ಲೋಕ ಕಲ್ಯಾಣಕ್ಕಾಗಿ ಅಮೆರಿಕಾದಲ್ಲೂ ನಡೆಯಿತು ನಾಗರಾಧನೆ!
ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಲೋಕ ಕಲ್ಯಾಣಕ್ಕಾಗಿ ಒಂಬತ್ತು ದಿನಗಳ ಕಾಲ ಸಂಹಿತಾ ಯಾಗ ನಡೆಯಿತು. ಕರ್ನಾಟಕದ ಕರಾವಳಿ ಭಾಗದಲ್ಲಿ, ಅದರಲ್ಲೂ ಮುಖ್ಯವಾಗಿ ಉಡುಪಿಯಲ್ಲಿ ನಡೆಯುವ ನಾಗ ತನು ತರ್ಪಣ ಧಾರ್ಮಿಕ ಕಾರ್ಯಕ್ರಮ ಇಲ್ಲಿಯೂ ನಡೆಯಿತು. ನಾಗದೇವರ ಪ್ರೀತ್ಯರ್ಥ ಈ ಆರಾಧನೆಯನ್ನು ಅಪರೂಪದಲ್ಲಿ ನಡೆಸಲಾಗುತ್ತದೆ.
ಉಡುಪಿ (ನ.4): ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಲೋಕ ಕಲ್ಯಾಣಕ್ಕಾಗಿ ಒಂಬತ್ತು ದಿನಗಳ ಕಾಲ ಸಂಹಿತಾ ಯಾಗ ನಡೆಯಿತು. ಕರ್ನಾಟಕದ ಕರಾವಳಿ ಭಾಗದಲ್ಲಿ, ಅದರಲ್ಲೂ ಮುಖ್ಯವಾಗಿ ಉಡುಪಿಯಲ್ಲಿ ನಡೆಯುವ ನಾಗ ತನು ತರ್ಪಣ ಧಾರ್ಮಿಕ ಕಾರ್ಯಕ್ರಮ ಇಲ್ಲಿಯೂ ನಡೆಯಿತು. ನಾಗದೇವರ ಪ್ರೀತ್ಯರ್ಥ ಈ ಆರಾಧನೆಯನ್ನು ಅಪರೂಪದಲ್ಲಿ ನಡೆಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಭಕ್ತಜನರ ಅಪೇಕ್ಷೆಯಂತೆ ಭಾಗಿಯಾಗಿ ಹರಸಲು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಆಗಮಿಸಿದ್ದರು. ಶ್ರೀಪಾದರ ಸಮಕ್ಷಮದಲ್ಲಿ ನಾಗ ದೋಷ ಪರಿಹಾರಕ್ಕಾಗಿ ನಾಗ ತನು ತರ್ಪಣ ನಡೆಯಿತು. ಈ ಅಪೂರ್ವ ಕಾರ್ಯಕ್ರಮವನ್ನು ಉಡುಪಿಯ ವೈದಿಕ ವಿದ್ವಾನ್ ಶ್ರೀಕಾಂತ್ ಸಾಮಗ (ಓಣಿ ಸಾಮಗರು ) ರವರು ಇತರ ವೈದಿಕ ವೃಂದದವರೊಡನೆ ನಡೆಸಿಕೊಟ್ಟರು ಈ ಪೂಜೆಯ ವೇಳೆ ಅಮೇರಿಕಾದ ಭಕ್ತಜನರು ಸಂಭ್ರಮದಿಂದ ಪಾಲ್ಗೊಂಡರು.
ತೆಲಂಗಾಣ: ಹಾವಿನ ರೂಪದಲ್ಲಿರೋ ಈ ನಾಗ ದೇಗುಲಕ್ಕೆ ಭೇಟಿ ನೀಡಲೇ ಬೇಕು!
ಯಾಗದ ಆರನೆಯ ದಿನ ಯಜುಸ್ಸಂಹಿತಾಯಾಗ ಮತ್ತು ಶ್ರೀಸೂಕ್ತ ,ಪುರುಷ ಸೂಕ್ತ ಯಾಗ ನಡೆಯಿತು. ಒಟ್ಟು ಒಂಬತ್ತು ದಿನಗಳ ಈ ಧಾರ್ಮಿಕ ಕಾರ್ಯಕ್ರಮ, ಪುತ್ತಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ಏರ್ಪಟ್ಟಿತು.
ಏನಿದು ತನು ತರ್ಪಣ?
ಕರಾವಳಿ ಭಾಗದಲ್ಲಿ ಹಲವು ವಿಧದಲ್ಲಿ ನಾಗರಾಧನೆ ನಡೆಸಲಾಗುತ್ತದೆ.ನಾಗ ದೇವರನ್ನು ಭೂಮಿಯ ಒಡೆಯ ಎಂದು ನಂಬಲಾಗುತ್ತದೆ. ಆತನ ಒಡೆತನದ ಭೂಮಿಯಲ್ಲಿ ನಡೆಸುವ ಯಾವುದೇ ಕಾರ್ಯಕ್ಕೆ ಅನುಮತಿ ಅಗತ್ಯ ಅನ್ನೋದು ಇಲ್ಲಿನ ಕಲ್ಪನೆ. ಹಾಗಾಗಿ ನಾಗನ ಆರಾಧನೆ ಅನೇಕ ವಿಧಗಳನ್ನು ಇಲ್ಲಿ ಅನುಸರಿಸಲಾಗುತ್ತದೆ.
ನಾಗನ ಕಲ್ಲಿಗೆ ತನು ಅರ್ಪಿಸುವುದು, ಢಕ್ಕೆಬಲಿ ಸೇವೆ ನೀಡುವುದು, ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಸೇರಿದಂತೆ ಅನೇಕ ವಿಧದ ಆಚರಣೆಗಳಿವೆ. ನಾಗಮಂಡಲ ಸೇವೆಯ ಮೂಲಕ ನಾಗನ ಕೃಪೆಗೆ ಪಾತ್ರರಾಗುವ ಅಪರೂಪದ ಪದ್ಧತಿಯೂ ಚಾಲ್ತಿಯಲ್ಲಿದೆ. ಅದೇ ರೀತಿ ನಾಗತನು ತರ್ಪಣ ವನ್ನು ಅಪರೂಪಕ್ಕೆ ನಡೆಸಲಾಗುತ್ತದೆ.
ವಿಶಿಷ್ಟ ನಾಗಾರಾಧನೆ ಕಾಣುವ ಕುತ್ಯಾರಿನ ನಾಗಬನ; ಹರಕೆ ಹೊತ್ರೆ ಈಡೇರಿತೆಂದೇ ಲೆಕ್ಕ
ನಾಗಮಂಡಲದ ಮಾದರಿಯಲ್ಲಿ ಬೃಹದಾಕಾರದ ಮಂಡಲವನ್ನು ರಚಿಸಿ ಅದರ ಸುತ್ತಲೂ ಅನೇಕ ಬಗೆಯ ಧಾರ್ಮಿಕ ಪೂಜಾ ವಿಶೇಷಗಳು ಈ ಸಂದರ್ಭದಲ್ಲಿ ಏರ್ಪಡುತ್ತವೆ. ಸಪ್ತಸಾಗರದ ಆಚೆ ನಡೆದ ಅಪರೂಪದ ಆಚರಣೆ, ಅಮೇರಿಕಾದ ಭಕ್ತರಿಗೂ ಒಂದು ಅಪೂರ್ವ ಪೂಜಾ ಪದ್ದತಿಯನ್ನು ನೋಡುವ ಅವಕಾಶ ಕಲ್ಪಿಸಿತು.