Asianet Suvarna News Asianet Suvarna News

ಮಕ್ಕಳಾಗುತ್ತಿಲ್ಲವೇ? ಇಲ್ಲಿವೆ ಸಂತಾನ ಸಿದ್ಧಿಗಾಗಿಯೇ ಪ್ರಸಿದ್ಧವಾದ ದೇವಾಲಯಗಳು..

ಮಾನವ ಪ್ರಯತ್ನಗಳು ವಿಫಲವಾದಾಗ ನಾವು ದೇವರ ಮೊರೆ ಹೋಗುತ್ತೇವೆ. ಫಲವತ್ತತೆ ಕೂಡಾ ಸಿದ್ಧಿಸುವಂತೆ ಮಾಡುವ ಶಕ್ತಿ ಪ್ರಾರ್ಥನೆಗಿದೆ. ಮಗುವನ್ನು ಹೊಂದುವ ಬಯಕೆಯ ಈಡೇರಿಕೆಗಾಗಿಯೇ ಹೆಸರಾದ, ಅದಕ್ಕಾಗಿಯೇ ಮೀಸಲಾದ ದೇವಾಲಯಗಳಿವೆ. ಅಂಥ ಕೆಲ ದೇವಾಲಯಗಳ ಪರಿಚಯ ಇಲ್ಲಿದೆ. 

Must Visit Temples if You are Trying to Conceive skr
Author
First Published Sep 11, 2022, 10:45 AM IST

ಭಾರತದಲ್ಲಿ, ಪ್ರತಿ ಆಸೆಗೆ, ಪ್ರತಿ ಆರಾಧನೆಗೆ ದೇವರಿದ್ದಾನೆ. ಎಲ್ಲವೂ ವಿಫಲವಾದಾಗ ನಾವು ಪ್ರಾರ್ಥನೆಯ ಶಕ್ತಿಯನ್ನು ಅವಲಂಬಿಸುತ್ತೇವೆ. ಫಲವತ್ತತೆ ಕೂಡಾ ಭಿನ್ನವಾಗಿಲ್ಲ. ಮಾನವ ಪ್ರಯತ್ನಗಳೆಲ್ಲವೂ ವಿಫಲವಾದಾಗ ದೇವರೊಂದೇ ಕೊನೆಯ ಆಶಾಕಿರಣ. ಹೀಗೆ ದೇವರನ್ನು ನಂಬಿದಾಗ ಅದೆಷ್ಟೋ ಪವಾಡಗಳು ಸಿದ್ಧಿಸಿವೆ. ಎಷ್ಟೋ ಸಂತಾನಹೀನ ದಂಪತಿ ಕೆಲ ದೇವಾಲಯಗಳಿಗೆ ಭೇಟಿ ನೀಡಿ ಹರಕೆ ಹೇಳಿಕೊಳ್ಳುತ್ತಿದ್ದಂತೆಯೇ ಮಗುವನ್ನು ಪಡೆದ ಉದಾಹರಣೆಗಳಿವೆ. ಕೆಲ ದೇವಾಲಯಗಳಲ್ಲಿ ಅಂಥ ಕಾರಣಿಕ ಶಕ್ತಿಯಿದೆ. ಹೀಗೆ ಬಂಜೆತನದಿಂದ ಬಳಲುವ ಮತ್ತು ಮಕ್ಕಳಿಗಾಗಿ ಹಂಬಲಿಸುವ ದಂಪತಿಗೆ ಹರಸುವುದಕ್ಕೆ ಖ್ಯಾತಿ ಪಡೆದ ಕೆಲ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

1. ಶ್ರೀ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ(Sri Santhana Venugopala Swamy Temple)
ಮೈಸೂರಿನ ನಂಜನಗೂಡು ಗ್ರಾಮದ ಹೆಮ್ಮರಗಾಲದಲ್ಲಿ ನೆಲೆಸಿರುವ ಈ 1800 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು 'ದಕ್ಷಿಣ ಗೋವರ್ಧನ ಕ್ಷೇತ್ರ' ಎಂದೂ ಕರೆಯುತ್ತಾರೆ ಮತ್ತು ಬೌದ್ಧ ಪೂರ್ವ ಯುಗದ ಸಂತರಾದ ಶ್ರೀ ಕೌಂಡನಿಯ ಮಹರ್ಷಿಗಳು ಈ ದೇವಾಲಯದಲ್ಲಿ ಪೂಜಿಸಿ ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಈ ದೇವಾಲಯದ ಹೆಸರೇ ಸಂತಾನ ವೇಣುಗೋಪಾಲಸ್ವಾಮಿ ಎಂದಾಗಿದ್ದು, ಈ ದೇವರು ಸಾವಿರಾರು ಸಂತಾನವಿಲ್ಲದ ದಂಪತಿಗೆ ಆಶೀರ್ವದಿಸಿದ ಕತೆಯಿದೆ. 
ದೇವಸ್ಥಾನಕ್ಕೆ ಸಂಬಂಧಿಸಿದ ಅನೇಕ ದಂತಕಥೆಗಳು ಮತ್ತು ಕಥೆಗಳು ಇವೆ. ಮಗುವನ್ನು ಬಯಸುವ ದಂಪತಿಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.

Weekly Love Horoscope: ಈ ವಾರ ಮಿಥುನದ ಜೀವನದಲ್ಲಿ ಪ್ರೇಮ ತಂಗಾಳಿ..

2. ಹುಚ್ಚು ಗೋಪಾಲ ದೇವಸ್ಥಾನ(Hucchu Gopala Temple)
ಚೋಳ ರಾಜನೊಬ್ಬ 11 ಹೆಣ್ಣು ಮಕ್ಕಳನ್ನು ಪಡೆದ ನಂತರ ಗಂಡು ಮಗುವಿಗಾಗಿ ದೇವರನ್ನು ಪ್ರಾರ್ಥಿಸಿದನು. ತನ್ನ 12ನೇ ಮಗುವೂ ಹೆಣ್ಣು ಮಗುವಾದಾಗ ಕೋಪಗೊಂಡ ರಾಜನು ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದನು. ಮರುದಿನ, ಅದ್ಭುತವಾಗಿ, ದೇವಾಲಯದಲ್ಲಿ ಒಂದು ಗಂಡು ಮಗು ಇತ್ತು.
ಮತ್ತೊಂದು ಕತೆಯಂತೆ 6 ವರ್ಷದ ಮಗು ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ, ಆಘಾತಕ್ಕೊಳಗಾದ ಅವನ ಪೋಷಕರು ದೇವಾಲಯದ ದೇವರ ಮುಂದೆ ಅಳುತ್ತಾರೆ, ಮಗುವಿನ ಜೀವಕ್ಕಾಗಿ ಪ್ರಾರ್ಥಿಸುತ್ತಾರೆ. ಮಗುವು ಮತ್ತೆ ಜೀವಕ್ಕೆ ಮರಳಿ ನಗುನಗುತ್ತಾ ಆಟವಾಡಲಾರಂಭಿಸುತ್ತದೆ. ಇಂಥ ಹಲವಾರು ಕತೆಗಳು ಈ ದೇವಾಲಯದ ಪವಾಡಗಳನ್ನು ಕೆದಕಿದಾಗ ಸಿಗುತ್ತವೆ. 
ಮೈಸೂರಿನಿಂದ 35 ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದ್ದು, ಬದನವಾಳು ರೈಲ್ವೆ ನಿಲ್ದಾಣದಿಂದ 4 ಕಿಲೋಮೀಟರ್ ಆಗುತ್ತದೆ. ಸಂತಾನ, ಸಂಪತ್ತು, ಆರೋಗ್ಯ, ಮೋಕ್ಷ ಬಯಸುವ ಎಲ್ಲರೂ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಕ್ಕಳು ಬಯಸುವ ದಂಪತಿ ಕೃಷ್ಣನ ಮಗುವಿನ ರೂಪವಿರುವ ಬೆಳ್ಳಿಯ ತೊಟ್ಟಿಲನ್ನು ಸಹ ಅರ್ಪಿಸುತ್ತಾರೆ.

3. ಶ್ರೀ ಸತ್ಯಗಿರಿಶ್ವರರ್ ದೇವಸ್ಥಾನ(Shri Satyagiriswarar Temple)
ಮಹೇಂದ್ರ ಪಲ್ಲವನ್ ನಿರ್ಮಿಸಿದ ಈ 1300 ವರ್ಷಗಳ ಹಳೆಯ ದೇವಾಲಯವು ತಮಿಳುನಾಡಿನ ಪುದುಕೊಟ್ಟೈನಿಂದ 21 ಕಿಮೀ ದೂರದಲ್ಲಿರುವ ತಿರುಮಯಂನಲ್ಲಿದೆ. ಇದು ಶಿವಪಾರ್ವತಿಯ ದೇವಾಲಯ. ಸತ್ಯ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದರು ಎಂದು ನಂಬಲಾಗಿದೆ.

1000 ವರ್ಷಗಳಿಗಿಂತಲೂ ಹಳೆಯದಾದ ವಿಷ್ಣು ದೇವಾಲಯದ ಪಕ್ಕದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅವುಗಳನ್ನು ಒಂದೇ ಬಂಡೆಯಿಂದ ನಿರ್ಮಿಸಲಾಗಿದೆ. ಶಿವ ಮತ್ತು ವಿಷ್ಣುವಿನ ಭಕ್ತರ ನಡುವೆ ಸೌಹಾರ್ದ ಸಂಬಂಧವನ್ನು ಕಾಯ್ದುಕೊಳ್ಳುವುದು ಇದರ ಕಲ್ಪನೆಯಾಗಿದೆ. 
ಈ ದೇವಾಲಯದಲ್ಲಿ ಅತ್ಯಂತ ಭಕ್ತಿ ಮತ್ತು ನಂಬಿಕೆಯಿಂದ ವೈವಾಹಿಕ ಜೀವನ ಮತ್ತು ಮಕ್ಕಳ ವಿಚಾರವಾಗಿ ಪ್ರಾರ್ಥಿಸುವ ಯಾರಾದರೂ ತಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ.

Color Astro: ವೃಷಭ ರಾಶಿಯವರು ಈ ಬಣ್ಣ ಬಳಸ್ಬೇಡಿ.. ಬಳಸಿದ್ರೆ ಸೋಲು ನಿಶ್ಚಿತ..

4. ಶ್ರೀ ಆಂಡಾಳ್ ದೇವಸ್ಥಾನ(Shri Andal Temple)
8ನೇ ಶತಮಾನದ ಈ ದೇವಾಲಯವು ತಮಿಳುನಾಡಿನ ಮಧುರೈನಿಂದ 80 ಕಿಮೀ ದೂರದಲ್ಲಿರುವ ವಿರುದು ನಗರದಲ್ಲಿದೆ. ಇದನ್ನು ವಿಷ್ಣು ದೇವರು ಮತ್ತು ಅವನ ಪತ್ನಿ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಇದು 108 ದಿವ್ಯದೇಶಂಗಳಲ್ಲಿ ಒಂದಾಗಿದೆ. ಇದು  ಪೆರಿಯಾಳ್ವಾರ್ ಮತ್ತು ಅವರ ಸಾಕು ಮಗಳು ಆಂಡಾಳ್ ಜನ್ಮಸ್ಥಳವಾಗಿದೆ.
ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಭಕ್ತರಿಗೆ ವಿಶೇಷವಾಗಿ ಮಕ್ಕಳು, ಮದುವೆ, ಕೃಷಿ ಮತ್ತು ಶಿಕ್ಷಣದ ಎಲ್ಲಾ ಸಮಸ್ಯೆಗಳಿಗೆ ಸಹಾಯವಾಗುತ್ತದೆ ಎಂದು ನಂಬಲಾಗಿದೆ.
 

Follow Us:
Download App:
  • android
  • ios