ಚೆನ್ನೈ[ಫೆ.28]: ಬಿರಿಯಾನಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ? ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ಸೋಯಾ ಬಿರಿಯಾನಿ ಹಾಗೂ ಎಗ್ ಬಿರಿಯಾನಿಹೀಗೆ ವೆರೈಟಿಯಲ್ಲಿ ಸಿಗುವ ಈ ಬಿರಿಯಾನಿ ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಒಂದು ವೇಳೆ ಇಂತಹುದೇ ಬಿರಿಯಾನಿ ಮಂದಿರದಲ್ಲಿ ಪ್ರಸಾದದ ರೂಪದಲ್ಲಿ ನೀಡಿದರೆ? ಹೌದು, ದಕ್ಷಿಣ ಭಾರತದಲ್ಲಿ ಮಟನ್ ಬಿರಿಯಾನಿಯನ್ನೇ ಪ್ರಸಾದವಾಗಿ ನೀಡುವ ಮಂದಿರವೊಂದಿದೆ. ಇಲ್ಲಿ ಸಾವಿರಾರು ಮಂದಿ ಭಕ್ತರು ಆಗಮಿಸಿ ಪ್ರಸಾದ ರೂಪದ ಬಿರಿಯಾನಿಯನ್ನು ಸ್ವೀಕರಿಸುತ್ತಾರೆ.

ತಮಿಳುನಾಡಿನ ಮಧುರೈನಲ್ಲಿರುವ ವಡಕ್ಕಂಪಟ್ಟಿ ಎಂಬ ಹಳ್ಳಿಯಲ್ಲಿ 1937ರಿಂದ ಬಿರಿಯಾನಿಯನ್ನು ಪ್ರಸಾದದಂತೆ ನೀಡಲಾಗುತ್ತಿದೆ. ಈ ಬಿರಿಯಾನಿ ಮುನಿಯಾಂದಿ ಹೋಟೆಲ್ ಮಂದಿರ ನೀಡುತ್ತದೆ. ವಾಸ್ತವವಾಗಿ ಈ ಹಳ್ಳಿಯಲ್ಲಿ ಅಲ್ಲಿನ ಗ್ರಾಮದೇವತೆ ಮುನಿಯಾಂದಿ ಹೆಸರಿನಲ್ಲಿ ಗುರುಸಾಮಿ ನಾಯ್ಡು ಎಂಬವರು ಹೋಟೆಲ್ ಒಂದನ್ನು ಆರಂಭಿಸಿದ್ದರು. ಇದಾದ ಬಳಿಕ ಒಂದಾದ ಬಳಿಕ ಮತ್ತೊಂದರಂತೆ ಹಲವಾರು ಮಂದಿ ಮುನಿಯಾಂದಿ ಹೆಸರಿನಲ್ಲಿ ಹೋಟೆಲ್ ಆರಂಭಿಸಿದರು. ಈ ಎಲ್ಲಾ ಹೋಟೆಲ್ ಗಳೂ ತಮ್ಮ ಬಳಿ ಬರುವ ಗ್ರಾಹಕರಿಗೆ ರುಚಿಯಾದ ಮಾಂಸಹಾರಿ ಆಹಾರ ನೀಡುವುದಕ್ಕೆ ಬಹಳ ಫೇಮಸ್ ಆಗಿವೆ.

ಇಡೀ ದಕ್ಷಿಣ ಭಾರತದಲ್ಲಿ ಈಗ ಸುಮಾರು 1500 ಮುನಿಯಾಂದಿ ಹೋಟೆಲ್ ಗಳಿವೆ. ಈ ಎಲ್ಲಾ ಹೋಟೆಲ್ ಮಾಲಿಕರು ಎರಡು ದಿನಗಳ ಮುನಿಯಾಂದಿ ದೇವಿಯ ಹೆಸರಲ್ಲಿ ಹಬ್ಬವನ್ನು ಆಯೋಜಿಸಿ ಒಂದುಗೂಡುತ್ತಾರೆ. ಈ ವೇಳೆ ಮಟನ್ ಬಿರಿಯಾನಿಯನ್ನೇ ಪ್ರಸಾದವಾಗಿ ವಿತರಿಸಲಾಗುತ್ತದೆ.

ಹೀಗೆ ಈ ಎಲ್ಲಾ ಹೋಟೆಲ್ ಮಾಲಿಕರು ತಮ್ಮ ಕುಲ ದೇವತೆ ಮುನಿಯಾಂದಿ ದೇವತೆಗೆ, ತಮಗೆ ನೀಡಿದ ಯಶಸ್ಸಿಗೆ ಧನ್ಯವಾದ ಸಲ್ಲಿಸುತ್ತಾರೆ. ಇತ್ತೀಚೆಗಷ್ಟೇ ಈ ನಡೆದ ಜಾತ್ರೆಯಲ್ಲಿ ಸುಮಾರು 8 ಸಾವಿರ ಮಂದಿಗೆ ಮಟನ್ ಬಿರಿಯಾನಿ ವಿತರಿಸಲಾಗಿದೆ.