Ramanagara: ಮಹಿಳಾ ಕಾರ್ಮಿ​ಕರ ಮಕ್ಕ​ಳಿಗೆ ಶಿಶು ಪಾಲನಾ ಕೇಂದ್ರ!

ಮಹಾತ್ಮ ಗಾಂಧಿ ನರೇಗಾ ಯೋಜ​ನೆ​ಯ​ಲ್ಲಿ​ರುವ ಮಹಿಳಾ ಕೂಲಿ ಕಾರ್ಮಿ​ಕರು ಚಿಕ್ಕ ಮಕ್ಕ​ಳನ್ನು ಮನೆ​ಯಲ್ಲಿ ಬಿಟ್ಟು ಕೆಲ​ಸಕ್ಕೆ ಹೋಗಲು ಸಾಧ್ಯ​ವಾ​ಗದೆ ಕೂಲಿ ಕೆಲ​ಸ​ದಿಂದ ವಂಚಿ​ತ​ರಾ​ಗು​ವು​ದನ್ನು ತಪ್ಪಿ​ಸುವ ಸಲು​ವಾಗಿ ಆಯ್ದ ಗ್ರಾಮ ಪಂಚಾ​ಯಿ​ತಿ​ಗ​ಳಲ್ಲಿ ಶಿಶು ಪಾಲನಾ ಕೇಂದ್ರ​ಗ​ಳನ್ನು ಆರಂಭಿ​ಸ​ಲಾ​ಗು​ತ್ತಿದೆ.

Child care center for childrens of women workers at ramanagara gvd

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಜ.02): ಮಹಾತ್ಮ ಗಾಂಧಿ ನರೇಗಾ ಯೋಜ​ನೆ​ಯ​ಲ್ಲಿ​ರುವ ಮಹಿಳಾ ಕೂಲಿ ಕಾರ್ಮಿ​ಕರು ಚಿಕ್ಕ ಮಕ್ಕ​ಳನ್ನು ಮನೆ​ಯಲ್ಲಿ ಬಿಟ್ಟು ಕೆಲ​ಸಕ್ಕೆ ಹೋಗಲು ಸಾಧ್ಯ​ವಾ​ಗದೆ ಕೂಲಿ ಕೆಲ​ಸ​ದಿಂದ ವಂಚಿ​ತ​ರಾ​ಗು​ವು​ದನ್ನು ತಪ್ಪಿ​ಸುವ ಸಲು​ವಾಗಿ ಆಯ್ದ ಗ್ರಾಮ ಪಂಚಾ​ಯಿ​ತಿ​ಗ​ಳಲ್ಲಿ ಶಿಶು ಪಾಲನಾ ಕೇಂದ್ರ​ಗ​ಳನ್ನು ಆರಂಭಿ​ಸ​ಲಾ​ಗು​ತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿ​ವೃದ್ಧಿ ಇಲಾಖೆ ಸಹ​ಯೋ​ಗ​ದಲ್ಲಿ ಆಯ್ದ ಗ್ರಾಪಂಗ​ಳ​ಲ್ಲಿ ಮಹಾ​ತ್ಮ​ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜ​ನೆಯ ಕೂಲಿ ಕಾರ್ಮಿ​ಕರ ಮಕ್ಕ​ಳಿಗಾಗಿ ವಿಶೇ​ಷ​ವಾಗಿ ಶಿಶು​ಪಾ​ಲನಾ ಕೇಂದ್ರ ಸ್ಥಾಪನೆ ಮಾಡ​ಲಾ​ಗು​ತ್ತಿದೆ. ಈ ಕೇಂದ್ರ​ಗ​ಳು ಪ್ರತಿ ದಿನ ಬೆ​ಳಗ್ಗೆ 9 ರಿಂದ ಸಂಜೆ 6 ಗಂಟೆ​ವ​ರೆಗೆ ತೆರೆ​ಯ​ಲಿ​ವೆ.

2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 5 ತಾಲೂಕುಗಳಲ್ಲಿ ನರೇಗಾ ಯೋಜನೆಯ ಕೂಲಿಕಾರರ ಮಕ್ಕಳ ಪೌಷ್ಟಿಕತೆಯ ಸಂರಕ್ಷಣೆಗೆ ಶಿಶು ಸಂರಕ್ಷಣಾ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮ​ನ​ಗರ ಜಿಲ್ಲೆಯ ಎರಡು ಕಡೆ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲು ಸ್ಥಳ ಗುರುತಿಸಲಾಗಿತ್ತು.

ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್‌ ಸಿಂಗ್‌

ಅದ​ರಂತೆ ಕನ​ಕ​ಪುರ ತಾಲೂಕು ಚೀಲೂರು ಗ್ರಾಮ ಪಂಚಾ​ಯಿತಿ ವತಿ​ಯಿಂದ ಜಕ್ಕ​ಸಂದ್ರ ಗ್ರಾಮ​ದಲ್ಲಿ ಶಿಶು​ಪಾ​ಲನಾ ಕೇಂದ್ರ ಆರಂಭಿ​ಸ​ಲಾ​ಗಿದ್ದರೆ, ಮತ್ತೊಂದು ಕೇಂದ್ರ​ವನ್ನು ಮಾಗಡಿ ತಾಲೂ​ಕಿನ ಲಕ್ಕೇನಹಳ್ಳಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲು ಉದ್ದೇ​ಶಿ​ಸ​ಲಾ​ಗಿದೆ. ಈ ಕೇಂದ್ರಕ್ಕೆ ಬರುವ ಮಕ್ಕ​ಳಿಗೆ ಆಟ ಆಡಲು ಆಟಿ​ಕೆ​ಗಳು, ಆಟ​ವಾ​ಡುವ ಸಾಮಗ್ರಿ, ಪುಟಾಣಿ ಚೇರ್‌, ಗೋಡೆ ಬರ​ಹಯೇ ಅಕ್ಷ​ರ​ಗಳು, ಪ್ರಾಣಿ​ಗಳು, ನದಿಗಳ ಚಿತ್ರ​ಗಳನ್ನು ಆಕ​ರ್ಷ​ಣಿ​ಯ​ವಾಗಿ ಬಿಡಿ​ಸ​ಲಾ​ಗಿ​ದೆ.

ಪ್ರತಿ ಶಿಶುಪಾಲನಾ ಕೇಂದ್ರದ ಪ್ರಾರಂಭ ಹಾಗೂ ನಿರ್ವಹಣೆಗಾಗಿ ಗರಿಷ್ಠ ಒಂದು ಲಕ್ಷ ರುಪಾಯಿವರೆಗೆ ವೆಚ್ಚವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಭರಿಸಲು ಅನುಮತಿ ನೀಡಲಾಗಿದೆ. ಪ್ರತಿ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಆರೈಕೆಗಾಗಿ 10 ಜನ ನರೇಗಾ ಯೋಜನೆ ಅಡಿ ನೋಂದಾಯಿತ ಮಹಿಳೆಯರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುವುದು. ಮಕ್ಕಳ ಆರೈಕೆಗಾಗಿ ಆಯ್ಕೆ ಮಾಡಲಾಗುವ ಮಹಿಳೆಯರಿಗೆ ಆರ್ಥಿಕ ವರ್ಷದಲ್ಲಿ 100 ದಿನಗಳಿಗೆ ಮೀರದಂತೆ ನರೇಗಾ ಯೋಜನೆಯಡಿ ನಿಗದಿಪಡಿಸಿದ ಕೂಲಿ ಪಾವತಿಸಲಾಗು​ತ್ತದೆ.

ಗ್ರಾಮೀ​ಣಾ​ಭಿ​ವೃದ್ಧಿ ಮತ್ತು ಪಂಚಾ​ಯತ್‌ ರಾಜ್‌ ಇಲಾಖೆ ಶಿಶು ಪಾಲನಾ ಕೇಂದ್ರ​ಗ​ಳನ್ನು ಅಂಗ​ನ​ವಾಡಿ ಕೇಂದ್ರದ ಹತ್ತಿರ ಸ್ಥಳ ಗುರು​ತಿಸಿ ಪ್ರಾರಂಭಿ​ಸ​ಬೇಕು. ಈ ಕಟ್ಟ​ಡ​ದಲ್ಲಿ ಮಕ್ಕಳ ಸ್ನೇಹಿ ಶೌಚಾ​ಲಯ, ಸೂಕ್ತ​ವಾದ ಗಾಳಿ /ಬೆಳಕು ಬರು​ವಂತಹ ಸ್ಥಳ ಮತ್ತು ಮುಖ್ಯ ರಸ್ತೆಯ ಹತ್ತಿರ ಕಟ್ಟಡ ಇರ​ದಂತೆ ಗುರು​ತಿ​ಸ​ಬೇಕು. ಮಧ್ಯಾ​ಹ್ನದ ಪೂರಕ ಆಹಾ​ರದ ಘಟಕ ವೆಚ್ಚ 8 ರು.ನಂತೆ ಮತ್ತು ತೀವ್ರ ಅಪೌ​ಷ್ಟಿಕ ಮಕ್ಕ​ಳಿಗೆ 12 ರು.ನಂತೆ ಹೆಚ್ಚು​ವ​ರಿ​ಯಾಗಿ ವೆಚ್ಚ ಭರಿ​ಸ​ಬೇ​ಕಾ​ಗಿದೆ. ಜೊತೆಗೆ ವೈದ್ಯರು ಪ್ರತಿ ತಿಂಗಳು 2 ಬಾರಿ ಶಿಶು ಪಾಲನಾ ಕೇಂದ್ರ​ಗ​ಳಿಗೆ ಭೇಟಿ ನೀಡು​ವಂತೆ ನಿಗಾ ವಹಿ​ಸ​ಬೇ​ಕಿದೆ.

ನರೇಗಾ ಯೋಜನೆಯಲ್ಲಿರುವ ಮಹಿಳಾ ಕೂಲಿಕಾರರು ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಾಧ್ಯವಾಗದೆ ಕೂಲಿ ಕೆಲಸದಿಂದ ವಂಚಿತರಾಗುತ್ತಾರೆ. ಇಂತಹವರು ಕೂಡ ಕೆಲಸಕ್ಕೆ ಹೋಗಲು ಅನುಕೂಲವಾಗುವಂತೆ ಆಯ್ದ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪ​ನೆ​ ಮಾಡ​ಲಾ​ಗು​ತ್ತಿ​ದೆ. ಇಷ್ಟೆಲ್ಲಾ ರಿಯಾಯಿತಿ ಹಾಗೂ ಅವಕಾಶಗಳನ್ನು ನರೇಗಾ ಯೋಜನೆಯಡಿ ನೀಡುತ್ತಿರುವ ಉದ್ದೇಶ ಮಹಿಳೆ ಸ್ವಾವಲಂಬಿಯಾಗಬೇಕು. ಸಮಾನ ಅವಕಾಶಗಳನ್ನು ಪಡೆದುಕೊಂಡು ಕುಟುಂಬಗಳನ್ನು ಸಬಲಗೊಳಿಸಲು ಶಕ್ತಳಾಗಬೇಕು ಎಂಬುದು ಇದರ ಉದ್ದೇಶ ಎನ್ನು​ತ್ತಾರೆ ಜಿಲ್ಲಾ ಪಂಚಾ​ಯಿತಿ ಅಧಿ​ಕಾ​ರಿ​ಗ​ಳು.

ಶಿಶು​ಪಾ​ಲನಾ ಕೇಂದ್ರ​ದಲ್ಲಿ ಸಿಗುವ ಸವ​ಲ​ತ್ತು​ಗ​ಳು
* 6 ತಿಂಗ​ಳಿಂದ 3 ವರ್ಷದ ಮಕ್ಕ​ಳ​ಳಿಗೆ ಶಾಲಾ ಪೂರ್ವ ಶಿಕ್ಷಣ, ಆರೈಕೆ ಪೂರಕ ಪೌಷ್ಠಿಕ ಆಹಾರ, ಚುಚ್ಚು ಮದ್ದು ಲಸಿಕೆ ಹಾಗೂ ಆರೋಗ್ಯ ತಪಾ​ಸಣೆ ಮಾಡು​ವು​ದರ ಮೂಲಕ ಮಕ್ಕಳ ಸಮಗ್ರ ಪೋಷಣೆ ಮಾಡ​ಲಾ​ಗು​ವುದು.

* ಉದ್ಯೋ​ಗಸ್ತ ತಾಯಂದಿರ ಮಕ್ಕ​ಳನ್ನು ದಿನ​ಪೂರ್ತಿ ಸುರ​ಕ್ಷಿ​ತ​ವಾಗಿ ನೋಡಿ​ಕೊಂಡು ಅವರ ಪೌಷ್ಠಿಕ ಹಾಗೂ ಆರೋಗ್ಯ ಗುಣ​ಮ​ಟ್ಟವನ್ನು ಸುಧಾ​ರಿ​ಸ​ಲಾ​ಗು​ವುದು.

* ಪ್ರತಿ ತಿಂಗಲ 2 ಬಾರಿ ಶಿಶು​ಪಾ​ಲನಾ ಕೇಂದ್ರಕ್ಕೆ ವೈದ್ಯರ ಭೇಟಿ

ಶಿಶು​ಪಾ​ಲನಾ ಕೇಂದ್ರದ ಉದ್ದೇ​ಶ​ಗಳು
* ಮಗು​ವಿನ ಬೌದ್ಧಿಕ , ಮಾನ​ಸಿಕ, ಶಾರೀ​ರಕ ಬೆಳ​ವ​ಣಿ​ಗೆಗೆ ಉತ್ತೇ​ಜನ ನೀಡು​ವು​ದು

* ಮಗು​ವಿನ ಕಲಿಕಾ ಸಾಮಾರ್ಥ್ಯ ಹಾಗೂ ಮನೋ​ಭಾ​ವ​ವನ್ನು ಉತ್ತೇ​ಜಿ​ಸು​ವು​ದು

* ಮಗು ಸಾಮಾ​ಜಿಕ ಪರಿ​ಸ​ರಕ್ಕೆ ಒಗ್ಗಿ​ಕೊ​ಳ್ಳಲು ಪೂರಕ ವಾತಾ​ವ​ರಣ ಕಲ್ಪಿ​ಸು​ವು​ದು

* ಮಕ್ಕಳ ದೈಹಿಕ ಸಾಮಾ​ಜಿಕ ಹಾಗೂ ಭಾವ​ನಾ​ತ್ಮಕ ಬೆಳ​ವ​ಣಿ​ಗೆ​ಯನ್ನು ಉತ್ತೇ​ಜಿ​ಸು​ವುದು.

ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಬಿಟ್ಟೆ: ಬಾಲಕೃಷ್ಣ

ಅಕು​ಶಲ ಕೂಲಿ ಕಾರ್ಮಿ​ಕರ ಮಕ್ಕ​ಳಿಗೆ ನರೇಗಾ ಯೋಜ​ನೆ​ಯಡಿ ಶಿಶು ಪಾಲನಾ ಕೇಂದ್ರ ನಿರ್ವ​ಹಣೆ ಮಾಡ​ಲಾ​ಗು​ತ್ತಿದೆ. 6 ತಿಂಗ​ಳಿಂದ 3 ವರ್ಷ ವಯ​ಸ್ಸಿನ ಮಕ್ಕಳ ಬೌದ್ಧಿಕ ಹಾಗೂ ಮಾನ​ಸಿಕ ಬೆಳ​ವ​ಣಿ​ಗೆ​ಗೆ ಸಹ​ ಕಾ​ರಿ​ಯಾ​ಗ​ಲಿದೆ. ಉತ್ತಮ ಆರೋ​ಗ್ಯಕ್ಕೆ ಪೂರ​ಕ​ವಾದ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷ​ಣಕ್ಕೆ ಹೆಚ್ಚಿನ ಒತ್ತು ನೀಡ​ಲಾ​ಗು​ವುದು. ಮಕ್ಕಳ ವಯೋ​ಮಿ​ತಿಗೆ ಅನು​ಗು​ಣ​ವಾಗಿ ಪಠ್ಯ ಚಟು​ವ​ಟಿಕೆ ರೂಪಿ​ಸ​ಲಾ​ಗಿದೆ.
-ಬೈರ​ಪ್ಪ, ಇಒ, ತಾಪಂ, ಕನ​ಕ​ಪುರ

Latest Videos
Follow Us:
Download App:
  • android
  • ios