ಎರಡು ವರ್ಷದ ಬಳಿಕ ಕುಕ್ಕೆಯಲ್ಲಿ ಎಡೆಸ್ನಾನ ಪುನಾರಂಭ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಎಡೆಸ್ನಾನವನ್ನು ಇಂದಿನಿಂದ ದೇವಸ್ಥಾನ ಅಡಳಿತ ಸಮಿಯಿಂದ ಪುನಾರಂಭ ಮಾಡಲಾಗಿದೆ.
ಬೆಂಗಳೂರು (ನ.27): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಎಡೆಸ್ನಾನವನ್ನು ಇಂದಿನಿಂದ ದೇವಸ್ಥಾನ ಅಡಳಿತ ಸಮಿಯಿಂದ ಪುನಾರಂಭ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಹಿನ್ನೆಲೆ ಎಡೆಸ್ನಾನ ಆಚರಣೆ ಮಾಡಲಾಗುತ್ತದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಎಡೆಸ್ನಾನಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಕೋವಿಡ್ ಸಂಪೂರ್ಣ ತಹಬದಿಗೆ ಬಂದಿದ್ದು, ಎಲ್ಲ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಚಂಪಾಷಷ್ಠಿ ಆಚರಣೆಯಿಂದ ಎಡೆಸ್ನಾನ ಮಾಡಲು ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಸಮಿತಿ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ, ಇಂದಿನಿಂದ ದೇವಸ್ಥಾನದಲ್ಲಿ ಎಡೆಸ್ನಾನ ಆಚರಣೆ ಪುನಾರಂಭ ಮಾಡಲಾಗಿದೆ.
ಕುಕ್ಕೆಯಲ್ಲಿ ಈ ಬಾರಿ ಮಡೆಸ್ನಾನಕ್ಕೆ ನಿರ್ಬಂಧ, ಎಡೆಸ್ನಾನಕ್ಕೆ ಅವಕಾಶ
ಗೋವಿನೆಂಜಲ ಎಲೆಯಲ್ಲಿ ಎಡೆಸ್ನಾನ ಸೇವೆ: ನವೆಂಬರ್ 21ರಿಂದ ಆರಂಭವಾಗಿರುವ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮಡೆಸ್ನಾನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಮಡೆಸ್ನಾನಕ್ಕೆ ಅವಕಾಶ ಮಾಡಿಕೊಡದೇ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕೆಲವು ವರ್ಷಗಳಿಂದ ಕುಕ್ಕೆಯಲ್ಲಿ ಎಡೆಸ್ನಾನದ ಆಚರಣೆ ಮಾಡಲಾಗುತ್ತಿದ್ದು, ಈಗ ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ಆಚರಣೆಯನ್ನು ಮುಂದುವರೆಸಲಾಗುತ್ತಿದೆ. ದೇವಾಲಯದ ಅಂಗಳದ ಸುತ್ತಲೂ ಎಲೆಗಳನ್ನ ಹಾಕಿ ಅದ್ರಲ್ಲಿ ನೈವೇದ್ಯ ಬಡಿಸಿದ್ದರು. ಅದನ್ನ ಹಸುಗಳು ತಿಂದ ಬಳಿಕ ಭಕ್ತರು ಎಲೆಯ ಮೇಲೆ ಉರುಳಾಡಿ ಎಡೆಸ್ನಾನ ಸೇವೆ ಮಾಡಿದರು.
ಈ ವೇಳೆ ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರು ಎಡೆಸ್ನಾನ ಸೇವೆಯ ವೇಳೆ ಉಪಸ್ಥಿತರಿದ್ದರು.