Asianet Suvarna News Asianet Suvarna News

ರುದ್ರಾಕ್ಷಿ ಒಳ್ಳೇಯದು ಹೌದು, ಆದರೆ, ಆ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಧರಿಸಬೇಡಿ!

ರುದ್ರಾಕ್ಷಿ ಶ್ರೇಷ್ಠ. ರುದ್ರಾಕ್ಷ ಧರಿಸಿದ್ರೆ ಎಲ್ಲ ಪಾಪ ದೂರವಾಗಿ, ಆರೋಗ್ಯದಿಂದ ಹಿಡಿದು ಎಲ್ಲ ಯಶಸ್ಸು ಪ್ರಾಪ್ತಿಯಾಗುತ್ತದೆ. ಆದ್ರೆ ರುದ್ರಾಕ್ಷಕ್ಕೂ ಕೆಲವೊಂದು ನಿಯಮವಿದೆ. ಅದನ್ನು ಧರಿಸುವ ಮೊದಲು ಅದನ್ನು ತಿಳಿದಿರಬೇಕು.
 

Rules Before Wearing Rudraksha and better not wear few times
Author
Bangalore, First Published Aug 15, 2022, 5:34 PM IST

ಹಿಂದೂ ಧರ್ಮದಲ್ಲಿ ರುದ್ರಾಕ್ಷಕ್ಕೆ ಹೆಚ್ಚಿನ ಮಹತ್ವವಿದೆ. ರುದ್ರಾಕ್ಷವು ಶಿವನ ಕಣ್ಣುಗಳಿಂದ ಹುಟ್ಟಿಕೊಂಡಿದೆ ಮತ್ತು ಅದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.  ರುದ್ರಾಕ್ಷವು ರುದ್ರ ಮತ್ತು ಅಕ್ಷ ಎಂಬ ಎರಡು ಪದಗಳಿಂದ ಕೂಡಿದೆ. ರುದ್ರಾಕ್ಷಿಯು ಧನಾತ್ಮಕ ಶಕ್ತಿಯನ್ನು ನಮಗೆ ರವಾನೆ ಮಾಡುತ್ತದೆ.  ರುದ್ರಾಕ್ಷ ಧರಿಸುವುದ್ರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಇದು ಮುಖ್ಯ ಎಂದು ಹೇಳಲಾಗುತ್ತದೆ. ರುದ್ರಾಕ್ಷಿ ಧರಿಸುವುದರಿಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ.   ರುದ್ರಾಕ್ಷಿ ಧರಿಸುವುದ್ರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎಂದು ಭಕ್ತರು ನಂಬಿದ್ದಾರೆ. ಶಿವನನ್ನು ಮೆಚ್ಚಿಸಲು ರುದ್ರಾಕ್ಷಿಯೊಂದಿಗೆ ಮಂತ್ರ ಪಠಿಣೆ ಮಾಡಬೇಕು. ಹೀಗೆ ಮಾಡಿದ್ರೆ ಶಿವ ಭಕ್ತರಿಗೆ ಬೇಗ ಒಲಿಯುತ್ತಾನೆ. ರುದ್ರಾಕ್ಷ ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ.

ಶಿವ ಭಕ್ತರು ಶಿವನನ್ನು ಮೆಚ್ಚಿಸಲು ರುದ್ರಾಕ್ಷವನ್ನು ಧರಿಸುತ್ತಾರೆ. ರುದ್ರಾಕ್ಷವು ಒಂದು ಮುಖಿಯಿಂದ 21 ಮುಖಿಯವರೆಗೆ ಇರುತ್ತದೆ. ಇವೆಲ್ಲಕ್ಕೂ ತನ್ನದೇ ಆದ ಮಹತ್ವವಿದೆ. ಮನೆಯಲ್ಲಿ ರುದ್ರಾಕ್ಷಿಯನ್ನು ತರಲು ಮತ್ತು ಧರಿಸಲು ಹಲವು ನಿಯಮಗಳಿವೆ. ಕೆಲವು ಸಂದರ್ಭಗಳಲ್ಲಿ ರುದ್ರಾಕ್ಷಿಯನ್ನು ಮರೆತು ಕೂಡ ಧರಿಸಬಾರದು. ಅಪ್ಪಿತಪ್ಪಿ ಅದರ ತಪ್ಪಾಗಿ ಧರಿಸಿದ್ರೆ ಫಲಿತಾಂಶ ಅಶುಭವಾಗಿರುತ್ತದೆ. ಯಾವ ಸಮಯದಲ್ಲಿ ರುದ್ರಾಕ್ಷವನ್ನು ಧರಿಸಬಾರದು ಎಂಬ ವಿವರ ಇಲ್ಲಿದೆ. 

ಈ ಸಮಯದಲ್ಲಿ ರುದ್ರಾಕ್ಷ (Rudraksha) ಧರಿಸಬೇಡಿ :  
ಮಲಗುವಾಗ ರುದ್ರಾಕ್ಷವನ್ನು ಧರಿಸಬೇಡಿ :
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ನೀವು ರುದ್ರಾಕ್ಷವನ್ನು ಧರಿಸಿದರೆ ಮಲಗುವಾಗ ರುದ್ರಾಕ್ಷಿಯನ್ನು ತೆಗೆಯಬೇಕು. ಮಲಗುವಾಗ ರುದ್ರಾಕ್ಷವನ್ನು ಧರಿಸಬಾರದು. ಮಲಗುವ ಮೊದಲು  ರುದ್ರಾಕ್ಷಿಯ ಜಪಮಾಲೆಯನ್ನು ಕುತ್ತಿಗೆಯಿಂದ ತೆಗೆದಿಡಬೇಕು.  ರುದ್ರಾಕ್ಷಿಯನ್ನು ನಿಮ್ಮ ತಲೆಯ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ರುದ್ರಾಕ್ಷಿಯನ್ನು ತಲೆಯ ಕೆಳಗೆ ಇಟ್ಟುಕೊಳ್ಳುವುದರಿಂದ ಮನಸ್ಸು (mind) ಶಾಂತವಾಗಿರುತ್ತದೆ ಮತ್ತು ಕೆಟ್ಟ ಕನಸು (Dream) ಗಳು ಬರುವುದಿಲ್ಲ.

ಈ ಜನ್ಮರಾಶಿಯವರ ಜತೆ ಸಮಯ ಕಳೆಯುವುದು ಮಹಾ ಬೋರಿಂಗ್!

ಸೂತಕದಲ್ಲಿ ರುದ್ರಾಕ್ಷವನ್ನು ಧರಿಸಬೇಡಿ : ಇದಲ್ಲದೆ  ಮಗುವಿನ ಜನನದ ಸಂದರ್ಭದಲ್ಲಿ ಮತ್ತು ಯಾರಾದರೂ ಸತ್ತಾಗ ಸಹ ರುದ್ರಾಕ್ಷವನ್ನು ಧರಿಸಬಾರದು. ಆ ಸಮಯದಲ್ಲಿ ರುದ್ರಾಕ್ಷಿಯನ್ನು ತೆಗೆಯಬೇಕು. ಏಕೆಂದರೆ ಮಗು ಜನಿಸಿದಾಗ ಅಥವಾ ಸತ್ತಾಗ ಮನೆಯಲ್ಲಿ ಸೂತಕವಿರುತ್ತದೆ. ಆ ಸಮಯದಲ್ಲಿ ವ್ಯಕ್ತಿಯು ಅಶುದ್ಧನಾಗಿರುತ್ತಾನೆ. ಈ ಸಮಯದಲ್ಲಿ ರುದ್ರಾಕ್ಷವನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ.

ಚಾಣಕ್ಯ ನೀತಿ: ಯಶಸ್ವಿಯಾಗಲು,ಕತ್ತೆಯಿಂದ ಈ ವಿಷ್ಯಗಳನ್ನು ಕಲಿಯಬೇಕಂತೆ

ಮಾಂಸ (Meat) ಮತ್ತು ಮದ್ಯ ಸೇವಿಸುವಾಗ ರುದ್ರಾಕ್ಷಿ ಧರಿಸ್ಬೇಡಿ : ಮಾಂಸ ಮತ್ತು ಮದ್ಯವನ್ನು ಸೇವಿಸುವ ವ್ಯಕ್ತಿ ಯಾವುದೇ ಕಾರಣಕ್ಕೂ  ರುದ್ರಾಕ್ಷವನ್ನು ಧರಿಸಬಾರದು. ರುದ್ರಾಕ್ಷವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಮಾಂಸ ಮತ್ತು ಮದ್ಯವನ್ನು ಸೇವಿಸುವವರು ರುದ್ರಾಕ್ಷವನ್ನು ಧರಿಸಿ ರುದ್ರಾಕ್ಷವನ್ನು ಕಲುಷಿತಗೊಳಿಸಬಾರದು. ಮಾಂಸ ಸೇವನೆ ವೇಳೆ ಕೂಡ ರುದ್ರಾಕ್ಷಿ ತೆಗೆದಿಡಬೇಕು. ಇಲ್ಲವೆಂದ್ರೆ ಕೆಟ್ಟ ಪರಿಣಾಮ ನಿಮ್ಮ ಮೇಲಾಗುತ್ತದೆ. 

ಈರುಳ್ಳಿ (Onion) – ಬೆಳ್ಳುಳ್ಳಿ (Garlic) ಸೇವಿಸಬಾರದು : ರುದ್ರಾಕ್ಷಿ ಧರಿಸುವವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಕೂಡ ಸೇವನೆ ಮಾಡಬಾರದು.  ರುದ್ರಾಕ್ಷಿ ಧರಿಸುವವರು ಸಂಪೂರ್ಣ ಸಾತ್ವಿಕ ಆಹಾರ ಸೇವನೆ ಮಾಡ್ಬೇಕು. 

ರುದ್ರಾಕ್ಷ ಎಲ್ಲಿ ಸಿಗುತ್ತದೆ ಗೊತ್ತಾ? : ಭಾರತ, ನೇಪಾಳ, ಇಂಡೋನೇಷಿಯಾ, ಬರ್ಮಾ ಇತ್ಯಾದಿ ಪರ್ವತ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಸುಲಭವಾಗಿ ಕಾಣಬಹುದು. ಇದರ ಎಲೆಗಳು ಹಸಿರು ಮತ್ತು ಹಣ್ಣುಗಳು ಕಂದು ಬಣ್ಣದಲ್ಲಿರುತ್ತವೆ ಮತ್ತು ಹುಳಿ ರುಚಿಯನ್ನು ಹೊಂದಿರುತ್ತವೆ.  

ರುದ್ರಾಕ್ಷವನ್ನು ಯಾವಾಗ ಧರಿಸಬೇಕು? : ರುದ್ರಾಕ್ಷಿಯನ್ನು ಧರಿಸುವ ಮೊದಲು ಅದನ್ನು ಶಿವನಿಗೆ ಅರ್ಪಿಸಬೇಕು. ಶ್ರಾವಣ ಸೋಮವಾರ, ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ, ಸಂಕ್ರಾಂತಿ, ಅಮವಾಸ್ಯೆ, ಪೂರ್ಣಿಮಾ ಮತ್ತು ಮಹಾಶಿವರಾತ್ರಿಯ ದಿನಗಳಲ್ಲಿ ರುದ್ರಾಕ್ಷಿಯನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
 

Follow Us:
Download App:
  • android
  • ios