Astrology Tips: ಹೊಸ ವರ್ಷ ರಾಹುವಿನಿಂದ ಲಾಭ ಪಡೆಯಲಿದ್ದಾರೆ ಈ ರಾಶಿಯವರು
ಗ್ರಹ ಹಾಗೂ ಜಾತಕದ ಮಧ್ಯೆ ಬಲವಾದ ನಂಟಿದೆ. ಗ್ರಹಗಳ ಬದಲಾವಣೆ ರಾಶಿ ಮೇಲೆ ಆಗುತ್ತದೆ. ಈಗಾಗಲೇ ಮೇಷ ರಾಶಿಯಲ್ಲಿರುವ ರಾಹು, ಕೆಲವರಿಗೆ ಕಷ್ಟ ನೀಡಿದ್ರೆ ಮತ್ತೆ ಕೆಲ ರಾಶಿಯವರ ಅದೃಷ್ಟ ಬದಲಿಸ್ತಿದ್ದಾನೆ.
ರಾಹು ಮತ್ತು ಕೇತು ಗ್ರಹವನ್ನು ದುಷ್ಟ ಗ್ರಹವೆಂದೇ ಪರಿಗಣಿಸಲಾಗುತ್ತದೆ. ರಾಹು ಹಾಗೂ ಕೇತುವಿನ ಕೆಟ್ಟ ದೃಷ್ಟಿ ನಮ್ಮ ಮೇಲೆ ಬಿದ್ರೆ ಕಥೆ ಮುಗಿದಂತೆ. ಅನೇಕ ಕಷ್ಟಗಳು ಒಂದಾದ್ಮೇಲೆ ಒಂದರಂತೆ ಎದುರಾಗುತ್ತವೆ. ಅಪಾಯಗಳು ಸಂಭವಿಸುತ್ತವೆ. ಕೆಲವೊಮ್ಮೆ ರಾಹು ಮತ್ತು ಕೇತು ಒಳ್ಳೆಯದನ್ನು ಕೂಡ ಮಾಡ್ತಾರೆ. ಈ ರಾಹು ಮತ್ತು ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತೆರಳಲು ಸುಮಾರು 18 ತಿಂಗಳು ತೆಗೆದುಕೊಳ್ಳುತ್ತವೆ. ಈ ವರ್ಷ ರಾಹು, ಮೇಷ ರಾಶಿಯಲ್ಲಿದ್ದ. ಹೊಸ ವರ್ಷ, 2023 ರ ಅಕ್ಟೋಬರ್ ವರೆಗೆ ರಾಹು ಮೇಷ ರಾಶಿಯಲ್ಲಿಯೇ ಇರುತ್ತಾನೆ. ಅಕ್ಟೋಬರ್ ವರೆಗೆ ರಾಹು ಮೇಷ ರಾಶಿಯಲ್ಲಿ ಇರೋದ್ರಿಂದ ಕೆಲ ರಾಶಿಗಳಿಗೆ ಲಾಭವಾಗಲಿದೆ. ಮುಂದಿನ ವರ್ಷ ಅಕ್ಟೋಬರ್ ವರೆಗೆ ಕೆಲ ರಾಶಿಗಳ ಅದೃಷ್ಟ ಬದಲಾಗಲಿದೆ. ನಾವಿಂದು ರಾಹು, ಮೇಷ ರಾಶಿಯಲ್ಲಿ ಇರುವುದ್ರಿಂದ ಯಾವೆಲ್ಲ ರಾಶಿಗೆ ಲಾಭ ಎಂಬುದನ್ನು ನಿಮಗೆ ಹೇಳ್ತೆವೆ.
ಮಿಥುನ (Gemini ) ರಾಶಿಗೆ ಒಳ್ಳೆಯ ಫಲ : ಮಿಥುನ ರಾಶಿ ಜನರ ಜಾತಕದ 11 ನೇ ಮನೆಯಲ್ಲಿ ರಾಹು (Rahu) ಸಾಗುತ್ತಿದ್ದಾನೆ. ಆತನ ಸಂಚಾರದಿಂದ ಈ ರಾಶಿಯವರಿಗೆ ಶುಭ ಫಲ ಸಿಗಲಿದೆ. 2023 ರ ಅಕ್ಟೋಬರ್ (October) ವರೆಗೆ ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವೆಚ್ಚಗಳಿದ್ದರೂ ಗಳಿಕೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಆರ್ಥಿಕ (Financial) ಸ್ಥಿತಿ ಸಮತೋಲನದಲ್ಲಿರುತ್ತದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಉದ್ಯೋಗ (Employment) ದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸಾಗುವುದು. ಸಮಾಜ ಸೇವೆಗೆ ಹಣ ಖರ್ಚು ಮಾಡುವ ಸಾಧ್ಯತೆಯಿದೆ. ಹತ್ತಿರದ ಪ್ರಯಾಣಕ್ಕೆ ಒಳ್ಳೆಯ ಅವಕಾಶವಿರುತ್ತದೆ.
ನಾಶವಾಗಲಿದ್ದಾರೆ ವೃಶ್ಚಿಕ ರಾಶಿಯವರ ಶತ್ರುಗಳು : ರಾಹು ವೃಶ್ಚಿಕ ರಾಶಿಯ ಜಾತಕದ ಆರನೇ ಮನೆಯಲ್ಲಿ ಸಾಗುತ್ತಿದ್ದಾರೆ. ರಾಹುವಿನ ಈ ಸಂಚಾರದಿಂದ ಶತ್ರುಗಳಿಗೆ ಸೋಲಾಗಲಿದೆ. ಮನೋಸ್ಥೈರ್ಯ ಹೆಚ್ಚಾಗಲಿದೆ. ಆತ್ಮಸ್ಥೈರ್ಯವೂ ಹೆಚ್ಚುತ್ತದೆ. ಆರ್ಥಿಕವಾಗಿ ನೀವು ಬಲ ಪಡೆಯುತ್ತೀರಿ. ವೃತ್ತಿಯಲ್ಲಿ ಹೊಸ ಅವಕಾಶ ಸಿಗುವ ಸಾಧ್ಯತೆಯಿದೆ. ಸ್ನೇಹಿತರು ಮತ್ತು ಸಂಬಂಧಿಕ ಮಧ್ಯೆ ಸಂಬಂಧ ಉತ್ತಮವಾಗಲಿದೆ. ನಿಮಗೂ ಕೂಡ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ.
Vastu Tips: ಶೀಘ್ರ ಮದುವೆ, ಗ್ರಹದೋಷ ನಿವಾರಣೆ ಮಾಡುತ್ತೆ ಅಶೋಕ ಗಿಡ
ಸಮಸ್ಯೆಯಿದ್ರೂ ನೆಮ್ಮದಿ ಕಾಣುವ ಕರ್ಕ ರಾಶಿ : ಕರ್ಕ ರಾಶಿಯ 10ನೇ ಮನೆಯಲ್ಲಿ ರಾಹು ಸಂಚಾರ ಮಾಡುತ್ತಿದ್ದಾನೆ. ಈ ಸಮಯದಲ್ಲಿ ಕೌಟುಂಬಿಕ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿರುತ್ತದೆ. ಇದ್ರಿಂದಾಗಿ ಮನೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಬಹುದು. ಖರ್ಚುಗಳು ಹೆಚ್ಚಾಗುವ ಸಂಭವವಿದೆ. ಮನಸ್ಸಿನಲ್ಲಿ ಅನೇಕ ರೀತಿಯ ಗೊಂದಲ ಕಾಡುವ ಸಾಧ್ಯತೆಯಿದೆ. ಹಣ ಗಳಿಕೆಗೆ ಅವಕಾಶ ಸಿಗದೆ ಇರಬಹುದು ಆದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮಗೆ ಹಣದ ಕೊರತೆ ಎದುರಾಗುವುದಿಲ್ಲ. ಸ್ನೇಹಿತರು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಹಾಗಾಗಿ 2023ರ ಅಕ್ಟೋಬರ್ ವರೆಗೆ ಸಮಸ್ಯೆಯಿದ್ರೂ ಆ ಸಮಸ್ಯೆ ಹೆಚ್ಚು ಹೊರೆ ಎನ್ನಿಸುವುದಿಲ್ಲ.
GARUDA PURANA: ಜೀವನದಲ್ಲಿ ಯಶಸ್ಸು ಬೇಕಂದ್ರೆ ಈ ಕೆಲಸ ಪೂರ್ಣಗೊಳಿಸಿ
ವೃತ್ತಿಯಲ್ಲಿ ಕುಂಭ ರಾಶಿಯವರಿಗೆ ಸಿಗಲಿದೆ ಅದ್ಭುತ ಅವಕಾಶ: ಕುಂಭ ರಾಶಿಯ ಜಾತಕದ ಮೂರನೇ ಮನೆಯಲ್ಲಿ ರಾಹು ಸಂಚಾರ ಮಾಡುತ್ತಿದ್ದಾನೆ. ಇದು ಕುಂಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವ್ಯವಹಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನವಾಗಲಿದೆ. ವೃತ್ತಿಯಲ್ಲಿ ಅನೇಕ ಅದ್ಭುತ ಅವಕಾಶಗಳನ್ನು ನೀವು ಕಾಣಬಹುದು. ವಿದೇಶಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಕುಂಭ ರಾಶಿಯವರಿಗೆ ಲಾಭವಾಗಲಿದೆ. ಕುಟುಂಬದಲ್ಲಿ ಸಹೋದರರ ಬೆಂಬಲ ನಿಮಗೆ ಸಿಗಲಿದೆ. ಸ್ನೇಹಿತರು ನಿಮಗೆ ನೆರವಾಗಲಿದ್ದಾರೆ. ಅನವಶ್ಯಕ ಜಗಳಗಳನ್ನು ತಪ್ಪಿಸಿ ಶಾಂತವಾಗಿರುವುದು ಒಳ್ಳೆಯದು.