Asianet Suvarna News Asianet Suvarna News

ಈ 5 ರಾಶಿಯವರು ಸಖತ್ romantic.. ನೀವಿದ್ದೀರಾ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಶಿಗಳಿಗುನುಗುಣವಾಗಿ ಒಬ್ಬರ ವ್ಯಕ್ತಿತ್ವವನ್ನು ತಿಳಿಯಬಹುದು. ಹೀಗಾಗಿ ರಾಶಿಚಕ್ರಗಳ ಆಧಾರದ ಮೇಲೆ ಅವರ ಸಂಬಂಧಗಳು ಹೇಗಿರಲಿವೆ..? ಸಂಗಾತಿಯನ್ನು ಹೇಗೆ ನೋಡಿಕೊಳ್ಳುತ್ತಾರೆ? ಅವರೊಂದಿಗಿನ ರೊಮ್ಯಾಂಟಿಕ್ ಲೈಫ್ ಹೇಗಿರಲಿದೆ? ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಯಾವ ಐದು ರಾಶಿಯವರು ಸಖತ್ ರೊಮ್ಯಾಂಟಿಕ್ ಎಂಬುದನ್ನು ತಿಳಿಯೋಣವೇ..?

People of these zodiacs are very romantic
Author
Bangalore, First Published Jan 12, 2022, 6:03 PM IST

ಹಿಂದೂ ಧರ್ಮದಲ್ಲಿ (Hindu Religion) ಜ್ಯೋತಿಷ್ಯ ಶಾಸ್ತ್ರಕ್ಕೆ (Astrology) ಬಹಳ ಮಹತ್ವವಿದೆ. ಯಾವುದೇ ಒಂದು ಮಗು (Child) ಜನಿಸಿದಾಗಿನಿಂದ (Birth) ಸಾಯುವವರೆಗೆ (Death) ಏನೆಲ್ಲ ಆಗಬಹುದು..? ಯಾವ ಯಾವ ರೀತಿ ಏಳ್ಗೆಯನ್ನು ಗಳಿಸಬಹುದು? ಸಮಸ್ಯೆಗಳನ್ನು (Problems)  ಎದುರಿಸಬಹುದು? ಅದರ ಶೈಕ್ಷಣಿಕ ಜೀವನ (Education), ವೃತ್ತಿ ಬದುಕು (Career), ದಾಂಪತ್ಯ ಬದುಕು (Marriage Life) ಹೀಗೆ ಎಲ್ಲ ವಿಷಯಗಳನ್ನು ಈ ಜ್ಯೋತಿಷ್ಯದ ಮೂಲಕ ತಿಳಿದುಕೊಳ್ಳಬಹುದು.

ಜೀವನ (Life) ಎಂದ ಮೇಲೆ ವಿರಸ – ಸರಸ ಇರಲೇಬೇಕು. ಸ್ವಲ್ಪ ರಸಿಕತನವೂ ಇರಬೇಕು. ಈ ರೊಮ್ಯಾನ್ಸ್ (Romance) ವಿಷಯಕ್ಕೆ ಬಂದರೆ ಒಬ್ಬೊಬ್ಬರದ್ದು ಒಂದೊಂದು ಟೇಸ್ಟ್. ಅದು ಹುಡುಗನಾಗಿರಲಿ (Boy) ಇಲ್ಲವೇ ಹುಡುಗಿಯಾಗಿರಲಿ (Girl) ತಮ್ಮ ಸಂಗಾತಿ ರೊಮ್ಯಾಂಟಿಕ್ (Romantic) ಆಗಿರಬೇಕೆಂಬುದು ಎಲ್ಲರ ಆಸೆ ಕೂಡ. ಕೆಲವು ರಾಶಿಯವರಲ್ಲಿ ಈ ರೊಮ್ಯಾಂಟಿಕ್ ಭಾವ ತುಸು ಹೆಚ್ಚೇ ಇದೆ. ಆ ಐದು ರಾಶಿಗಳು ಯಾವುವು...? ಯಾರು ಎಷ್ಟು ರೊಮ್ಯಾಂಟಿಕ್ ಎಂಬುದನ್ನು ನೋಡೋಣ ಬನ್ನಿ...!

ಮೀನ (Pisces)
ಮೀನ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಸ್ವಭಾವದವರಾಗಿದ್ದು, ಹೆಚ್ಚು ಕಾಳಜಿಯನ್ನು (Care) ಹೊಂದಿದವರಾಗಿದ್ದಾರೆ. ಇವರಿಗೆ ಒಮ್ಮೆ ಯಾವುದಾದರೂ ವ್ಯಕ್ತಿ ಇಷ್ಟವಾದರೆ (Like) ಸಾಕು, ಅವರ ಬೇಕು – ಬೇಡಗಳನ್ನು ತಿಳಿದುಕೊಂಡುಬಿಟ್ಟಿರುತ್ತಾರೆ. ಇನ್ನು ಇವರ ಪ್ರಣಯ ಜೀವನಕ್ಕೆ ಬರುವುದಾದರೆ ಸಂಗಾತಿಯನ್ನು ಏಕಾಂಗಿಯಾಗಿ ಬಿಡುವವರಲ್ಲ. ಸದಾ ಅವರ ಜೊತೆಗೆ ಕಾಲ ಕಳೆಯಬೇಕೆಂದು ಆಸೆಪಡುತ್ತಾರೆ. ತುಂಬಾ ರೊಮ್ಯಾಂಟಿಕ್ ಐಡಿಯಾವನ್ನು (Idia) ಇಟ್ಟುಕೊಂಡಿರುವ ಇವರುಗಳು, ಕ್ಯಾಂಡಲ್ ಲೈಟ್ ಡಿನ್ನರ್‌ಗಳಂತಹ (Candle Light Dinner) ಸಪ್ರೈಸ್‌ಗಳನ್ನು (Surprise) ಆಗಾಗ ನೀಡುತ್ತಿರುತ್ತಾರೆ. ಅಲ್ಲದೇ, ತಮ್ಮರಿಗಾಗಿ ಕವಿತೆಗಳನ್ನೂ (Poetry) ಬರೆಯುತ್ತಾರೆ. 

ಇದನ್ನು ಓದಿ: Astrology Tips: ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಮಹಿಳೆಯರೇನು ಮಾಡಬೇಕು?

ಕರ್ಕಾಟಕ (Cancer)
ಕರ್ಕಾಟಕ ರಾಶಿಯವರು ಸಹ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಕರ್ಕಾಟಕ ರಾಶಿಯವರು ಅತ್ಯಂತ ನಿಷ್ಠಾವಂತರು (Loyal) ಹಾಗೂ ಸಮರ್ಪಣಾ (Dedication) ಭಾವದವರು. ಇವರು ಸಂಗಾತಿಯನ್ನು ಹಚ್ಚಿಕೊಂಡರೆಂದರೆ ಸಾಕು ಅವರನ್ನು ಸುಲಭವಾಗಿ ಬಿಟ್ಟು ಹೋಗುವವರಲ್ಲ. ಅದು ಎಂಥದ್ದೇ ಸಮಯ (Time), ಸನ್ನಿವೇಶಗಳಿರಲಿ ತಮ್ಮ ಸಂಗಾತಿಯ ಇಷ್ಟ – ಕಷ್ಟಗಳನ್ನು ಅರಿತು ನೋಡಿಕೊಳ್ಳುತ್ತಾರೆ. ಇದರ ಜೊತೆಗೆ ತಮ್ಮ ಸಂಗಾತಿಯನ್ನು ಮೆಚ್ಚಿಸುವ ಅವಕಾಶ ಸಿಕ್ಕರೆ ಅದನ್ನು ಮಿಸ್ (Miss) ಮಾಡಿಕೊಳ್ಳಲಾರರು.

ವೃಷಭ (Taurus)
ವೃಷಭ ರಾಶಿಯವರನ್ನು ನೋಡಿದರೆ ಅವರು ರೊಮ್ಯಾಂಟಿಕ್ ಎಂದೆನಿಸುವುದಿಲ್ಲ. ಆದರೆ ಇವರು ಸಂಗಾತಿಯನ್ನು ಮೆಚ್ಚಿಸಲು ಏನೆಲ್ಲಾ ಶ್ರಮ ಹಾಕಬೇಕೋ ಅದನ್ನು ಹಾಕುತ್ತಾರೆ. ಸಂಗಾತಿಗೋಸ್ಕರ ಹಲವು ಸಪ್ರೈಸ್ ಪ್ಲಾನ್‌ಗಳನ್ನು ಮಾಡುವ ಇವರು, ಕ್ಯಾಂಡಲ್ ಲೈಟ್ ಡಿನ್ನರ್, ಸಿನಿಮಾ (Movie), ಪಿಕ್‌ನಿಕ್ ಹೀಗೆ ಹಲವು ಕಾರ್ಯಯೋಜನೆಗಳು ಇವರ ಬತ್ತಳಿಕೆಯಲ್ಲಿರಲಿವೆ. ಇದರಿಂದ ಸಂಗಾತಿಯನ್ನು ಖುಷಿಪಡಿಸುತ್ತಾರೆ. 

ಕನ್ಯಾ (Virgo)
ಕನ್ಯಾ ರಾಶಿಯವರು ಸೌಮ್ಯ ಸ್ವಭಾವದವರು. ಜೊತೆಗೆ ಇವರಿಗೆ ಇನ್ನೊಬ್ಬರ ಖುಷಿ (Happy) ಮುಖ್ಯ. ಅದಕ್ಕಾಗಿ ತಮ್ಮ ಆಸೆಯನ್ನೇ ಬಿಟ್ಟುಬಿಡುವ ಜಾಯಮಾನದವರು ಇವರಾಗಿದ್ದು, ಸಂಗಾತಿಯನ್ನು ತುಂಬಾ ರೊಮ್ಯಾಂಟಿಕ್ ಆಗಿ ನೋಡುತ್ತಾರೆ. ತಮ್ಮದೇ ರೀತಿಯಲ್ಲಿ ಅವರನ್ನು ತಮ್ಮವರನ್ನು ಖುಷಿಗೊಳಿಸುತ್ತಾರೆ. 

ಇದನ್ನು ಓದಿ: Numerology: ಪಾದಾಂಕ 1ರಲ್ಲಿ ಹುಟ್ಟಿದವರ 2022ರ ವರ್ಷ ಭವಿಷ್ಯ ಹೀಗಿದೆ..

ಸಿಂಹ (Leo)
ಸಿಂಹ ರಾಶಿಯವರು ಲವ್ ವಿಷಯದಲ್ಲಿ ಸಖತ್ ಎಮೋಷನಲ್ (Emotional). ಇವರು ಯಾವಾಗಲೂ ತಮ್ಮ ಸಂಗಾತಿ ಬಗ್ಗೆ ಚಿಂತಿಸುತ್ತಾ ಅವರ ಸುಖ- ಸಂತೋಷಕ್ಕೆ ಪ್ರಯತ್ನಪಡುತ್ತಾರೆ. ಹೀಗಾಗಿ ಲಾಂಗ್ ಜರ್ನಿ (Journey), ಸುಂದರ ತಾಣಿಗಳಿಗೆ ತಮ್ಮವರನ್ನು ಕರೆದೊಯ್ದು, ಅವರನ್ನು ಸಂತುಷ್ಟರನ್ನಾಗಿಡಲು ಪ್ರಯತ್ನಿಸುವರು.

Follow Us:
Download App:
  • android
  • ios