ಈ ಗಾಳಿಪಟ ಹಬ್ಬವನ್ನು ಆಚರಿಸುತ್ತಿದ್ರು.ಆದ್ರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಪ್ಪು ಛಾಯೆಗೆ ಸಿಲುಕಿ ಸ್ಥಗಿತವಾಗಿದ್ದ ಗಾಳಿಪಟ ಹಬ್ಬವನ್ನು ಇಂದು ಮತ್ತೆ ಸಡಗರ ಸಂಭ್ರಮದಿಂದ ಆಚರಿಸಲಾಯ್ತು.

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಸತತ  35 ವರ್ಷಗಳಿಂದ ಈ ಗಾಳಿಪಟ ಹಬ್ಬವನ್ನು ಆಚರಿಸಿಕೊಂಡು  ಬಂದಿರೊ ಈ ಸಂಸ್ಥೆಯು ಗಾಳಿಪಟದಂತೆ ಮಕ್ಕಳ ಬೌದ್ದಿಕ ಮಟ್ಟ ಹಾಗು ಅಭಿವೃದ್ಧಿ  ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿ ಸಾಧಿಸುವ ಹಂಬಲ ಹೆಚ್ಚಾಗಲಿ.ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ತೋರಲಿ ಎಂಬ ಸದುದ್ದೇಶದಿಂದ  ಹಬ್ಬವನ್ನು ಆಚರಿಸ್ತಿದ್ದೂ,ಕಲರ್ ಫುಲ್  ಗಾಳಿಪಟಗಳು ಬಾನೆತ್ತರಕ್ಕೆ ಹಾರಿದ್ದನ್ನು ಕಣ್ತುಂಬಿಕೊಂಡ  ಮಕ್ಕಳು ಕುಣಿದು ಕುಪ್ಪಳಿಸಿದ್ರು.

ಇನ್ನು ಈ ಹಬ್ಬದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳೇ ಸ್ವಯಂ ಗಾಳಿಪಟ ತಯಾರು ಮಾಡಲು ಶಿಕ್ಷಕರು ತರಬೇತಿ ನೀಡಿದ್ರು. ಹಾಗೆಯೇ  ಧರ್ಮ ಸಂಘರ್ಷ ಹಾಗು ಸಮವಸ್ತ್ರದಂತಹ ಗೊಂದಲಗಳಿಂದ ವಿದ್ಯಾರ್ಥಿಗಳು ಹೊರಬಂದು ನಾವೆಲ್ಲಾ ಒಂದೇ ಭಾವದಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಗಾಳಿಪಟ ಹಬ್ಬ ಆಚರಿಸಿ‌ ಸಡಗರದಿಂದ ಸಂಭ್ರಮಿಸ್ತಿರೋದು ಈ ಬಾರಿಯ ವಿಶೇಷ ಎನಿಸಿದೆ.

ಈ ಒಂದು ಕಾರ್ಯಕ್ರಮ ಮಾಡುತ್ತಿರುವ ಉದ್ದೇಶ ಮಕ್ಕಳರೆ ಸ್ವಯಂ ಪ್ರೇರಿತವಾಗಿ ಜೀವನದಲ್ಲಿ ಮುಂದೆ ಸಾಗಬೇಕು. ಆಗಸದಲ್ಲಿ ಗಾಳಿಪಟಗಳು ಹಾರಾಡುವ ರೀತಿ ಮುಕ್ತ ಮನಸ್ಸಿನಿಂದ ಇರಬೇಕು‌. ಅವರಲ್ಲಿ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ದೃಷ್ಟಿಯಿಂದ ಸುಮಾರು ೫೦ ವರ್ಷಗಳಿಂದ ನಮ್ಮ ಶಾಲೆಯಲ್ಲಿ ಈ ಗಾಳಿಪಟ ಹಬ್ಬ ಮಾಡಿಕೊಂಡು ಬರ್ತಿದ್ದೇವೆ ಎಂದು ಶಿಕ್ಷಕರು ತಿಳಿಸಿದರು.

ಒಟ್ಟಾರೆ ಧರ್ಮಂಗಲ್ ಹಾಗೂ ಸಮವಸ್ತ್ರದ ಸಂಘರ್ಷದಿಂದಾಗಿ ಗೊಂದಲಕ್ಕೀಡಾಗಿದ್ದ ಕೋಟೆನಾಡಿನ ವಿದ್ಯಾರ್ಥಿಗಳು ಸಾಮರಸ್ಯದಿಂದ ಗಾಳಿಪಟ ಹಬ್ಬವನ್ನು ಆಚರಿಸಿದ್ರು.ನಾವೆಲ್ಲಾ ಒಂದೇ ಎಂಬ ಭಾವದಲ್ಲಿ ಆರಿಸಿದ ಗಾಳಿಪಟ ಏಳುಸುತ್ತಿನ ಕೋಟೆಗೆ ಮುತ್ತಿಡುವಂತೆ ಬಾನೆತ್ತರಕೆ ಹಾರಿದ್ದು ಗಾಳಿಪಟದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು.......,

Follow Us:
Download App:
  • android
  • ios