2025 Russia-Japan Tsunami: Baba Vanga Bhavishyavani Fulfilled? 8.7 ತೀವ್ರತೆಯ ಭೂಕಂಪ ರಷ್ಯಾದಲ್ಲಿ – ಜಪಾನ್‌ಗೆ ಸುನಾಮಿ ಶಾಕ್, ಭಾರತಕ್ಕೂ ಎಚ್ಚರಿಕೆ!
ರಷ್ಯಾದ ಕಮ್ಚಟ್ಕಾ ದ್ವೀಪ ಸಮೀಪದ ಬೃಹತ್ ಭೂಕಂಪ ಜಪಾನ್ ಸೇರಿದಂತೆ ಹಲವಾರು ದೇಶಗಳಿಗೆ ಆತಂಕವನ್ನುಂಟುಮಾಡಿದೆ. ರಿಕ್ಟರ್ ಮಾಪಕದಲ್ಲಿ 8.7-8.8 ತೀವ್ರತೆಯ ಈ ಭೂಕಂಪವು ರಷ್ಯಾ ಹಾಗೂ ಜಪಾನ್‌ನ ಕರಾವಳಿಗಳಿಗೆ ಪ್ರಬಲ ಸುನಾಮಿ ಅಲೆಗಳನ್ನು ಬಂದಿದ್ದು, ಹಲವಾರು ತುರ್ತು ಎಚ್ಚರಿಕೆಗಳನ್ನು ನೀಡಲಾಗಿದೆ.
ಈ ಭೂಕಂಪ ಸಂಭವವನ್ನು ಮೊದಲೆ ಹೇಳಿದ್ದ ಜಪಾನಿನ ಮಂಗಾ ಕಲಾವಿದ ರಿಯೋ ತತ್ಸುಕಿ ಹಾಗೂ ಬಲ್ಗೇರಿಯಾದ ಪ್ರಸಿದ್ಧ ದೃಷ್ಟಿವಂತಿ ಬಾಬಾ ವಂಗಾ ಅವರ ಮಾತು ಈಗ ವಿಶ್ವಾದ್ಯಂತ ಕುತೂಹಲ ಹೆಚ್ಚುತ್ತಿದೆ.
1999 ರಲ್ಲಿ ಪ್ರಕಟವಾದ ತನ್ನ "The Future I Saw" ಎಂಬ ಮಂಗಾ ಪುಸ್ತಕದಲ್ಲಿ ರಿಯೋ ತತ್ಸುಕಿ ಅವರು, ಜುಲೈ 5, 2025 ರಂದು ಜಪಾನ್ ಸಮೀಪದ ಸಮುದ್ರಗಳಲ್ಲಿ ಭಯಾನಕ ಅಲೆಗಳು ಎಳುತ್ತದೆಂದು ಚಿತ್ರಿಸಿದ್ದರು. ಈ ದಿನ ನಿಖರವಾಗಿ ಭೂಕಂಪ ಸಂಭವಿಸದಿದ್ದರೂ, ಜುಲೈ ತಿಂಗಳ ಕೊನೆಗೆ ಸಂಭವಿಸಿದ ಸುನಾಮಿ ಈ ಭವಿಷ್ಯವಾಣಿಯ Month-Level Warning ಎಂಬಂತೆ ಭಾವಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಜುಲೈ ತಿಂಗಳ ಆರಂಭದಲ್ಲಿ"#July5Disaster" ಹ್ಯಾಶ್‌ಟ್ಯಾಗ್ ಜಪಾನ್‌ನಲ್ಲಿ ವೈರಲ್ ಆಗಿದ್ದು, ಹಲವಾರು ಜನರು ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜುಲೈ ಪ್ರವಾಸ ಯೋಜನೆಗಳನ್ನು ರದ್ದುಗೊಳಿಸಿದ್ದರು.
ಬಲ್ಗೇರಿಯಾದ ಭವಿಷ್ಯದೃಷ್ಟಿ ಬಾಬಾ ವಂಗಾ ಅವರು ತಮ್ಮ 2025-2026 ಭವಿಷ್ಯವಾಣಿಗಳಲ್ಲಿ, ಭೂಕಂಪ, ಪ್ರವಾಹ, ಹಾಗೂ ಪ್ರಬಲ ನೈಸರ್ಗಿಕ ವಿಕೋಪಗಳು ಉಂಟಾಗುತ್ತವೆ ಎಂದು ಹೇಳಿದ್ದರು.
ಅವರು ನಿರ್ದಿಷ್ಟವಾಗಿ ಯುರೋಪ್‌ನಲ್ಲಿ ಭೀಕರ ಭೂಕಂಪ ಹಾಗೂ ಮಿಲಿಟರಿ ಸಂಘರ್ಷಗಳು ಆಗುತ್ತವೆಯೆಂದು ಹೇಳಿದ್ದರು. ಇತ್ತೀಚಿನ ಘಟನೆಯು ಈ ನುಡಿಗಳೊಂದಿಗೆ ತಾಳಮೇಳ ಹೊಂದಿದ್ದು, “ಬಾಬಾ ವಂಗಾ ನುಡಿ ನಿಜವಾಯಿತಾ?” ಎಂಬ ಪ್ರಶ್ನೆ ಉಂಟಾಗಿದೆ.
ಕಮ್ಚಟ್ಕಾ ದ್ವೀಪದಲ್ಲಿ ಸಂಭವಿಸಿದ ಭೂಕಂಪವು, ರಷ್ಯಾದ ಕುರಿಲ್ ದ್ವೀಪಗಳು, ಜಪಾನ್‌ನ ಹೊಕ್ಕೈಡೊ ಪ್ರದೇಶ, ಹಾಗೂ ಇತರೆ ಪೆಸಿಫಿಕ್ ದೇಶಗಳಿಗೆ ಸುನಾಮಿ ಎಚ್ಚರಿಕೆ ತಿಳಿಸಿದೆ.ಜಪಾನ್‌ನ ಫುಕುಶಿಮಾ ಅಣು ಸ್ಥಾವರವನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳು ಸಹ ಪ್ರಭಾವಿತವಾಗಬಹುದೆಂದು ಭಾರತೀಯ ಅಧಿಕಾರಿಗಳು ಶಂಕಿಸುತ್ತಿದ್ದಾರೆ.
ರಿಯೋ ತತ್ಸುಕಿ ಅಥವಾ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಂಬಿಕೆಗೆ ಬದ್ಧವಾಗಿಲ್ಲದಿದ್ದರೂ, ನೈಸರ್ಗಿಕ ವಿಕೋಪಗಳು ಎಂದಿಗೂ ನಿರ್ಲಕ್ಷ್ಯಗೊಳಿಸಲಾಗದ ಹಿನ್ನಲೆಯಲ್ಲಿ, ಇಂತಹ ಎಚ್ಚರಿಕೆಗಳು ಸಾಮಾಜಿಕವಾಗಿ ಪ್ರಭಾವ ಬೀರುತ್ತಿವೆ. ಯುಎಸ್‌ಜಿಎಸ್ (USGS) ಸಂಸ್ಥೆಯ ಪ್ರಕಾರ, ಭೂಕಂಪಗಳ ವೈಜ್ಞಾನಿಕ ವಿಶ್ಲೇಷಣೆಯು ಮಾತ್ರ ನಿಖರವಾಗಿದೆ.
