ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದಕ್ಷಿಣಂನಯ ಶೃಂಗೇರಿ ಶಾರದ ಪೀಠದ ವಿಧುಶೇಖರಭಾರತಿ ಮಹಾಸ್ವಾಮೀಜಿಯವರಿಂದ ರಚಿಸಲ್ಪಟ್ಟಿರುವ ‘ವೇದದೀಪಿಕಾ’ ಗ್ರಂಥ ಇತ್ತೀಚೆಗೆ ಶೃಂಗೇರಿಯಲ್ಲಿ ಲೋಕಾರ್ಪಣೆಗೊಂಡಿದೆ.

ಬೆಂಗಳೂರು (ಜ.19): ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದಕ್ಷಿಣಂನಯ ಶೃಂಗೇರಿ ಶಾರದ ಪೀಠದ ವಿಧುಶೇಖರಭಾರತಿ ಮಹಾಸ್ವಾಮೀಜಿಯವರಿಂದ ರಚಿಸಲ್ಪಟ್ಟಿರುವ ‘ವೇದದೀಪಿಕಾ’ ಗ್ರಂಥ ಇತ್ತೀಚೆಗೆ ಶೃಂಗೇರಿಯಲ್ಲಿ ಲೋಕಾರ್ಪಣೆಗೊಂಡಿದೆ.

Add Asianetnews Kannada as a Preferred SourcegooglePreferred

ನಾಲ್ಕು ವೇದಗಳ ವಿಸ್ತೃತ ಪರಿಚಯ ಹಾಗೂ ವೇದಗಳ ನೈಜೋದ್ದೇಶ ನಿರೂಪಣೆ, ಸಂಧ್ಯಾವಂದನೆಯ ಗೂಢಾರ್ಥದ ಪರಿಚಯ ಹಾಗೂ ಶಾಸ್ತ್ರಾಧಾರಸಹಿತವಾಗಿ ಸಂಧ್ಯಾವಂದನೆಯ ವಿಧಿ-ವಿಧಾನಗಳ ವಿಮರ್ಶೆ, ನಮಸ್ಕಾರ ಕ್ರಿಯೆ, ಸಶಾಸ್ತ್ರೀಯವಾಗಿ ತರ್ಪಣದ ಹಿನ್ನೆಲೆ ಹಾಗೂ ಅದರ ವಿಧಿ ವಿಧಾನಗಳ ಸಂಪೂರ್ಣ ವಿಮರ್ಶೆ ಗ್ರಂಥದಲ್ಲಿದೆ.

ಪ್ರಾತಃಸ್ಮರಣೆ, ತುಳಸೀಪೂಜೆ, ನಿತ್ಯದೇವತಾರ್ಚನೆ, ವೇದಭಾಗದಿಂದ ಶ್ರೀರುದ್ರಪ್ರಶ್ನ, ಶ್ರೀಚಮಕಪ್ರಶ್ನ, ಅರುಣಪ್ರಶ್ನ, ಉದಕಶಾಂತಿ ಹಾಗೂ 26 ಸೂಕ್ತಗಳು, ಉಪನಿಷತ್ತುಗಳು, ಶಾಂತಿ ಮಂತ್ರಗಳನ್ನು ಈ ಗ್ರಂಥ ಒಳಗೊಂಡಿದೆ. ಸಹಸ್ರನಾಮಾವಳಿಗಳು ಮತ್ತು ತರ್ಪಣವಿಧಿಗಳು ಮೊದಲಾದ ಇನ್ನೂ ಬಹಳಷ್ಟು ವಿಶೇಷವಾದ ವಿಷಯಗಳನ್ನು ವೇದದೀಪಿಕಾದಲ್ಲಿವೆ.

ಫೆ.16ರಂದು ಸಿದ್ದರಾಮಯ್ಯರಿಂದ ರಾಜ್ಯ ಬಜೆಟ್‌ ಮಂಡನೆ: ಸಚಿವ ಎಚ್‌.ಕೆ.ಪಾಟೀಲ್‌

ಸಾಮಾನ್ಯ ವ್ಯಕ್ತಿಗೆ ಬೇಕಾದ ಸಮಸ್ತ ವಿಷಯಗಳು ಈ ಗ್ರಂಥದಲ್ಲಿ ಅಡಕವಾಗಿವೆ. ಸಾಮಾನ್ಯ ವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ನಮ್ಮ ಸನಾತನ ಸಂಸ್ಕೃತಿ ಹಾಗೂ ಸನಾತನಾರ್ಯ ಮಹರ್ಷಿಗಳ ಸಾಹಿತ್ಯದ ಕಲಿಕೆಯು ಸುಲಭವಾಗಿಸುವುದು ಈ ಗ್ರಂಥದ ಪರಮೋದ್ದೇಶವಾಗಿದೆ ಎಂದು ಶ್ರೀ ಶಂಕರ ವೇದ ಪಾಠಶಾಲಾ ಟ್ರಸ್ಟ್ ತಿಳಿಸಿದೆ.