Navratri 2026: ನವರಾತ್ರಿಯಲ್ಲಿ ದುರ್ಗಾದೇವಿಯ ಕೃಪೆ ಪಡೆಯಲು 108 ಅಕ್ಕಿ ಕಾಳುಗಳಿಂದ ಮಾಡುವ ವಿಶೇಷ ಪರಿಹಾರ ಯಾವುದು? ವಿಶೇಷ ಮಂತ್ರ ಜಪಿಸುವ ವಿಧಾನ, ದೀಪ ಹಚ್ಚುವ ಕ್ರಮ ಹಾಗೂ ಈ ಧಾರ್ಮಿಕ ಆಚರಣೆಯ ಮಹತ್ವವನ್ನು ಇಲ್ಲಿ ತಿಳಿಯಿರಿ.
ನವರಾತ್ರಿಯಲ್ಲಿ ವಿಶೇಷ ಪರಿಹಾರ
ಸನಾತನ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ವಿಶೇಷ ಮಹತ್ವವಿದೆ. ಈ ಹಬ್ಬವು ದುರ್ಗಾದೇವಿಯ ಆರಾಧನೆ ಮತ್ತು ಶಕ್ತಿಯ ಉಪಾಸನೆಗೆ ಅತ್ಯಂತ ಶುಭಕರ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಭಕ್ತರು ತಾಯಿ ದುರ್ಗೆಯ ಆಶೀರ್ವಾದ ಪಡೆಯಲು ಉಪವಾಸ ಮಾಡುತ್ತಾರೆ, ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾರೆ ಹಾಗೂ ತಮ್ಮ ಮನದ ಇಷ್ಟಾರ್ಥಗಳು ಈಡೇರಲೆಂದು ವಿಶೇಷ ಪರಿಹಾರಗಳನ್ನೂ ಮಾಡುತ್ತಾರೆ. ಈ ದಿನಗಳಲ್ಲಿ ನೀವು 108 ಅಕ್ಕಿ ಕಾಳುಗಳಿಂದ ಮಾಡುವ ವಿಶೇಷ ಪರಿಹಾರ ಮಾಡೋದ್ರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತೆ.
ನವರಾತ್ರಿಯಲ್ಲಿ ಅಕ್ಕಿಯಿಂದ ಮಾಡುವ ವಿಶೇಷ ಪರಿಹಾರ
ನವರಾತ್ರಿಯಲ್ಲಿ ತಾಯಿ ದುರ್ಗೆಯ ಕೃಪೆ ಪಡೆಯಲು ಅಕ್ಕಿಗೆ ಸಂಬಂಧಿಸಿದ ವಿಶೇಷ ಪರಿಹಾರ ಇಲ್ಲಿದೆ., ಈ ಪರಿಹಾರವನ್ನು ಸಂಪೂರ್ಣ ಶ್ರದ್ಧೆ, ಏಕಾಗ್ರತೆ ಮತ್ತು ನಿಯಮಾನುಸಾರವಾಗಿ ಮಾಡುವುದರಿಂದ ಭಕ್ತರು ತಮ್ಮ ಮನದ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಈ ಪರಿಹಾರಕ್ಕಾಗಿ ಮುರಿಯದ ಸಂಪೂರ್ಣ 108 ಅಕ್ಕಿ ಕಾಳುಗಳನ್ನು ಬಳಸಲಾಗುತ್ತದೆ. ಪೂಜೆಯ ಸಮಯದಲ್ಲಿ ದುರ್ಗಾದೇವಿಯ ಮಂತ್ರವನ್ನು ಜಪಿಸುತ್ತಾ, ತಮ್ಮ ಮನದ ಇಷ್ಟಾರ್ಥವನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಬೇಕು.
ಈ ರೀತಿ ಪರಿಹಾರ ಮಾಡಿ
- ಬೆಳಗ್ಗೆ ಅಥವಾ ಸಂಜೆ ಸ್ನಾನ ಮಾಡಿ ಶುಚಿಯಾದ ಬಟ್ಟೆಗಳನ್ನು ಧರಿಸಿ. ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ದುರ್ಗಾದೇವಿಯ ವಿಗ್ರಹ ಅಥವಾ ಭಾವಚಿತ್ರದ ಮುಂದೆ ಕುಳಿತುಕೊಳ್ಳಿ.
- ಸಂಪೂರ್ಣವಾಗಿರುವ ಬಾಸುಮತಿ ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಿ. ಈಗ ಒಂದು ಸ್ವಚ್ಛವಾದ ಬಟ್ಟಲು ತಾಯಿ ದುರ್ಗೆಯ ವಿಗ್ರಹದ ಮುಂದೆ ಇಡಿ. ಅದರಲ್ಲಿ 108 ಸಂಪೂರ್ಣ ಅಕ್ಕಿ ಕಾಳುಗಳನ್ನು ಮಂತ್ರದ ಜೊತೆಗೆ ಎಣಿಸಿ ಹಾಕಬಹುದು.
- ತಾಯಿ ಭಗವತಿಯ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಮತ್ತು ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಿ. ದೀಪಗಳನ್ನು ಬೆಳಗಿಸುವಾಗ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ, ನಿಮ್ಮ ಮನದ ಇಷ್ಟಾರ್ಥವನ್ನು ಸ್ಮರಿಸಿಕೊಳ್ಳಿ.
ಈ ಮಂತ್ರವನ್ನು ಜಪಿಸಿ
- ಈಗ ಒಂದೊಂದು ಅಕ್ಕಿ ಕಾಳನ್ನು ಕೈಗೆ ತೆಗೆದುಕೊಂಡು ‘ಓಂ ದುಂ ದುರ್ಗಾಯೈ ನಮಃ’ ಎಂಬ ಮಂತ್ರವನ್ನು ಜಪಿಸಬೇಕು.
- ಪ್ರತಿಯೊಂದು ಅಕ್ಕಿ ಕಾಳನ್ನು ತೆಗೆದುಕೊಳ್ಳುವಾಗಲೂ ನಿಮ್ಮ ಮನದ ಇಷ್ಟಾರ್ಥವನ್ನು ಸ್ಮರಿಸಿಕೊಂಡು ಅದನ್ನು ಬಟ್ಟಲಿನಲ್ಲಿ ಹಾಕುತ್ತಾ ಹೋಗಿ. ಈ ಸಂದರ್ಭದಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಂಡು ದುರ್ಗಾದೇವಿಯ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಿ.
- 108 ಬಾರಿ ಮಂತ್ರವನ್ನು ಪಠಿಸುತ್ತಾ, 108 ಅಕ್ಕಿ ಕಾಳನ್ನು ಹಾಕಿ, ನಿಮ್ಮ ಬೇಡಿಕೆಯನ್ನು ದೇವಿಯ ಮುಂದೆ ಹೇಳಬೇಕು.
- ನವರಾತ್ರಿಯಲ್ಲಿ ಈ ರೀತಿಯ ಪರಿಹಾರ ಮಾಡುವುದರಿಂದ ತಾಯಿ ದುರ್ಗೆಯ ವಿಶೇಷ ಕೃಪೆ ದೊರೆಯುತ್ತದೆ ಮತ್ತು ಜೀವನದಲ್ಲಿ ಪ್ರಗತಿಯ ಹಾದಿ ಸುಗಮವಾಗುತ್ತದೆ.


