Asianet Suvarna News Asianet Suvarna News

ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೇದನ್ನೂ ಮಾಡ್ತಾನೆ ಈ ಶನಿ!

 'ಶನಿ ತರ ಒಕ್ಕರಿಸಿದೆ..' ಎಂದು ಎಂಥದ್ದೇ ಕಷ್ಟ ಬಂದರೂ ಹೇಳುವುದು ಕಾಮನ್. ಹಾಗಂತ ಸದಾ ಕೆಟ್ಟದ್ದೇನೂ ಮಾಡೋಲ್ಲ ಈ ಶನಿ. ಕೆಲವು ಮನೆಯಲ್ಲಿದ್ದರೆ ಈ ಗ್ರಹ ಒಳ್ಳೆಯದನ್ನೇ ಮಾಡುತ್ತಾನೆ. ಅಷ್ಟಕ್ಕೂ ಈ ಗ್ರಹ ಯಾವಾಗ ಒಳ್ಳೇಯದನ್ನು ಮಾಡುತ್ತಾನೆ? ನೀವೇ ಓದಿ..

Role and importance of lord shani in astrology and remedies
Author
Bangalore, First Published Jan 4, 2020, 9:02 AM IST
  • Facebook
  • Twitter
  • Whatsapp

ಡಾ|ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ                        
      ಮೊಬೈಲ್.: 9448490860

ಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಶನಿಯಿಂದ ಕಷ್ಟ ತೊಂದರೆ ಬರಬಾರದೆಂದು ಶನಿಶೋತ್ರ, ಜಪತಪ ಮಾಡುವವರು ಬಹಳ ಮಂದಿ ಇದ್ದಾರೆ. ಶನಿಯ ಕಾಟ ಇದ್ದಾಗ ಅಶ್ವಥ ಮರಕ್ಕೆ ಪ್ರದಕ್ಷಿಣೆ ಮಾಡಲು ಹೇಳುತ್ತಾರೆ. ಶನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಶನಿಕಥೆ ತಿಳಿದವರಿಗೆ ಗೊತ್ತಿದೆ. ಜ್ಯೋತಿಷ್ಯದಲ್ಲಿ ಶನಿಗಿಂತ ದುಃಖಕರವಾದ ಗ್ರಹ ಬೇರೆ ಇಲ್ಲ. ಏನೇ ಘಟನೆ ನಡೆದಾಗ ಇದಕ್ಕೆ ಶನಿಯೇ ಕಾರಣವೆಂದು ಹೇಳುತ್ತಾರೆ. ಕೊಲೆ, ಸಾವು, ಅಪಘಾತ, ನೀರಿನಲ್ಲಿ ಮುಳುಗುವುದು, ವೈವಾಹಿಕ ಜೀವನ, ವಾಸಿಯಾಗದ ಕಾಯಿಲೆ ಬಂದಾಗ ಬೇರೆ ಗ್ರಹದ ಬಗ್ಗೆ ಹೇಳದೆ ಶನಿಯೇ ಇದಕ್ಕೆ ಕಾರಕ ಎಂದು ಹೇಳುತ್ತಾರೆ. ಆದರೆ ಶನಿ ಪಾಪಗ್ರಹ ಇರಬಹುದು, ಇದು ಒಳ್ಳೆಯದು ಮಾಡುವುದಿಲ್ಲವೇ?

ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

ಜಾತಕದಲ್ಲಿ ಮೂವತ್ತು ವರ್ಷಕ್ಕೊಮ್ಮೆ ಬರುವ ಏಳರಾಟ ಶನಿ ಅಂದರೆ ಏಳುವರೆ ವರ್ಷ ಶನಿಯು ಜಾತಕದಲ್ಲಿ ಹನ್ನೊಂದು ಮತ್ತು ಎರಡರಲ್ಲಿ ಸಂಚರಿಸುವಾಗ ಅಪಾಯಕಾರಿ. ಜನ್ಮ ನಕ್ಷತ್ರದ ಮೇಲೆ ಸಂಚರಿಸುವಾಗ ಬಹಳ ಕಠಿಣ ಸಮಯ. ಜೀವದಲ್ಲಿ ವಿಳಂಬ ಶನಿ ಮೂರು ಬಾರಿ ಬರುತ್ತದೆ. ಆದರೆ ಮೂರನೆ ಬಾರಿ ಬರುವಾಗ ಮರಣ ಕಾಲ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಮೂರನೇಯ ಸ್ಥಿತಿಯನ್ನು ಹಾದು ಬಂದವನನ್ನು “ಪೂರ್ಣಾಯು” ಎಂದು ಕರೆಯುತ್ತಾರೆ. ಶನಿಯು ಪಂಚಮದಲ್ಲಿರುವಾಗ ಮನಸ್ಸಿಗೆ ನೋವು ಕೊಡುತ್ತಾನೆ. ಕೆಲವರು ನಾಲ್ಕನೆ ಶನಿದೆಶೆಗೆ ಮರಣ ಹೊಂದುವುದು ಎಂದು ಹೇಳುತ್ತಾರೆ.

ಶನಿ ಎಲ್ಲಿಯೂ ಇರಲಿ ಯಾವ ನವಾಂಶವನ್ನು ಹೊಂದಿದ್ದರೂ ಕೆಟ್ಟವ ಎಂಬ ನಂಬಿಕೆಗೆ ಇನ್ನಷ್ಟು ಅಂಶಗಳಿವೆ. ಮೇಷದಲ್ಲಿ ಶನಿಯು ಕೆಟ್ಟದ್ದನ್ನು ತರುತ್ತಾನೆ. ಮಕ್ಕಳಿಗೆ ಪ್ರೇತ ಬಾಧೆ, ಮೃತ್ಯುಗಳ ಹೆದರಿಕೆಗೆ ಲಗ್ನದಲ್ಲಿನ ಶನಿ ಕಾರಣ. ಮಿಥುನದಲ್ಲಿ ಶನಿ ಇದ್ದರೆ ಮದುವೆಗೆ ಅಡೆತಡೆ ತರುತ್ತಾನೆ. ಸಪ್ತಮದಲ್ಲಿ ಶನಿ ಇದ್ದರೆ ಬಹಳ ವಿಳಂಬ ಮದುವೆಯಾಗುತ್ತದೆ. ಸ್ತ್ರೀಯರಿಗಾದರೆ ತುಂಬಾ ವಯಸ್ಸಾದವರನ್ನು ಎರಡನೇಯ ಸಂಬAಧದ ಹುಡುಗನೊಂದಿಗೆ ವಿವಾಹ ಆಗುತ್ತಾರೆ.

ಭಯಂಕರವಾಗಿ ಕಾಡುವ ಶನಿ ಕಾಟಕ್ಕೆ ಇದೆಯಾ ಮುಕ್ತಿ..?

ಶನಿ ಕುಜನು ಒಟ್ಟಾಗಿ ಅಥವಾ ವಿರುದ್ಧ ಸ್ಥಾನದಲ್ಲಿ ಸಮ ಸಪ್ತಮ ಇರುವುದು ಬಹಳ ಹಾನಿಕರ. ರವಿದೆಶೆಯಲ್ಲಿನ ಶನಿ ಭುಕ್ತಿ ಶನಿದೆಶೆಯಲ್ಲಿನ ರವಿ ಭುಕ್ತಿ ಹನ್ನೊಂದು ತಿಂಗಳು ಹನ್ನೆರಡು ದಿನಗಳು ಜಾತಕದ ಜೀವನದಲ್ಲಿ ಕಠಿಣ ದಿನಗಳು ಇರುತ್ತದೆ. ಎಲ್ಲಾ ವಿಷಯದಲ್ಲಿ ದುಃಖ, ಯಾರೂ ಸಹಾಯಕ್ಕೆ ಬರುವುದಿಲ್ಲ. ಚಂದ್ರ ಲಗ್ನದಲ್ಲಿದ್ದು ಶನಿಯು 4,7 ಮತ್ತು 10ನೇ ರಾಶಿಗಳನ್ನು ಸಂಚರಿಸುವಾಗ ತೊಂದರೆ ಬಂದೆ ಬರುತ್ತದೆ. ಶನಿಗೆ ಧನು ರಾಶಿ ಆಗುವುದಿಲ್ಲ. ಪತ್ನಿಯರೊಂದಿಗೆ ಕಲಹ ವಿವಾಹ ವಿಚ್ಛೇದನವಾಗುತ್ತದೆ.

ಶನಿಯು ಎಂಟರಲ್ಲಿ ಇದ್ದರೆ ದೀರ್ಘ ಆಯಸ್ಸು ನೀಡುವನು. ಶನಿಯು ಅದೃಷ್ಟವನ್ನು ತರುತ್ತಾನೆ. ಕರ್ಕಾಟಕದಲ್ಲಿ ಶನಿ ಇದ್ದರೆ ಇವರಿಗೆ ಲಕ್ಷ್ಮಿ ಒಲಿಯುತ್ತಾಳೆ. ಶನಿ ವರ  ಇದ್ದರೆ ಅಂತವರು ಕುಬೇರನಾಗುತ್ತಾನೆ. ಶನಿ ಏಳರಾಟ ಇರುವಾಗ ಕೊನೆಯಾಗಿ ಕೆಲವು ತಿಂಗಳಲ್ಲಿ ತಡೆಯಾಗಿರುವ ಭೋಗ ಭಾಗ್ಯವನ್ನು ಕೊಡುತ್ತದೆ. ನವಮದ ಶನಿ ಒಬ್ಬನೇ ಇದ್ದು ಮತ್ತು ಯಾರಿಂದಲೂ ನೋಡದೆ ಇದ್ದರೆ ತಮ್ಮ ಆಸ್ತಿ ಪಾಸ್ತಿಯನ್ನು ತ್ಯಜಿಸಿ ಆತನು ಸನ್ಯಾಸ ಜೀವನಕ್ಕೆ ಹೋಗುತ್ತಾನೆ.  ವೃಷಭ ಮತ್ತು ತುಲಾ ಲಗ್ನದವರಿಗೆ ಯೋಗಕಾರಕನಾದ ಶನಿ ತನ್ನ ದೆಶೆಯಲ್ಲಿ ದುಃಖವನ್ನು ಕೊಡುತ್ತದೆ.

ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

ಶನಿಯ ಕಾಟ ಇರುವವರು ಒಂದು ಕುಡ್ತೆ ಎಳ್ಳೆಣ್ಣೆ ಅಂದರೆ ಶುದ್ಧವಾಗಿರುವ ಎಣ್ಣೆಯಲ್ಲಿ ಪ್ರತಿಬಿಂಬ ಪೂರ್ತಿ ನೋಡಬೇಕು. ತನ್ನ ಕಷ್ಟ ಪರಿಹಾರ ಆಗಲೆಂದು ಪ್ರಾರ್ಥನೆ ಮಾಡಿ ಶಿವನಿಗೆ ಅರ್ಪಿಸಿದರೆ ಶನಿ ಕಾಟ ಇರುವುದಿಲ್ಲ. ಈ ಕ್ರಮವನ್ನು ತನ್ನ ಜನ್ಮ ನಕ್ಷತ್ರದ ದಿನ ಪ್ರತಿ ತಿಂಗಳು ಮಾಡಬೇಕು.
 

Follow Us:
Download App:
  • android
  • ios