ಅದೃಷ್ಟ ದೇವತೆ ಬಂದ್ರೆ ಬಟ್ಟೆಬಿಚ್ಚಿ ಬೆಡ್‌ರೂಮಲ್ಲಿ ಕೂರಿಸ್ಬೇಕು ಎಂದಿದ್ದ ದರ್ಶನ್‌ಗೆ ಪಂಚ ದೇವಿಯರ ವಕ್ರದೃಷ್ಟಿ!
ಅದೃಷ್ಟ ದೇವತೆ ಮನೆ ಬಾಗಿಲಿಗೆ ಬಂದಾಗ ಎಳೆದುಕೊಂಡು ಬಟ್ಟೆಬಿಚ್ಚಿ ಬೆಡ್ ರೂಮಿನಲ್ಲಿ ಕೂಡಿಹಾಕಬೇಕು ಎಂದಿದ್ದ ನಟ ದರ್ಶನ್‌ಗೆ ಪಂಚ ದೇವತೆಯರ ವಕ್ರದೃಷ್ಟಿ ಶುರುವಾಗಿದೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿನ ಮೇಲೆ ಪ್ರಭಾವ ಶುರುವಾಗಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.
ಬೆಂಗಳೂರು (ಜೂ.18): ಅದೃಷ್ಟ ದೇವತೆ ಮನೆ ಬಾಗಿಲಿಗೆ ಬಂದಾಗ ಅವಳನ್ನು ಎಳೆದುಕೊಂಡು ಬಟ್ಟೆಬಿಚ್ಚಿ ಬೆಡ್ ರೂಮಿನಲ್ಲಿ ಕೂರಿಸಬೇಕು ಎಂದಿದ್ದ ನಟ ದರ್ಶನ್‌ಗೆ ಪಂಚ ದೇವತೆಯರ ವಕ್ರದೃಷ್ಟಿ ಬೀರಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ, ದರ್ಶನ್ ಕೇಸಿನಲ್ಲಿ 5 ದೇವತೆಗಳ ಪ್ರಭಾವ ಗೋಚರವಾಗುತ್ತಿದ್ದು, ಫಲಿತಾಂಶ ತೀವ್ರವಾಗಿರುವ ಗೋಚರ ವ್ಯಕ್ತವಾಗುತ್ತಿದ ಎಂದು ವೈದಿಕ ಡಾ.ಬಸವರಾಜ ಗುರೂಜಿ ದೇವತೆಗಳ ಹೆಸರನ್ನು ಹೇಳಿದ್ದಾರೆ.
ಹೌದು,ನಟ ದರ್ಶನ್ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ಅದೃಷ್ಟ ದೇವತೆ ಯಾವಗಲೂ ಬಂದು ಮನೆ ಬಾಗಿಲು ತಟ್ಟುವುದಿಲ್ಲ. ಆದರೆ, ಒಮ್ಮೆ ಮನೆ ಬಾಗಿಲಿಗೆ ಅದೃಷ್ಟ ದೇವತೆ ಬಂದಾಗ ಆಕೆಯನ್ನು ಎಳೆದುಕೊಂಡು ಬಟ್ಟೆ ಬಿಚ್ಚಿ ಬೆಡ್‌ರೂಮಿನಲ್ಲಿ ಕೂರಿಸಿಕೊಂಡುಬಿಡಬೇಕು. ಬಟ್ಟೆ ಕೊಟ್ಟರೆ ಇನ್ನೊಬ್ಬರ ಮನೆಗೆ ಹೊರಟೋಗ್ತಾಳೆ ಎಂದು ಹೇಳಿದ್ದರು. ಇದಾದ ಬೆನ್ನಲ್ಲಿಯೇ ಈ ವಿಡಿಯೋ ತುಂಬಾ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯಾದ್ಯಂತ ವಿವಿಧ ಮಹಿಳಾಪರ ಹೋರಾಟಗಾರರು ನಟ ದರ್ಶನ್ ವಿರುದ್ಧ ಪ್ರತಿಭಟನೆ ಮಾಡಿದ್ದರು. ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ನಟ ದರ್ಶನ್ ಮೇಲೆ ನಿಂದನೆ ಕೇಸ್ ದಾಖಲಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದರು.
ನಟ ದರ್ಶನ್ ಫಾರ್ಮ್ ಹೌಸ್‌ನ ಮತ್ತೊಬ್ಬ ಮ್ಯಾನೇಜರ್ ಶವವಾಗಿ ಪತ್ತೆ
ಈಗ ನಟ ದರ್ಶನ್ ತನ್ನ 2ನೇ ಪತ್ನಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಭೀಕರವಾಗಿ ಚಿತ್ರಹಿಂಸೆ ಕೊಟ್ಟು ಹಲ್ಲೆ ಮಾಡಿ ಕೊಲೆಗೈದು ಚರಂಡಿಗೆ ಬೀಸಾಡಿ ಹೋಗಿದ್ದರು. ಈ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈಗ ವಿಚಾರಣೆ ನಡೆಯುತ್ತಿದ್ದು, ನಟ ದರ್ಶನ್, ನಟಿ ಪವಿತ್ರಾಗೌಡ ಹಾಗೂ ಆತನ ಸಹಚರರು ಸೇರಿದಂತೆ 18 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 28 ಜನರನ್ನು ವಿಚಾರಣೆ ಮಾಡಿದ್ದಾರೆ. ಈಗ ನಟ ದರ್ಶನ್‌ಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಇಬ್ಬರು ಜ್ಯೋತಿಷಿಗಳು ನುಡಿಸಿದ್ದಾರೆ. ಅದರಲ್ಲಿ ಬಸವರಾಜ ಗುರೂಜಿ ಅವರು ನಟ ದರ್ಶನ್‌ಗೆ ಪಂಚ ದೇವತೆಗಳ ವಕ್ರದೃಷ್ಟಿಯೇ ಕಾರಣ ಎಂದು ಹೇಳಿದ್ದಾರೆ.
ದರ್ಶನ್ ಮೇಲೆ ವಕ್ರದೃಷ್ಟಿ ಬೀರಿದ ದೇವತೆಗಳು:
ರಾಜರಾಜೇಶ್ವರಿ - ದರ್ಶನ್ ಮನೆ ರಾಜರಾಜೇಶ್ವರಿ ನಗರದಲ್ಲಿದ್ದು, ಅಲ್ಲಿಯೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ.
ಕಾಮಾಕ್ಷಿ - ನಟ ದರ್ಶನ್ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ.
ಅನ್ನಪೂರ್ಣೇಶ್ವರಿ - ದರ್ಶನ್ ಸೇರಿ ಕೊಲೆ ಮಾಡಿದ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ.
ರೇಣುಕಾ ದೇವಿ - ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ್ದು, ತಾಯಿ ರೇಣುಕಾ ಯಲ್ಲಮ್ಮ ದೇವಿಯ ವಕ್ರದೃಷ್ಟಿ ದರ್ಶನ್ ಮೇಲೆ ಬೀರಿದೆ.
ವಿಜಯಲಕ್ಷ್ಮೀ - ನಟ ದರ್ಶನ್ ಪತ್ನಿ ಹೆಸರು ವಿಜಯಲಕ್ಷ್ಮೀ ಆಗಿದ್ದು, ಸಿನಿಮಾದಲ್ಲಿ ಹಾಗೂ ಬಾಳಿನಲ್ಲಿ ಬಂದ ವಿಜಯಲಕ್ಷ್ಮಿಯನ್ನು ತುಚ್ಛವಾಗಿ ನೋಡಿದ್ದೇ ಪ್ರಭಾವ ಬೀರಿರಬಹುದು ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿತವಾಗಿರುವ ನಟ ದರ್ಶನ್ ಮೇಲೆ 5 ಹೆಣ್ಣು ದೇವತೆಗಳ ಪ್ರಭಾವ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇದರಿಂದಾಗಿ ಕೊಲೆ ಕೇಸಿನ ಫಲಿತಾಂಶ ತೀವ್ರವಾಗಿ ಗೋಚರ ಆಗಲಿದೆ ಎಂದು ವೈದಿಕ ಜ್ಯೋತಿಷಿ ಡಾ.ಬಸವರಾಜ್ ಗುರೂಜಿ ಬರೆದುಕೊಂಡು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಪೋಸ್ಟರ್ ವೈರಲ್ ಆಗುತ್ತಿದ್ದು, ಅವರ ಭವಿಷ್ಯ ಸತ್ಯವಿರಬಹುದೇನೋ ಎಂಬ ಅಂಶವೂ ಜನರ ತಲೆಗೆ ಹೋಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಕರೆದೊಯ್ದು ಮೈಸೂರಿನಲ್ಲಿ ಪೊಲೀಸರಿಂದ ಸ್ಥಳ ಮಹಜರು
ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ:
ನಂಗೆ ಬೇರೆಯವರ ಬಗ್ಗೆ ಮಾತನಾಡುವಷ್ಟು ಟೈಮ್ ಇಲ್ಲ, ಪುರುಸೊತ್ತೂ ಇಲ್ಲ. ಯಾಕೆಂದರೆ ಬೆಳಗ್ಗೆ ಎದ್ದ ತಕ್ಷಣ ನನ್ನ ಕೆಲಸ ಏನು? ನಾನು ಏನು ಕೆಲಸ ಮಾಡಬೇಕು ಎಂದು ಕನಸು ಕಾಣ್ತೇನೆ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಹೊಗ್ರೇ ನಿನ್ನಜ್ಜಿನಾಬಡಿಯ ನಿಮ್ಮ ತಲೆ ಕೆಡಿಸಿಕೊಂಡು ನಾನ್ಯಾಕೆ ಕುಳಿತುಕೊಳ್ಳಲಿ ಎಂದು ಹೇಳಿದ್ದರು. ಇಲ್ಲಿಯೂ ಕೂಡ ಮಹಿಳೆಯರನ್ನು ಉಪಯೋಗಿಸಿ ಬೀಸಾಡುವ ವಸ್ತುವಂತೆ ಕಂಡಿದ್ದಾರೆ. ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕ್ಷಮೆಯನ್ನೂ ಕೋರಿದ್ದರು.
ಹೆಂಡ್ತಿಗೆ ಮತ್ತು ಹೋಮ್ ಸ್ಟೇ ಮಹಿಳಾ ಸಿಬ್ಬಂದಿಗೆ ಸಿಗರೇಟ್‌ನಿಂದ ಸುಟ್ಟಿದ್ದ ದರ್ಶನ್: ನಟ ದರ್ಶನ್ ವಿರುದ್ಧ ಹಲವು ವಿವಾದಗಳು ಎದುರಾಗಿದ್ದವು. ಅವುಗಳಲ್ಲಿ ಹಲ್ಲೆ ಮಾಡಿದ್ದ ಪ್ರಕರಣಗಳೂ ಸಾಕಷ್ಟಿವೆ. ಇನ್ನು ತನ್ನ ಹೆಂಡತಿ ವಿಜಯಲಕ್ಷ್ಮೀ ಅವರಿಗೆ ಮನಸೋ ಇಚ್ಛೆ ಹೊಡೆದು, ಸಿಗರೇಟ್‌ನಿಂದ ಸುಟ್ಟಿದ್ದರು. ಆದರೆ, ಇದರ ಬೆನ್ನಲ್ಲಿಯೇ ಗಂಡ ಹೆಂಡತಿ ಪುನಃ ಒಂದಾಗಿದ್ದರು. ಜೊತೆಗೆ, ನಟ ದರ್ಶನ್ ಮಡಿಕೇರಿಯ ಒಂದು ಹೋಮ್ ಸ್ಟೇಗೆ ಸ್ನೇಹಿತರೊಂದಿಗೆ ಹೋಗಿದ್ದಾಗ ಅಲ್ಲಿನ ಮಹಿಳಾ ಸಿಬ್ಬಂದಿಗೆ ಸಿಗರೇಟ್‌ನಿಂದ ಸುಟ್ಟು ಕಿರುಕುಳ ನೀಡಿದ್ದರು ಎಂದು ದೂರು ದಾಖಲಾಗಿದೆ. ಒಟ್ಟಾರೆ ಮಹಿಳೆಯರ ಮೇಲೆ ಹಲವು ಪ್ರಕರಣದಲ್ಲಿ ಕಿರುಕುಳ ನೀಡಿದ ಆರೋಪ ನಟ ದರ್ಶನ್ ಮೇಲಿದೆ.