Asianet Suvarna News Asianet Suvarna News

ಶ್ರೀಮಂತರಾಗೋಕೆ ಏನ್ ಮಾಡ್ಬೇಕು? Neem Karoli Baba ನೀಡಿದ ಟಿಪ್ಸ್ ಇಲ್ಲಿವೆ..

ವಿಶ್ವದ ದಿಗ್ಗಜ ಶ್ರೀಮಂತರಿಗೆಲ್ಲ ಗುರುವೆನಿಸಿಕೊಂಡಿದ್ದ ನೀಮ್ ಕರೋಲಿ ಬಾಬಾ ಶ್ರೀಮಂತರಾಗಲು ಕೆಲವು ವಿಶೇಷ ಮಾರ್ಗಗಳನ್ನು ಹೇಳಿದ್ದಾರೆ. ಈ ವಿಧಾನಗಳನ್ನು ಅಳವಡಿಸಿಕೊಂಡರೆ ಯಾರಾದರೂ ಶ್ರೀಮಂತರಾಗಬಹುದು. ಅದರ ಬಗ್ಗೆ ನಿಮಗೂ ತಿಳಿಸುವ ಉತ್ಸಾಹ ನಮ್ಮದು..

Neem Karoli Baba has told 3 ways to become rich know how to use money properly skr
Author
First Published Feb 28, 2023, 11:49 AM IST | Last Updated Feb 28, 2023, 11:59 AM IST

ಇತ್ತೀಚೆಗಷ್ಟೇ ಮಥುರಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪುತ್ರಿ ವಾಮಿಕಾ ಜೊತೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಕಳೆದಿದ್ದು ಸುದ್ದಿಯಾಗಿತ್ತು. ಅವರು 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಪ್ರಯಾಣಿಸಿದ ಹಲವಾರು ಅಮೇರಿಕನ್ನರ ಆಧ್ಯಾತ್ಮಿಕ ಗುರುಗಳಾಗಿ ಹೆಸರುವಾಸಿಯಾಗಿದ್ದರು. ನೀಮ್ ಕರೋಲಿ ಬಾಬಾ ಅವರನ್ನು ಹನುಮಾನ್ ಜಿ ಅವರ ಅವತಾರವೆಂದೇ ಪರಿಗಣಿಸಲಾಗುತ್ತದೆ. ನೀಮ್ ಕರೋಲಿ ಬಾಬಾ ದೈವಿಕ ಶಕ್ತಿಯನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ನೀಮ್ ಕರೋಲಿ ಬಾಬಾರ ಬಳಿಗೆ ಬರುವವರು ಬರಿಗೈಯಲ್ಲಿ ಹೋಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಅವರ ಆಶೀರ್ವಾದದಿಂದ ಹಲವಾರು ಜನರ ಜೀವನ ಸುಧಾರಿಸಿದೆ. 

ಜಗತ್ತಿನ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌, ನಟಿ ಜೂಲಿಯಾ ರಾಬರ್ಟ್ಸ್ ಸೇರಿದಂತೆ ಬಹುತೇಕ ದಿಗ್ಗಜರು ಬಾಬಾ ಭಕ್ತರು.  ಇಂಥ ಅನುಯಾಯಿಗಳನ್ನು ಹೊಂದಿದ್ದ ಬಾಬಾ, ಸಾಮಾನ್ಯ ಜನರೆಲ್ಲರಿಗೂ ಶ್ರೀಮಂತರಾಗುವ ಸುಲಭ ಮೂರು ಮಾರ್ಗಗಳನ್ನು ಹೇಳಿದ್ದಾರೆ. ಈ ವಿಧಾನಗಳನ್ನು ಅಳವಡಿಸಿಕೊಂಡರೆ ಯಾರಾದರೂ ಶ್ರೀಮಂತರಾಗಬಹುದು. ನೀಮ್ ಕರೋಲಿ ಬಾಬಾ ಅವರ ಸಂಪತ್ತಿಗೆ ಸಂಬಂಧಿಸಿದ ತತ್ವಗಳ ಬಗ್ಗೆ ತಿಳಿಯೋಣ.

Holi 2023: ಈ ಹೋಳಿ ಹಬ್ಬದಲ್ಲಿ ನಿಮ್ಮ ರಾಶಿಗೆ ತಕ್ಕ ಬಣ್ಣ ಬಳಸಿ, ಅದೃಷ್ಟ ಹೆಚ್ಚಿಸಿ..

ಹಣವನ್ನು ಖರ್ಚು ಮಾಡುವುದು ಅವಶ್ಯಕ
ನೀಮ್ ಕರೋಲಿ ಬಾಬಾ ಅವರ ಪ್ರಕಾರ, ಶ್ರೀಮಂತರಾಗಿರುವುದು ಪ್ರತಿಯೊಬ್ಬ ಮನುಷ್ಯನು ಹೊಂದಲು ಬಯಸುವ ಸ್ಥಿತಿಯಾಗಿದೆ. ನೀಮ್ ಕರೋಲಿ ಬಾಬಾ ಶ್ರೀಮಂತರಾಗಲು ಹಲವು ಮಾರ್ಗಗಳನ್ನು ಹೇಳಿದ್ದಾರೆ - ಅದು ಪರಿಣಾಮಕಾರಿ ಎಂದು ಸಾಬೀತಾಗಿದೆ. ಹಣವನ್ನು ತುಂಬಲು ಹಣದ ನಿಧಿಯನ್ನು ಖಾಲಿ ಮಾಡುವುದು ಅವಶ್ಯಕ ಎಂದು ನೀಮ್ ಕರೋಲಿ ಬಾಬಾ ಹೇಳುತ್ತಾರೆ. ಅದಕ್ಕಾಗಿಯೇ ಹಣವನ್ನು ಖರ್ಚು ಮಾಡುವುದು ಬಹಳ ಮುಖ್ಯ. ಹಾಗಂಥ ಬೇಕಾಬಿಟ್ಟಿ ಖರ್ಚು ಮಾಡಿ ಎಂದಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಹಣವನ್ನು ಖರ್ಚು ಮಾಡಿದ್ದೇ ಹೌದಾದರೆ ಅದು ನಿಮಗೆ ಮತ್ತಷ್ಟು ಹಣವನ್ನು ಮರಳಿಸಿ ತರುತ್ತದೆ ಎಂಬುದನ್ನು ಬಾಬಾ ಹೇಳುತ್ತಿದ್ದರು.  

ಹಣದ ಸರಿಯಾದ ಬಳಕೆ
ಬಾಬಾ ನೀಮ್ ಕರೋಲಿ ಹೇಳುತ್ತಿದ್ದರು, ಒಬ್ಬ ವ್ಯಕ್ತಿಯು ಹೆಚ್ಚು ಹಣದಿಂದ ಶ್ರೀಮಂತನಾಗಲು ಸಾಧ್ಯವಿಲ್ಲ. ಆ ಹಣದ ಉಪಯುಕ್ತತೆಯ ಬಗ್ಗೆ ವ್ಯಕ್ತಿಗೆ ಸರಿಯಾದ ಜ್ಞಾನವಿರಬೇಕು. ನೀವು ಆ ಹಣವನ್ನು ಸರಿಯಾದ ಸ್ಥಳದಲ್ಲಿ ಬಳಸಬೇಕು. ನಿಮ್ಮ ಹಣವು ಯಾವುದೇ ನಿರ್ಗತಿಕರಿಗೆ ಉಪಯುಕ್ತವಾಗದಿದ್ದರೆ, ಶ್ರೀಮಂತರಾಗಿರುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಹಾಗಾಗಿ, ಶ್ರೀಮಂತರಾಗಬೇಕೆಂದರೆ ನಿಮ್ಮಲ್ಲಿ ದಾನದ ಗುಣವಿರಬೇಕು. 

ಕುಮಾರ ಸ್ಥಿತಿಯಲ್ಲಿ ಕುಜ; 4 ರಾಶಿಗಳಿಗೆ ಅದೃಷ್ಟ

ಅಂತಹ ವ್ಯಕ್ತಿಯು ಎಂದಿಗೂ ಬಡವನಲ್ಲ
ನೀಮ್ ಕರೋಲಿ ಬಾಬಾ ವ್ಯಕ್ತಿತ್ವ, ನಡವಳಿಕೆ ಮತ್ತು ದೇವರ ಮೇಲಿನ ನಂಬಿಕೆಯನ್ನು ನಿಜವಾದ ಸಂಪತ್ತು ಎಂದು ಪರಿಗಣಿಸುತ್ತಿದ್ದರು. ಚಾರಿತ್ರ್ಯ, ನಡತೆ, ದೇವರಲ್ಲಿ ನಂಬಿಕೆ ಇರುವವನೇ ಶ್ರೀಮಂತ ಎಂದು ಹೇಳುತ್ತಿದ್ದರು. ಈ ಮೂರು ಗುಣಗಳನ್ನು ಹೊಂದಿರುವ ವ್ಯಕ್ತಿಯು ತನ್ನನ್ನು ತಾನು ಬಡವ ಎಂದು ಪರಿಗಣಿಸಬಾರದು. ಬಾಬಾರ ಪ್ರಕಾರ, ಭೌತಿಕವಾಗಿ ಗೋಚರಿಸುವ ವಸ್ತುಗಳು ಮರ್ತ್ಯ ಮತ್ತು ಈ ಮೂರು ಗುಣಗಳು ವ್ಯಕ್ತಿಯ ನಿಜವಾದ ಸಂಪತ್ತು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios