ಗಣಪತಿ ಭಕ್ತ PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!

  • ಗಣಪನಿಗೆ ಮುಸ್ಲಿಂ ಪಿಎಸ್ಐ ಅಪ್ಪಟ ಭಕ್ತ..!!
  •  ಪ್ರತಿ ವರ್ಷ ಠಾಣೆಯಲ್ಲಿ ವಿಘ್ನೇಶ್ವರನ ಉತ್ಸವ ಮಾಡುವ ಸಬ್ ಇನ್ಸ್ಪೆಕ್ಟರ್..!
  •  PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!
PSI Arif Mushapuri loves Hanuman he true devotee of Ganapati rav vijayapura

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಸೆಪ್ಟೆಂಬರ್ 01) : ಗೌರಿಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮ, ಸಡಗರ.. ಅದ್ರಲ್ಲು ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳಲ್ಲು ಗಣೇಶನನ್ನ ಕೂರಿಸಿ ಸಂಭ್ರಮಿಸೋದು ವಾಡಿಕೆ. ಅದ್ರಲ್ಲು ವಿಜಯಪುರ ನಗರದ ಗಾಂಧಿಚೌಕ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆಯ ಸಡಗರ ಕೊಂಚ ವಿಶೇಷವಾಗಿತ್ತು. ಅರೇ ಅಂಥದ್ದೇನು ವಿಶೇಷ ಎಂದು ನೀವು ಕೇಳಬಹುದು. ವಿಶೇಷ ಇದೆ ಇಲ್ಲಿ ಗಣೇಶನನ್ನ ಕೂರಿಸೋದು ಮುಸ್ಲಿಂ ಧರ್ಮಕ್ಕೆ ಸೇರಿದ ಸಬ್ ಇನ್ಸ್ಪೆಕ್ಟರ್..\

ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!

ಮುಸ್ಲಿಂ PSIನಿಂದ ಗಣೇಶ ಪ್ರತಿಷ್ಠಾಪನೆ: ವಿಜಯಪುರ ಗಾಂಧಿಚೌಕ ಪೊಲೀಸ್ ಠಾಣೆ(Gandhi Chowk Police Station)ಯ ಆರೀಫ್ ಮುಶಾಪುರಿ(Arif Mushapuri) ಉತ್ಸಾಹದಿಂದಲೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.. ಎಲ್ಲ ಸಿಬ್ಬಂದಿ ಜೊತೆಗೆ ತೆರಳಿ ಗಣೇಶ ಮೂರ್ತಿಯನ್ನ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ತಂದು ಸ್ಥಾಪಿಸಿದ್ದಾರೆ. ಹಿಂದೂಗಳಂತೆ ಹಣೆಗೆ ತಿಲಕ ಇಟ್ಟು, ಟೋಪಿ ಧರಿಸಿ ಗಣೇಶನ ಮೇಲಿನ ಭಕ್ತಿ ಮೆರೆದಿದ್ದಾರೆ.. ಇತರರಲ್ಲು ಹಿಂದೂ ಮುಸ್ಲಿಂ ಭಾವೈಕ್ಯತೆ ಮೂಡಿಸಿದ್ದಾರೆ.

ಕಳೆದ 6 ವರ್ಷಗಳಿಂದ ಗಣೇಶ ಮೂರ್ತಿ ಸ್ಥಾಪನೆ: ಸಧ್ಯ ಗಾಂಧಿಚೌಕ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವ ಆರೀಫ್ ಮುಶಾಪುರಿ ಇದೆ ಮೊದಲ ಬಾರಿ ಏನು ಗಣೇಶನ ಮೂರ್ತಿ ಪ್ರತಿಷ್ಟಾಪಿಸಿಲ್ಲ. ಬದಲಿಗೆ ಕಳೆದ 6 ವರ್ಷಗಳಿಂದಲು ಗಣೇಶ ಚತುರ್ಥಿಯಂದು ಗಣೇಶನನ್ನ ಕೂರಿಸುತ್ತ ಬಂದಿದ್ದಾರೆ. 2010ರಲ್ಲಿ ಪಿಎಸ್ಐ ಆದ ಆರೀಫ್ ಮುಶಾಪೂರಿ ಕಳೆದ 6 ವರ್ಷಗಳ ಹಿಂದೆ ಬಾಗಲಕೋಟೆ-ವಿಜಯಪುರ ಜಿಲ್ಲೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ಗಾಂಧಿಚೌಕ, ಟ್ರಾಫಿಕ್(Traffic) ನಲ್ಲಿ ಕೆಲಸ ಮಾಡಿದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿ(Ganesh Chaturthi)ಯಂದು ತಾವಿರುವ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪಿಸುತ್ತಾರೆ..  ಹಣೆ ನಾಮ ಹಾಕಿ, ಟೋಫಿ ಹಾಕಿ ಯಾವುದೇ ಭೇದ ಭಾವ ಇಲ್ಲಂದೆ ಗಣೇಶ ಚತುರ್ಥಿ ಆಚರಿಸುತ್ತ ಬಂದಿದ್ದಾರೆ.. ಈ ಮೂಲಕ ಹಿಂದೂ ಮುಸ್ಲಿಂ ಭಾತೃತ್ವಕ್ಕೆ ಸಾಕ್ಷಿಯಾಗಿದ್ದಾರೆ..

ಅಪ್ಪಟ ಗಣೇಶನ ಭಕ್ತ, ಆಂಜನೇಯ ಅಂದ್ರೆ ಅಚ್ಚುಮೆಚ್ಚು: ಪಿಎಸ್ಐ ಆರೀಫ್ ಮುಶಾಪುರಿ ಮುಸ್ಲಿಂ ಧರ್ಮಿಯರಾದ್ರು ಗಣೇಶನ ಅಪ್ಪಟ ಭಕ್ತರು. ಹೀಗಾಗಿಯೇ ಪ್ರತಿವರ್ಷ ಗಣೇಶ ಚತುರ್ಥಿಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ. ಮನೆಯಲ್ಲು ಹಿಂದೂ ಸಂಪ್ರದಾಯದಂತೆ ಚತುರ್ಥಿ ಆಚರಿಸೋದು ವಿಶೇಷ.. ಇನ್ನು ಆಂಜನೇಯನ ದೇವರು ಅಂದ್ರೆ ಆರೀಫ್ ಮುಶಾಪುರಿ ಅವರಿಗೆ ಅಚ್ಚುಮೆಚ್ಚಂತೆ.. ಆಂಜನೇಯ ಸ್ವಾಮಿಯ ಅಪ್ಪಟ ಭಕ್ತರಂತೆ. ಮನೆಯಲ್ಲು ಆಂಜನೇಯನ ಆರಾಧನೆ ಮಾಡ್ತಾರಂತೆ.. 

ಮಕ್ಕಳಿಗು ಹಿಂದೂ ಹಬ್ಬಗಳ ಆಚರಣೆಯ ಪಾಠ: ಪಿಎಸ್ಐ ಆರೀಫ್ ಮುಶಾಪುರಿ ಅವರಿಗೆ ಅಮನ್ (7), ಮನ್ನತ್ (3) ವರ್ಷದ  ಇಬ್ಬರು ಮಕ್ಕಳಿದ್ದಾರೆ. ಪತ್ನಿ ಹಿಂದೂ ಆಗಿರುವ ಕಾರಣ ಮನೆಯಲ್ಲಿ ಹಿಂದೂ ಸಂಪ್ರದಾಯವನ್ನ ಮಕ್ಕಳಿಗೆ ಭೋಧಿಸುತ್ತಾರೆ.. ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿ ಹಬ್ಬಗಳ ಜೊತೆಗೆ ರಂಜಾನ್, ಈದ್ ಮಿಲಾದ್ ಹಬ್ಬಗಳನ್ನು ಆಚರಿಸುತ್ತಾರೆ. ಮನೆಯಲ್ಲೆ ಹಿಂದೂ ಮುಸ್ಲಿಂ ಭಾವೈಕ್ಯತೆ ಇದೆ..

ಗಣೇಶ ವಿಸರ್ಜನೆ ವರೆಗೂ ನಿತ್ಯ ಪೂಜೆ ಪುನಸ್ಕಾರ: ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ಗಣೇಶ ವಿಸರ್ಜನೆ ವರೆಗು ಆರೀಫ್ ಮುಶಾಪುರಿಯವ್ರದ್ದೆ ನೇತೃತ್ವ. ನಿತ್ಯ ಪೂಜೆ ಪುನಸ್ಕಾರಕ್ಕು ಮುಶಾಪುರಿ ಹಾಜರಿರ್ತಾರೆ.. ಗಣೇಶ ವಿಸರ್ಜನೆ ವೇಳೆಯು ಕುಣಿದು ಕುಪ್ಪಳಿಸಿ ಇತರೆ ಗಣೇಶನ ಭಕ್ತರಲ್ಲಿ ಹುರುಪು ತುಂಬೋದು ಇವರ ಇನ್ನೊಂದು ವಿಶೇಷ..

ಮುಸ್ಲಿಂ ವ್ಯಕ್ತಿಯಿಂದ ಗಣಪತಿ ದೇಗುಲ ನಿರ್ಮಾಣ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೋಲಾರ..

ಗಣೇಶ ಉತ್ಸವದ ಬಂದೋಬಸ್ತನಲ್ಲೂ ಮುಶಾಪುರಿ ಯಶಸ್ವಿ: ಗಣೇಶ ಉತ್ಸವ(Ganesh Utsav), ರಾಮ ನವವಿ(Ram navami), ಹನುಮ ಜಯಂತಿ(Hanuma Jayanti) ಬಂದರೇ ಪೊಲೀಸ್ ಇಲಾಖೆಗೆ ಇಲ್ಲದೆ ತಲೆನೋವು ಬಂದು ಬಿಡುತ್ತೆ. ಶಾಂತಿಸಭೆ ನಡೆಸೋದು ಕಾಮನ್, ಈ ನಿಟ್ಟಿನಲ್ಲಿ ನೋಡೋದಾದ್ರೆ ಆರೀಫ್ ಮುಶಾಪುರಿ ಕೆಲಸ ಮಾಡೋ ಠಾಣೆಗಳಲ್ಲಿ ಭಾವೈಕ್ಯತೆ ಮೂಡಿಸುವ ಕಾಯಕಕ್ಕೆ ಆದ್ಯತೆ ನೀಡಿ, ಹಿಂದೂ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ತಾರಂತೆ. ಹೀಗಾಗಿ ಕೋಮುಸೌಹಾರ್ದತೆಗೆ ಕೊರತೆ ಇರಲ್ವಂತೆ.

Latest Videos
Follow Us:
Download App:
  • android
  • ios