ಏಪ್ರಿಲ್ 29ರಂದು ಶನಿಯು ಮಕರದಿಂದ ಕುಂಭಕ್ಕೆ 30 ವರ್ಷದ ನಂತರ ಪ್ರವೇಶಿಸುತ್ತಿದ್ದಾನೆ. ಇದರ ಪರಿಣಾಮ ಎಲ್ಲ 12 ರಾಶಿಗಳ ಮೇಲೂ ಅಗಾಧವಾಗಿರಲಿದೆ. ನಿಮ್ಮ ರಾಶಿಗೆ ಶನಿಯ ಈ ಸಂಚಾರ ಶುಭ ತರುವುದೇ ನೋಡಿ. 

ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದು, ಇದರೊಂದಿಗೆ ಧನು(Sagittarius) ರಾಶಿಯವರಿಗೆ ಶನಿಯ ಅರ್ಧಾರ್ಧ(half-and-half)ದಿಂದ ಮುಕ್ತಿ ದೊರೆಯಲಿದೆ.
30 ವರ್ಷಗಳ ಬಳಿಕ ಶನಿಯು ತನ್ನ ಸ್ವರಾಶಿ ಕುಂಭಕ್ಕೆ ಪ್ರವೇಶಿಸುತ್ತಿದ್ದಾನೆ. ಶನಿಯ ಈ ರಾಶಿ ಪರಿವರ್ತನೆಯ ಪರಿಣಾಮವು ಎಲ್ಲ ರಾಶಿಚಕ್ರಗಳ ಮೇಲೆ ಗೋಚರಿಸುತ್ತದೆ. ಕೆಲವರಿಗೆ ಇದರಿಂದ ಅಪಾರ ಲಾಭವಾಗಲಿದೆ ಮತ್ತು ಕೆಲ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಯಾವ ರಾಶಿಯ ಮೇಲೆ ಶನಿ ಸಂಚಾರದ ಪರಿಣಾಮ ಏನಿರಲಿದೆ ನೋಡೋಣ. 

ಮೇಷ ರಾಶಿ(Aries)
ಈ ವರ್ಷ ಶನಿಯು ಮೇಷ ರಾಶಿಯವರಿಗೆ ಶುಭ ಫಲಗಳನ್ನು ತರುತ್ತಿದ್ದಾನೆ. ಈ ರಾಶಿಚಕ್ರದ ಹತ್ತನೇ ಮನೆಯಲ್ಲಿ ಶನಿದೇವನು ಸ್ಥಾಪಿತನಾಗುತ್ತಾನೆ ಮತ್ತು ಹೀಗಾಗಿ ಸಾಮಾಜಿಕ ಪ್ರತಿಷ್ಠೆ(social prestige)ಯನ್ನು ಹೆಚ್ಚಿಸುತ್ತಾನೆ. ಈ ಸಮಯದಲ್ಲಿ, ಉದ್ಯೋಗದಲ್ಲಿ ಯಶಸ್ಸು, ಆರ್ಥಿಕ ಪ್ರಗತಿ ಮತ್ತು ನಾಯಕತ್ವ(leadership)ದ ಸಾಮರ್ಥ್ಯದ ಲಾಭ ದೊರೆಯುತ್ತದೆ. 

ವೃಷಭ ರಾಶಿ(Taurus)
ವೃಷಭ ರಾಶಿಯವರಿಗೆ ಶನಿಯು ಈ ವರ್ಷ ಬಹಳಷ್ಟು ಒಳ್ಳೆಯದನ್ನು ತರುತ್ತಾನೆ. 2022ರಲ್ಲಿ, ಅದೃಷ್ಟ(luck) ಮತ್ತು ರಾಜ್ಯದ ಅಂಶವಾದ ಶನಿ ದೇವನು ಮಕರ ರಾಶಿಯಲ್ಲಿದ್ದರೂ ಸಹ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಕುಂಭದಲ್ಲಿಯೂ ಆ ಅದೃಷ್ಟ ಮುಂದುವರಿಯುತ್ತದೆ. ವೃಷಭ ರಾಶಿಯವರ ಅದೃಷ್ಟವನ್ನು ಹೆಚ್ಚಿಸಿ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತಾನೆ ಶನಿ. ಸಂಪತ್ತಿನ ಜೊತೆಗೆ, ಶಕ್ತಿ, ಗೌರವ ಮತ್ತು ಖ್ಯಾತಿಯ ಹೆಚ್ಚಳವಾಗುತ್ತದೆ. 

ಮಿಥುನ ರಾಶಿ(Gemini)
ಮಿಥುನ ರಾಶಿಯಲ್ಲಿ ಶನಿಯು, ಎಂಟನೇ ಮನೆಗೆ ಪ್ರವೇಶಿಸುವುದರಿಂದ ಈ ರಾಶಿಯ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯ ಸಮಸ್ಯೆಗಳ ಹೊರತಾಗಿ ಕೌಟುಂಬಿಕ ಖರ್ಚು ಹೆಚ್ಚಾಗಲಿದೆ.

ಕಟಕ ರಾಶಿ(Cancer)
ಕರ್ಕಾಟಕ ರಾಶಿಯ ಜನರಿಗೆ, ಶನಿಯು ಏಳನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ವ್ಯಾಪಾರ ಮೈತ್ರಿಗಳು ಲಾಭದಾಯಕವಾಗಿವೆ. ಹೊಸ ಯೋಜನೆಗಳನ್ನು ಮಾಡಲಾಗುವುದು, ಆದರೆ ಅದೃಷ್ಟದ ಮಧ್ಯದಲ್ಲಿ ಅಡೆತಡೆಗಳು ಸೃಷ್ಟಿಯಾಗುತ್ತಿರುತ್ತವೆ.

ಸಿಂಹ ರಾಶಿ(Leo)
ಸಿಂಹ ರಾಶಿಯವರಿಗೆ ಆರನೇ ಮನೆಯಲ್ಲಿ ಶನಿ ಇರುತ್ತಾನೆ. ಈ ಸಮಯದಲ್ಲಿ, ಸಿಂಹ ರಾಶಿಯವರಿಗೆ ರೋಗಗಳಿಂದ ಮುಕ್ತಿ ಸಿಗುವುದಲ್ಲದೆ ಆರೋಗ್ಯ ಚೆನ್ನಾಗಿರುತ್ತದೆ. ಸಾಲ ಮತ್ತು ಶತ್ರುಗಳನ್ನು ಸೋಲಿಸುವ ವಾತಾವರಣ ನಿರ್ಮಾಣವಾಗುತ್ತದೆ.

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರಿಗೆ, ಶನಿ ದೇವನು ಐದನೇ ಮನೆಯಲ್ಲಿ ಇರುತ್ತಾನೆ. ನೀವು ಶಿಕ್ಷಣ ಕ್ಷೇತ್ರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ಆದರೆ, ಅದೇ ಸಮಯದಲ್ಲಿ, ರೋಗಗಳು ಮತ್ತು ಒತ್ತಡದಿಂದ ಬಳಲುವ ಸಾಧ್ಯತೆಯಿದೆ.

ನಿಮ್ಮ ರಾಶಿಗೆ ಯಾವ ಚಟ ಅಂಟುವ ಸಂಭವ ಜಾಸ್ತಿ ಗೊತ್ತಾ?

ತುಲಾ ರಾಶಿ(Libra)
ಈ ವರ್ಷ, ತುಲಾ ರಾಶಿಯವರಿಗೆ, ಶನಿದೇವನು ಮನೆ ಮತ್ತು ವಾಹನ ಸಂತೋಷವನ್ನು ಹೆಚ್ಚಿಸುತ್ತಾನೆ. ನೀವು ಭೂಮಿ ಮತ್ತು ಆಸ್ತಿಯ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ.

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಗೆ ಶನಿಯ ಅನುಗ್ರಹದಿಂದ ಸಂಪತ್ತು ಮತ್ತು ಬಲ ಹೆಚ್ಚಾಗುವ ಸಾಧ್ಯತೆಗಳಿವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆಯೂ ಹೆಚ್ಚಾಗುತ್ತದೆ. 

ಧನು ರಾಶಿ(Sagittarius)
ಧನು ರಾಶಿಯವರಿಗೆ ಈ ವರ್ಷ ಶನಿ ದೇವನು ಹೆಚ್ಚಿನ ಫಲ ನೀಡುವ ಗ್ರಹವೆಂದು ಈ ಸಂದರ್ಭದಲ್ಲಿ ಸಾಬೀತಾಗುತ್ತದೆ. ಶನಿದೇವನು ಈ ವರ್ಷ ಧನು ರಾಶಿಯ ಹಣದ ಮನೆಯಲ್ಲಿ ಕುಳಿತಿದ್ದಾನೆ ಮತ್ತು ಈ ಕಾರಣದಿಂದಾಗಿ, ಧನು ರಾಶಿಯವರಿಗೆ ಈ ವರ್ಷ ಹೊಸ ಸಂಪತ್ತಿನ ಮೂಲಗಳು ಸಿಗುತ್ತವೆ.

ಮಕರ ರಾಶಿ(Capricorn)
ಮಕರ ರಾಶಿಯವರಿಗೆ ಶನಿದೇವನ ಪ್ರಭಾವದಿಂದ ನೈತಿಕತೆಯು ಹೆಚ್ಚುತ್ತದೆ. ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ. ಸಾಮಾಜಿಕ ಮತ್ತು ಸ್ಥಾನ ಪ್ರತಿಷ್ಠೆ ಹೆಚ್ಚಾಗುವ ಲಕ್ಷಣಗಳಿವೆ.

ಜನಪ್ರಿಯತೆ ಬೇಕೇ? ಇಲ್ಲಿವೆ Vastu Remedies

ಕುಂಭ ರಾಶಿ(Aquarius)
ಕುಂಭ ರಾಶಿಯವರಿಗೆ ಶನಿ ದೇವನು ಅಂತಿಮ ರಾಜಯೋಗ ಕಾರಕ ಗ್ರಹ. ಇನ್ನು ಶನಿಯ ದೃಷ್ಟಿ ಎರಡನೇ ಮನೆಯ ಮೇಲೆ ಇದ್ದು ಈ ಸಮಯದಲ್ಲಿ ಮಾತಿನ ತೀವ್ರತೆ ಹೆಚ್ಚಾಗುವ ಸಂಭವ, ಕೌಟುಂಬಿಕ ಉದ್ವೇಗ, ಹಣದ ಖರ್ಚು ದಿಢೀರ್ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮನ್ನು ಮತ್ತು ನಿಮ್ಮ ಮಾತನ್ನು ನಿಯಂತ್ರಿಸಿ.

ಮೀನ ರಾಶಿ(Pisces)
ಮೀನ ರಾಶಿಯವರಿಗೆ, ಶನಿ ದೇವನು ಕಷ್ಟಪಟ್ಟು ಕೆಲಸ ಮಾಡಿದರೆ, ಅವರು ಅದರ ಫಲಿತಾಂಶಗಳಲ್ಲಿ ಸಂಪೂರ್ಣ ಫಲ ನೀಡುತ್ತಾನೆ.