Vastu Shastra : 99ರಷ್ಟು ಮಹಿಳೆಯರು ಮನೆ ಒರೆಸುವಾಗ ಮಾಡ್ತಾರೆ ಈ ತಪ್ಪು

ಮನೆ ಒರೆಸೋದು ನಿತ್ಯದ ಕೆಲಸವಾದ್ರೂ ಅನೇಕರಿಗೆ ಅದ್ರ ಮಹತ್ವ ತಿಳಿದಿಲ್ಲ. ನಮಗೆ ಅನುಕೂಲವಾದ ಸಮಯದಲ್ಲಿ ಮನೆ ಮಾಪ್ ಮಾಡೋದು ಸೂಕ್ತವಲ್ಲ. ವಾಸ್ತುಶಾಸ್ತ್ರದ ಪ್ರಕಾರ ಮನೆ ಸ್ವಚ್ಛತೆಗೂ ಸಮಯ, ನಿಯಮವಿದೆ.

Ninety Nine Percent Of People Make One Mistake In Mopping roo

ಮನೆ ಕ್ಲೀನ್ ಮಾಡೋದು ಮಹಿಳೆಯರ ಅಲಿಖಿತ ಜವಾಬ್ದಾರಿ. ಪ್ರತಿ ನಿತ್ಯ ಮನೆಯನ್ನು ಗುಡಿಸಿ, ಒರೆಸಲಾಗುತ್ತದೆ. ಬಹುತೇಕರಿಗೆ ಮನೆಯನ್ನು ಯಾವಾಗ ಗುಡಿಸಬಾರದು ಎಂಬ ವಿಷ್ಯ ಗೊತ್ತಿದೆ. ಸೂರ್ಯಾಸ್ತದ ನಂತ್ರ ಪೊರಕೆ ಹಿಡಿದ್ರೆ ಮನೆಯ ಹಿರಿಯರು ದೊಡ್ಡ ಧ್ವನಿ ಮಾಡ್ತಾರೆ. ಈಗ ಮನೆ ಗುಡಿಸಬೇಡ ಅಂತಾರೆ.  ಆದ್ರೆ ಅನೇಕರಿಗೆ ಮನೆಯನ್ನು ಯಾವಾಗ ಒರೆಸಬೇಕು, ಯಾವಾಗ ಒರೆಸಬಾರದು ಎಂಬುದು ಗೊತ್ತಿಲ್ಲ. ಮನೆ ಮಾಪ್ ಮಾಡಲು ವಾಸ್ತುವಿನಲ್ಲಿ ನಿಯಮಗಳಿವೆ. ಆ ನಿಯಮದಂತೆ ಮನೆಯನ್ನು ಒರೆಸಿದ್ರೆ  ವಾಸ್ತು ದೋಷದಿಂದ ನೀವು ತಪ್ಪಿಸಿಕೊಳ್ಳಬಹುದು. 

ಮನೆ (House) ಯನ್ನು ಈ ಸಮಯದಲ್ಲಿ ಒರೆಸಬೇಡಿ : ವಾಸ್ತುಶಾಸ್ತ್ರಜ್ಞರ ಪ್ರಕಾರ, ನಮಗೆ ಅನುಕೂಲವಾದಾಗ ನಾವು ಮನೆಯನ್ನು ಒರೆಸೋದು ಸೂಕ್ತವಲ್ಲ. ಈಗ ಎಲ್ಲರೂ ಬ್ಯುಸಿ ಇರುವ ಕಾರಣ ಬೆಳಿಗ್ಗೆ ಎದ್ದ ತಕ್ಷಣ ಮನೆ ಮಾಪ್ (Mop) ಮಾಡೋದು ಕಷ್ಟ. ಹಾಗಾಗಿ ಕೆಲವರು ಎಲ್ಲ ಕೆಲಸ ಮುಗಿದ ಮೇಲೆ, ಮಧ್ಯಾಹ್ನ ಇಲ್ಲವೆ ಸಂಜೆ ಮನೆಯನ್ನು ಮಾಪ್ ಮಾಡ್ತಾರೆ. ವಾಸ್ತು ಶಾಸ್ತ್ರಜ್ಞರು ಮಧ್ಯಾಹ್ನದ ಮೇಲೆ ನೀವು ಮಾಡುವ ಮಾಪ್ ತಪ್ಪು ಎನ್ನುತ್ತಾರೆ. 

ಮಧುಮಂಚದಲ್ಲಿ ಈ ಜನ್ಮರಾಶಿಯವರಿಂದ ಸುಖ ನಿರೀಕ್ಷೆ ಮಾಡೋದೇ ಬೇಡ!

ಮನೆಯನ್ನು ಒರೆಸಲು ಬ್ರಹ್ಮ ಮುಹೂರ್ತ (Brahma Muhurta) ಬಹಳ ಉತ್ತಮ ಸಮಯ. ಸೂರ್ಯೋದಯಕ್ಕಿಂತ 1.5 ಗಂಟೆ ಮೊದಲು ಬ್ರಹ್ಮ ಮುಹೂರ್ತ ಬರುತ್ತದೆ. ನೀವು ಈ ಸಮಯದಲ್ಲಿ ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಛಗೊಳಿಸಿದ್ರೆ ಮನೆಯಲ್ಲಿ ಧನಾತ್ಮಕ (Positive) ಶಕ್ತಿ ನೆಲೆಸುತ್ತದೆ. ಮನೆಯಲ್ಲಿ ಸದಾ ಸಂತೋಷ, ಶಾಂತಿ, ನೆಮ್ಮದಿ ಇರಬೇಕು ಎನ್ನುವವರು ಈ ಸಮಯದಲ್ಲಿ ಮನೆಯಲ್ಲಿ ಒರೆಸಬೇಕು. 

ನಿಮಗೆ ಅಷ್ಟು ಮೊದಲು ಏಳಲು ಸಾಧ್ಯವಿಲ್ಲ ಎಂದಾದ್ರೆ ನೀವು ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯೋದಯವಾದ ತಕ್ಷಣ ಮನೆಯನ್ನು ಒರೆಸಬಹುದು. ಇದು ಮನೆಯ ಉನ್ನತಿಗೆ ಕಾರಣವಾಗುತ್ತದೆ.

ಈ ಸಮಯದಲ್ಲಿ ಮನೆ ಒರೆಸಬೇಡಿ : ವಾಸ್ತು ಶಾಸ್ತ್ರಜ್ಞರ ಪ್ರಕಾರ, ಸೂರ್ಯ ನೆತ್ತಿಗೆ ಬಂದಾಗ ಅಂದ್ರೆ ಮಧ್ಯಾಹ್ನದ ಸಮಯದಲ್ಲಿ ಮನೆಯನ್ನು ಒರೆಸಬಾರದು. ಇದು, ಮನೆಗೆ ಬರುವ ಸೂರ್ಯನ ಬೆಳಕು ನಮ್ಮ ಮೇಲೆ ಸರಿಯಾಗಿ ಪ್ರಭಾವ ಬೀರುವುದನ್ನು ತಪ್ಪಿಸುತ್ತದೆ. ಅದೇ ರೀತಿ ನೀವು ಸೂರ್ಯಾಸ್ತನ ನಂತ್ರವೂ ಮನೆಯನ್ನು ಒರೆಸಬಾರದು. ಇದರಿಂದ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ.

ಮನೆ ಒರೆಸುವ ನಿಯಮಗಳು : ಮನೆಯನ್ನು ಒರೆಸುವ ಸಮಯ ಮಾತ್ರವಲ್ಲ ಮನೆಯನ್ನು ಹೇಗೆ ಒರೆಸಬೇಕು ಎಂಬುದಕ್ಕೂ ನಿಯಮವಿದೆ. ವಾಸ್ತುಶಾಸ್ತ್ರದ ಪ್ರಕಾರ ನೀವು ಮನೆಯನ್ನು ಪ್ರವೇಶ ದ್ವಾರದಿಂದ ಒರೆಸಲು ಶುರು ಮಾಡಬೇಕು. ನಂತ್ರ ಮನೆಯ ಮಧ್ಯ ಭಾಗವನ್ನು ಮಾಪ್ ಮಾಡಿ. ಆ ನಂತ್ರ ಮನೆಯ ಕೋಣೆಗಳನ್ನು ಸ್ವಚ್ಛಗೊಳಿಸಿ. ನೀವು ಎಲ್ಲಿ ಮನೆ ಒರೆಸುವ ಕಾರ್ಯ ಶುರು ಮಾಡಿದ್ದೀರೋ ಅಲ್ಲಿಯೇ ಅದನ್ನು ಮುಗಿಸಬೇಕು. 

ಮನೆಯನ್ನು ನೀವು ಗುರುವಾರ ಒರೆಸಬಾರದು. ಹೀಗೆ ಮಾಡಿದ್ರೆ ಗುರು ಗ್ರಹವು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನೆಯಲ್ಲಿ ಬಡತನ ಕಾಡಲು ಶುರುವಾಗುತ್ತದೆ. ಹಾಗೆಯೇ ಕೆಂಪು ಬಕೆಟ್ ನಲ್ಲಿ ನೀರನ್ನು ಹಾಕಿಕೊಂಡು ಮನೆಯನ್ನು ಒರೆಸಬಾರದು. ಮನೆ ಒರೆಸಲು ನೀವು ಬಳಸುವ ಬಕೆಟ್ ಒಡೆದಿದ್ದರೆ, ಅದನ್ನು ಬಳಸಬೇಡಿ. ಅತಿ ಕೊಳಕಾದ ಬಟ್ಟೆಯನ್ನು ಬಳಸಬೇಡಿ. 

ಮಳೆಗಾಲದ ಈ ನಾಲ್ಕು ತಿಂಗಳು ಈ ರಾಶಿಯವರಿಗೆ ಕೆಟ್ಟ ಸಮಯ ಎಚ್ಚರ

ಮನೆ ಸ್ವಚ್ಛಗೊಳಿಸಲು ಬಳಸುವ ನೀರಿಗೆ ಸಮುದ್ರ ಉಪ್ಪನ್ನು ಹಾಕಿ. ಇದು ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡದಂತೆ ತಡೆಯುತ್ತದೆ. ಜೊತೆಗೆ ಮನೆಯನ್ನು ಸ್ವಚ್ಛಗೊಳಿಸುತ್ತದೆ. ಆದ್ರೆ ಗುರುವಾರ, ಮಂಗಳವಾರ ಹಾಗೂ ಭಾನುವಾರ ಯಾವುದೇ ಕಾರಣಕ್ಕೂ ಉಪ್ಪು ಬೆರೆಸಿದ ನೀರಿನಿಂದ ಮನೆಯನ್ನು ಒರೆಸಬೇಡಿ. 

Latest Videos
Follow Us:
Download App:
  • android
  • ios