Asianet Suvarna News Asianet Suvarna News

ದೇವರ ತೀರ್ಥ ತೆಗೆದುಕೊಳ್ಳಲೂ ರೀತಿ ನೀತಿ ಇವೆ, ಏನವು?

ನೀವು ದೇವಾಲಯದಲ್ಲಿ ಅರ್ಚಕರು ನೀಡುವ ತೀರ್ಥವನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡದೇ ಇದ್ದರೆ, ಅದರ ಪೂರ್ಣ ಫಲ ದೊರೆಯುವುದಿಲ್ಲ. 

Ritual must be followed to take holy water
Author
Bengaluru, First Published Apr 16, 2021, 4:08 PM IST

ದೇವಸ್ಥಾನದಲ್ಲಿ ಅಥವಾ ಪೂಜೆಯ ನಂತರ ನಾವು ಅರ್ಚಕರಿಂದ ತೀರ್ಥವನ್ನು ಪಡೆಯುತ್ತೇವೆ. ಹೆಚ್ಚಿನವರಿಗೆ ಇದನ್ನು ಪಡೆಯುವ, ಸೇವಿಸುವ ಸರಿಯಾದ ಕ್ರಮ ಗೊತ್ತಿಲ್ಲ. ಕ್ರಮ ಗೊತ್ತಿಲ್ಲದೇ ತೀರ್ಥ ಸೇವಿಸಿದರೆ ಪೂರ್ಣ ಫಲ ದೊರೆಯುವುದಿಲ್ಲ. ಹಾಗೆಂದು ಅದು ಪಾಪವಲ್ಲ. ಆದರೆ ಸರಿಯಾದ ಕ್ರಮವನ್ನು ತಿಳಿದು ಅದರಂತೆ ಮುಂದೆ ಆಚರಿಸಬೇಕು. 

ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಆಗ ಅದರ ಪೂರ್ತಿ ಫಲ ಸಿಗುತ್ತದೆ. ತೀರ್ಥ ಜಲವನ್ನು ಹೇಗೆ ಸ್ವೀಕರಿಸಬೇಕು ಎಂದು ಕೂಡ ಶಾಸ್ತ್ರ ಹೇಳುತ್ತದೆ. 

ತೀರ್ಥವನ್ನು ಬಲಗೈಯಲ್ಲಿಯೇ ಸ್ವೀಕರಿಸಬೇಕೆಂಬುದು ನಿಯಮ. ಕೈಕೆಳಗೆ ವಸ್ತ್ರವೊಂದನ್ನು ಇಲ್ಲವೇ ಉತ್ತರೀಯವನ್ನು, (ಸ್ತ್ರೀಯರು ತಮ್ಮ ಸೀರೆಯ ಸೆರಗಿನ ತುದಿಯನ್ನು) ಹಿಡಿದಿರಬೇಕು. ಇದರ ಉದ್ದೇಶವೇನೆಂದರೆ, ಸ್ವೀಕರಿಸುವಾಗ ಅಥವಾ ಪ್ರಾಶನ ಮಾಡುವಾಗ ತೀರ್ಥವು ಕೆಳಗೆ ಬೀಳದಂತೆ ಎಚ್ಚರ ವಹಿಸುವುದಾಗಿದೆ. 
 

Ritual must be followed to take holy water


ತೀರ್ಥವನ್ನು ಸ್ವೀಕರಿಸುವಾಗ ನಮ್ಮ ತೋರುಬೆರಳನ್ನು ಹೆಬ್ಬೆರಳಿನ ಅಂತಿಮ ರೇಖೆಗೆ ಮುಟ್ಟುವಂತೆ ಮಡಿಸಿ ಅದರ ಮೇಲೆ ಹೆಬ್ಬೆರಳನ್ನು ಮಡಿಚಿಡಬೇಕು. ಉಳಿದ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಮೇಲಿರುವಂತೆ, ನಂತರ ಉಂಗುರದ ಬೆರಳು ಮತ್ತು ಕೊನೆಯಲ್ಲಿ ಕಿರುಬೆರಳಿರುವಂತೆ ನೇರವಾಗಿ ಚಾಚಿರಬೇಕು. ಇದನ್ನು ನಾವು ಗೋಕರ್ಣ ಕೃತಿ ಎಂದು ಕರೆಯುತ್ತೇವೆ. ಗೋಕರ್ಣ ಕೃತಿ ಎಂದರೆ ಗೋವಿನ ಕಿವಿ ಹಾಗೆ ಕೈ ಬೆರಳನ್ನು ಮಾಡಿಕೊಳ್ಳುವುದು.

ಭೋಲೆನಾಥ, ಶಂಕರ, ಹರ ಎಂದು ಕರೆಯಲ್ಪಡುವ ಶಿವನ ರಹಸ್ಯ ...

ನಂತರ ಪ್ರಪ್ರಥಮವಾಗಿ ತೀರ್ಥದ ಒಂದೆರಡು ಹನಿಯನ್ನು ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳಬೇಕು. ನಂತರ ಕೈಯಲ್ಲಿರುವ ತೀರ್ಥವನ್ನು ಸೇವಿಸಬೇಕು. ಸೇವಿಸುವಾಗ ಈ ಕೆಳಗಿನ ಮಂತ್ರವನ್ನು ಹೇಳಿಕೊಳ್ಳಬೇಕು: 

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸರ್ವ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇವರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

ಮೀನ ರಾಶಿಯಿಂದ ಮೇಷ ರಾಶಿಗೆ ಸೂರ್ಯನ ಚಲನೆ: ನಿಮ್ಮ ರಾಶಿಗೆ ಏನು ಫಲ? ...

ತೀರ್ಥವನ್ನು ಪ್ರಾಶನ ಮಾಡಿದ ನಂತರ ಕೈಯಲ್ಲಿ ಉಳಿದಿರುವ ತೇವಾಂಶವೂ ನಷ್ಟವಾಗದಂತೆ ಕೈಗಳ ಕೆಳಗೆ ಹಿಡಿದಿದ್ದ ವಸ್ತ್ರದಿಂದ ಅದನ್ನು ಒತ್ತಿಕೊಂಡು ಒರೆಸಿಕೊಳ್ಳಬೇಕು. ತೀರ್ಥವನ್ನು ಸ್ವೀಕರಿಸುವಾಗ ದೇಹವನ್ನು ಬಗ್ಗಿಸಿರಬೇಕು. ಇದು ದೇವರ ಅಭೀಷೇಕದ ತೀರ್ಥಕ್ಕೆ ನಾವು ನೀಡುವ ಗೌರವ ಮತ್ತು ತೋರುವ ಭಕ್ತಿಯ ಸಂಕೇತವಾಗಿರುತ್ತದೆ. ಮುಂಜಾನೆ ಸಂಧ್ಯಾವಂದನೆ, ದೇವರಪೊಜೆ ನಂತರ ಆಹಾರ ಸೇವನೆಗೂ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು. ಮಹಾಪೂಜೆಯಲ್ಲೂ ಸಹ ಊಟದ ಮೊದಲು ಮೂರೂ ಸಲ ತೀರ್ಥವನ್ನು ಸ್ವೀಕರಿಸಬೇಕು. ಮೂರು ತೀರ್ಥಗಳ ಸಾಂಕೇತಿಕ ವಿವರಣೆ ಹೀಗಿದೆ: 

ಪ್ರಥಮಂ ಕಾಯಶುದ್ಧ್ಯರ್ಥಂ
ದ್ವಿತೀಯಂ ಧರ್ಮಸಾಧನಂ 
ತೃತೀಯಂ ಮೋಕ್ಷಸಿದ್ಧ್ಯರ್ಥಂ 
ಏವಂ ತೀರ್ಥಂ ತ್ರಿಧಾ ಪಿಬೇತ್||
ಅರ್ಥ: ಮೊದಲನೆಯದು ಕಾಯ ಅಥವಾ ದೇಹ ಶುದ್ಧಿಗಾಗಿ; ಎರಡನೆಯದು ಧರ್ಮಸಾಧನೆಗಾಗಿ ಮತ್ತು ಮೂರನೆಯದು ಮೋಕ್ಷಸಿದ್ಧಿಗಾಗಿ. ಕೆಲವೆಡೆ ಒಂದೇ ಬಾರಿ ತೀರ್ಥವನ್ನು ನೀಡುವರಾದರೂ ಒಂದರಲ್ಲೇ ಮೂರು ತೀರ್ಥವನ್ನು ಅನುಸಂಧಾನಿಸಿ ಸೇವಿಸಬೇಕು. 
ಹೀಗೆ ಮಾಡುವುದರಿಂದ ದೇವರು ನೀವು ಮಾಡಿದ ಪೂಜೆಗೆ ಪ್ರಸನ್ನನಾಗಿ ನಿಮ್ಮತ್ತ ಆಶೀರ್ವಾದದ ಪೂರ್ಣ ದೃಷ್ಟಿಯನ್ನು ಬೀರುತ್ತಾನೆ. ಮಾಡಿಸಿದ ಹರಿಕೆ, ಸೇವೆ ಅಥವಾ ಪೂಜೆಯ ಪೂರ್ಣ ಫಲ ನಿಮ್ಮದಾಗುತ್ತದೆ. 

ಪಂಚಾಂಗ : ಹಣಕಾಸಿನ ಸಮಸ್ಯೆ ಇದ್ರೆ, ವ್ಯಾಪಾರ ನಷ್ಟದಲ್ಲಿದ್ದರೆ ಈ ಮಂತ್ರವನ್ನು 16 ಬಾರಿ ಪಠಿಸಿ ...

 

Follow Us:
Download App:
  • android
  • ios