Asianet Suvarna News Asianet Suvarna News

ಪೆರ್ಣಂಕಿಲ ದೇವಳದ ಜೀರ್ಣೋದ್ಧಾರ-ಷಢಾಧಾರ ಪ್ರತಿಷ್ಠೆ- ಗರ್ಭನ್ಯಾಸ ಸಂಪನ್ನ

ಇಲ್ಲಿನ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲ ಗ್ರಾಮದ ಶ್ರೀ ಮಹಾಗಣಪತಿ - ಮಹಾಲಿಂಗೇಶ್ವರ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಭಾನುವಾರ ದೇವಸ್ಥಾನದ ಷಢಾಧಾರ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮ ನಡೆಯಿತು.

Restoration of Pernankila Temple - Shadhadhara Pratistha - Garbhanyasa udupi rav
Author
First Published May 22, 2023, 12:13 PM IST

ಉಡುಪಿ (ಮೇ.22) : ಇಲ್ಲಿನ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲ ಗ್ರಾಮದ ಶ್ರೀ ಮಹಾಗಣಪತಿ - ಮಹಾಲಿಂಗೇಶ್ವರ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಭಾನುವಾರ ದೇವಸ್ಥಾನದ ಷಢಾಧಾರ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮ ನಡೆಯಿತು.

ಪೇಜಾವರ ಮಠ(Pejavar Math)ದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದ(Shri vishwaprasanna Teertha sripada)ರ ಉಪಸ್ಥಿತಿ ಮತ್ತು ನೇತೃತ್ವದಲ್ಲಿ ಅವರು ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನದ ತಂತ್ರಿಗಳಾದ ಮಧುಸೂದನ ತಂತ್ರಿ ಮತ್ತು ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ನಡೆಸಿಕೊಟ್ಟರು.

ವಿಶಿಷ್ಟ ನಾಗಾರಾಧನೆ ಕಾಣುವ ಕುತ್ಯಾರಿನ ನಾಗಬನ; ಹರಕೆ ಹೊತ್ರೆ ಈಡೇರಿತೆಂದೇ ಲೆಕ್ಕ

ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಕ್ಷೇತ್ರದ ನೂತನ ಶಾಸಕ ಯಶಪಾಲ್ ಸುವರ್ಣ ಅವರು ಉಪಸ್ಥಿತರಿದ್ದರು. ಅವರನ್ನು ಪೇಜಾವರ ಶ್ರೀಗಳು ಶಾಲು ಹೊಡೆಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್, ಪ್ರ.ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಆಡಳಿತಾಧಿಕಾರಿ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ, ವ್ಯವಸ್ಥಾಪಕರಾದ ಸುರೇಶ ತಂತ್ರಿ, ಸಮಿತಿಯ ಪದಾಧಿಕಾರಿಗಳಾದ  ಸುವರ್ಧನ ನಾಯಕ್, ಸದಾನಂದ ಪ್ರಭು, ಉಮೇಶ್ ನಾಯಕ್, ಮಹೇಶ್ ಕುಲಕರ್ಣಿ, ಸಂದೀಪ್ ನಾಯಕ್ ಹೆಬ್ಬಾಗಿಲು ಮುಂತಾದವರು ಉಪಸ್ಥಿತರಿದ್ದರು.

ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಕೇರಳ ಸ್ಟೋರಿ ಅಲರ್ಟ್..!

Follow Us:
Download App:
  • android
  • ios