ಯಾರಾಗ್ತಾರೆ ಸಿಎಂ? ನಿಜವಾಗುತ್ತಾ ಮೈಲಾರಲಿಂಗೇಶ್ವರನ ಭವಿಷ್ಯವಾಣಿ?

ನಿಜವಾಗುತ್ತಾ ಮೈಲಾರೇಶನ ಕಾರ್ಣಿಕ?
ಮತ್ತೊಮ್ಮೆ ಕುರುಬ ಸಮುದಾಯದ ನಾಯಕ ರಾಜ್ಯಾಭಾರ ಮಾಡ್ತಾರಾ?
ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಾರೆ ಎನ್ನುತ್ತಿದೆ ಕಾರ್ಣಿಕ ನುಡಿಯ ವಿಶ್ಲೇಷಣೆ

Mylaralingeshwara prediction about Karnataka Government skr

ಹಾವೇರಿ: ರಾಜ್ಯದಲ್ಲಿ ಬಹುಮತ ಪಡೆದ ಬಳಿಕ ಕಾಂಗ್ರೆಸ್‌ನಲ್ಲಿ ಇದೀಗ ಸಿಎಂ ಆಯ್ಕೆ ಕಸರತ್ತು ಆರಂಭವಾಗಿದೆ. ಯಾರಾಗ್ತಾರೆ ಸಿಎಂ ಡಿಕೆಶಿನಾ ಅಥವಾ ಸಿದ್ದರಾಮಯ್ಯನಾ ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.  ಸಿಎಂ ಯಾರು ಆಗ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ಉತ್ತರವಂತೂ ಸಿಗಲಿದೆ. ಆದರೆ, ಇದಕ್ಕೂ ಮುನ್ನವೇ ಹಾವೇರಿಯ ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಈ ಬಗ್ಗೆ ಸೂಚನೆ ನೀಡಿದೆ. ಅದರ ವಿಶ್ಲೇಷಣೆಯಂತೆ ಸಿದ್ಧರಾಮಯ್ಯ ಸಿಎಂ ಗದ್ದುಗೆ ಏರಲಿದ್ದಾರೆ. ಮೈಲಾರೇಶ್ವರನ ಈ ಕಾರಣಿಕ ನಿಜವಾಗುತ್ತಾ ಎಂದು ಕಾದು ನೋಡಬೇಕಿದೆ. 

ಪ್ರಸಕ್ತ ವರ್ಷ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದಲ್ಲಿ 'ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್' ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದರು. ಅದನ್ನು ಇದೀಗ ಧರ್ಮಧರ್ಶಿ ವೆಂಕಪ್ಪಯ್ಯ ಓಡೆಯರ್ ವಿಶ್ಲೇಷಣೆ ಮಾಡಿ, ಕಂಬಳಿ ಎಂದರೆ ಕುರುಬ ಸಮುದಾಯದ ನಾಯಕ ರಾಜ್ಯಾಭಾರ ಮಾಡ್ತಾರೆ, ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಾರೆ ಎನ್ನುತ್ತಿದ್ದಾರೆ. 

Hair Cut rules: ವಾರದ ಈ ದಿನ ಕೂದಲು ಕತ್ತರಿಸಿದ್ರೆ ಆಯಸ್ಸು ಕಮ್ಮಿಯಾಗುತ್ತೆ!

ಮತದಾರರಿಂದಲೆ ಹಳೆಯ ಸರ್ಕಾರ ಹೋಗಿದೆ. ಕಂಬಳಿ ಎಂದರೆ ಶುಭ, ಶುದ್ಧವಾದ ಸರ್ಕಾರ ಬರುತ್ತದೆ. ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಮಧ್ಯಸ್ಥಿಕೆಯಲ್ಲಿ ಸರ್ಕಾರ ರಚನೆಯಾಗುತ್ತದೆ. ಇಬ್ಬರೂ ನಾಯಕರು ಮೈಲಾರೇಶನ ದರ್ಶನ ಪಡೆದಿದ್ದಾರೆ. ಇಬ್ಬರಲ್ಲಿ ಖಂಡಿತವಾಗಿ ಯಾರಾದರೂ ಒಬ್ಬರು ಮುಖ್ಯಮಂತ್ರಿಗಳಾಗುತ್ತಾರೆಂದು ಧರ್ಮದರ್ಶಿಗಳು ಹೇಳಿದ್ದಾರೆ. 

ಮೈಲಾರಲಿಂಗೇಶ್ವರ ಕಾರಣಿಕ ಮಹತ್ವ
ಇಲ್ಲಿನ  ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ಕಾರ್ಣೀಕ ವಾಣಿಯಿಂದ ಆ ವರ್ಷದ  ಮಳೆ, ಬೆಳೆ ಹಾಗೂ  ರಾಜಕೀಯವನ್ನ ನಿರ್ಧರಿಸ್ತಾರೆ‌. ಡೆಂಕನಮರಡಿ ಎಂಬಲ್ಲಿ ಆಗಮಿಸಿದ ಗೊರವಯ್ಯ ಸ್ವಾಮಿ, 14 ಅಡಿ ಎತ್ತರದ ಬಿಲ್ಲನ್ನೇರಿ  ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾನೆ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ರಾಮಪ್ಪ ಗೊರವಯ್ಯ ಸ್ವಾಮಿ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ‌. ಸಾಕ್ಷಾತ್ ಮೈಲಾರಲಿಂಗೇಶ್ವರ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ನಂಬಿಕೆ. ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣೀಕ ಬಹಳ ಇಂಟರೆಸ್ಟಿಂಗ್ ಆಗಿತ್ತು. 

ಕರ್ನಾಟಕ ಕಾಂಗ್ರೆಸ್‌ಗೆ 122-133 ಸೀಟ್ ಸಿಗುತ್ತದೆ ಎಂದು ಮಾರ್ಚ್‌ನಲ್ಲೇ ಹೇಳಿದ್ದ ಜ್ಯೋತಿಷಿ!

ಅಂಬಲಿ ಹಳಸಿತು ಎಂದರೆ ರೈತರಿಗೆ ಹಾಗೂ ದೇಶಕ್ಕೆ ಅತಿವೃಷ್ಟಿ ಆಗದ ಹಾಗೇ ಮಳೆ ಬರುತ್ತದೆ. ಒಳ್ಳೆಯ ಬೆಳೆ ಈ ಬಾರಿ ಬರಲಿದೆ. ಕಂಬಳಿ ಬಿಸಿತಲೆ ಎಂದರೆ ಪರೋಕ್ಷವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಹಿಂದೆಯೂ ದೈವವಾಣಿಯನ್ನು ವಿಶ್ಲೇಷಣೆ ಮಾಡಲಾಗಿತ್ತು.
 

Latest Videos
Follow Us:
Download App:
  • android
  • ios