Navratri day 4: ಜಗನ್ಮಾತೆ ಶಾರದೆಗೆ ಮಯೂರ ವಾಹನ ಅಲಂಕಾರ

ಶೃಂಗೇರಿ ಹೊರನಾಡಿನಲ್ಲಿ ನಾಲ್ಕನೇ ದಿನದ ನವರಾತ್ರಿ ಸಂಭ್ರಮ 
ಜಗನ್ಮಾತೆ ಶಾರದೆಗೆ ಮಯೂರ ವಾಹನ ಅಲಂಕಾರ
ಹೊರನಾಡು ಅನ್ನಪೂರ್ಣೇಶ್ವರಿಗೆ ಮೃಗಾರೂಢಾ ಕೂಷ್ಮಾಂಡ ಅಲಂಕಾರ
ಚಿಕ್ಕಮಗಳೂರಿನಲ್ಲಿ ಶರನ್ನವರಾತ್ರಿ ಉತ್ಸವದ ಮೆರುಗು

Navratri day 4 in Sringeri Sharadamba temple skr

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಹಾಗೂ ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ತುಂಗಾಭದ್ರಾ ನದಿಯ ತಟದಲ್ಲಿ ಇರುವ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನ ಮೆರುಗು ಪಡೆದುಕೊಳ್ಳುತ್ತಿದೆ. ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲೆಲ್ಲೂ ಜನಸಾಗರ ಕಾಣಬಹುದಾಗಿದೆ. ದೇವಿಗೆ ಮಹಾಭಿಷೇಕದ ನಂತರ ನಿತ್ಯವೂ ವಿವಿಧ ಅಲಂಕಾರ ಮಾಡಲಾಗುತ್ತಿದೆ. ಇಂದು ಶೃಂಗೇರಿ ಶಾರದಾ ದೇವಿ ಮಯೂರ ವಾಹನ ಅಲಂಕಾರರೂಢಳಾಗಿದ್ದರೆ, ಹೊರನಾಡಿನ ಅನ್ನಪೂಣೇಶ್ವರಿ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಮಾಡಿಕೊಂಡು ಭಕ್ತರ ಕಣ್ತುಂಬಿದರು.

ಜಗನ್ಮಾತೆ ಶಾರದೆಗೆ ಮಯೂರ ವಾಹನ ಅಲಂಕಾರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದೆಯ ಸನ್ನಿಧಿ(Sringeri Sharadamba Temple)ಯಲ್ಲಿ ಅದ್ಧೂರಿಯಾಗಿ ನವರಾತ್ರಿ(Navratri 2022)ಯ ಆಚರಣೆ ನಡೆಯುತ್ತಿದ್ದು ನಾಲ್ಕನೇ ದಿನವಾದ ಇಂದು ಜಗನ್ಮಾತೆ ಶಾರದೆ ಮಯೂರ ವಾಹನ ಅಲಂಕಾರ ಅಂದರೆ ನವಿಲಿನ ಮೇಲೆ ಕುಳಿತು ಕೌಮಾರಿ ರೂಪದಲ್ಲಿ ಕಂಗೊಳಿಸುತ್ತಿದ್ದಾಳೆ. ಶ್ರೀಶಾರದೆ ಮಯೂರ ವಾಹನಾಲಂಕಾರದಲ್ಲಿ ಕೌಮಾರಿಯಾಗಿ ಕೈಯಲ್ಲಿ ಶಕ್ತ್ಯಾಯುಧವನ್ನು ಧರಿಸಿ ನವಿಲನ್ನೇರಿ ಕುಮಾರಸ್ವಾಮಿ ಶಕ್ತಿ ಯಾಗಿ ಲೋಕವನ್ನು ಅನುಗ್ರಹಿಸಿದ್ದಾಳೆ.  ಇಂದು ಸಂಜೆ ದೇವಿಯ ರಾಜ ಬೀದಿ ಉತ್ಸವ ನಡೆಯಲಿದ್ದು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಲೋಕ ಮಧು-ಕ್ಯೆಟಭ,ಶುಂಭ-ನಿಶುಂಭ ಮುಂತಾದ ಮಹಾರಾಕ್ಷಸರನ್ನು ಕೊಂದ ಕಾರಣ ಜಗನ್ಮಾತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಜಗತ್ತಿನಲ್ಲಿ ಪರಾಶಕ್ತಿ ನಾನೊಬ್ಬಳೇ, ನನ್ನನ್ನು ಬಿಟ್ಟು ಇಲ್ಲಿ ಎರಡೆಂಬುದು ಇಲ್ಲ ಎಂದು ಶ್ರೀದೇವಿ ಮಹಾತ್ಮೆಯಲ್ಲಿ ಅಮ್ಮ ತಿಳಿಸಿದ್ದಾಳೆ. ಹಾಗಾಗಿ ಶಾರದೆ ಮಹಾಲಕ್ಷ್ಮಿ, ಚಾಮುಂಡಿ, ಸರಸ್ವತಿ, ರಾಜರಾಜೇಶ್ವರಿ ಹೀಗೆ ಭಿನ್ನರೂಪದಲ್ಲಿ ಅಮ್ಮನವರು ನವರಾತ್ರಿ ಸಂದರ್ಭ ಕಾಣಿಸಿಕೊಳ್ಳುತ್ತಾಳೆ. ಆದರೆ ಆಕೆಯ ಒಳಗಿರುವ ಚ್ಯೆತನ್ಯ ಒಂದೇ ಎಂಬ ಮಹೋನ್ನತವಾದ ವಿಷಯ ಅಲಂಕಾರದ ಹಿಂದಿರುವ ಆಧ್ಯಾತ್ಮಿಕ ಹಿನ್ನೆಲೆಯಾಗಿದೆ. 

ದುರ್ಗಾ ಪೂಜೆ ಥೀಮ್‌ನೊಂದಿಗೆ ಆಕರ್ಷಿಸುತ್ತಿರುವ ಟಾಟಾ ಮೋಟಾರ್ಸ್ ಜಾಹೀರಾತು

ರಾತ್ರಿ ನಡೆಯಲಿದೆ ದರ್ಬಾರ್
ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ. ಶ್ರೀವಿದ್ಯಾರಣ್ಯರ ಕಾಲದಿಂದ ನಡೆದುಕೊಂಡು ಬಂದ ದರ್ಬಾರಿನಲ್ಲಿ ಜಗದ್ಗುರುಗಳು ಸ್ವರ್ಣ ಕಿರೀಟ, ಆಭರಣಗಳನ್ನು ಕೇವಲ ಶಿಷ್ಯರ ಆಶಯದಂತೆ ಧರಿಸಿಕೊಳ್ಳುತ್ತಾರೆ. ಪರಂಪರೆಯಿಂದ ಬಂದ ಸಂಪ್ರದಾಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. 

Navratri 2022 Day 5: ಭೂಲೋಕ ರಕ್ಷಕಿ ಲಲಿತಾ ಪರಮೇಶ್ವರಿಯ ಪೂಜಾ ವಿಧಿ, ವ್ರತ ಕತೆ

ಹೊರನಾಡಿನಲ್ಲಿ ಮೃಗಾರೂಢಾ ಕೂಷ್ಮಾಂಡ ಅಲಂಕಾರ

Navratri day 4 in Sringeri Sharadamba temple skr
ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿ(Horanadu Sri Annapurneshwari Temple)ಯಲ್ಲಿ ಶ್ರೀ ಅನ್ನಪೂರ್ಣೇಶ್ವರಿಗೆ ಜಗಜ್ಜನನೀ ದುರ್ಗಾದೇವಿಯ ನಾಲ್ಕನೇ ಸ್ವರೂಪ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆಯನ್ನು ಇಂದು  ಮಾಡಲಾಯಿತು. ಅನ್ನಪೂರ್ಣೇಶ್ವರಿಯ ಸನ್ನಿಧಾನದಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಶ್ರೀ ಸೂಕ್ತ ಹೋಮ ನೆರವೇರಿತು. ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಮತ್ತು ದೇವಿಯ ವಾಹನ ಸಿಂಹವಾಗಿರುವ ಕಾರಣ ದೇವಿಯನ್ನು ಮೃಗಾರೂಢಾ ಕೂಷ್ಮಾಂಡಾದೇವೀ ಎಂದು ಕರೆಯುತ್ತಾರೆ.ದೇವಿಗೆ ಎಂಟು ಭುಜಗಳಿದ್ದು ಅಷ್ಟಭುಜಾದೇವಿ ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳನ್ನು ಭಕ್ತಿ ನಿಷ್ಟೆ ಶ್ರದ್ದೆಯಿಂದ ಆರಾಧಿಸಿದರೆ ಆಯುಸ್ಸು, ಯಶ, ಬಲ, ಆರೋಗ್ಯದ ವೃದ್ದಿಯಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಿಗ್ಗೆ ಇಂಪನ ಸಾಂಸ್ಕೃತಿಕ ಕಲಾವೃಂದ ಬೆಂಗಳೂರು ಇವರಿಂದ ಭಕ್ತಿ ಸಂಗೀತ, ರಾತ್ರಿ ದುರ್ಗಾ ನೃತ್ಯ ಅಕಾಡೇಮಿ ಚಾರಿಟೇಬಲ್ ಟ್ರಸ್ಟ್ ಮೈಸೂರು ಇವರಿಂದ ಸಂಜೆ ಭರತನಾಟ್ಯ ನಡೆಯಿತು.

Latest Videos
Follow Us:
Download App:
  • android
  • ios