Ram Navami 2023: 300ಕ್ಕೂ ಹೆಚ್ಚು ಭಾಷೆಗಳಲ್ಲಿದೆ ರಾಮ ಕಥಾ, ಇವುಗಳಲ್ಲಿ ಹೆಚ್ಚು ಜನಪ್ರಿಯ ಯಾವುದು?
ರಾಮಾಯಣವು ಅತ್ಯಂತ ಜನಪ್ರಿಯವಾದ ಹಿಂದೂ ಮಹಾಕಾವ್ಯ. ಇದು 300ಕ್ಕೂ ಹೆಚ್ಚು ಭಾಷೆಗಳಲ್ಲಿ ರಚಿತವಾಗಿದೆ. ರಾಮನ ಇರುವನ್ನು ಸಾಬೀತುಪಡಿಸುವ ಹಲವು ಸಾಕ್ಷಿಗಳಿವೆ. ಯಾವ ಭಾಷೆಯ ರಾಮಾಯಣ ಸಾಹಿತ್ಯ ಹೆಚ್ಚು ಪ್ರಸಿದ್ಧವಾಗಿದೆ ನೋಡೋಣ.
ರಾಮ ನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಶುಕ್ಲ ನವಮಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ಈ ದಿನಾಂಕ ಮಾರ್ಚ್ 30, ಗುರುವಾರದಂದು ಬರುತ್ತದೆ. ಇದು ಭಗವಾನ್ ಶ್ರೀರಾಮ ಜನಿಸಿದ ದಿನ. ಈ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.
ಶ್ರೀರಾಮನ ಜೀವನ ಎಲ್ಲರಿಗೂ ಆದರ್ಶಪ್ರಾಯ. ಅದಕ್ಕಾಗಿಯೇ ಅವನನ್ನು ಮರ್ಯಾದಾ ಪುರುಷೋತ್ತಮ ಎನ್ನುವುದು. ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಗ್ರಂಥಗಳು ಪ್ರಚಲಿತದಲ್ಲಿವೆ. ರಾಮಕಥಾ ಪ್ರಪಂಚದಾದ್ಯಂತ 300ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಶೋಧನೆ ತೋರಿಸಿದೆ. ಅಬ್ಬಬ್ಬಾ, ಕತೆಯೊಂದು ಇಷ್ಟೊಂದು ಭಾಷೆಗಳಲ್ಲಿರುವುದು ಅಪರೂಪವೇ ಸರಿ. ಅವುಗಳಲ್ಲಿ ಪ್ರಮುಖವಾದವುಗಳ ಬಗ್ಗೆ ನೋಡೋಣ.
ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ
ಭಗವಾನ್ ಶ್ರೀರಾಮನ ಜೀವನವನ್ನು ಆಧರಿಸಿ ಅನೇಕ ಧಾರ್ಮಿಕ ಗ್ರಂಥಗಳಿದ್ದರೂ, ಅವುಗಳಲ್ಲಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವು ಅತ್ಯಂತ ಅಧಿಕೃತವಾಗಿದೆ. ಮಹರ್ಷಿ ವಾಲ್ಮೀಕಿ ಬ್ರಹ್ಮದೇವನ ಆಜ್ಞೆಯ ಮೇರೆಗೆ ರಾಮಾಯಣವನ್ನು ರಚಿಸಿದರು. ಇದನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಇದರಲ್ಲಿ ರಾಮಾಯಣ, ತಿಥಿ, ನಕ್ಷತ್ರ ಇತ್ಯಾದಿಗಳನ್ನು ಸವಿಸ್ತಾರವಾಗಿ ವಿವರಿಸಲಾಗಿದೆ.
ತುಳಸಿದಾಸರು ಬರೆದ ಶ್ರೀ ರಾಮಚರಿತ ಮಾನಸ್
ಗೋಸ್ವಾಮಿ ತುಳಸಿದಾಸರು ಬರೆದ ರಾಮಚರಿತ ಮಾನಸ ರಾಮಕಥೆಯು ಪ್ರಸ್ತುತ ಹೆಚ್ಚು ಪ್ರಚಲಿತವಾಗಿದೆ. ಇದನ್ನು ಅವಧಿ ಭಾಷೆಯಲ್ಲಿ ರಚಿಸಲಾಗಿದೆ, ಇದು ಓದಲು ಮತ್ತು ಅರ್ಥ ಮಾಡಿಕೊಳ್ಳಲು ತುಂಬಾ ಸುಲಭವಾಗಿದೆ. ಈ ಕಾರಣದಿಂದಲೇ ಈ ರಾಮಕಥೆ ಪ್ರಸ್ತುತ ಹೆಚ್ಚು ಪ್ರಚಲಿತವಾಗಿದೆ. ಈ ಪುಸ್ತಕದಲ್ಲಿ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಚಿಕೆಯನ್ನು ಬಹಳ ಸುಂದರವಾಗಿ ವಿವರಿಸಲಾಗಿದೆ.
Ram Navami 2023: ಭೇಟಿ ನೀಡಲೇಬೇಕಾದ ರಾಮಾಯಣ ತಾಣಗಳು
ಮಹರ್ಷಿ ಕಂಬನ್ ಬರೆದ ರಾಮಾಯಣ
ಮಹರ್ಷಿ ಕಂಬ ಅಥವಾ ಕಂಬನ್ ಅವರನ್ನು ದಕ್ಷಿಣ ಭಾರತದ ಶ್ರೇಷ್ಠ ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಅವರು ಕಂಬ ರಾಮಾಯಣವನ್ನು ರಚಿಸಿದ್ದಾರೆ, ಇದನ್ನು ರಾಮಾವತಾರಂ ಎಂದೂ ಕರೆಯುತ್ತಾರೆ. ಇದನ್ನು ತಮಿಳು ಸಾಹಿತ್ಯದ ಅತ್ಯುತ್ತಮ ಪುಸ್ತಕ ಎಂದೂ ಕರೆಯುತ್ತಾರೆ. ಈ ಪುಸ್ತಕವು ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದನ್ನು ರಚಿಸಿದ ಮಹರ್ಷಿ ಕಂಬನ್ ಅವರಿಗೆ 'ಕವಿ ಚಕ್ರವರ್ತಿ' ಎಂಬ ಬಿರುದು ನೀಡಲಾಗಿದೆ.
ಆನಂದ ರಾಮಾಯಣದಲ್ಲಿ ಅನೇಕ ವಿರೋಧಾಭಾಸಗಳಿವೆ..
ಈ ರಾಮಾಯಣವು ಮೂಲ ರಾಮಾಯಣಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಅನೇಕ ಸಂದರ್ಭಗಳಲ್ಲಿ ವಿರೋಧಾಭಾಸಗಳಿವೆ, ಅದಕ್ಕಾಗಿಯೇ ಈ ರಾಮಾಯಣವು ಅಷ್ಟೊಂದು ಜನಪ್ರಿಯವಾಗಿಲ್ಲ. ಈ ರಾಮಾಯಣದಲ್ಲಿ 9 ಪ್ರಸಂಗಗಳಿವೆ. ಇದನ್ನು ರಚಿಸಿದವರ ಬಗ್ಗೆ ಅನೇಕ ಗೊಂದಲಗಳಿವೆ.
ಸರ್ವರಿಗೂ ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು
300ಕ್ಕೂ ಹೆಚ್ಚು ರಾಮ ಕಥಾ ಪ್ರಚಲಿತವಾಗಿದೆ..
ಮೇಲೆ ತಿಳಿಸಿದ ಪ್ರಮುಖ ರಾಮ ಕಥೆಗಳ ಹೊರತಾಗಿ, ರಾಮ ಕಥಾವನ್ನು ಪ್ರಪಂಚದಾದ್ಯಂತದ ಅನೇಕ ಭಾಷೆಗಳಲ್ಲಿ ಬರೆಯಲಾಗಿದೆ, ಅವುಗಳ ಸಂಖ್ಯೆ 300ಕ್ಕಿಂತ ಹೆಚ್ಚು. ಇವು ಉರ್ದು, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಬರೆದ ಪಠ್ಯಗಳನ್ನು ಒಳಗೊಂಡಿವೆ. ಅಸ್ಸಾಮಿ ರಾಮಾಯಣ, ವಿಲಂಕಾ ರಾಮಾಯಣ, ಪಂಪ ರಾಮಾಯಣ, ಕಾಶ್ಮೀರಿ ರಾಮಾಯಣ, ರಾಮಾಯಣ ಪಾಂಚಾಲಿ ಮುಂತಾದ ಅನೇಕ ಗ್ರಂಥಗಳನ್ನು ಭಗವಾನ್ ರಾಮನ ಜೀವನದ ಮೇಲೆ ಬರೆಯಲಾಗಿದೆ.