ವಿವಾಹದಲ್ಲಿ ಜಾತಕದ ಜೊತೆಗೆ ಹುಟ್ಟಿದ ದಿನಾಂಕವೂ ಮುಖ್ಯ. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಪರಸ್ಪರ ವಿವಾಹವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, 1, 10, 19, 28 ರಂದು ಹುಟ್ಟಿದವರು 8, 17, 26 ರಂದು ಹುಟ್ಟಿದವರನ್ನು ಮದುವೆಯಾಗಬಾರದು. ಹೀಗೆ ಕೆಲವು ದಿನಾಂಕಗಳ ಸಂಯೋಜನೆಗಳು ದಾಂಪತ್ಯದಲ್ಲಿ ಅಶಾಂತಿ ತರುತ್ತವೆ.

ವಿವಾಹದ ಬಗ್ಗೆ ಸಂಪ್ರದಾಯ, ಆಚರಣೆ, ನಂಬಿಕೆಗಲು ಬದಲಾಗುತ್ತಿದ್ದರೂ ಇಂದಿಗೂ ವಿವಾಹ (marriage) ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಮಹತ್ವವನ್ನು ಹೊಂದಿದೆ, ಇದರಲ್ಲಿ ಇಬ್ಬರು ವ್ಯಕ್ತಿಗಳು ಮಾತ್ರವಲ್ಲದೆ ಅವರ ಇಡೀ ಕುಟುಂಬ ಭಾಗಿಯಾಗಿದೆ. ಮದುವೆಯಾಗುವ ಮೊದಲು, ಪೋಷಕರು ವಧು ಮತ್ತು ವರನ ಜಾತಕವನ್ನು ಹೊಂದಿಸುತ್ತಾರೆ. ಹೊಂದಾಣಿಕೆಯಾದರೆ ಮಾತ್ರ ಅವರು ಮದುವೆಯಾಗುತ್ತಾರೆ. ಹೊಂದಾಣೀಕೆಯಾದರೆ ಮಾತ್ರ ತಮ್ಮ ಮಕ್ಕಳ ವಿವಾಹವು ದೀರ್ಘಕಾಲ ಉಳಿಯುತ್ತದೆ ಎಂದು ಪೋಷಕರು ಅಂದುಕೊಂಡಿದ್ದಾರೆ. ಜ್ಯೋತಿಷ್ಯದಲ್ಲಿ ಜಾತಕಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದರೂ, ಸಂಖ್ಯಾಶಾಸ್ತ್ರದಲ್ಲಿ (numerology)ಹುಟ್ಟಿದ ದಿನಾಂಕವು ಬಹಳ ಮುಖ್ಯವಾಗಿದೆ. ರೇಡಿಕ್ಸ್ ಅಂದರೆ ಹುಟ್ಟಿದ ದಿನಾಂಕದ ಮೂಲಕ, ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯ, ಮನೋಧರ್ಮ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಒಬ್ಬ ವ್ಯಕ್ತಿಗೆ ಯಾವ ಹುಟ್ಟಿದ ದಿನಾಂಕವು ಒಳ್ಳೆಯದು ಎಂಬ ಮಾಹಿತಿಯನ್ನು ಸಹ ಪಡೆಯಬಹುದು.

ಈ ದಿನಾಂಕದಂದು ಜನಿಸಿದವರಿಗೆ ಸರ್ಕಾರಿ ಉದ್ಯೋಗ ಭಾಗ್ಯ, ಅಪಾರ ಹಣ ಮತ್ತು ಸಂಪತ್ತನ್ನು ಪಡೆಯುತ್ತಾರೆ

ಇಂದು, ಸಂಖ್ಯಾಶಾಸ್ತ್ರದ ಸಹಾಯದಿಂದ, ಯಾವ ದಿನ ಹುಟ್ಟಿದ ವ್ಯಕ್ತಿಯು (date of birth) ಯಾವ ದಿನಾಂಕದಂದು ಜನಿಸಿದ ಜನರನ್ನು ಮದುವೆಯಾಗಬಾರದು ಅನ್ನೋದನ್ನು ನೋಡೋಣ. ಈ ಎರಡು ದಿನಾಂಕಗಳ ಜನರು ಮದುವೆಯಾದರೆ, ಅವರು ತಮ್ಮ ಜೀವನದುದ್ದಕ್ಕೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ದಂಪತಿಗಳ ನಡುವೆ ಜಗಳಗಳ ಹೆಚ್ಚಾಗಿ, ವೈವಾಹಿಕ ಜೀವನದಲ್ಲಿ (married life)ಶಾಂತಿ, ನೆಮ್ಮದಿ, ಸಂತೋಷ ಯಾವುದೂ ಇರೋದಿಲ್ಲ. ಹಾಗಿದ್ರೆ ಯಾರು, ಯಾರನ್ನ ಮದುವೆಯಾಗಬಾರದು ನೋಡೋಣ. 

ಈ ದಿನಾಂಕದಲ್ಲಿ ಹುಟ್ಟಿರುವ ಜನರು ಬೇರೆಯವರ ಮನಸ್ಸು ಕೆಡಿಸುವಲ್ಲಿ ಮುಂದು

ಸಂಖ್ಯೆ 1
1, 10, 19 ಅಥವಾ 28 ನೇ ತಾರೀಕಿನಂದು ಹುಟ್ಟಿದ ಜನರು 8, 17 ಮತ್ತು 26 ಜನ್ಮ ದಿನಾಂಕಗಳನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗಬಾರದು.

ಸಂಖ್ಯೆ 2
ನೀವು 2, 11, 20 ಅಥವಾ 29 ರಂದು ಜನಿಸಿದರೆ, 8, 17 ಮತ್ತು 26 ರಂದು ಜನಿಸಿದವರನ್ನು ಮದುವೆಯಾಗುವುದು ಸರಿಯಲ್ಲ.

ಸಂಖ್ಯೆ 3
ನಿಮ್ಮ ಹುಟ್ಟಿದ ದಿನಾಂಕ 3, 12, 21 ಅಥವಾ 30 ಆಗಿದ್ದರೆ, ಹುಟ್ಟಿದ ದಿನಾಂಕ 6, 15 ಮತ್ತು 24 ಆಗಿರುವ ವ್ಯಕ್ತಿಯನ್ನು ಮದುವೆಯಾಗದಿರಲು ಪ್ರಯತ್ನಿಸಿ.

ಈ ದಿನಾಂಕದಂದು ಜನಿಸಿದ ಹುಡುಗಿಯರಿಗೆ ಮದುವೆ ನಂತರ ಅದೃಷ್ಟ ಬರುತ್ತೆ

ಸಂಖ್ಯೆ 4
ಹುಟ್ಟಿದ ದಿನಾಂಕ 4, 13 ಅಥವಾ 22 ಆಗಿದ್ದರೆ 9, 18 ಮತ್ತು 27 ರಂದು ಜನಿಸಿದವರನ್ನು ಮದುವೆಯಾಗಬಾರದು.

ಸಂಖ್ಯೆ 5
ನಿಮ್ಮ ಹುಟ್ಟಿದ ದಿನಾಂಕ 5, 14 ಅಥವಾ 23 ಆಗಿದ್ದರೆ, 9, 18 ಮತ್ತು 27 ರಂದು ಜನಿಸಿದ ಜನರು ಮದುವೆಗೆ ಸೂಕ್ತರಲ್ಲ.

ಸಂಖ್ಯೆ 6
ನೀವು ಹುಟ್ಟಿದ್ದು 6, 15 ಅಥವಾ 24ನೇ ತಾರೀಕು ಆಗಿದ್ದರೆ, 3, 12, 21 ಮತ್ತು 30 ರಂದು ಜನಿಸಿದ ವ್ಯಕ್ತಿಯನ್ನು ಮದುವೆಯಾಗದಿರಲು ಪ್ರಯತ್ನಿಸಿ.

Numerology: ಈ 4 ದಿನಾಂಕಗಳಲ್ಲಿ ಜನಿಸಿದವರ ಬಾಯಲ್ಲಿ ನಿಲ್ಲಲ್ಲ ರಹಸ್ಯ

ಸಂಖ್ಯೆ 7
7, 16 ಅಥವಾ 25 ನೇ ತಾರೀಕಿನಲ್ಲಿ ಜನಿಸಿದ ಜನರು ಮೂಲಾಂಕ 3, 6, 8, 9 ರಂದು ಜನಿಸಿದವರನ್ನು ಮದುವೆಯಾಗಬಾರದು.

ಸಂಖ್ಯೆ 8
ನಿಮ್ಮ ಹುಟ್ಟಿದ ದಿನಾಂಕ 8, 17 ಅಥವಾ 26 ಆಗಿದ್ದರೆ, 1, 10, 19 ಮತ್ತು 28 ರಂದು ಜನಿಸಿದ ಜನರನ್ನು ಮದುವೆಯಾಗುವುದು ಸೂಕ್ತವಲ್ಲ.

ಸಂಖ್ಯೆ 9
ನಿಮ್ಮ ಹುಟ್ಟಿದ ದಿನಾಂಕ 9, 18 ಅಥವಾ 27 ಆಗಿದ್ದರೆ, 5, 14 ಮತ್ತು 23 ರಂದು ಜನಿಸಿದ ಜನರೊಂದಿಗೆ ಸಪ್ತಪದಿ ತುಳೀಯೋದು ನಿಮಗೆ ಶುಭವಲ್ಲ.