Astrology Tips: ದೇವಸ್ಥಾನದ ಮೆಟ್ಟಿಲ ಮೇಲೆ ಕುಳಿತು ಈ ಮಂತ್ರ ಪಠಿಸಿ

ದೇವಸ್ಥಾನಕ್ಕೆ ಹೋಗಿ, ದೇವರಿಗೆ ಕೈ ಮುಗಿದು ಬರುವವರ ಸಂಖ್ಯೆ ಹೆಚ್ಚು. ಇನ್ಮುಂದೆ ದೇವಸ್ಥಾನಕ್ಕೆ ಹೋದಾಗ, ದೇವರ ದರ್ಶನ ಮುಗಿಸಿದ ಮೇಲೆ ದೇವಸ್ಥಾನದ ಮೆಟ್ಟಿಲ ಮೇಲೆ ಕುಳಿತು ಒಂದು ಮಂತ್ರ ಜಪಿಸಿ. ಅದ್ಯಾವುದು, ಅದ್ರ ಲಾಭವೇನು ಅನ್ನೋದನ್ನು ನಾವು ಹೇಳ್ತೇವೆ.
 

Reciting Mantras While Sitting On The Steps Of The Temples would bring luck roo

ದೇವಸ್ಥಾನಗಳಿಗೆ ಹೋಗಿ ಅಲ್ಲಿ ಕುಳಿತು ಬರೋದ್ರಿಂದ ಮನಸ್ಸು ಎಷ್ಟೋ ನಿರಾಳವಾಗುತ್ತೆ. ಅಲ್ಲಿರುವ ಪೊಸಿಟಿವ್ ವೈಬ್ರೇಷನ್ ನಮ್ಮಲ್ಲೂ  ಹೊಸ ಚೈತನ್ಯವನ್ನು ತುಂಬುತ್ತೆ. ಪುಣ್ಯಪ್ರಾಪ್ತಿಗಾಗಿ ನಾವು ದೇವಸ್ಥಾನಗಳಿಗೆ ಹೋಗಿ ದೇವರಿಗೆ ಪೂಜೆ, ಪುನಸ್ಕಾರ ಮಾಡಿ ದೇವರ ಮುಂದೆ ಮಂತ್ರಗಳನ್ನು ಹೇಳುತ್ತೇವೆ. ಪೂಜೆ ಮುಗಿದ ನಂತರ ಸ್ವಲ್ಪ ಸಮಯ ಅಲ್ಲಿ ಕುಳಿತು ಬರುವ ಪದ್ಧತಿಯೂ ಇದೆ. ದೇವರ ಎದುರಿನಲ್ಲಿ ಮಂತ್ರವನ್ನು ಹೇಳಿದಂತೆಯೇ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕೂತು ಮಂತ್ರವನ್ನು ಪಠಿಸುವುದರಿಂದಲೂ ಅನೇಕ ಲಾಭಗಳಿವೆ.

ದೇವಾಲಯ (Temple) ಗಳ ಮೆಟ್ಟಿಲಲ್ಲಿ ಕುಳಿತು ಕೆಲವು ಮಂತ್ರಗಳ ಉಚ್ಛಾರಣೆ ಮಾಡೋದ್ರಿಂದ ಅನೇಕ ಕಷ್ಟಗಳು ನಿವಾರಣೆಯಾಗುತ್ತೆ ಎಂದು ಜ್ಯೋತಿಷ್ಯಶಾಸ್ತ್ರ (Astrology) ಹೇಳುತ್ತದೆ. ಹಾಗಾಗಿ ಅನೇಕ ಜ್ಯೋತಿಷಿಗಳು ಮಂದಿರಗಳ ಮೆಟ್ಟಿಲುಗಳ ಮೇಲೆ ಕುಳಿತು ಕಷ್ಟ ನಾಶಕ ಮಂತ್ರಗಳನ್ನು ಪಠಿಸಬೇಕೆಂದು ಹೇಳುತ್ತಾರೆ.

ತಪ್ಪಿಯೂ ಗಣೇಶನಿಗೆ ಈ 5 ವಸ್ತುಗಳನ್ನು ಅರ್ಪಿಸುವ ತಪ್ಪು ಮಾಡ್ಬೇಡಿ!

ದೇವಸ್ಥಾನದ ಮೆಟ್ಟಿಲ ಮೇಲೆ ಏಕೆ ಕುಳಿತುಕೊಳ್ಳಬೇಕು? : ಶಾಸ್ತ್ರಗಳ ಪ್ರಕಾರ, ಮಂದಿರದಲ್ಲಿ ಪೂಜೆ (Worship) ನಡೆದ ನಂತರ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಸ್ವಲ್ಪ ಸಮಯ ಕುಳಿತುಕೊಳ್ಳಬೇಕು. ದೇವಸ್ಥಾನದ ಆವರಣದಲ್ಲಿ ನಾವು ಎಷ್ಟು ಹೊತ್ತು ಕುಳಿತುಕೊಳ್ಳುತ್ತೇವೆಯೋ ಅಷ್ಟು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ದೇವಸ್ಥಾನದಲ್ಲಿ ಪೂಜೆಯಾದ ನಂತರ ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳುವುದರಿಂದ ದೇವರ ಚಿತ್ರಣವು ಕೂಡ ನಮ್ಮ ಕಣ್ಣು ಹಾಗೂ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಆಗ ನಾವು ಅಲ್ಲಿಯೇ ಕುಳಿತು ದೇವರನ್ನು ಮನಸ್ಸಿನಲ್ಲೇ ನೆನೆದುಕೊಂಡು ಧ್ಯಾನ ಮಾಡಬಹುದು. ಅದರಿಂದ ಮನಸ್ಸು ಕೂಡ ಶಾಂತವಾಗುತ್ತೆ ಮತ್ತು ಮನಸ್ಸಿಗೂ ಸಂತೋಷ ಸಿಗುತ್ತದೆ.

ಮಂದಿರಗಳ ಮೆಟ್ಟಿಲಲ್ಲಿ ಕುಳಿತು ಈ ಮಂತ್ರಗಳನ್ನು ಹೇಳಿ : ದೇವಾಲಯಗಳ ಮೆಟ್ಟಿಲುಗಳ ಮೇಲೆ ಕುಳಿತು ಭಗವಂತನ ಧ್ಯಾನ ಮಾಡುವುದರ ಜೊತೆಗೆ ಮಂತ್ರಗಳನ್ನೂ ಹೇಳಬೇಕು. ದೇವಸ್ಥಾನಗಳಲ್ಲಿ ಮಂತ್ರಗಳನ್ನು ಹೇಳುವುದರಿಂದ ವ್ಯಕ್ತಿ ತನ್ನ ಸಂದಿಗ್ಧ ಪರಿಸ್ಥಿತಿಗಳಿಂದ ಜೀವನದ ಕಷ್ಟಗಳಿಂದ ಮುಕ್ತಿ ಹೊಂದುತ್ತಾನೆ. ಮನುಷ್ಯನ ಭಕ್ತಿ ಹಾಗೂ ಶೃದ್ಧೆಯಿಂದ ಆತ ಮಾಡಿದ ಎಷ್ಟೋ ಪಾಪಕರ್ಮಗಳು ನಾಶವಾದ ನಿದರ್ಶನವನ್ನು ನಾವು ಸಾಕಷ್ಟು ಕಂಡಿದ್ದೇವೆ. ಆದ್ದರಿಂದಲೇ ದೇವರ ಸ್ಥಳಗಳಲ್ಲಿ ಭಕ್ತಿಪೂರ್ವಕವಾಗಿ ದೇವರನ್ನು ಸ್ತುತಿಸುವುದರಿಂದ ಅನೇಕ ಕಷ್ಟಗಳು ದೂರವಾಗುತ್ತವೆ. ದೇವಸ್ಥಾನದ ಮೆಟ್ಟಿಲುಗಳಲ್ಲಿ ಯಾವುದೇ ಮಂತ್ರವನ್ನು ಹೇಳಿದರೂ ಒಳ್ಳೆಯದೇ. ಆದರೆ ಕಷ್ಟವನ್ನು ನಾಶ ಮಾಡುವ ಈ ಕೆಳಗಿನ ಮಂತ್ರವು ಎಲ್ಲ ಮಂತ್ರಕ್ಕಿಂತಲೂ ಉತ್ತಮ ಫಲವನ್ನು ನೀಡುತ್ತದೆ. 
“ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ |
ದೇಹಾನ್ತೇ ತವ ಸಾನ್ನಿಧ್ಯಮ್ ದೇಹಿ ಮೇ ಪರಮೇಶ್ವರಮ್||
ಆಯಾಸವಿಲ್ಲದ ಮರಣವನ್ನು ಕರುಣಿಸು, ಪರಾವಲಂಬಿ ಜೀವನ ನೀಡದೇ ನಿರಂತರ ಭಕ್ತಿಯ ಜೀವನವನ್ನು ನೀಡು ಎನ್ನುವುದು ಈ ಶ್ಲೋಕದ ಅರ್ಥವಾಗಿದೆ.

ಸಂಜೆ ಮಲಗೋದು, ತಲೆ ಬಾಚೋದು ಮಾಡಿದ್ರೆ ಮನೆಯಲ್ಲಿ ಬಡತನ ಗ್ಯಾರಂಟಿ

ಈ ಮಂತ್ರವನ್ನು ಹೇಳೋದ್ರಿಂದ ಆಗುವ ಲಾಭ  :
• ದೇವಸ್ಥಾನದ ಮೆಟ್ಟಿಲಲ್ಲಿ ಕುಳಿತು ಈ ಮಂತ್ರವನ್ನು ಹೇಳುವುದರಿಂದ ಜೀವನದ ಕಷ್ಟಗಳಿಗೆ ಮುಕ್ತಿ ಸಿಗುತ್ತದೆ.
• ಸಾಂಸಾರಿಕ ಜೀವನ, ಉದ್ಯೋಗ, ವಿವಾಹ ಮುಂತಾದವುಗಳಲ್ಲಿರುವ ತೊಡಕುಗಳು ನಿವಾರಣೆಯಾಗಿ ಎಲ್ಲ ರೀತಿಯ ಬಾಧೆಗಳು ದೂರವಾಗುತ್ತವೆ.
• ಮನುಷ್ಯ ಅಂದಮೇಲೆ ರೋಗ ರುಜಿನಗಳು ಸರ್ವೇ ಸಾಮಾನ್ಯ. ಸಣ್ಣ ಪುಟ್ಟ ಖಾಯಿಲೆಗಳು, ಶರೀರದ ತೊಂದರೆಗಳು ಹಾಗೂ ಮಾನಸಿಕ ಕಿರಿಕಿರಿಗಳು ಬಾಧಿಸುತ್ತಲೇ ಇರುತ್ತದೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು, ಕುಟುಂಬದ ನೆಮ್ಮದಿ ಹಾಳಾಗಬಹುದು ಅಥವಾ ಆರ್ಥಿಕ ಪರಿಸ್ಥಿತಿ ಕೂಡ ಅವನತಿ ಹೊಂದಬಹುದು. ಇಂತಹ ಹತ್ತು ಹಲವು ತೊಂದರೆಗಳನ್ನು ಶ್ಲೋಕದಿಂದ ದೂರಮಾಡಬಹುದು. ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕುಳಿತು ದೇವರನ್ನು ಧ್ಯಾನಿಸಿ ಮೇಲೆ ತಿಳಿಸಿದ ಶ್ಲೋಕವನ್ನು ಹೇಳುವುದರಿಂದ ಅನೇಕ ಕಷ್ಟಗಳಿಂದ ಪಾರಾಗಬಹುದು.
• ಶ್ಲೋಕ ಪಠಣದಿಂದ ಅಕಾಲಿಕ ಮರಣದಂತಹ ತೊಂದರೆಗಳಿಂದಲೂ ಪಾರಾಗಬಹುದು.

Latest Videos
Follow Us:
Download App:
  • android
  • ios