ರಾಯಚೂರು: ರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ


ಗುರುವೈಭವೋತ್ಸವದ 2ನೇ ದಿನ ರಾಯರ ಪಟ್ಟಾಭಿಷೇಕ ಹಿನ್ನೆಲೆ ಶ್ರೀಗುರುಸಾರ್ವಭೌಮರ ಬೃಂದಾವನಕ್ಕೆ ವಿಶೇಷ ಪೂಜೆ, ಶ್ರೀಮಠದ ಪ್ರಾಕಾರದಲ್ಲಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಂಡಿತರು ಹಾಗೂ ವಿದ್ವಾಂಸರಿಂದ ಪ್ರವಚನ, ಶ್ರೀಗಳಿಂದ ಮೂಲ ರಾಮದೇವರಿಗೆ ಸಂಸ್ಥಾನ ಪೂಜಾ ಕೈಂಕಾರ್ಯಗಳು ನಡೆದವು. ಬಳಿಕ ಮಠದ ಪ್ರಾಂಗಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜೆ, ಪಾದುಕೆಗಳಿಗೆ ಪೂಜೆ ಕೈಂಕಾರ್ಯಗಳು ಜರುಗಿದವು. 

Raghavendra Swami's 403rd Coronation Mahotsava Held  in Mantralayam grg

ರಾಯಚೂರು(ಮಾ.13):  ಕಲಿಯುಗದ ಕಲ್ಪತರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು 429ನೇ ವರ್ಧಂತಿ ಉತ್ಸವಗಳ ಶ್ರೀಗುರುವೈಭವೋತ್ಸವ ಸಂಭ್ರಮ-ಸಡಗರದಿಂದ ನಡೆಯುತ್ತಿದ್ದು, ಸೋಮವಾರ ಶ್ರೀರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವವು ಅದ್ಧೂರಿಯಾಗಿ ಜರುಗಿತು.

ಗುರುವೈಭವೋತ್ಸವದ 2ನೇ ದಿನ ರಾಯರ ಪಟ್ಟಾಭಿಷೇಕ ಹಿನ್ನೆಲೆ ಶ್ರೀಗುರುಸಾರ್ವಭೌಮರ ಬೃಂದಾವನಕ್ಕೆ ವಿಶೇಷ ಪೂಜೆ, ಶ್ರೀಮಠದ ಪ್ರಾಕಾರದಲ್ಲಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಂಡಿತರು ಹಾಗೂ ವಿದ್ವಾಂಸರಿಂದ ಪ್ರವಚನ, ಶ್ರೀಗಳಿಂದ ಮೂಲ ರಾಮದೇವರಿಗೆ ಸಂಸ್ಥಾನ ಪೂಜಾ ಕೈಂಕಾರ್ಯಗಳು ನಡೆದವು. ಬಳಿಕ ಮಠದ ಪ್ರಾಂಗಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜೆ, ಪಾದುಕೆಗಳಿಗೆ ಪೂಜೆ ಕೈಂಕಾರ್ಯಗಳು ಜರುಗಿದವು.

ಮಂತ್ರಾಲಯದ ರಾಯರ ಮಠದ ಹುಂಡಿಯಲ್ಲಿ ದಾಖಲೆ ದೇಣಿಗೆ ಸಂಗ್ರಹ

ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳನ್ನು ಸುವರ್ಣ ಸಿಂಹಾಸನದಲ್ಲಿ ಇರಿಸಿ ಮಂತ್ರ-ಘೋಷಗಳ ನಡುವೆ ಪುಷ್ಪಾರ್ಚನೆ, ಕನಕಾಭಿಷೇಕ ಮತ್ತು ರತ್ನಾಭಿಷೇಕ (ಮುತ್ತಿನ ಅಭಿಷೇಕ)ವನ್ನು ನೇರವೇರಿಸಿ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಸೇವೆ ಮಾಡಿದರು. ನಂತರ ಶ್ರೀಮಠದ ಪ್ರಾಕಾರದಲ್ಲಿ ಚಿನ್ನದ ರಥದಲ್ಲಿ ರಾಯರ ಸ್ವರ್ಣ ಪಾದುಕೆಗಳನ್ನಿಟ್ಟು ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಬಿಡುಗಡೆಗೊಳಿಸಿ ಶ್ರೀಮಠದ ಎಲ್ಲ ಶಾಖಾ ಮಠದಲ್ಲಿ ಉಚಿತವಾಗಿ ಪಂಚಾಂಗಗಳನ್ನು ವಿತರಿಸುವುದಾಗಿ ತಿಳಿಸಿದರು.

ನಂತರ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮಿಗಳು, ಜನರ ಕಷ್ಟ ಕಾರ್ಪಣ್ಯ ಪರಿಹರಿಸಲು ಶ್ರೀ ರಾಘವೇಂದ್ರ ಸ್ವಾಮಿಗಳು ಜನ್ಮಿಸಿದ್ದು, ಕಳೆದ ನಾಲ್ಕು ಶತಮಾನಗಳಿಂದೆ ಮಂತ್ರಾಲಯದಲ್ಲಿ ಪಟ್ಟಾಭಿಕ್ಷೀತರಾಗಿ ರಾಯರು ಎಲ್ಲ ವಿದ್ಯಾಗಳಲ್ಲಿ ಪಾರಂಗತರಾಗಿ ಸಮಾಜದಲ್ಲಿ ಭಕ್ತಿ, ಧಾರ್ಮಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಅವತರಿಸಿದ್ದಾರೆ ಎಂದು ನುಡಿದರು. ನಂತರ ಹೈದರಾಬಾದ್ ಮೂಲದ ತಿರುಮಲ ರೆಡ್ಡಿ ಕುಟುಂಬಕ್ಕೆ ಶ್ರೀಮಠದಿಂದ ನವರತ್ನ ಖಚಿತ ಕವಚ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಯುವಜನ ಮತ್ತ ಕ್ರೀಡಾ ಇಲಾಖೆ ಸಚಿವ ಬಿ,ನಾಗೇಂದ್ರ, ಪಂಡಿತ ಕೇಸರಿ ರಾಜಾ ಎಸ್‌.ಗಿರಿಯಾಚಾರ್ಯರು,ನಿವೃತ್ತ ಪ್ರಾಚಾರ್ಯ ಡಾ.ಎನ್.ವಾದಿರಾಜಾಚಾರ್ಯ, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್‌ರಾವ್ ಸೇರಿ ಶ್ರೀಮಠದ ವಿದ್ವಾಂಸರು,ಪಂಡಿತ, ಅಧಿಕಾರಿ, ಸಿಬ್ಬಂದಿ ಸೇರಿ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.

ನವವೃಂದಾವನ ವಿವಾದ ಇತ್ಯರ್ಥಕ್ಕೆ ಸಿದ್ಧ- ಮಂತ್ರಾಲಯ ಶ್ರೀಗಳು

ಗುರುವೈಭವೋತ್ಸವದ 2ನೇ ದಿನವಾದ ಸೋಮವಾರ ಸಂಜೆ ಶ್ರೀಮಠದ ಮುಂಭಾಗದಲ್ಲಿರುವ ಶ್ರೀಯೋಗೀಂದ್ರ ಮಂಟಪದಲ್ಲಿ ನಡೆದ ವೇದಿಕೆ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಎಚ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಕರ್ನಾಟಕ ಸರ್ಕಾರದ ಉಪ ಕಾರ್ಯದರ್ಶಿ ನಾಗರಾಜ ಎಸ್. ಅಂಕಸದೊಡ್ಡಿ, ಕರ್ನೂಲ್ನ ಸೋಮಿಶೆಟ್ಟಿ ವೆಂಕಟೇಶ್ವರಲು, ಉಡುಪಿ ಛಾಯಾಗ್ರಾಹಕ ಆಸ್ಟ್ರೋ ಮೋಹನ, ಆರ್.ಎನ್ ರವಿಕುಮಾರ, ಬೆಂಗಳೂರಿನ ವಕೀಲ ಫಣಿರಾಜ ಕಶ್ಯಪ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Latest Videos
Follow Us:
Download App:
  • android
  • ios