ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಕೇರಳ ಸ್ಟೋರಿ ಅಲರ್ಟ್..!
ಈ ಸಿನೆಮಾಕ್ಕೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಬೆಂಬಲ ದೊರೆತಿದ್ದು, ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ನಡುವೆ ಸಿನಿಮಾವನ್ನು ವೀಕ್ಷಿಸುವಂತೆ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೊರ ಭಾಗದಲ್ಲಿ ವಿಶೇಷವಾದ ಬ್ಯಾನರ್ ಅಳವಡಿಸುವ ಮೂಲಕ ಕರೆ ನೀಡಿದ ಹಿಂದೂ ಜಾಗರಣ ವೇದಿಕೆ.
ಉಡುಪಿ(ಮೇ.16): ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿರುವ ನೈಜ ಕಥೆಯಾದರಿತ 'ದಿ ಕೇರಳ ಸ್ಟೋರಿ' ಸಿನೆಮಾಕ್ಕೆ ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ದೊರಕಿದೆ. ಲವ್ ಜಿಹಾದ್ ಜಾಲಕ್ಕೆ ಬಲಿಯಾಗಿ, ಇಸ್ಲಾಂಗೆ ಮತಾಂತರಗೊಂಡ ಯುವತಿಯರ ನಂತರದ ಸ್ಥಿತಿಗತಿಗಳನ್ನು ಈ ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ.
ಈ ಸಿನೆಮಾಕ್ಕೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಬೆಂಬಲ ದೊರೆತಿದ್ದು, ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ನಡುವೆ ಸಿನಿಮಾವನ್ನು ವೀಕ್ಷಿಸುವಂತೆ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೊರ ಭಾಗದಲ್ಲಿ ವಿಶೇಷವಾದ ಬ್ಯಾನರ್ ಅಳವಡಿಸುವ ಮೂಲಕ ಕರೆ ನೀಡಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ ಉಚಿತ ಪ್ರದರ್ಶನ, ಚಿತ್ರಮಂದಿರವನ್ನೇ ಬುಕ್ ಮಾಡಿದ ಯತ್ನಾಳ್
ಬ್ಯಾನರ್‌ನಲ್ಲೇನಿದೆ?
ಮಲಯಾಳಿ ಭಕ್ತರಿಗೆ ಸ್ವಾಗತ. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿರಬೇಕೆಂದರೇ ದಯವಿಟ್ಟು ದಿ ಕೇರಳ ಸ್ಟೋರಿ ಸಿನೆಮಾವನ್ನು ವೀಕ್ಷಿಸಿ ಎಂದು ಬ್ಯಾನರ್ ಅಳವಡಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿರುವ ಈ ಬ್ಯಾನರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರಿಗೆ ಕೇರಳ ರಾಜ್ಯದಿಂದ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಲವ್ ಜಿಹಾದ್ ಕೂಡ ಕೇರಳದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ ಎಂಬ ಆರೋಪ ಇದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಗೃತಿ ಆಧಾರದಲ್ಲಿ ಬಿಡುಗಡೆಯಾದ ಸಿನಿಮಾವನ್ನು ವೀಕ್ಷಿಸಿ ಎಂದು ಕರೆ ನೀಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಅವರನ್ನು ಒಳಗೊಂಡ ತಂಡವು ದೇವಾಲಯದ ದ್ವಾರ ಹಾಗೂ ಆವರಣದ ಬಳಿ ಬ್ಯಾನರ್ ಅಳವಡಿಸಿದೆ.