ಟಿ20 ವಿಶ್ವಕಪ್ ವೇಳೆ ಪನೌತಿ ಟೀಕೆಗೆ ಗುರಿಯಾದ MBA ಚಾಯ್‌ವಾಲ ಇದೀಗ ರಿವರ್ಸ್ ಜಿಂಕ್ಸ್ ಹೀರೋ!

ವಿಶ್ವಕಪ್ ಆರಂಭದ ವೇಳೆ ಸೂರ್ಯಕುಮಾರ್ ಯಾದವ್‌ ಜೊತೆಗೆ ಫೋಟೋ ಹಂಚಿಕೊಂಡು ಸತತ ಪನೌತಿ ಟೀಕೆಗೆ ಗುರಿಯಾಗಿದ್ದ  MBA ಚಾಯ್‌ವಾಲ ಗ್ರೂಪ್ ಸಂಸ್ಥಾಪಕ ಪ್ರಫುಲ್ ಬಿಲ್ಲೋರ್ ಇದೀಗ ಹೀರೋ ಆಗಿದ್ದಾರೆ. ಪನೌತಿ ರಿವರ್ಸ್ ಆಗಿದ್ದು ಹೇಗೆ? ಪ್ರಫುಲ್ ಅದೃಷ್ಠ ಬದಲಾಗಿದ್ದು ಎಲ್ಲಿ? ಇದಕ್ಕೆ ನಡೆಸಿದ ಹೋರಾಟವೇ ರೋಚಕ. 

Prafull billore hits back for panauti memes with reverse jinx hero after T20 World cup victory ckm

ಮುಂಬೈ(ಜೂ.30) ಅಪಶಕುನ ಎಂದು ತೀವ್ರ ಟೀಕೆಗೆ ಗುರಿಯಾದ MBA ಚಾಯ್‌ವಾಲ ಗ್ರೂಪ್ ಸಂಸ್ಥಾಪಕ ಪ್ರಫುಲ್ ಬಿಲ್ಲೋರ್ ಇದೀಗ ಹೀರೋ ಆಗಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಪ್ರಫುಲ್ ರಿವರ್ಸ್ ಜಿಂಕ್ಸ್ ಹೀರೋ ಆಗಿ ಮೆರೆದಾಡಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಪನೌತಿ ಎಂದು ಟೀಕಿಸಿದವರ ವಿರುದ್ದ ಸಮರ ಸಾರಿದ್ದ ಪ್ರಫುಲ್, ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದಾರೆ. ಶುಭ ಸಂಕೇತ, ಅಶುಭ ಸಂಕೇತದ ಟೀಕೆಗಳ ನಡುವೆ ಪ್ರಫುಲ್ ಹೀರೋ ಆಗಿದ್ದೆ ರೋಚಕ.

ಟಿ20 ವಿಶ್ವಕಪ್ ಟೂರ್ನಿ ಆರಂಭದ ವೇಳೆ ಉದ್ಯಮಿ ಪ್ರಫುಲ್ ಬಿಲ್ಲೋರ್ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಜೊತೆಗಿನ ಸೆಲ್ಫಿ ಫೋಟೋ ಪೋಸ್ಟ್ ಮಾಡಿದ್ದರು. ವಿಮಾನ ಪ್ರಯಾಣದಲ್ಲಿ ಸಿಕ್ಕ ಸೂರ್ಯಕುಮಾರ್ ಜೊತೆಗೆ ತೆಗೆದ ಹಳೇ ಸೆಲ್ಫಿಯನ್ನು ಪ್ರಫುಲ್ ಬಿಲ್ಲೋರ್ ಪೋಸ್ಟ್ ಮಾಡಿದ್ದರು. ಭರ್ಜರಿ ಫಾರ್ಮ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ ಲೀಗ್ ಹಂತದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಪ್ರಫುಲ್ ಬಿಲ್ಲೋರ್ ಪನೌತಿ ಎಂದು ಮೀಮ್ಸ್ ಹರಿದಾಡಿತ್ತು. 

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ 3ನೇ ಶಾಕ್, ಅಂತಾರಾಷ್ಟ್ರೀಯ ಟಿ20ಗೆ ಜಡೇಜಾ ವಿದಾಯ!

ಸೂರ್ಯಕುಮಾರ್ ಜೊತೆಗಿನ ಫೋಟೋ ಹಂಚಿಕೊಂಡ ಬಳಿಕ ಕ್ರಿಕೆಟಿಗನ ಫಾರ್ಮ್ ಇಲ್ಲದಾಗಿದೆ. ಪ್ರಫುಲ್ ಬಿಲ್ಲೋರ್ ದೊಡ್ಡ ಪನೌತಿ(ಅಪಶಕುನ) ಎಂದು ಮೀಮ್ಸ್ ಮಾಡಿ ಹರಿಬಿಡಲಾಗಿತ್ತು. ಇದು ಪ್ರಫುಲ್ ಬಿಲ್ಲೋರ್ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಟೀಂ ಇಂಡಿಯಾದ ಪ್ರತಿ ಗೆಲುವಿನ ಬಳಿಕ ಪ್ರಫುಲ್ ಬಿಲ್ಲೋರ್ ಇದೇ ರೀತಿ ತಾವೇ ಮೀಮ್ಸ್ ಮಾಡಿ ಹರಿಬಿಡಲು ಆರಂಭಿಸಿದ್ದರು. ಜೋಸ್ ಬಟ್ಲರ್,ಜೋಫ್ರಾ ಆರ್ಚರ್ ಸೇರಿದಂತೆ ಹಲವರ ಜೊತೆಗೆ ತನ್ನ ಫೋಟೋ ಎಡಿಟ್ ಮಾಡಿ ರಿವರ್ಸ್ ಜಿಂಕ್ಸ್ ಎಂದು ಮೀಮ್ಸ್ ಹರಿಬಿಟ್ಟಿದ್ದರು.

 

 

ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಮುಖಾಮುಖಿ ಫೋಟೋದಲ್ಲಿ ಸೌತ್ ಆಫ್ರಿಕಾ ನಾಯಕ ಆ್ಯಡಿನ್ ಮರ್ಕ್ರಮ್ ಫೋಟೋ ಬದಲು ತನ್ನ ಫೋಟೋ ಹಾಕಲಾಗಿತ್ತು. ಬಳಿಕ ಸೌತ್ ಆಫ್ರಿಕಾ 11 ಆಟಗಾರರ ಫೋಟೋವನ್ನು ಎಡಿಟ್ ಮಾಡಿ ತನ್ನ ಫೋಟೋ ಹಾಕಿ ಮೀಮ್ಸ್ ಮಾಡಿ ಹರಿಬಿಡಲಾಗಿತ್ತು. ಖುದ್ದು ಪ್ರಫುಲ್ ತಮ್ಮ ಖಾತೆಯಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿ ರಿವರ್ಸ್ ಜಿಂಕ್ಸ್ ಎಂದು ತಿರುಗೇಟು ನೀಡಿದ್ದರು. 

ಇವರೇ ನೋಡಿ ಟಿ20 ವಿಶ್ವಕಪ್‌ ಗೆಲುವಿನ ರೂವಾರಿಗಳು..! ನೀವೇನಂತೀರಾ?

ಫೈನಲ್ ಪಂದ್ಯದಲ್ಲಿ ಅದೇ ಸೂರ್ಯಕುಮಾರ್ ಅದ್ಭುತ ಕ್ಯಾಚ್ ಹಿಡಿದು ಪಂದ್ಯಕ್ಕೆ ತಿರುವು ನೀಡಿದ್ದರು. ಒಂದು ಹಂತದಲ್ಲಿ ಭಾರತ ಪಂದ್ಯದ ಹಿಡಿತ ಸಡಿಲಗೊಳ್ಳುತ್ತಿದ್ದಂತೆ ಮತ್ತೆ ಪ್ರಫುಲ್ ವಿರುದ್ದ ಪನೌತಿ ಟೀಕೆ ಜೋರಾಗಿತ್ತು. ಆದರೆ ಗೆಲುವಿನ ಬಳಿಕ ಪ್ರಫುಲ್ ರಿವರ್ಸ್ ಜಿಂಕ್ಸ್ ಭಾರಿ ವೈರಲ್ ಆಗಿದೆ. ತನ್ನನ್ನುಟೀಕಿಸಿದವರೆಗೆ ಪ್ರಫುಲ್ ಸೋಶಿಯಲ್ ಮೀಡಿಯಾದಲ್ಲೇ ಯುದ್ಧ ಸಾರಿ ಇದೀಗ ಹೀರೋ ಆಗಿದ್ದಾರೆ.


 

Latest Videos
Follow Us:
Download App:
  • android
  • ios