ಈಶ ಮಹಾಶಿವರಾತ್ರಿಯನ್ನು 16 ಭಾಷೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮರಾಠಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಎಲ್ಲಾ ಪ್ರಮುಖ ಟಿವಿ ನೆಟ್‌ವರ್ಕ್‌ಗಳಲ್ಲಿ ನೇರ ಪ್ರಸಾರ. 

ಕೊಯಮತ್ತೂರು(ಫೆ.17): ತಮಿಳುನಾಡಿನ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಫೆಬ್ರವರಿ 18 ರಂದು ನಡೆಯಲಿರುವ ಮಹಾಶಿವರಾತ್ರಿ ಆಚರಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಆಗಮಿಸಲಿದ್ದಾರೆ. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಬಳಿಕ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಆಗಮಿಸಲಿದ್ದಾರೆ. ಈಶದ ಮಹಾ ಆಚರಣೆಯಲ್ಲಿ ರಾಷ್ಟ್ರಪತಿಗಳು ಸುಗಮವಾಗಿ ಭಾಗವಹಿಸಲು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

16 ಭಾಷೆಗಳಲ್ಲಿ ನೇರಪ್ರಸಾರ 

ರಾತ್ರಿಯಿಡೀ ನಡೆಯಲಿರುವ ಈ ಉತ್ಸವವು ಫೆ. 18 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 6 ವರೆಗೆ ಸದ್ಗುರುಗಳ ಸಮ್ಮುಖದಲ್ಲಿ ಮುಂದುವರಿಯುತ್ತದೆ. ಈಶ ಮಹಾಶಿವರಾತ್ರಿಯನ್ನು 16 ಭಾಷೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮರಾಠಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಎಲ್ಲಾ ಪ್ರಮುಖ ಟಿವಿ ನೆಟ್‌ವರ್ಕ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಫೆ.18ಕ್ಕೆ ನಮನ ಅಕಾಡೆಮಿಯಿಂದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ

ಇತ್ತೀಚೆಗೆ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ 112 ಅಡಿಗಳ ಆದಿಯೋಗಿ, ಯೋಗೇಶ್ವರ ಲಿಂಗ ಮತ್ತು ನಾಗ ಕ್ಷೇತ್ರವನ್ನು ಹೊಂದಿರುವ ಸದ್ಗುರು ಸನ್ನಿಧಿಯಲ್ಲಿ ರಾತ್ರಿಯಿಡೀ ನಡೆಯುವ ಮಹಾಆಚರಣೆಯಲ್ಲಿ ಸಾವಿರಾರು ಭಕ್ತರು ವೈಯಕ್ತಿಕವಾಗಿ ಭಾಗವಹಿಸುವ ನಿರೀಕ್ಷೆಯಿದೆ.

ಮಹಾಶಿವರಾತ್ರಿಯ ಮಹತ್ವವನ್ನು ವಿವರಿಸಿದ ಸದ್ಗುರು, ಮಹಾಶಿವರಾತ್ರಿಯು ಯಾವುದೇ ಮತ ಅಥವಾ ನಂಬಿಕೆಗೆ ಒಳಪಟ್ಟಿದ್ದಲ್ಲ, ಜನಾಂಗ ಅಥವಾ ರಾಷ್ಟ್ರಕ್ಕೆ ಸೇರಿದ್ದಲ್ಲ. ಇದು ಗ್ರಹಗಳ ಸ್ಥಾನಗಳು ಮಾನವ ಜೀವವ್ಯವಸ್ಥೆಯಲ್ಲಿ ನೈಸರ್ಗಿಕವಾಗಿ ಶಕ್ತಿಯ ಉತ್ಕರ್ಷವನ್ನು ಉಂಟುಮಾಡುವ ರಾತ್ರಿ. ಇದು ಸಮಸ್ತ ಮಾನವಕುಲದ ಮೇಲೆ ಪ್ರಭಾವವನ್ನು ಹೊಂದಿರುವ ಬ್ರಹ್ಮಾಂಡೀಯ ವಿದ್ಯಮಾನ. ಇದನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸಿ ಅಂತ ತಿಳಿಸಿದ್ದಾರೆ. 
ಕೊಯಮತ್ತೂರಿನಲ್ಲಿ ಈಶ ಮಹಾಶಿವರಾತ್ರಿಯು ಧ್ಯಾನಲಿಂಗದಲ್ಲಿ ನಡೆಯುವ ಪಂಚ ಭೂತ ಆರಾಧನೆಯೊಂದಿಗೆ ಆರಂಭಗೊಳ್ಳುತ್ತದೆ. ನಂತರ ಲಿಂಗ ಭೈರವಿ ಮಹಾ ಯಾತ್ರೆಯನ್ನು ಕೈಗೊಳ್ಳಲಾಗುವುದು. ನಂತರ ಸದ್ಗುರು ಸತ್ಸಂಗ, ಮಧ್ಯರಾತ್ರಿಯ ಧ್ಯಾನಗಳು ಮತ್ತು ಅದ್ಭುತವಾದ ಆದಿಯೋಗಿ ದಿವ್ಯ ದರ್ಶನ(ಧ್ವನಿ ಮತ್ತು ಬೆಳಕಿನ ಪ್ರದರ್ಶನ) ಇರಲಿವೆ.

2023 ರ ಈಶ ಮಹಾಶಿವರಾತ್ರಿಗೆ ಸಿದ್ಧರಾಗಿ..! ಫೆಬ್ರವರಿ 18 ರಂದು ನಡೆಯಲಿರುವ ಪ್ರಮುಖ ಉತ್ಸವಗಳು ಹೀಗಿದೆ..

ಹೆಸರಾಂತ ಕಲಾವಿದರಿಂದ ಕಾರ್ಯಕ್ರಮ 

ರಾಜಸ್ಥಾನಿ ಜಾನಪದ ಗಾಯಕಿ ಮಾಮೆ ಖಾನ್, ಪ್ರಶಸ್ತಿ ವಿಜೇತ ಸಿತಾರ್ ಮಾಂತ್ರಿಕ ನೀಲಾದ್ರಿ ಕುಮಾರ್, ಟಾಲಿವುಡ್ ಗಾಯಕ ರಾಮ್ ಮಿರಿಯಾಲ, ತಮಿಳು ಹಿನ್ನೆಲೆ ಗಾಯಕ ವೇಲ್ಮುರುಗನ್, ಮಾಂಗ್ಲಿ, ಕುಟ್ಲೆ ಖಾನ್ ಮತ್ತು ಬಂಗಾಳಿ ಜಾನಪದ ಗಾಯಕಿ ಅನನ್ಯ ಚಕ್ರವರ್ತಿ ಮುಂತಾದ ದೇಶದ ವಿವಿಧ ಭಾಗಗಳ ಹೆಸರಾಂತ ಕಲಾವಿದರು ಈ ವರ್ಷ ಕಾರ್ಯಕ್ರಮ ನೀಡಲಿದ್ದಾರೆ. 

ಕರ್ನಾಟಕ ಜಾನಪದ ಮತ್ತು ತೆಯ್ಯಂ ತಂಡಗಳು ತಮ್ಮ ನೃತ್ಯ ಮತ್ತು ಸಂಗೀತದ ಮೂಲಕ ತಮ್ಮ ಜನಪದ ಸಂಸ್ಕೃತಿಯನ್ನು ಪ್ರದರ್ಶಿಸಲಿವೆ. ಈಶ ಫೌಂಡೇಶನ್‌ನ ಸ್ವದೇಶಿ ತಂಡ - ಸೌಂಡ್ಸ್ ಆಫ್ ಈಶದಿಂದ ಹೆಚ್ಚು ಬೇಡಿಕೆಯಿರುವ ಪ್ರದರ್ಶನಗಳು ಮತ್ತು ಈಶ ಸಂಸ್ಕೃತಿಯ ನೃತ್ಯ ಪ್ರಸ್ತುತಿಗಳು ರಾತ್ರಿಯ ಅತೀಂದ್ರಿಯ ಮೆರುಗನ್ನು ಹೆಚ್ಚಿಸಲಿವೆ.