Numerology: ಪಾದಾಂಕ 1ರಲ್ಲಿ ಹುಟ್ಟಿದವರ 2022ರ ವರ್ಷ ಭವಿಷ್ಯ ಹೀಗಿದೆ..
ಸಂಖ್ಯಾಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗ. ಇದರಿಂದ ವ್ಯಕ್ತಿಗಳ ಅದೃಷ್ಟವನ್ನು ತಿಳಿದುಕೊಳ್ಳಬಹುದು. ಇದಕ್ಕೆ ಹುಟ್ಟಿದ ದಿನಾಂಕಕ್ಕಿಂತ ಆ ದಿನಾಂಕಗಳಿಂದ ಬರುವ ಪಾದಾಂಕದ ಮೇಲೆ ಅದೃಷ್ಟದ ಲೆಕ್ಕಾಚಾರ ಹಾಕಲಾಗುತ್ತದೆ. ಹಾಗಾದರೆ ಪಾದಾಂಕ 1ರಲ್ಲಿ ಜನಿಸಿದವರ 2022ರ ಭವಿಷ್ಯದ ಬಗ್ಗೆ ತಿಳಿಯೋಣವೇ..?
ಹೊಸ ಕ್ಯಾಲೆಂಡರ್ ವರ್ಷ 2022 ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ವರ್ಷವಿಡೀ ತಾವು ಹೇಗಿರಬಹುದು? ತಮಗೆ ಏನು ಉತ್ತಮ? ಈ ವರ್ಷದ ಭವಿಷ್ಯ (Yearly Prediction) ಹೇಗಿದೆ ಎಂಬುದನ್ನು ಅರಿಯುವ ಹಂಬಲ ಬಹುತೇಕರಿಗೆ ಇದ್ದೇ ಇರುತ್ತದೆ. ಆರೋಗ್ಯ (Health), ಆರ್ಥಿಕ ಸ್ಥಿತಿ (Economic Condition), ಪ್ರೇಮ ಸಂಬಂಧ (Love Relation), ಸ್ನೇಹ (Friendship), ವೈವಾಹಿಕ ಜೀವನ (Marriage Life), ಶೈಕ್ಷಣಿಕ ಜೀವನ (Education), ವೃತ್ತಿ ಬದುಕು ಹೀಗೆ.. ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ (Curiosity) ಸಹಜವಾಗಿಯೇ ಇರಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹುಟ್ಟಿದ ದಿನ, ಘಳಿಗೆ, ರಾಶಿ, ನಕ್ಷತ್ರಗಳ ಮೇಲೆ ಹೇಗೆ ಒಬ್ಬ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದೋ ಹಾಗೇಯೇ ಅದರ ಇನ್ನೊಂದು ಭಾಗವಾಗಿರುವ ಸಂಖ್ಯಾಶಾಸ್ತ್ರದ ಅನುಸಾರ ವ್ಯಕ್ತಿಯ ಪಾದಾಂಕದಿಂದ ಭವಿಷ್ಯದ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.
ಪಾದಾಂಕ 1
ಪಾದಾಂಕ (Padanka) 1 ಅನ್ನು ಹೊಂದಿದವರಿಗೆ ಸೂರ್ಯ ಗ್ರಹದ (Sun Planet) ಅನುಗ್ರಹವಿರುತ್ತದೆ. 1, 10, 19 ಮತ್ತು 28ರ ತಾರೀಖಿನಂದು ಜನಿಸಿದವರ ಪಾದಾಂಕ 1 ಆಗಿರಲಿದೆ. ಯಾವುದೇ ತಿಂಗಳಲ್ಲಿ (Month) ಜನಿಸಿದ್ದರೂ ಈ ದಿನಾಂಕದಲ್ಲಿ ಜನಿಸಿದವರ ಪಾದಾಂಕ ಬದಲಾಗುವುದಿಲ್ಲ. ಈ ಪಾದಾಂಕದಲ್ಲಿ ಹುಟ್ಟಿದವರಿಗೆ ನಾಯಕತ್ವ (Leadership) ಗುಣ ಇರುತ್ತದೆ. ಜೊತೆಗೆ ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇವರು ಸಾಕಷ್ಟು ಪರಿಶ್ರಮಿಗಳೂ ಹೌದು. ಎಂತಹ ಸಂದರ್ಭದಲ್ಲಾದರೂ ಸುಲಭವಾಗಿ ನಿರ್ಧಾರ (Decision) ತೆಗೆದುಕೊಳ್ಳಬಲ್ಲವರು. ಬುದ್ಧಿವಂತಿಕೆಯಿಂದಲೇ ಜೀವನದಲ್ಲಿ ಹೆಚ್ಚಿನ ಹಣವನ್ನು (Money) ಸಂಪಾದಿಸುತ್ತಾರೆ. ಹಣ ಹೂಡುವ (Investment), ಉಳಿಕೆ ಮಾಡುವ ಮನಸ್ಥಿತಿ ಇವರದ್ದು. ಹಾಗಾಗಿ ಲಕ್ಷ್ಮಿ ಮಾತೆಯ ಕೃಪಾಕಟಾಕ್ಷ ಇವರ ಮೇಲೆ ಸದಾ ಇರಲಿದೆ. ಇವರಿಗೆ ಎಂದೂ ಹಣದ ಕೊರತೆಯಾಗದು. ಅಲ್ಲದೆ, ಈ ವ್ಯಕ್ತಿಗಳು ವಾಗ್ಮಿಗಳಾಗಿದ್ದು, ಪ್ರಾಮಾಣಿಕರಾಗಿರುತ್ತಾರೆ. ಜೊತೆಗೆ ಕೆಲಸ – ಕಾರ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಯಾವುದೇ ಕೆಲಸವನ್ನು ಕೊಟ್ಟರೂ ನಿಷ್ಠೆಯಿಂದ ಮಾಡುತ್ತಾರೆ. ಈ ಎಲ್ಲದರ ಜೊತೆಗೆ ಕ್ರಿಯಾಶೀಲ ವ್ಯಕ್ತಿತ್ವವನ್ನೂ (Personality) ಹೊಂದಿರುತ್ತಾರೆ.
ಈ ವರ್ಷ ಮಿಶ್ರಫಲ
2022ರಲ್ಲಿ ಪಾದಾಂಕ 1ರ ವ್ಯಕ್ತಿಗಳಿಗೆ ಮಿಶ್ರಫಲವಿದೆ. ಈ ವರ್ಷ ಪ್ರೇಮ ಜೀವನವು ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು (Time) ಕಳೆಯಲಿದ್ದು, ಸುಖ ಜೀವನ ಇವರದ್ದಾಗಲಿದೆ. ಪ್ರೀತಿಯಲ್ಲಿರುವವರಿಗೆ ವಿವಾಹವಾಗುವ (Marriage) ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನು ಓದಿ: Samudrika Shastra: ಲವ್, ಸೆಕ್ಸ್, ಹೆಲ್ತ್‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?
ಖರ್ಚಿನಲ್ಲಿ ನಿಯಂತ್ರಣ ಇರಲಿ
ಈ ವರ್ಷ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ, ಖರ್ಚಿನಲ್ಲಿ ನಿಯಂತ್ರಣ (Control) ಹೊಂದುವುದು ಉತ್ತಮ. ವರ್ಷದ ಮೊದಲ ಮೂರು ತಿಂಗಳು ಹೆಚ್ಚು ಪರಿಶ್ರಮ ಪಡುವ ಅವಶ್ಯಕತೆ ಇದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು (Opportunities) ದೊರಕುವ ಯೋಗವಿದೆ. ಸರ್ಕಾರಿ ಕೆಲಸಕ್ಕಾಗಿ (Government Job) ಪ್ರಯತ್ನಿಸುವವರಿಗೆ ಉತ್ತಮ ಫಲಿತಾಂಶ (Good Result) ಪ್ರಾಪ್ತವಾಗಲಿದೆ.
ವ್ಯಾಪಾರಸ್ಥರೇ ಎಚ್ಚರ
ವ್ಯಾಪಾರಸ್ಥರು ವರ್ಷದ ಪ್ರಾರಂಭದಲ್ಲಿ ಜಾಗರೂಕರಾಗಿರಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ನಷ್ಟ ಹಾಗೂ ಮೋಸಕ್ಕೆ ಒಳಗಾಗಬಹುದು. ಈ ಸಂದರ್ಭದಲ್ಲಿ ಪಾಲುದಾರರಿಂದ ಮೋಸಹೋಗುವ ಸಾಧ್ಯತೆ ಸಹ ಹೆಚ್ಚಿದೆ. ಹಾಗಾಗಿ ನೀವು ಮಾಡುವ ಕೆಲಸದಲ್ಲಿ ನಿಗಾ ಇರಲಿ. ಇದರ ಜೊತೆಗೆ ವ್ಯಾಪಾರದಲ್ಲಿಯೂ (Business) ಏರುಪೇರಾಗುವ ಸಂಭವ ಹೆಚ್ಚಿದೆ. ಹಾಗಾಗಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.
ಇದನ್ನು ಓದಿ: Saturn Effect: ನಿಮ್ಮ ರಾಶಿಗೆ ಶನಿ ಎಂಟ್ರಿ ಕೊಟ್ರೆ ಏನಾಗತ್ತೆ?
ವಿದ್ಯಾರ್ಥಿಗಳಿಗೆ (Students) ಉತ್ತಮ ವರ್ಷ
ಸಂಖ್ಯಾಶಾಸ್ತ್ರದ ಅನುಸಾರ ವಿದ್ಯಾರ್ಥಿಗಳಿಗೆ 2022ರ ವರ್ಷ ಉತ್ತಮವಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಫಲತೆ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದ (Health) ವಿಚಾರದಲ್ಲಿ ಈ ವರ್ಷ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಕಣ್ಣಿಗೆ (Eye) ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ. ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಸಹ ಹೆಚ್ಚಿದ್ದು, ತಂದೆಯ ಆರೋಗ್ಯದಲ್ಲಿಯೂ ಏರುಪೇರಾಗುವ ಸಂಭವವಿದ್ದು, ಜಾಗರೂಕರಾಗಿರುವುದು ಒಳ್ಳೆಯದು.