ಅಪ್ರಾಪ್ತೆ, ವಿಧವೆಗಿಲ್ಲ ಪಿಂಡದಾನದ ಅಧಿಕಾರ, ಶ್ರಾದ್ಧ ಮಾಡುವಾಗ ಸೊಸೆ ಪಾಲಿಸಬೇಕು ಈ ನಿಯಮ

ಹಿಂದೂ ಧರ್ಮದಲ್ಲಿ ಪಿಂಡದಾನ ಮಾಡುವ ಪದ್ಧತಿ ಇದೆ. ಗರುಡ ಪುರಾಣದ ಪ್ರಕಾರ, ಗಂಡು ಮಕ್ಕಳ ಜೊತೆ ಹೆಣ್ಮಕ್ಕಳು ಕೂಡ ಶ್ರಾದ್ಧ, ಪಿಂಡ ದಾನವನ್ನು ಮಾಡ್ಬಹುದು. ಮಗನಿಲ್ಲದ ಮನೆಯಲ್ಲಿ ಮಹಿಳೆಯರು ಪಿಂಡದಾನ ಮಾಡಬಹುದು. ಆದ್ರೆ ಅದಕ್ಕೂ ಕೆಲ ನಿಯಮಗಳಿವೆ ಎಂಬುದನ್ನು ಮರೆಯಬಾರದು. 

pitru paksha women can also perform  pind daan shradh roo

ಶ್ರದ್ಧೆಯಿಂದ ಮಾಡುವ ಕೆಲಸವೇ ಶ್ರಾದ್ಧ (shradh). ಏಳರಿಂದ ಎಂಟು ತಲೆಮಾರಿನ ಪೂರ್ವಜರ ನಿಧನದ ತಿಥಿಯನ್ನು ನೆನಪಿನಲ್ಲಿಟ್ಟುಕೊಳ್ಳೋದು ಕಷ್ಟ. ಹಾಗಾಗಿಯೇ ಎಲ್ಲ ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದ ಆಚರಣೆ ಜಾರಿಗೆ ಬಂದಿದೆ. ಪಿತೃಪಕ್ಷ (pitru paksha) ದಲ್ಲಿ ಪಿಂಡದಾನ, ಶ್ರಾದ್ಧ ಮಾಡಿ, ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲಾಗುತ್ತದೆ. ಸೆಪ್ಟೆಂಬರ್ 17ರಿಂದ ಪಿತೃ ಪಕ್ಷ ಶುರುವಾಗ್ತಿದೆ.   

ಮನೆಯಲ್ಲಿರುವ ಪುತ್ರರು ಶ್ರಾದ್ಧ – ಪಿಂಡದಾನ ಮಾಡುವ ಪದ್ಧತಿ ಹಿಂದೂ ಧರ್ಮ (Hinduism ) ದಲ್ಲಿದೆ. ಹಾಗಂತ ಮಹಿಳೆಯರಿಗೆ ಪಿಂಡ ದಾನದ ಅಧಿಕಾರ ಇಲ್ಲ ಎಂದಲ್ಲ. ಗರುಡ ಪುರಾಣ (Garuda Purana)ದ ಪ್ರಕಾರ, ಗಂಡು ಮಕ್ಕಳ ಜೊತೆ ಹೆಣ್ಮಕ್ಕಳು ಕೂಡ ಶ್ರಾದ್ಧ, ಪಿಂಡ ದಾನವನ್ನು ಮಾಡ್ಬಹುದು. ವಿಶೇಷ ಅಂದ್ರೆ ಪತ್ನಿ ಹಾಗೂ ಸೊಸೆಗೂ ಈ ಅಧಿಕಾರವನ್ನು ನೀಡಲಾಗಿದೆ.

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಏಕೆ?

ರಾಮಾಯಣ (Ramayana) ದಲ್ಲಿ ಪಿಂಡದಾನ ಮಾಡಿದ್ದ ಸೀತೆ : ವಾಲ್ಮಿಕಿ ರಾಮಾಯಣದಲ್ಲಿ ಇದ್ರ ಉಲ್ಲೇಖವಿದೆ. ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸಕ್ಕೆ ಹೋದ ಸಂದರ್ಭದಲ್ಲಿ ದಶರತನ ಇಹಲೋಕ ತ್ಯಜಿಸ್ತಾನೆ. ಆತನ ಶ್ರಾದ್ಧ ಮಾಡಲು ರಾಮ – ಲಕ್ಷ್ಮಣ ಮುಂದಾಗ್ತಾರೆ. ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ತರಲು ಅವರು ಹೋಗ್ತಾರೆ. ಆದ್ರೆ ಅವರು ವಾಪಸ್ ಬರೋದು ತಡವಾಗುತ್ತದೆ. ಈ ಸಮಯದಲ್ಲಿ ಸೀತೆ ಮುಂದೆ ಬರುವ ದಶರಥ, ಪಿಂಡದಾನ ಮಾಡುವಂತೆ ಸೀತೆಗೆ ಮನವಿ ಮಾಡುತ್ತಾನೆ. ಆ ನಂತ್ರ ಸೀತೆ ಪಿಂಡದಾನಕ್ಕೆ ಮುಂದಾಗ್ತಾಳೆ. ಆಲದ ಮರ, ಕೇತಕಿ ಹೂವು ಮತ್ತು ಫಲ್ಗು ನದಿಯನ್ನು ಸಾಕ್ಷಿಯಾಗಿ ತೆಗೆದುಕೊಂಡು, ತಾಯಿ ಸೀತಾ ಮರಳಿನ ಉಂಡೆಯನ್ನು ಮಾಡಿ ಪಿಂಡದಾನ ಮಾಡುತ್ತಾಳೆ. ರಾಜ ದಶರಥನು ತಾಯಿ ಸೀತೆಯ ಈ ಪಿಂಡ ದಾನದಿಂದ ಸಂತುಷ್ಟನಾಗಿ ಆಶೀರ್ವಾದ ಮಾಡುತ್ತಾನೆ.

ಮಗನಿಲ್ಲದ ಮನೆಯಲ್ಲಿ ಮಹಿಳೆಯರು ಪಿಂಡದಾನ ಮಾಡಬಹುದು. ಹೆಣ್ಮಕ್ಕಳು ಶ್ರದ್ಧಾ, ಭಕ್ತಿಯಿಂದ ಪಿಂಡದಾನ ಮಾಡಿದರೆ ಅದನ್ನು ಪೂರ್ವಜರು ಸ್ವೀಕರಿಸುತ್ತಾರೆ. ಆಶೀರ್ವಾದವನ್ನು ನೀಡುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಮಕ್ಕಳಿಲ್ಲದ ಮಹಿಳೆ ತನ್ನ ಪತಿಯ ಪಿಂಡದಾನ ಮಾಡವ ಅಧಿಕಾರ ಹೊಂದಿರುತ್ತಾಳೆ. ಒಂದ್ವೇಳೆ ಮನೆಯಲ್ಲಿ ಯಾವುದೇ ಪುರುಷ ಇಲ್ಲ ಎಂದಾಗ, ಮನೆಯ ಹಿರಿಯ ಮಹಿಳೆ ಶ್ರಾದ್ಧ ಮಾಡಬೇಕು. ವಿಧವೆಯಾಗಿದ್ದರೆ ಆಕೆ ತನ್ನ ಮಕ್ಕಳ ಅಥವಾ ಪತಿಯ ಶ್ರಾದ್ಧದ ಸಂಕಲ್ಪವನ್ನು ಇಟ್ಟುಕೊಂಡು, ಬ್ರಾಹ್ಮಣ ಅಥವಾ ಪುರೋಹಿತ ಕುಟುಂಬದ ಪುರುಷ ಸದಸ್ಯರಿಂದ ಪಿಂಡ ದಾನ ಇತ್ಯಾದಿಗಳನ್ನು ಪೂರ್ಣಗೊಳಿಸಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ಅಳಿಯನಿಗೂ ಶ್ರಾದ್ಧ ಮಾಡುವ ಅಧಿಕಾರವನ್ನು ನೀಡಲಾಗಿದೆ. 

Chanakya Niti: ಮೂರ್ಖರ ಜೊತೆಗೆ ಹೇಗಿರಬೇಕು? ಚಾಣಕ್ಯ ಹೇಳ್ತಾರೆ ಕೇಳಿ!

ಶ್ರಾದ್ಧ – ಪಿಂಡದಾನ ಮಾಡುವಾಗ ಮಹಿಳೆಯರು ಇದನ್ನು ನೆನಪಿಡಿ : ಗಂಡು ಮಕ್ಕಳಿರಲಿ ಇಲ್ಲ ಹೆಣ್ಣು ಮಕ್ಕಳಿರಲಿ, ಶ್ರಾದ್ಧ ಮಾಡುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪೂರ್ವಜರಿಗೆ ನೋವಾಗುವಂತೆ ಅಥವಾ ತಪ್ಪು ಪದ್ಧತಿಯಲ್ಲಿ ಶ್ರಾದ್ಧ ಮಾಡಬಾರದು. ಮಹಿಳೆಯರು ಶ್ರಾದ್ಧ ಮಾಡುವ ಅನಿವಾರ್ಯತೆ ಇದ್ದಲ್ಲಿ, ಅವರು, ಬಿಳಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಪಿಂಡದಾನ ಮಾಡಬೇಕು. ವಿವಾಹಿತ ಮಹಿಳೆಯರಿಗೆ ಮಾತ್ರ ಶ್ರಾದ್ಧ ಮಾಡುವ ಅಧಿಕಾರವಿದೆ. ಅವಿವಾಹಿತ ಮಹಿಳೆಯರು ಯಾವುದೇ ಕಾರಣಕ್ಕೂ ಶ್ರಾದ್ಧ – ಪಿಂಡದಾನ ಮಾಡಬಾರದು, ಅದ್ರಲ್ಲೂ ಅಪ್ರಾಪ್ತೆಯರಿಗೆ ಈ ಅಧಿಕಾರವಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ತರ್ಪಣವನ್ನು ಅರ್ಪಿಸುವಾಗ ನೀರು ಮತ್ತು ಕಪ್ಪು ಎಳ್ಳನ್ನು ಸೇರಿಸಿ ತರ್ಪಣವನ್ನು ಮಹಿಳೆಯರು ಬಿಡಬಾರದು. ಪೂರ್ವಜರು ಸಾವನ್ನಪ್ಪಿದ ತಿಥಿ ತಿಳಿದಿಲ್ಲದ ಸಂದರ್ಭದಲ್ಲಿ ನವಮಿ ದಿನದಂದು ವೃದ್ಧರು ಮತ್ತು ಮಹಿಳೆಯರಿಗೆ ಶ್ರಾದ್ಧ ಮಾಡಿ. ಪಂಚಮಿ ದಿನದಂದು ಮಕ್ಕಳ ಶ್ರಾದ್ಧವನ್ನು ಮಾಡಬೇಕಾಗುತ್ತದೆ.

Latest Videos
Follow Us:
Download App:
  • android
  • ios