ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಗುಣ ಹೇಗೆ? ನಿಮಗೆ ಯಾವ ರೀತಿಯ ಬಣ್ಣ ಇಷ್ಟವಾಗುತ್ತದೆ? ಯಾವ ಬಣ್ಣ ಧರಿಸಿದರೆ ಸೂಕ್ತಾ?

ಪ್ರತಿಯೊಬ್ಬರು ತಮ್ಮ ಜನ್ಮಸಂಖ್ಯೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಅಧಿಪತಿಯಾಗಿರುವ ಸೂರ್ಯ ಅಂದ್ರೆ ಸಂಖ್ಯೆ 1,10,19 ಮತ್ತು 28ರಲ್ಲಿ ಜನಿಸಿದವರಲ್ಲಿ ತುಂಬಾ ವಿಶೇಷವಾದ ಗುಣಗಳು ಇರುತ್ತದೆ. ಸದಾ ರಾಜರಂತೆ ಇರಬೇಕು ಎನ್ನುವ ಆಸೆ ಹೊಂದಿರುವ ಈ ವ್ಯಕ್ತಿಗಳು ಎಂದೂ ಮತ್ತೊಬ್ಬರಿಂದ ಆದೇಶ ಪಡೆಯಲು ಇಷ್ಟ ಪಡುವುದಿಲ್ಲ. 

1, 10, 19 ಹಾಗೂ 28ರಂದು ಹುಟ್ಟಿದವರ ಸಂಖ್ಯೆ 1 ಎನ್ನಲಾಗುತ್ತದೆ. ಇವರಿಗೆ ಜಾಸ್ತಿ ಮ್ಯಾಚ್ ಆಗುವವರು 1,3,6 ಮತ್ತು 9 ಸಂಖ್ಯೆ ಬರುವವರು. 1 ಅಂದ್ರೆ ಸೂರ್ಯ. ಸಾಮಾನ್ಯವಾಗಿ ಈ ನಂಬರ್‌ ಇರುವ ವ್ಯಕ್ತಿಗಳು ತುಂಬಾ ಮೆಚ್ಯೂರ್ ಆಗಿರುತ್ತಾರೆ, ಡಾಮಿನೇಟಿಂಗ್ ಆಗಿರುತ್ತಾರೆ ಹಾಗೂ ಬ್ಯುಸಿನೆಸ್‌ ಮಾಡುವುದಕ್ಕಂತಲೇ ಹುಟ್ಟಿರುವವರು. ಸಾಮಾನ್ಯವಾಗಿ ಈ ವ್ಯಕ್ತಿಗಳು ಯಾರ ಕೆಳಗೆ ಕೆಲಸ ಮಾಡಲು ಇಷ್ಟ ಪಡುವುದಿಲ್ಲ, ಒಂದು ವೇಳೆ ಕೆಲಸ ಮಾಡುತ್ತಿದ್ದರೂ ಕಷ್ಟ ಪಟ್ಕೊಂಡು ಕೆಲಸ ಮಾಡುತ್ತಾರೆ ಏಕೆಂದರೆ ಇವರು ನಾನು ಬಾಸ್‌ಗಿಂತ ಬೆಟರ್‌ ಅನ್ನೋ ಫೀಲ್‌ನಲ್ಲಿ ಇರುತ್ತಾರೆ. 

ಪೂಜೆ ನಡುವೆ ಪಿರಿಯಡ್ಸ್ ಆದ್ರೆ ಪೂಜೆ ಮುಂದುವರೆಸಬಹುದೇ? ಗುರುಗಳು ಹೇಳಿದ್ದೇನು?

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದ್ದವರು ಕೆಲಸ ಮಾಡಲು ಇಷ್ಟವಿರುವುದಿಲ್ಲ ಅವರಲ್ಲಿ ಲೀಡರ್‌ಶಿಪ್‌ ಗುಣಗಳು ಹುಟ್ಟುತಲ್ಲೇ ಬರುತ್ತದೆ. ಮತ್ತೊಬ್ಬರಿಗೆ ಆರ್ಡರ್‌ ಮಾಡಿಸಿಕೊಳ್ಳುವ ಗುಣ ಇಷ್ಟ ಆಗುವುದಿಲ್ಲ. ಇವರು ಸದಾ ಹೈಲೈಟ್ ಆಗುತ್ತಿರುತ್ತಾರೆ. ಈ ನಂಬರ್‌ನವರು ಅರೇಂಜ್‌ ಧರಿಸಿದ್ದರೆ ಒಳ್ಳೆಯದಾಗುತ್ತದೆ, ಇಲ್ಲವಾದರೆ ಹಳದಿ ಧರಿಸಬೇಕು. ಯಾರ ಮಾತುಗಳನ್ನು ಕೇಳದಷ್ಟು ಹಠ ಇವರಲ್ಲಿ ಇದೆ. ಶ್ರೀಮಂತ ಅಥವಾ ಅನುಕೂಲಸ್ತ ಕುಟುಂಬದಲ್ಲಿ ಜನಿಸಿರುವ ಇವರು ಅತಿ ಹೆಚ್ಚು ಬ್ರ್ಯಾಂಡೆಡ್‌ ವಸ್ತುಗಳನ್ನು ಇಷ್ಟ ಪಡುತ್ತಾರೆ. 

ಮಧ್ಯರಾತ್ರಿ ಎಚ್ಚರವಾದ್ರೆ ಇಂಥ ಸಂಕೇತ ನೀಡ್ತಾನೆ ಈಶ್ವರ!

ಐಪಿಎಸ್‌, ಆಡಳಿತಾಧಿಕಾರಿಗಳು ಆಗುವ ಸಾಮರ್ಥ್ಯ ಹೊಂದಿರುವ ಈ ವ್ಯಕ್ತಿಗಳು ಜನಿಸುವ ಮನೆಯಲ್ಲಿ ಸಿರಿತನ ಹೆಚ್ಚುತ್ತದೆ. ಅವರ ಮೇಲೆ ಹೆಚ್ಚಾಗಿ ಕಣ್ಣಿನ ದೃಷ್ಟಿ ಬೀಳುತ್ತದೆ.