ಜ್ಯೋತಿಷ್ಯ ಶಾಸ್ತ್ರದ ನೆರವಿಂದ ಕೆಟ್ಟ ಕಾಲವನ್ನ ಅದೃಷ್ಟವನ್ನಾಗಿ ಬದಲಿಸ್ಕೊಳಿ!
ಕೆಟ್ಟ ಸಮಯಗಳು ಜೀವನದಲ್ಲಿ ಬಂದೇ ಬರುತ್ತವೆ. ಅಂತಹ ಕಾಲದಲ್ಲಿ ಕೈಚೆಲ್ಲಿ ಹತಾಶರಾಗದೇ ಮುನ್ನಡೆಯುವುದು ಮುಖ್ಯ. ಎಷ್ಟು ಪ್ರಯತ್ನಿಸಿದರೂ ಕೆಲಸಗಳು ವಿಳಂಬವಾಗುತ್ತಿದ್ದರೆ, ಶ್ರಮ ಫಲಿಸದೇ ಹೋದರೆ ಗ್ರಹಗಳ ಸ್ಥಿತಿ, ಚಲನೆಗಳೇ ಕಾರಣವಾಗಿರಬಹುದು. ಇಂತಹ ಕೆಟ್ಟ ಸಮಯವನ್ನು ಜ್ಯೋತಿಷ್ಯ ಶಾಸ್ತ್ರದ ನೆರವಿನಿಂದ ಅದೃಷ್ಟವನ್ನಾಗಿ ಬದಲಾಯಿಸಿಕೊಳ್ಳಬಹುದು.
ಸಮಸ್ಯೆಗಳು ಜೀವನದ ಭಾಗ. ಆದರೆ, ಒಂದಾದ ಮೇಲೆ ಒಂದರಂತೆ ನಿರಂತರವಾಗಿ ಸಮಸ್ಯೆಗಳೇ ಬರುತ್ತಿರುವುದನ್ನು ನಾವು ಕೆಟ್ಟ ಸಮಯ ಎಂದು ಪರಿಗಣಿಸುತ್ತೇವೆ. ಅಂತಹ ಸಮಯದಲ್ಲಿ ಮಾಡುವ ಕೆಲಸಗಳಿಗೆಲ್ಲ ಏನೋ ಅಡೆತಡೆಗಳು. ಸುಗಮವಾಗಿ ಯಾವುದೂ ಸಾಗುವುದಿಲ್ಲ. ಕೆಟ್ಟ ಅದೃಷ್ಟದಲ್ಲೇ ಸಮಯ ನಿಂತುಬಿಟ್ಟಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಇದು ಸಿಕ್ಕಾಪಟ್ಟೆ ಹತಾಶೆಯನ್ನೂ ಉಂಟುಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗತಿಗಳ ಸ್ಥಿತಿ, ಚಲನೆಗಳಿಂದ ಕೆಟ್ಟ ಸಮಯ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇರುವವರು ಈ ಸಮಯದಲ್ಲಿ ಕುಂಡಲಿ ಅಥವಾ ಜಾತಕ ಪರಿಶೀಲಿಸಿಕೊಂಡು, ಜ್ಯೋತಿಷಿಗಳು ನೀಡುವ ಸಲಹೆಗಳನ್ನು ಅನುಸರಿಸುತ್ತಾರೆ. ಬಹಳಷ್ಟು ಜನರಿಗೆ ಇದೆಲ್ಲ ಬೋಗಸ್ ಎನ್ನಿಸಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರವೂ ಸಾಕಷ್ಟು ವೈಜ್ಞಾನಿಕ ಅಂಶಗಳಿಂದ ಕೂಡಿದೆ. ಬ್ರಹ್ಮಾಂಡದ ಗ್ರಹಗಳ ಚಲನೆಯನ್ನು ಕರಾರುವಕ್ಕಾಗಿ ತಿಳಿಸುತ್ತದೆ.
ಮನುಷ್ಯನ ಜೀವನದ ಮೇಲೆ ಗ್ರಹಗಳು ಬೀರುವ ಪರಿಣಾಮಗಳನ್ನು ಹೇಳುತ್ತದೆ. ಹೀಗಾಗಿ, ಕಷ್ಟದ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ನೆರವು ಪಡೆದುಕೊಳ್ಳುವುದು ಉತ್ತಮ ಎಂದು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಇದರ ಮೂಲಕ ಕೆಟ್ಟ ಸಮಯದ ಪ್ರಭಾವ ಕಡಿಮೆ ಮಾಡಿಕೊಳ್ಳುವ ಜತೆಗೆ, ಮುಂದಿನ ದಿನಗಳನ್ನು ಹೆಚ್ಚು ಅದೃಷ್ಟದಾಯಕವನ್ನಾಗಿ ಮಾಡಿಕೊಳ್ಳಬಹುದು. ಅದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತದೆ.
• ರತ್ನಗಳ ಥೆರಪಿ (Gemstones Therapy)
ಹರಳುಗಳು ಅಥವಾ ರತ್ನಗಳು ವಿಶಿಷ್ಟ ಕಂಪನಗಳನ್ನು (Vibrations) ಸೆಳೆದುಕೊಳ್ಳುವ ಶಕ್ತಿಯನ್ನು ಹೊಂದಿವೆ. ನಿರ್ದಿಷ್ಟ ಗ್ರಹದೊಂದಿಗೆ ಗುರುತಿಸುವ ಹರಳನ್ನು ಧರಿಸುವ ಮೂಲಕ ಅದರ ನೆಗೆಟಿವ್ (Negative) ಪ್ರಭಾವವನ್ನು (Effect) ಕಡಿಮೆ ಮಾಡಿಕೊಳ್ಳಬಹುದು. ಉದಾಹರಣೆಗೆ, ಹಳದಿ ರತ್ನವನ್ನು ಧರಿಸುವುದರಿಂದ ಗುರು (Jupiter) ಗ್ರಹದ ಪ್ರಭಾವವನ್ನು ಗಟ್ಟಿಮಾಡಿಕೊಳ್ಳಬಹುದು.
ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಉಂಟಾಗುವ ಸಮಸ್ಯೆಗಳಿಗೆ ಈ ಪರಿಹಾರ ಮಾಡಿ..
• ಪೂಜೆ, ಪದ್ಧತಿ (Rituals, Pooja)
ಬ್ರಹ್ಮಾಂಡದ (Celestial) ಶಕ್ತಿಗಳ ಕೃಪೆಗೆ ಪಾತ್ರರಾಗುವುದಕ್ಕೆ ಹಲವು ಪದ್ಧತಿಗಳು ಮತ್ತು ಪೂಜೆಗಳು ಸಹಕಾರಿಯಾಗುತ್ತವೆ. ಶನಿಯ (Shani) ಪ್ರಭಾವ ಅಧಿಕವಾಗಿದ್ದಾಗ ಕಾಡುವ ಕಿರಿಕಿರಿಗಳನ್ನು ಶನಿ ಶಾಂತಿ ಪೂಜೆ ಮಾಡಿಸುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಇಂತಹ ಪದ್ಧತಿಗಳನ್ನು ಅನುಭವಿಗಳಿಂದಲೇ ಮಾಡಿಸಿಕೊಳ್ಳಬೇಕು.
• ಮಂತ್ರಗಳು ಮತ್ತು ಶ್ಲೋಕಗಳು (Mantras and Shloka)
ನಿರ್ದಿಷ್ಟ ಗ್ರಹಕ್ಕೆ (Planet) ಸಮರ್ಪಣೆ ಮಾಡುವ ಮಂತ್ರಗಳನ್ನು ನಿತ್ಯವೂ ಪಠಿಸುವುದರಿಂದ ಲಾಭವಿದೆ. ಇದರಿಂದ ಬ್ರಹ್ಮಾಂಡದ ಶಕ್ತಿಯ ಜತೆಗೆ ನಮ್ಮ ಶಕ್ತಿಯ (Energy) ಸಾಮರಸ್ಯವೇರ್ಪಡುತ್ತದೆ. ಉದಾಹರಣೆಗೆ, “ಓಂ ಬ್ರಹಸ್ಪತಯೇ ನಮಃʼ ಎನ್ನುವ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ಗುರು ಗ್ರಹದ ಕೃಪೆಗೆ ಪಾತ್ರರಾಗಬಹುದು. ಇದು ಬುದ್ಧಿವಂತಿಕೆ ಮತ್ತು ಅದೃಷ್ಟಕ್ಕೆ (Fortune) ಪೂರಕ. ಕೆಟ್ಟ ಸಮಯವೂ ಉತ್ತಮವಾಗಿ ಬದಲಾಗುತ್ತದೆ ಎನ್ನಲಾಗುತ್ತದೆ. ಮಂತ್ರ ಮತ್ತು ಶ್ಲೋಕಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿವೆ. ವಿಷ್ಣುಸಹಸ್ರನಾಮ ಪಠಣದಿಂದ ಆರೋಗ್ಯ ಚೆನ್ನಾಗಿರುತ್ತದೆ. ಖಿನ್ನತೆ ಸೇರಿದಂತೆ ಯಾವುದೇ ರೀತಿಯ ಅನಾರೋಗ್ಯಕ್ಕೂ ಇದು ಪರಿಹಾರ ಎನ್ನಲಾಗಿದೆ. ಔಷಧದಿಂದ ಮಾಯವಾಗದ ನೋವಿನ ಉಪಶಮನಕ್ಕೂ ಸಹ ಕೆಲವು ರೀತಿಯ ಮಂತ್ರ, ಶ್ಲೋಕಗಳನ್ನು ದಿನವೂ ಹೇಳಲು ತಿಳಿಸಲಾಗುತ್ತದೆ.
• ಯಂತ್ರಗಳು (Yantras)
ಯಂತ್ರ, ತಾಯಿತಗಳನ್ನು ಹಾಕಿಕೊಳ್ಳುವ ಪದ್ಧತಿಯೂ ಸಾಕಷ್ಟು ಕಡೆಗಳಲ್ಲಿ ಕಂಡುಬರುತ್ತದೆ. ಕಾಸ್ಮಿಕ್ (Cosmic) ಶಕ್ತಿಯೊಂದಿಗೆ ಜ್ಯಾಮಿತೀಯ ರೇಖಾಚಿತ್ರಗಳನ್ನು ಯಂತ್ರಗಳಲ್ಲಿ ಅಳವಡಿಸಲಾಗುತ್ತದೆ. ಉತ್ತಮವಾಗಿ ಸಂಕಲ್ಪ ಮಾಡಲಾಗಿರುತ್ತದೆ. ಸರಿಯಾಗಿ ಎನರ್ಜಿ ತುಂಬಿದ ಯಂತ್ರಗಳು ಮನೆ ಅಥವಾ ಕಚೇರಿಯಲ್ಲಿ ನಿಮಗೆ ರಕ್ಷಣೆ ನೀಡುವಂತಹ ಪ್ರಭಾವಳಿ (Aura) ಸೃಷ್ಟಿಸುತ್ತವೆ.
ಲಬಕ್ಕನೆ ಲವ್ವಲ್ಲಿ ಬೀಳಿಸೋ ರಾಶಿಗಳಿವು! ಆದರೆ ಇವರನ್ನು ಪೂರ್ತಿ ನಂಬೋದು ಕಷ್ಡ..
• ಇತರೆ ಪರಿಹಾರಗಳು
ನಿರ್ದಿಷ್ಟ ಗ್ರಹದಿಂದ ಸಮಸ್ಯೆ ಆಗುತ್ತಿದ್ದರೆ ಜ್ಯೋತಿಷಿಗಳು ಎಷ್ಟೋ ಬಾರಿ ನಿಮಗೆ ಹೊಂದಾಣಿಕೆಯಾಗುವಂತಹ ಪ್ರತ್ಯೇಕವಾದ ಪರಿಹಾರಗಳನ್ನು ತಿಳಿಸುತ್ತಾರೆ. ನಿರ್ದಿಷ್ಟ ದಿನಗಳಂದು ಉಪವಾಸ (Fasting) ಮಾಡುವುದು, ನಿಗದಿತ ದಿನದಂದು ವಿವಿಧ ಬಣ್ಣದ ವಸ್ತುಗಳನ್ನು ದಾನ (Donate) ನೀಡುವ ಕ್ರಮಗಳನ್ನು ಅನುಸರಿಸಲು ತಿಳಿಸುತ್ತಾರೆ. ಹೀಗಾಗಿ, ಕೆಟ್ಟ ಸಮಯದಲ್ಲಿರುವಾಗ ಜ್ಯೋತಿಷಿಗಳ ಸಲಹೆ ಪಡೆಯುವುದು ಶ್ರೇಯಸ್ಕರ.