Asianet Suvarna News Asianet Suvarna News

Pitru Paksha: ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮಹಿಳೆ ಈ ಕೆಲಸ ಮಾಡ್ಬಾರದು!

ಪೂರ್ವಜರ ಆಶೀರ್ವಾದ ಸದಾ ನಮ್ಮ ಮೇಲೆ ಇರಬೇಕು. ಅದಕ್ಕೆ ಅವರನ್ನು ನೆನೆಯಲೆಂದೇ 15 ದಿನವನ್ನು ಮೀಸಲಿಡಲಾಗಿದೆ. ಈ ಸಮಯದಲ್ಲಿ ಮಹಿಳೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲವೆಂದ್ರೆ ಪಿತೃದೋಷಕ್ಕೆ ಗುರಿಯಾಗಬೇಕಾಗುತ್ತದೆ.
 

Pitru Paksha Rules Women Should Not Do These Things roo
Author
First Published Sep 27, 2023, 2:00 PM IST

ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಕೂಡ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಪಿತೃ ಪಕ್ಷ 15 ದಿನಗಳವರೆಗೆ ಇರುತ್ತದೆ.   ಪಿತೃಪಕ್ಷ ಹೆಸರೇ ಸೂಚಿಸುವಂತೆ ಪಿತೃರಿಗೆ ಅರ್ಪಿಸಲಾಗಿದೆ. ಈ 15 ದಿನ ಪೂರ್ವಜರನ್ನು ನೆನೆಯಲು, ಶ್ರಾದ್ಧ ಮತ್ತು ತರ್ಪಣವನ್ನು ಬಿಡಲು  ಮಂಗಳಕರವೆಂದು ನಂಬಲಾಗಿದೆ. ಪಿತೃ ಪಕ್ಷವು ಭಾದ್ರಪದ ಮಾಸದ ಪ್ರತಿಪದ ತಿಥಿಯಿಂದ ಪ್ರಾರಂಭವಾಗುತ್ತದೆ. ಈ ಬಾರಿ  ಪಿತೃ ಪಕ್ಷ ಸೆಪ್ಟೆಂಬರ್ 29ರ ಹುಣ್ಣಿಮೆಯಿಂದ ಆರಂಭವಾಗುತ್ತದೆ. ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ. 

ಪಿತೃ ಪಕ್ಷ (Pitru Paksha ) ದಲ್ಲಿ ಕೆಲ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕು. ಅದೇ ರೀತಿ ಕೆಲ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಪಿತೃಪಕ್ಷದ ಸಂದರ್ಭದಲ್ಲಿ ಮನೆಯ ಮಹಿಳೆಯರು ಕೆಲವೊಂದು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಮಾಡುವ ಕೆಲಸ ಪೂರ್ವಜರ  ಕೋಪ (Anger)ಕ್ಕೆ ಕಾರಣವಾಗಬಹುದು. ಇದ್ರಿಂದ ಸಮಸ್ಯೆ ಉದ್ಭವಿಸಬಹುದು. ನಾವಿಂದು ಪಿತೃ ಪಕ್ಷದಲ್ಲಿ ಮಹಿಳೆಯರು ಯಾವ ವಿಷ್ಯದ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ಹೇಳ್ತೇವೆ.

ಜ್ಯೋತಿಷ್ಯ ಶಾಸ್ತ್ರದ ನೆರವಿಂದ ಕೆಟ್ಟ ಕಾಲವನ್ನ ಅದೃಷ್ಟವನ್ನಾಗಿ ಬದಲಿಸ್ಕೊಳಿ!

ಪಿತೃ ಪಕ್ಷದಲ್ಲಿ ಮಹಿಳೆಯರು ಏನು ಮಾಡ್ಬೇಕು, ಏನು ಮಾಡ್ಬಾರದು? :  
• ಪಿತೃ ಪಕ್ಷದ ಸಮಯದಲ್ಲಿ ಮಹಿಳೆಯರು ಸಂಜೆ ದೀಪವನ್ನು ಹಚ್ಚಲು ಮರೆಯಬಾರದು. ಪಿತೃ ಪಕ್ಷದ ಸಮಯದಲ್ಲಿ ಪ್ರತಿದಿನ ಮನೆಯ ಹೊರಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮಹಿಳೆಯರು ಒಂದು ದೀಪವನ್ನು ಹಚ್ಚಬೇಕು. ಫ್ಲಾಟ್‌ಗಳಲ್ಲಿ ವಾಸಿಸುವವರು ತಮ್ಮ ಮನೆಯ ಬಾಲ್ಕನಿಯಲ್ಲಿ ದಕ್ಷಿಣಾಭಿಮುಖವಾಗಿ ದೀಪವನ್ನು ಬೆಳಗಿಸುವುದನ್ನು ತಪ್ಪಿಸಬೇಡಿ.
• ಪಿತೃ ಪಕ್ಷದ ಸಮಯದಲ್ಲಿ ಮನೆಯ ಶಾಂತಿ ಮುಖ್ಯವಾಗುತ್ತದೆ. ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ವಾದ – ವಿವಾದ ಆಗದಂತೆ ನೋಡಿಕೊಳ್ಳಿ. ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿ.
• ಪಿತೃರು ಶುದ್ಧತೆಯನ್ನು ಬಯಸ್ತಾರೆ. ಹಾಗಾಗಿ ಮಡಿ – ಮೈಲಿಗೆ ಬಗ್ಗೆಯೂ ಗಮನ ಹರಿಸಬೇಕು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಶ್ರಾದ್ಧ, ತರ್ಪಣಕ್ಕೆ ಅಗತ್ಯವಿರುವ ಆಹಾರವನ್ನು ತಯಾರಿಸಬಾರದು. ಮನೆಯಲ್ಲಿ ಬೇರೆ ಮಹಿಳೆ ಇದ್ದಲ್ಲಿ ಆಕೆಗೆ ಆಹಾರ ತಯಾರಿಸುವಮತೆ ಹೇಳಿ. ಅಗತ್ಯವೆನ್ನಿಸಿದ್ರೆ ಮನೆ ಪುರುಷರು ಕೂಡ ಅಡುಗೆ ಮಾಡಿ ಬಡಿಸಬಹುದು. 

Chanakya Niti: ಪೋಷಕರು ಮಕ್ಕಳ ಮುಂದೆ ಯಾವತ್ತೂ ಈ ಕೆಲಸ ಮಾಡ್ಲೇಬಾರ್ದಂತೆ!

• ಪಿತೃ ಪಕ್ಷದಲ್ಲಿ ಮನೆಯ ಸ್ವಚ್ಛತೆ ಬಗ್ಗೆ ಮಹಿಳೆ ಗಮನ ಹರಿಸಬೇಕು. ಆದ್ರೆ ಆಕೆ ಸೂರ್ಯಾಸ್ತದ ನಂತ್ರ ಮನೆಯನ್ನು ಕ್ಲೀನ್ ಮಾಡುವ ಯಾವುದೇ ಕೆಲಸ ಮಾಡಬಾರದು.
• ಪಿತೃ ಪಕ್ಷದಲ್ಲಿ ಪ್ರತಿದಿನ ನೀವು ಆಹಾರವನ್ನು ತಯಾರಿಸುವಾಗ, ಅದರ ಒಂದು ಭಾಗವನ್ನು ತೆಗೆದುಕೊಂಡು ಪೂರ್ವಜರ ಹೆಸರಿನಲ್ಲಿ ಹಸುವಿಗೆ ತಿನ್ನಿಸಿ. ಪಿತೃ ಪಕ್ಷದ ಪ್ರತಿ ದಿನ ನೀವು ಈ ಕೆಲಸವನ್ನು ಮಾಡಬೇಕು.
• ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ನೀವು ಶ್ರಾದ್ಧ ಅಥವಾ ತರ್ಪಣ ಬಿಡುತ್ತಿದ್ದರೆ ಪೂರ್ವಜರ ಇಷ್ಟವನ್ನು ಗಮನಿಸಿ ಅಡುಗೆ ತಯಾರಿಸಿ. 
• ಮನೆಗೆ ಯಾವುದೇ ಅತಿಥಿ ಬಂದಲ್ಲಿ ಅಥವಾ ಅಪರಿಚಿತ ವ್ಯಕ್ತಿ ಬಂದಲ್ಲಿ ಅವರನ್ನು ಬರಿಗೈನಲ್ಲಿ ಕಳುಹಿಸಬೇಡಿ. ಅವರಿಗೆ ನಿಮ್ಮ ಕೈಲಾದ ಆಹಾರ ಅಥವಾ ವಸ್ತುವನ್ನು ದಾನವಾಗಿ ನೀಡಿ. 
• ಪಿತೃ ಪಕ್ಷದಲ್ಲಿ ನಿಮ್ಮ ಕೂದಲನ್ನು ಕತ್ತರಿಸಬೇಡಿ. ಹಾಗೆಯೇ ಉಗುರು ಕತ್ತರಿಸುವ ಕೆಲಸಕ್ಕೆ ಹೋಗಬೇಡಿ.
• ಪಿತೃ ಪಕ್ಷದಲ್ಲಿ ನೀವು ಬಲಿತ ಬಾಳೆ ಹಣ್ಣು, ಮೊಸರು, ಬಿಳಿ ಬಣ್ಣದ ಮಿಠಾಯಿ, ದಕ್ಷಿಣೆ ರೂಪದಲ್ಲಿ ಹಣವನ್ನು ನೀವು ದಾನವಾಗಿ ನೀಡಬೇಕಾಗುತ್ತದೆ.
• ಪಿತೃ ಪಕ್ಷದ ಸಮಯದಲ್ಲಿ ಮಾಂಸಾಹಾರ ತಯಾರಿಸಬೇಡಿ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿದ ಆಹಾರವನ್ನು ಕೂಡ ನೀವು ತಯಾರಿಸಬೇಡಿ. 

Follow Us:
Download App:
  • android
  • ios