Asianet Suvarna News Asianet Suvarna News

2022 Numerology Predictions: ನಿಮ್ಮ ಸಂಖ್ಯೆ ಆಧಾರದ ಮೇಲೆ ಭವಿಷ್ಯ ಹೇಗಿರಲಿದೆ?

ನ್ಯೂಮರಾಲಜಿ ಪ್ರಕಾರ ನಿಮ್ಮ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ, ನಿಮ್ಮ ಸಂಖ್ಯೆಯ ಭವಿಷ್ಯ ಏನಿದೆ ತಿಳಿಯಿರಿ.

Numerologist predicts if 2022 will bring success for you
Author
Bangalore, First Published Jan 1, 2022, 11:04 AM IST

ನಿಮ್ಮ ಸಂಖ್ಯೆ(number) ಯಾವುದು?
ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (Numerology). ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಅದಕ್ಕೂ ಮುನ್ನ 2022ರ ಮೂಲ ಸಂಖ್ಯೆಯನ್ನು ನೀವು ತಿಳಿದುಕೊಳ್ಳಬೇಕು. 2022= 2+0+2+2=6 ಅಂದರೆ ಈ ವರ್ಷದ ಸಂಖ್ಯೆ 6. ಈಗ ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಲು ನಿಮ್ಮ ಜನ್ಮ ದಿನಾಂಕ+ಜನನದ ತಿಂಗಳು+6 ಸೇರಿಸಿ. ಈಗ ಬರುವ ಫಲಿತಾಂಶವನ್ನು ಒಂದಂಕಿಗಿಳಿಸಿ (ಉತ್ತರ ಬಂದ ಎರಡು ಸಂಖ್ಯೆಯನ್ನು ಸೇರಿಸಿ) 
ಉದಾ: ನೀವು ಅಕ್ಟೋಬರ್ ೨೮ರಂದು ಜನಿಸಿದ್ದರೆ, 28+10+6=44 (4+4)=8. ಅಂದರೆ ನಿಮ್ಮ ಸಂಖ್ಯೆ 8. ಒಂದು ವೇಳೆ ಕೊನೆಯ ಸಂಖ್ಯೆಯೂ ಎರಡಂಕಿ (ಉದಾ: 11, 12 ಇತ್ಯಾದಿ) ಬಂದರೆ ಆಗ
1+1=2 ಅಥವಾ 1+2=3 ನಿಮ್ಮ ಸಂಖ್ಯೆ ಆಗುತ್ತದೆ.

ಸಂಖ್ಯೆ 1
ಪ್ರೇಮಿಗಳಿಗೆ ಅತ್ಯುತ್ತಮ ವರ್ಷ (Good year for lovers)

2022 ಪ್ರೇಮಿಗಳಿಗೆ ಅತ್ಯುತ್ತಮ ವರ್ಷವಾಗಿರಲಿದೆ. ಪ್ರೇಮಿಗಳು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ವಿವಾಹಿತರ ಜೀವನದಲ್ಲೂ ಪ್ರೀತಿ, ಸಂತೋಷ ಮನೆ ಮಾಡಲಿದೆ. ಉದ್ಯೋಗಿಗಳಿಗೆ ಹೆಚ್ಚಿನ ಶ್ರಮ ವಹಿಸಬೇಕಾದರೂ ವರ್ಷದ ಕೊನೆಯಲ್ಲಿ ಕಠಿಣ ಪರಿಶ್ರಮದ ಫಲ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡವರು ಈ ವರ್ಷದ ಆರಂಭದಲ್ಲಿ ಕೊಂಚ ಎಚ್ಚರಿಕೆಯಿಂದ ಇರಬೇಕು. ಆದರೆ ವರ್ಷದ ಮಧ್ಯ ಭಾಗದಿಂದ ವಹಿವಾಟಿನಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸಬಹುದಾಗಿದೆ. ಈ ವರ್ಷ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿದ್ದು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

ಸಂಖ್ಯೆ 2
ಕಠಿಣ ಪರಿಶ್ರಮ(hard work)ಕ್ಕೆ ಫಲ

ಈ ವರ್ಷ ಸಂಗಾತಿಯೊಡನೆ ಮನಸ್ತಾಪ ಉಂಟಾಗಿ ವೈವಾಹಿಕ ಜೀವನದಲ್ಲಿ ಏರಿಳಿತವನ್ನು ಕಾಣಬಹುದಾಗಿದೆ. ಸಂಗಾತಿಗೆ ಹೆಚ್ಚಿನ ಸಮಯ ನೀಡಿ, ಅವರ ಮನ ಗೆಲ್ಲಲು ಪ್ರಯತ್ನಿಸಿ.
ಉದ್ಯೋಗಿಗಳಿಗೂ ಈ ವರ್ಷ ಕಠಿಣವಾಗಿರಲಿದ್ದು, ಹಲವಾರು ಉತ್ತಮ ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವ ಸಾಧ್ಯತೆಗಳಿವೆ. ಆದರೆ ವರ್ಷದ ಕೊನೆಯಲ್ಲಿ ಉತ್ತಮ ಉದ್ಯೋಗಾವಕಾಶ ಗಳು ನಿಮ್ಮನ್ನು ಅರಸಿ ಬರಲಿದ್ದು, ಈವರೆಗೆ ಪಟ್ಟ ಪರಿಶ್ರಮದ ಫಲ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದವರಿಗೆ ವರ್ಷದ ಆರಂಭದಲ್ಲಿ ಲಾಭವಾಗಲಿದ್ದು, ಮಧ್ಯವರ್ಷದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಆರೋಗ್ಯ(health) ಸ್ಥಿತಿಯು ಉತ್ತಮವಾಗಿರಲಿದೆ.

ಸಂಖ್ಯೆ 3
ವಿದ್ಯಾರ್ಥಿಗಳಿಗೆ ಯಶಸ್ಸು

ಈ ವರ್ಷ ವೈವಾಹಿಕ ಜೀವನ ಸುಗಮವಾಗಿರಲಿದ್ದು, ಸಂಗಾತಿಯೊಂದಿಗಿನ ಸಣ್ಣಪುಟ್ಟ ಮನಸ್ತಾಪಗಳನ್ನು ಪರಸ್ಪರ ಮಾತುಕತೆಯ ಮೂಲಕ  ಬಗೆಹರಿಸಿಕೊಳ್ಳಬಹುದಾಗಿದೆ.
ಅವಿವಾಹಿತರಿಗೆ ವರ್ಷದ ಆರಂಭದಲ್ಲೇ ಕಂಕಣಭಾಗ್ಯ ಕೂಡಿಬರಲಿದೆ. ಉದ್ಯೋಗಿಗಳಿಗೆ ವರ್ಷ ಉತ್ತಮವಾಗಿರಲಿದ್ದು, ವರ್ಗಾವಣೆಯಾಗುವ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರಿಗಳಿಗೂ ಈ ವರ್ಷ ಭರ್ಜರಿ ಲಾಭ ಬರಲಿದ್ದು, ಹೊಸ ಯೋಜನೆಗಳನ್ನು ಹಾಕಿಕೊಂಡಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ವರ್ಷ ಸ್ಪರ್ಧಾತ್ಮಕ ಪರೀಕ್ಷೆ(compititive exam)ಯಲ್ಲಿ ಯಶಸ್ಸು ಗ್ಯಾರಂಟಿ. ಉದರ ಸಂಬಂಧಿ ಕಾಯಿಲೆಗಳು ಈ ವರ್ಷ ನಿಮ್ಮನ್ನು ಕಾಡುವ ಸಾಧ್ಯತೆಯಿದ್ದು, ಹೆಚ್ಚಿನ ಕಾಳಜಿ ಅಗತ್ಯ.

2022 ಭಾರತಕ್ಕೆ ಶುಭಕರ ಸಂಯೋಜನೆಯ ವರ್ಷ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ!

ಸಂಖ್ಯೆ 4
ಉದ್ಯೋಗಿಗಳಿಗೆ ಬಡ್ತಿ(promotion) ಸಾಧ್ಯತೆ

ಸಂಗಾತಿಯ ಸಹಕಾರದೊಂದಿಗೆ ಈ ವರ್ಷ ವೈವಾಹಿಕ ಜೀವನ ಸುಗಮವಾಗಿರಲಿದೆ. ಪ್ರೇಮಿಗಳ ನಡುವೆ ಮನಸ್ತಾಪ ಮೂಡಿ ಬ್ರೇಕಪ್(break up) ಆಗಬಹುದು. ಹೀಗಾಗಿ ಅನಗತ್ಯ ವಿಷಯಗಳ ಕುರಿತು ಸುಖಾಸುಮ್ಮನೆ ವಾದಕ್ಕಿಳಿಯುವುದು ಬೇಡ. ಉದ್ಯೋಗಿಗಳಿಗೆ ವರ್ಷ ಉತ್ತಮವಾಗಿರಲಿದ್ದು, ಅನಾಯಾಸವಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರಕ್ಕೂ ಈ ವರ್ಷ ಲಾಭದಾಯಕ ವಾಗಿರಲಿದೆ. ತಲೆನೋವು, ಜ್ವರದ ಸಮಸ್ಯೆಯಿಂದ ನೀವು ಬಳಲುವ ಸಾಧ್ಯತೆಯಿದ್ದು, ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಕುತ್ತು ಬರಬಹುದು. ಆದ್ದರಿಂದ ಎಚ್ಚರ ಅಗತ್ಯ.

ಸಂಖ್ಯೆ 5
ವ್ಯಾಪಾರ ಹೊಸ ಉತ್ತುಂಗಕ್ಕೆ 

ಪ್ರೇಮ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಯಿರುವುದರಿಂದ ಜಗಳ, ವಾಗ್ವಾದಗಳಿಂದ ದೂರವಿರಿ. ವಿವಾಹಿತ ದಂಪತಿಗೆ ಸಂತಾನ ಭಾಗ್ಯ. ಉದ್ಯೋಗಿಗಳಿಗೂ ಈ ವರ್ಷ ಉತ್ತಮವಾಗಿರಲಿದ್ದು, ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ವ್ಯಾಪಾರ ವಹಿವಾಟಿ(business)ನ ದೃಷ್ಟಿಯಿಂದಲೂ ಈ ವರ್ಷ ಅತ್ಯುತ್ತಮವಾಗಿದ್ದು, ಹಾಕಿಕೊಂಡ ಹೊಸ ಯೋಜನೆಗಳೆಲ್ಲವೂ ಯಶಸ್ವಿಯಾಗಿ ನಿಮ್ಮ ವ್ಯವಹಾರ ಹೊಸ ಉತ್ತುಂಗಕ್ಕೆ ತಲುಪುವುದು. ಸೋಮಾರಿತನವೇ ನಿಮಗೆ ವೈರಿಯಾಗಲಿದೆ. ಸಾಧ್ಯವಾದಷ್ಟು ಆರೋಗ್ಯಕರ ಜೀವನಶೈಲಿ ಬೆಳೆಸಿಕೊಂಡರೆ ಉತ್ತಮ. 

Name Astrology : ಈ 5 ಅಕ್ಷರದ ಹುಡುಗಿಯರು ಶೀಘ್ರದಲ್ಲೇ ಹುಡುಗರ ಹೃದಯ ಗೆಲ್ಲುತ್ತಾರೆ !

ಸಂಖ್ಯೆ 6
ಹೂಡಿಕೆ ಮಾಡುವಾಗ ಎಚ್ಚರ 

ಈ ವರ್ಷ ವಿವಾಹಿತ ದಂಪತಿಯಲ್ಲಿ ಪ್ರೀತಿ ವಿಶ್ವಾಸ ಇನ್ನಷ್ಟು ಗಾಢಗೊಳ್ಳಲಿದೆ. ಉದ್ಯೋಗಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆಯಿದೆ.
ವ್ಯಾಪಾರ ವ್ಯವಹಾರದಲ್ಲಿ ತೊಡಗಿದವರು ಹೊಸ ಹೂಡಿಕೆ  ಮಾಡುವಾಗ ಕೊಂಚ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಭಾರೀ ನಷ್ಟವಾಗುವ ಸಾಧ್ಯತೆಯಿದೆ. ಮನೆಯಲ್ಲೂ ಖರ್ಚು ವೆಚ್ಚಗಳು ಹೆಚ್ಚಳವಾಗಲಿದ್ದು, ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವ ಮಟ್ಟಕ್ಕೇನೂ ಸುಧಾರಣೆಯಾಗುವುದಿಲ್ಲ. ಈ ವರ್ಷ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಆ್ಯಸಿಡಿಟಿ ಸಮಸ್ಯೆಯಿಂದ ಬಳಲಬೇಕಾಗಬಹುದು.

ಸಂಖ್ಯೆ 7
ಉದ್ಯೋಗಾಕಾಂಕ್ಷಿಗಳಿಗೆ ಹುದ್ದೆ 

ಪ್ರೇಮಿಗಳಿಗೆ ಈ ವರ್ಷ ಬಹಳ ಕಠಿಣವಾಗಿರಲಿದೆ. ವಿವಾಹಿತ ಜೀವನದಲ್ಲೂ ಸಾಕಷ್ಟು ಅಡೆತಡೆಗಳು ಕಂಡುಬರಲಿವೆ. ಉದ್ಯೋಗಾಕಾಂಕ್ಷಿಗಳಿಗೆ ಈ ವರ್ಷ ಉತ್ತಮವಾಗಿದ್ದು, ಅನಾಯಾಸವಾಗಿ ಉನ್ನತ ಹುದ್ದೆ ಸಿಗುವ ಸಾಧ್ಯತೆಯಿದೆ. ವ್ಯಾಪಾರ ವಹಿವಾಟು ನಡೆಸುವವರು, ಸರ್ಕಾರಿ ಉದ್ಯೋಗಿಗಳು(government employees) ತೆರಿಗೆ ಪಾವತಿಯ ವಿಷಯದಲ್ಲಿ ಕೊಂಚ ಎಚ್ಚರಿಕೆಯಿಂದ ಇರಬೇಕಾಗಬಹುದು. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗಲಿದೆ. ಆರೋಗ್ಯವು ಉತ್ತಮವಾಗಿರಲಿದೆ. 

ಸಂಖ್ಯೆ 8
ಜೀವನದಲ್ಲಿ ಉನ್ನತಿಯ ಕಾಲ

ಈ ವರ್ಷ ಜೀವನದಲ್ಲಿ ಉನ್ನತಿಯಾಗಲಿದೆ. ಆದ್ದರಿಂದ ವೈವಾಹಿಕ ಜೀವನದಲ್ಲಿ ಹಾಗೂ ವೃತ್ತಿಪರ ಜೀವನದಲ್ಲಿ ಹಟಮಾರಿತನ ತೋರಿಸಬೇಡಿ. ಈ ವರ್ಷದುದ್ದಕ್ಕೂ ಜೀವನದಲ್ಲಿ ಪ್ರೀತಿ ನೆಮ್ಮದಿಯಿರಲಿದ್ದು, ವೈವಾಹಿಕ ಜೀವನವೂ ಸುಗಮವಾಗಿರಲಿದೆ. ಉದ್ಯೋಗಿಗಳು ಕೆಲಸ ಮಾಡುವಾಗ ಎಚ್ಚರ ವಹಿಸದಿದ್ದಲ್ಲಿ ಪ್ರಮಾದವಾಗುವ ಸಾಧ್ಯತೆಯಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು ಸಿಗಲಿದೆ. ತೀವ್ರ ಜ್ವರ, ನೆಗಡಿ, ಎದೆನೋವು ಕಾಡುವ ಸಾಧ್ಯತೆಯಿರುವುದರಿಂದ ನಿರ್ಲಕ್ಷ್ಯ ಬೇಡ. ಶನಿದೇವರ ಕೃಪೆಗೆ ನೀವು ಪಾತ್ರರಾಗಿರುವುದರಿಂದ ಆದಾಯ(income) ಹೆಚ್ಚಲಿದೆ.

Jupiter Transit : ಗುರು ಪರಿವರ್ತನೆಯಿಂದ 2022ಕ್ಕೆ 3 ರಾಶಿಗೆ ಲಕ್

ಸಂಖ್ಯೆ 9
ಉದ್ಯೋಗದಲ್ಲಿ ತಾಳ್ಮೆಯಿರಲಿ

ಈ ವರ್ಷ ನಿಮಗೆ ನಿರೀಕ್ಷಿತ ಯಶಸ್ಸು ಸಿಗಲಿದೆ. ಪ್ರೇಮದ  ವಿಚಾರದಲ್ಲಿ ಹಲವಾರು ಅಡಚಣೆಗಳು ಕಂಡುಬಂದರೂ ಸಂಬಂಧಗಳು ಇನ್ನಷ್ಟು ಗಾಢವಾಗಲು ಇವು ಪರೋಕ್ಷವಾಗಿ ಸಹಕರಿಸಲಿವೆ. ಉದ್ಯೋಗಿಗಳಿಗೆ ಈ ವರ್ಷ ಕೈ ತುಂಬ ಕೆಲಸವಿರಲಿದೆ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಿಗಲಿದೆ. ವ್ಯಾಪಾರ ವ್ಯವಹಾರದ ದೃಷ್ಟಿಯಿಂದಲೂ ವರ್ಷ ಉತ್ತಮವಾಗಿದ್ದು, ಹೊಸ ಬಂಡವಾಳ ಹೂಡಿಕೆಯೊಂದಿಗೆ ವಹಿವಾಟನ್ನು ವಿಸ್ತರಿಸಿದರೆ ಹೆಚ್ಚಿನ ಲಾಭವಾಗಬಹುದು. ತಲೆನೋವು, ಉದರ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಪದೇ ಪದೇ ಕಾಡಲಿದ್ದು, ನೀವು ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. 

Follow Us:
Download App:
  • android
  • ios