ಬರ್ಸಾನಾದ ಶ್ರೀ ಗೋವಿಂದ ಧಾಮಕ್ಕೆ ಪೇಜಾವರ ಶ್ರೀ ಶಿಲಾನ್ಯಾಸ, ಇಲ್ಲೇ ಹುಟ್ಟಿದ್ದು ರಾಧೆ
ಉತ್ತರ ಪ್ರದೇಶದ ಮಥುರಾ ಸಮೀಪದ ಬರ್ಸಾನಾದಲ್ಲಿ ಗೋವಿಂದ ಧಾಮ ಆಶ್ರಮ ನಿರ್ಮಾಣಕ್ಕಾಗಿ ಪೇಜಾವರ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ಈ ಬರ್ಸಾನಾದ ವಿಶೇಷವೇನು ಗೊತ್ತಾ?
ಉತ್ತರ ಪ್ರದೇಶದ ಬರ್ಸಾನಾದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಗೋವಿಂದ ಧಾಮಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು . ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಪ್ರೇರಣೆಯಿಂದ ಆ ಪ್ರದೇಶದಲ್ಲಿ ಶ್ರೀ ಮಧ್ವಾಚಾರ್ಯರ ಸಂದೇಶ ಪ್ರಸಾರಕಾರ್ಯದಲ್ಲಿ ನಿರತರಾಗಿರುವ ತಿಜಾರಾದ ಪ್ರೇಮಪೀಠದ ಆಚಾರ್ಯ ಶ್ರೀ ಲಲಿತ್ ಮೋಹನ್ ಅವರ ನೇತೃತ್ವದಲ್ಲಿ ಈ ನೂತನ ಆಶ್ರಮವು ನಿರ್ಮಾಣಗೊಳ್ಳಲಿದೆ .
ಕೃಷ್ಣನ ಜನ್ಮಸ್ಥಳ ಮಥುರಾದಿಂದ 47 ಕಿಲೋಮೀಟರ್ ದೂರದಲ್ಲಿರುವ ಬರ್ಸಾನಾವು ಕೃಷ್ಣನ ಪ್ರೇಯಸಿ ರಾಧೆಯ ಜನ್ಮಸ್ಥಳ. ಇಲ್ಲಿನ ರಾಧಾ ರಾಣಿ ದೇವಾಲಯ(Radha Rani Temple) ಬಹಳ ಪ್ರಸಿದ್ಧವಾಗಿದೆ. ಇದೀಗ ರಾಧೆಯ ನಗರದಲ್ಲಿ ಗೋವಿಂದ ಧಾಮ ಆಶ್ರಮ ಕೂಡಾ ನಿರ್ಮಾಣವಾಗುತ್ತಿರುವುದು ಬಹಳ ವಿಶೇಷವೆನಿಸಿದೆ.
ಬರ್ಸಾನಾದ ವಿಶೇಷ
ಮಥುರಾದ ಬರ್ಸಾನಾ(Barsana)ದಲ್ಲಿರುವ ರಾಧಾ ರಾಣಿ ದೇವಾಲಯವು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಬರ್ಸಾನಾದ ಮಧ್ಯದಲ್ಲಿ ಬೆಟ್ಟವಿದ್ದು, ಅದರ ಮೇಲೆ ಈ ಸುಂದರವಾದ ದೇವಾಲಯವಿದೆ. ಈ ದೇವಾಲಯವನ್ನು 'ಬರ್ಸಾನೆ ಕಿ ಲಾಡ್ಲಿ ಜಿ ಕಾ ಮಂದಿರ್' ಮತ್ತು 'ರಾಧಾರಾಣಿ ಮಹಲ್' ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್‌ನ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನಾಂಕದಂದು, ರಾಧಾ ರಾಣಿಯ ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ, ಏಕೆಂದರೆ ಈ ದಿನವನ್ನು ರಾಧಾಷ್ಟಮಿ ಎಂದು ಆಚರಿಸಲಾಗುತ್ತದೆ. ಸ್ಕಂದ ಪುರಾಣ ಮತ್ತು ಗರ್ಗ ಸಂಹಿತೆಯ ಪ್ರಕಾರ, ಈ ದಿನದಂದು ಬರ್ಸಾನೆಯಲ್ಿ ಕೃಷ್ಣನ ಪ್ರೇಯಸಿ ರಾಧಾ ಜನಿಸಿದಳು.
Zodiac Outfits: ದೀಪಾವಳಿಗೆ ನಿಮ್ಮ ರಾಶಿಗೆ ಹೊಂದುವ ಈ ಬಟ್ಟೆ ಧರಿಸಿ
ಬೆಟ್ಟದ ಮೇಲೆ ನಿರ್ಮಿಸಲಾಗಿದೆ
ರಾಧಾ ರಾಣಿಯ ಈ ಪುರಾತನ ದೇವಾಲಯವು ಮಧ್ಯಕಾಲೀನವಾಗಿದೆ. ಇದನ್ನು ಕೆಂಪು ಮತ್ತು ಹಳದಿ ಕಲ್ಲಿನಿಂದ ಮಾಡಲಾಗಿದೆ. ರಾಧಾ-ಕೃಷ್ಣರಿಗೆ ಸಮರ್ಪಿತವಾದ ಈ ಭವ್ಯವಾದ ಮತ್ತು ಸುಂದರವಾದ ದೇವಾಲಯವನ್ನು ರಾಜ ವೀರ್ ಸಿಂಗ್ ಅವರು 1675 ADನಲ್ಲಿ ನಿರ್ಮಿಸಿದರು. ರಾಧಾ ರಾಣಿಯ ಈ ಸುಂದರವಾದ ಮತ್ತು ಮೋಡಿ ಮಾಡುವ ದೇವಾಲಯವನ್ನು ಸುಮಾರು ಇನ್ನೂರೈವತ್ತು ಮೀಟರ್ ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ ಮತ್ತು ಈ ದೇವಾಲಯವನ್ನು ತಲುಪಲು ಮೆಟ್ಟಿಲುಗಳನ್ನು ಹತ್ತಬೇಕು. ರಾಧೆಯನ್ನು ಶ್ರೀ ಕೃಷ್ಣನ ಆತ್ಮಿಕ ಶಕ್ತಿ ಮತ್ತು ನಿಕುಂಜೇಶ್ವರಿ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ರಾಧಾ ಕಿಶೋರಿಯ ಆರಾಧಕರಿಗೆ ಇದು ನೆಚ್ಚಿನ ತೀರ್ಥಯಾತ್ರಾ ಸ್ಥಳವಾಗಿದೆ.
ಕಪ್ಪು ಮತ್ತು ಬಿಳಿ ಕಲ್ಲುಗಳು
ಬರ್ಸಾನಾದ ಪವಿತ್ರ ಸ್ಥಳವು ತುಂಬಾ ಹಸಿರು ಮತ್ತು ಸುಂದರವಾಗಿದೆ. ಅದರ ಬೆಟ್ಟಗಳ ಕಲ್ಲುಗಳು ಶ್ಯಾಮವರ್ಣದ್ದಾಗಿದ್ದು, ಇಲ್ಲಿನ ನಿವಾಸಿಗಳು ಇದನ್ನು ಕೃಷ್ಣ ಮತ್ತು ರಾಧೆಯ ಅಮರ ಪ್ರೇಮದ ಸಂಕೇತವೆಂದು ಪರಿಗಣಿಸುತ್ತಾರೆ. ನಂದಗಾಂವ್ ಬರ್ಸಾನೆಯಿಂದ 4 ಮೈಲಿ ದೂರದಲ್ಲಿದೆ, ಅಲ್ಲಿ ಶ್ರೀಕೃಷ್ಣನ ತಂದೆ ನಂದಾಜಿ ಅವರ ಮನೆ ಇತ್ತು. ಬರ್ಸಾನಾ-ನಂದಗಾಂವ್ ರಸ್ತೆಯಲ್ಲಿ ಸಂಕೇತ್ ಎಂಬ ಸ್ಥಳವಿದೆ. ದಂತಕಥೆಯ ಪ್ರಕಾರ, ಕೃಷ್ಣ ಮತ್ತು ರಾಧೆಯ ಮೊದಲ ಭೇಟಿ ಇಲ್ಲಿ ನಡೆಯಿತು.
Alien News: ಡಿಸೆಂಬರ್ 8ಕ್ಕೆ ಭೂಮಿಗೆ ಬರಲಿದ್ದಾರೆ ಅನ್ಯಗ್ರಹ ಜೀವಿಗಳು!
ಇತ್ತೀಚೆಗೆ ಈ ರಾಧಾರಾಣಿ ದೇವಾಲಯಕ್ಕೆ ದೇಶದ ಮೊದಲ ಮಹಿಳಾ ಅರ್ಚಕಿಯ ನೇಮಕ ವಿಷಯ ವಿವಾದ ಎಬ್ಬಿಸಿತ್ತು. 80 ವರ್ಷ ವಯಸ್ಸಿನ ಮಾಯಾದೇವಿ ಕುಟುಂಬ ಪೂಜೆಯನ್ವಯ ಈ ದೇವಾಲಯಕ್ಕೆ ಅರ್ಚಕಿಯಾಗಬೇಕಿತ್ತು. ಆದರೆ ಇದಕ್ಕೆ ಎಲ್ಲೆಡೆಯಿಂದ ವಿರೋಧ ಕೇಳಿಬಂತು. ಜೊತೆಗೆ, ಅವರ ಆರೋಗ್ಯ ಮತ್ತು ವಯಸ್ಸು ಕೂಡಾ ಅಡ್ಡಿಯಾಯಿತು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.